ಪ್ರತಿಯೊಬ್ಬರಿಗೂ ಸಾಧಿಸುವ ಸಾಮರ್ಥ್ಯ ಇರುತ್ತದೆ ಆದರೆ ಅದರ ಬಗ್ಗೆ ಮನಸ್ಸು ಮಾಡುವುದಿಲ್ಲ. ಕೆಲವರಿಗೆ ಸಾಧಿಸುವ ಹಂಬಲ ಇರುತ್ತದೆ ಆದರೆ ಮಾರ್ಗದರ್ಶನ ಇರುವುದಿಲ್ಲ. ಸಾಧನೆ ಮಾಡಲು ಇರಬೇಕಾದ ಗುಣಗಳ ಬಗ್ಗೆ ಕೃಷ್ಣ ಸಂದೇಶ ನೀಡಿದ್ದಾನೆ. ಅದು ಏನೆಂದು ಈ ಲೇಖನದ ಮೂಲಕ ತಿಳಿಯೋಣ.
ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಏನನ್ನಾದರು ಸಾಧಿಸಿ ತೋರಿಸಬೇಕು. ಆ ಸಾಮರ್ಥ್ಯ ಪ್ರತಿಯೊಬ್ಬರಿಗೂ ಇರುತ್ತದೆ. ಆಕಾಶದೆತ್ತರಕ್ಕೆ ಸಾಧಿಸಬೇಕು, ಯಾವುದರ ಬಗ್ಗೆ ಕನಸಲ್ಲೂ ಯೋಚಿಸಲಿಲ್ಲವೋ ಅದನ್ನು ಸಾಧಿಸಬೇಕು. ಜೀವನದಲ್ಲಿ ಸಾಧಿಸಬೇಕಾದರೆ ಮೂರು ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕೃಷ್ಣ ಸಂದೇಶ ನೀಡಿದ್ದಾನೆ. ಕೃಷ್ಣ ಲೋಕ ಕಲ್ಯಾಣಕ್ಕಾಗಿ ನೀಡಿದ ಅಮೂಲ್ಯವಾದ ಸಂದೇಶ ಏನೆಂದರೆ. ಮೊದಲನೆಯದು ಒಂದು ಗುರಿಯನ್ನು ಇಟ್ಟುಕೊಳ್ಳಬೇಕು ಅದನ್ನು ಮುಟ್ಟುವ ಛಲ, ಉತ್ಕಟತೆ ಇರಬೇಕು ಇದು ನಮ್ಮಿಂದ ಏನು ಬೇಕಾದರೂ ಮಾಡಿಸುತ್ತದೆ ಯಾವತ್ತೂ ಮಾಡಲಾಗದೆ ಇರುವ ಕೆಲಸವನ್ನು ಮಾಡಿಸುತ್ತದೆ. ನಾವು ಒಳ್ಳೆಯ ಕೆಲಸವನ್ನೇ ಮಾಡಬೇಕು.
ಎರಡನೆಯದು ಧೈರ್ಯ ಆಪತ್ತುಗಳನ್ನು ಎದುರಿಸುವ ಸಾಮರ್ಥ್ಯವೆ ಧೈರ್ಯ. ಇದು ನಾವು ಮಾಡಬೇಕು ಅಂದುಕೊಂಡಿರುವ ಕೆಲಸವನ್ನು ನಾವೇ ಮಾಡುವ ಹಾಗೆ ಮಾಡುತ್ತದೆ. ಮೂರನೇಯದು ಅನುಭವ ಇದು ನಮಗೆ ನಾವು ಏನು ಮಾಡಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ಯಾರು ಛಲ, ಧೈರ್ಯ, ಅನುಭವ ಈ ಮೂರು ಗುಣಗಳನ್ನು ಹೊಂದಿರುತ್ತಾರೋ, ಅವರ ಹಿಡಿತದಲ್ಲಿರುತ್ತದೋ ಅವರಿಗೆ ಈ ಪ್ರಪಂಚದಲ್ಲಿ ಪಡೆದು ಕೊಳ್ಳಲಾಗದ್ದು ಏನು ಇರುವುದಿಲ್ಲ. ಅವರು ಸದಾಕಾಲ ಸಂತೋಷವಾಗಿ ಇರುತ್ತಾರೆ. ಕೃಷ್ಣನ ಈ ಅಮೂಲ್ಯವಾದ ಸಂದೇಶವನ್ನು ಈಗಿನ ಮಕ್ಕಳು ಪಾಲಿಸಬೇಕು ಪಾಲಿಸಿದರೆ ಜೀವನದಲ್ಲಿ ಮುಂದೆ ಬರಲು, ಸಾಧನೆ ಮಾಡಲು ಸ್ಫೂರ್ತಿಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.