ನಾರದರ ದೇವಾಲಯಗಳು ಎಲ್ಲಿವೆ ಹಾಗೂ ಅವರ ಜನ್ಮ ರಹಸ್ಯ

0 5

ನಾರದರ ದೇವಾಲಯಗಳು ಎಲ್ಲಿವೆ ಹಾಗೂ ಅವರ ಜನ್ಮ ರಹಸ್ಯವನ್ನು ಈ ಲೇಖನದ ಮೂಲಕ ತಿಳಿಯೋಣ. ಬಳ್ಳಾರಿ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದಾದ ಹರಪನಹಳ್ಳಿಗೆ 15 ಕಿ.ಮೀ ದೂರದಲ್ಲಿ ಚಿಗಟೇರಿ ಎಂಬ ಊರಿದೆ ಅಲ್ಲಿ ನಾರದರ ದೇವಸ್ಥಾನವಿದೆ. ಇಲ್ಲಿಗೆ ಚಿತ್ರದುರ್ಗ, ದಾವಣೆಗೆರೆಯಿಂದ ಜನ ಬರುತ್ತಾರೆ. ರಾಯಚೂರು ಬಳಿ ನಾರದಗಡ್ಡಿ ಎಂಬ ಪ್ರದೇಶದಲ್ಲಿ ನಾರದ ಮುನಿ ತಪಸ್ಸು ಮಾಡಿ ಅಲ್ಲೊಂದು ಶಿವಲಿಂಗವನ್ನು ಸ್ಥಾಪಿಸಿದನು. ಉತ್ತರ ಭಾರತದಲ್ಲಿ ನಾರದ ಕುಂಡ ಎನ್ನುವಂತಹ ಸಾಕಷ್ಟು ಸ್ಥಳಗಳಿವೆ ಮತ್ತೆಲ್ಲೂ ನಾರದರ ದೇವಾಲಯಗಳು ಕಾಣ ಸಿಗುವುದಿಲ್ಲ. ನಾರದರು ಕಲಹ ಪ್ರಿಯರಾಗಿದ್ದರು. ಎಷ್ಟೋ ಬಾರಿ ಕಲಹದಿಂದಲೆ ಜಗತ್ತಿಗೆ ಒಳಿತು ಮಾಡಿದ್ದಾರೆ. ನಾರದರನ್ನು ಬಳಸಿ ಶ್ರೀ ಹರಿ ದುಷ್ಟರನ್ನು ಸಂಹರಿಸಿದ್ದಾರೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಿದೆ. ನಾರದರು ಬ್ರಹ್ಮನ ಮಾನಸ ಪುತ್ರ. ನಾರದ ತನ್ನ ಹಿಂದಿನ ಜನ್ಮದಲ್ಲಿ ದಾಸಿಯೊಬ್ಬಳ ಪುತ್ರನಾಗಿದ್ದ. ಆ ತಾಯಿ ಋಷಿಮುನಿಗಳ ಆಶ್ರಮದಲ್ಲಿದ್ದ ಕಾರಣ ಮಗು ಮುನಿಗಳ ಸೇವೆ ಮಾಡುತಿತ್ತು. ಮಗುವಿನ ಶ್ರದ್ಧೆಯನ್ನು ಗಮನಿಸಿದ ಋಷಿಮುನಿಗಳು ಅವನಿಗೆ ವಿದ್ಯೆಯನ್ನು ಕಲಿಸುತ್ತಾರೆ. ಆಗ ಬಾಲಕನಿಗೆ ನಾರಾಯಣನನ್ನು ಕಾಣುವ ಹಂಬಲ ಉಂಟಾಯಿತು. ಹೀಗಾಗಿ ತಪಸ್ಸು ಮಾಡುತ್ತಾನೆ ಆದರೆ ನಾರಾಯಣ ಪ್ರತ್ಯಕ್ಷನಾಗಲಿಲ್ಲ ಅಶರೀರವಾಣಿಯೊಂದು ಕೇಳಿತು ನೀನು ಮುಂದಿನ ಜನ್ಮ ಪಡೆದ ನಂತರ ನಿನಗೆ ಭಗವಂತನ ದರ್ಶನ ಸಿಗುತ್ತದೆ ಎಂದು ಹೇಳಿತು. ನಂತರ ಬಾಲಕ ಸಾವಿಗಾಗಿ ಎದುರು ನೋಡುತ್ತಾ ಕಾಲಕಳೆಯುತ್ತಾನೆ ಅವನ ಜೀವನ ಮುಗಿಯುತ್ತದೆ. ನಂತರದ ಜನ್ಮದಲ್ಲಿ ಬ್ರಹ್ಮನ ಮಾನಸ ಪುತ್ರನಾಗಿ ಜನಿಸುತ್ತಾನೆ.

ವಾಯು ಪುರಾಣದಲ್ಲಿ ನಾರದರು ಕಶ್ಯಪ ಪ್ರಜಾಪತಿಯ ಪುತ್ರ ಎಂದು ಉಲ್ಲೇಖವಿದೆ. ಬ್ರಹ್ಮ ಪುರಾಣದಲ್ಲಿ ನಾರದ ದಕ್ಷ ಪುತ್ರಿಯ ಮಗ. ಭಾಗವತದಲ್ಲಿ ನಾರದರು ಬ್ರಹ್ಮನ ಮೂರನೇ ಅವತಾರ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ನಾರದನಾಗಿ ಹುಟ್ಟಿದ ನಂತರ ಹರಿ ಭಕ್ತನಾಗಿ ಹರಿ ನಾಮಸ್ಮರಣೆ ಮಾಡುತ್ತಾ ವೇದಗಳನ್ನು ಅಧ್ಯಯನ ಮಾಡಿ ದೇವತೆಗಳ ಗುರು ಬ್ರಹಸ್ಪತಿಗೆ ಸರಿ ಸಮಾನವಾಗಿ ನಿಲ್ಲುತ್ತಾನೆ ಆ ಕಾರಣದಿಂದ ನಾರದರನ್ನು ದೇವರ್ಷಿ ಎಂದು ಕರೆಯುತ್ತಾರೆ. ನಾರದರು ನಾಲ್ಕು ಯುಗಗಳಲ್ಲಿ ಕಾಣಿಸಿಕೊಂಡು ಭೂಮಿಯ ಮೇಲಿನ ಧರ್ಮ, ಕರ್ಮಗಳನ್ನು ಗಮನಿಸುತ್ತಾರೆ. ಶಿವ ಪಾರ್ವತಿಯರ ಕಲ್ಯಾಣದಲ್ಲಿ ನಾರದರೆ ಮಧ್ಯವರ್ತಿ. ಎಲ್ಲಿ ದೇವತೆಗಳು ಹಾಗೂ ರಕ್ಕಸರಿಗೆ ಸಂಘರ್ಷವಾಗುವಾಗ ನಾರದರು ಇರುತ್ತಾರೆ. ದೇವತೆಗಳ ಮಿತ್ರನಾಗಿ, ಕೆಲವೊಮ್ಮೆ ದೇವತೆಗಳಿಗೆ ಪಾಠ ಕಲಿಸುವ ಚತುರನಾಗಿ ಪಾತ್ರವಹಿಸುತ್ತಾರೆ. ನಾರದರು ಮುನಿ ಶ್ರೇಷ್ಟರಾಗಿದ್ದಾರೆ.

Leave A Reply

Your email address will not be published.