ರಾಜ್ಯ ಹಾಗೂ ದೇಶದಲ್ಲಿ ಹಲವು ವಿಶೇಷವಾದ ದೇವಾಲಯ, ಆಶ್ರಮ ಹಾಗೂ ಪುಣ್ಯ ಕ್ಷೇತ್ರಗಳನ್ನು ಕಾಣಬಹುದು ಆದ್ರೆ ಪ್ರತಿಯೊಂದು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತದೆ. ಅದೇ ನಿಟ್ಟಿನಲ್ಲಿ ಕರ್ನಾಟಕದ ಈ ಪುಣ್ಯ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿ ಆ ನೀರಿನಲ್ಲಿ ಮುಳುಗಿ ಎದ್ದರೆ ಸಕಲ ಪಾಪಗಳು ಹಾಗೂ ಎಂತಹ ಚರ್ಮರೋಗಗಳು ಇದ್ರೂ ನಿವಾರಣೆಯಾಗುತ್ತದೆ ಅನ್ನೋದು ಇಲ್ಲಿಯ ಭಕ್ತರ ಅಪಾರ ನಂಬಿಕೆಯಾಗಿದೆ. ಅಷ್ಟಕ್ಕೂ ಈ ಪುಣ್ಯ ಕ್ಷೇತ್ರ ಯಾವುದು ಹಾಗೂ ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.
ನಿಮಗೆ ಈ ಪುಣ್ಯ ಕ್ಷೇತ್ರದ ವಿಶೇಷತೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವಾರದಪುರ ಎಂಬ ಗ್ರಾಮದಲ್ಲಿ ಶ್ರೀಧರ ಸ್ವಾಮಿಗಳ ಆಶ್ರಮವಿದೆ, ಈ ಆಶ್ರಮದಲ್ಲಿ ಒಂದು ಪವಿತ್ರ ನೀರಿನ ತೊರೆ ಹರಿದಿದ್ದು ಅದರಲ್ಲಿ ತೀರ್ಥ ಸ್ನಾನ ಮಾಡಲು ಸಾವಿರಾರು ಭಕ್ತಾದಿಗಳು ಬರುತ್ತಾರೆ, ಅಷ್ಟೇ ಅಲ್ದೆ ಈ ನೀರಿನಲ್ಲಿ ಸ್ನಾನ ಮಾಡಿದರೆ ಸಕಲ ಚರ್ಮ ರೋಗಗಳು ವಾಸಿಯಾಗುತ್ತವೆ ಹಾಗೂ ಮಾಡಿದಂತ ಪಾಪ ಕರ್ಮಗಳು ಕಳೆಯುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿದೆ.
ಇನ್ನು ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳಲು ಹಾಗೂ ಚರ್ಮ ರೋಗಗಳನ್ನು ನಿವಾರಿಸಿಕೊಳ್ಳಲು ರಾಜ್ಯದ ನಾನಾ ಕಡೆಯಿಂದ ಇಲ್ಲಿ ಭಕ್ತಾದಿಗಳು ಬರುತ್ತಾರೆ. ಇನ್ನು ಇಲ್ಲಿ ಬಂದ ಮೇಲೆ ಸುತ್ತ ಮುತ್ತಲಿನ ಪ್ರವಾಸಿ ತಾಣಗಳನ್ನು ನೋಡಬಹುದು ಹಾಗೂ ಇಲ್ಲಿಯ ಪ್ರಕೃತಿಯ ಸೊಬಗನ್ನು ಸವಿಯಬಹುದು.