ಪ್ರತಿ ತಿಂಗಳು ಒಂದಿಷ್ಟು ಹಣ ಉಳಿತಾಯ ಮಾಡಬೇಕು ಅನ್ನೋರಿಗಾಗಿ ಈ ಎರಡು ಯೋಜನೆ

0 9

ಸಂಪಾದನೆ ಮಾಡುವುದೆಂದರೆ ಆಸಕ್ತಿ ಹೆಚ್ಚು. ಅದಕ್ಕಾಗಿಯೇ ಪೋಸ್ಟ್ ಆಫೀಸ್ ಮಂಥ್ಲಿ ಇನಕಮ್ ಸ್ಕೀಮ್ ಹಾಗೂ ಎಸಬಿಐ ಮಂಥ್ಲಿ ಇನಕಮ್ ಎಂಬ ಎರಡು ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಸಹಾಯದಿಂದ ಹಣದಿಂದ ಹಣ ಮಾಡುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.

ಪೋಸ್ಟ್ ಆಫೀಸ್ ನ ಮಂಥ್ಲಿ ಇನಕಮ್ ಸ್ಕೀಮ್ ನಲ್ಲಿ ಕನಿಷ್ಠ 1,500 ರೂಪಾಯಿಯನ್ನು ಡೆಪೋಸಿಟ್ ಇಡಬೇಕು. 4,50,000 ರೂಪಾಯಿಯವರೆಗೆ ಡೆಪೋಸಿಟ್ ಇಡಬಹುದು. ಜಾಯಿಂಟ್ ಅಕೌಂಟ್ ಇದ್ದರೆ 9 ಲಕ್ಷದವರೆಗೆ ಡೆಪೋಸಿಟ್ ಇಡಬಹುದು ಅದಕ್ಕಿಂತ ಹೆಚ್ಚು ಇಡುವಂತಿಲ್ಲ. ಎಸಬಿಐ ಬ್ಯಾಂಕ್ ಮಂಥ್ಲಿ ಇನಕಮ್ ಸ್ಕೀಮ್ ನಡಿಯಲ್ಲಿ ಕನಿಷ್ಟ 25,000 ರೂಪಾಯಿ ಗರಿಷ್ಟ ಎಷ್ಟು ಬೇಕಾದರೂ ಡೆಪೋಸಿಟ್ ಇಡಬಹುದು. ಈ ಎರಡು ಕಡೆಯಲ್ಲಿ ಒಂದು ಸಲ ಮಾತ್ರ ಡೆಪಾಸಿಟ್ ಇಡಬೇಕು. ಪೋಸ್ಟ್ ಆಫೀಸ್ ನ ಮಂಥ್ಲಿ ಇನಕಮ್ ಸ್ಕೀಮ್ ನಲ್ಲಿ ಮೆಚ್ಯೂರಿಟಿ ಪೀರಿಯಡ್ 5 ವರ್ಷ ಇರುತ್ತದೆ. ಎಸಬಿಐ ಮಂಥ್ಲಿ ಇನಕಮ್ ಸ್ಕೀಮ್ ನಲ್ಲಿ ಮೆಚ್ಯೂರಿಟಿ ಪೀರಿಯಡ್ 3,5,7,10 ವರ್ಷ ಇರುತ್ತದೆ. ಎರಡೂ ಯೋಜನೆಯಲ್ಲಿ ಪ್ರತಿ ತಿಂಗಳು ಇಂಟ್ರೆಸ್ಟ್ ಅಮೌಂಟ್ ಬರುತ್ತದೆ ಈ ಹಣ ಸೇವಿಂಗ್ ಅಕೌಂಟ್ ಗೆ ಬರುತ್ತದೆ. ಈ ಎರಡೂ ಯೋಜನೆಯಡಿ ಅಕೌಂಟ್ ಓಪನ್ ಮಾಡಲು ವಯಸ್ಸಿನ ಮಿತಿ ಇರುವುದಿಲ್ಲ. ಪೋಸ್ಟ್ ಆಫೀಸ್ ನ ಮಂಥ್ಲಿ ಇನಕಮ್ ಸ್ಕೀಮ್ ನಲ್ಲಿ ಇಂಟ್ರೆಸ್ಟ್ ಹಣಕ್ಕೆ ಟಿಡಿಎಸ್ ಅಪ್ಲಿಕೇಬಲ್ ಆಗಿರುವುದಿಲ್ಲ. ಇದರಲ್ಲಿ ಲೋನ್ ಫೆಸಿಲಿಟಿ ಇರುವುದಿಲ್ಲ, ಪ್ರಿ ಮೆಚ್ಯೂರ್ ಕ್ಲೋಸರ್ ಸಿಗುತ್ತದೆ. ಎಸಬಿಐ ಮಂಥ್ಲಿ ಇನಕಮ್ ಸ್ಕೀಮನಲ್ಲಿ ಇಂಟ್ರೆಸ್ಟ್ ಹಣಕ್ಕೆ ಟಿಡಿಎಸ್ ಅಪ್ಲಿಕೇಬಲ್ ಆಗುತ್ತದೆ. ಲೋನ್ ಫೆಸಿಲಿಟಿ ಇರುತ್ತದೆ, ಪ್ರಿ ಮೆಚ್ಯೂರ್ ಕ್ಲೋಸರ್ ಇರುತ್ತದೆ. ಈ ಎರಡೂ ಸ್ಕೀಮ್ ನಡಿಯಲ್ಲಿ ನಾಮಿನಿ ಮೆನಷನ್ ಮಾಡಬೇಕು. 3 ವರ್ಷ ಮೆಚ್ಯೂರಿಟಿ ಪೀರಿಯಡ್ ಗೆ ಎಸಬಿಐ ಮಂಥ್ಲಿ ಇನಕಮ್ ಸ್ಕೀಮ್ ನಡಿಯಲ್ಲಿ ಜನರಲ್ ಪಬ್ಲಿಕ್ ಗೆ 5.30% ಸೀನಿಯರ್ ಸಿಟಿಜನ್ ಗೆ 5.80%. 5 ವರ್ಷದ ಮೆಚ್ಯೂರಿಟಿ ಪೀರಿಯಡ್ ನಲ್ಲಿ ಪೋಸ್ಟ್ ಆಫೀಸ್ ನಲ್ಲಿ 6.60% ಎಸಬಿಐ ನಲ್ಲಿ ಜನರಲ್ ಪಬ್ಲಿಕ್ ಗೆ 5.40% ಸೀನಿಯರ್ ಸಿಟಿಜನ್ ಗೆ 5.90%. 7 ಮತ್ತು 10 ವರ್ಷದ ಮೆಚ್ಯೂರಿಟಿ ಪೀರಿಯಡ್ ಆಯ್ಕೆ ಮಾಡಿಕೊಂಡರೆ ಪೋಸ್ಟ್ ಆಫೀಸ್ ನಲ್ಲಿ ಇರುವುದಿಲ್ಲ. ಎಸ್ ಬಿಐ ನಲ್ಲಿ ಜನರಲ್ ಪಬ್ಲಿಕ್ ಗೆ 5.40% ಮತ್ತು ಸೀನಿಯರ್ ಸಿಟಿಜನ್ ಗೆ 5.90% ಇಂಟ್ರೆಸ್ಟ್ ರೇಟ್ ಇದೆ.

9 ಲಕ್ಷ ರೂಪಾಯಿ ಹಣವನ್ನು ಡೆಪೋಸಿಟ್ ಇಟ್ಟರೆ ಐದು ವರ್ಷದ ಮೆಚ್ಯೂರಿಟಿ ಪೀರಿಯಡ್ ಆಯ್ಕೆ ಮಾಡಿಕೊಂಡರೆ ಪೋಸ್ಟ್ ಆಫೀಸ್ ನಲ್ಲಿ 6.6% ಇಂಟರೆಸ್ಟ್ ರೇಟ್ ಇರುತ್ತದೆ ಅಂದರೆ ಪ್ರತಿ ತಿಂಗಳು 4,950 ರೂಪಾಯಿ ಬರುತ್ತದೆ ಹೀಗೆ ಪ್ರತಿ ಐದು ವರ್ಷದವರೆಗೂ ಪ್ರತಿ ತಿಂಗಳು 4,150 ರೂ ಬರುತ್ತದೆ. 5 ವರ್ಷದ ನಂತರ ಡೆಪೋಸಿಟ್ ಹಣವನ್ನು ವಾಪಸ್ ಕೊಡುತ್ತಾರೆ. ಎಸಬಿಐ ಮಂಥ್ಲಿ ಇನಕಮ್ ಸ್ಕೀಮ್ ನಲ್ಲಿ 5 ವರ್ಷಕ್ಕೆ 5.40% ಇಂಟರೆಸ್ಟ್ ರೇಟ್ ಇದೆ ಅದರಂತೆ ಪ್ರತಿ ತಿಂಗಳು 4,050 ರೂಪಾಯಿ ಇಂಟರೆಸ್ಟ್ ಹಣ ಬರುತ್ತದೆ ಇದು ಕೂಡ ಐದು ವರ್ಷದವರೆಗೆ ಪ್ರತಿ ತಿಂಗಳೂ ಬರುತ್ತದೆ. ಪೋಸ್ಟ್ ಆಫೀಸನಲ್ಲಿ ಇಂಟರೆಸ್ಟ್ ರೇಟ್ ಹೆಚ್ಚು ಇರುವುದರಿಂದ ಎಸಬಿಐ ಮಂಥ್ಲಿ ಇನಕಮ್ ಸ್ಕೀಮ್ ಗಿಂತ ಹೆಚ್ಚು ಹಣ ಬರುತ್ತದೆ. ಎಸಬಿಐ ನಲ್ಲಿ ಸೀನಿಯರ್ ಸಿಟಿಜನ್ ಗೆ 5.90% ಇಂಟರೆಸ್ಟ್ ರೇಟ್ ಇದ್ದು ಪ್ರತಿ ತಿಂಗಳು 4,425 ರೂಪಾಯಿ ಬರುತ್ತದೆ. ಪೋಸ್ಟ್ ಆಫೀಸ್ ಮಂಥ್ಲಿ ಇನಕಮ್ ಸ್ಕೀಮ್ ನಲ್ಲಿ ಸೀನಿಯರ್ ಸಿಟಿಜನ್ ಗೆ ಪ್ರತ್ಯೇಕ ಇಂಟರೆಸ್ಟ್ ರೇಟ್ ಇರುವುದಿಲ್ಲ ಆದರೆ ಎಸಬಿಐ ಮಂಥ್ಲಿ ಇನಕಮ್ ಸ್ಕ್ರೀಮಿನಲ್ಲಿ ಸೀನಿಯರ್ ಸಿಟಿಜನ್ ಗೆ ಪ್ರತ್ಯೇಕ ಇಂಟ್ರೆಸ್ಟ್ ರೇಟ್ ಇರುತ್ತದೆ. ಡೆಪೋಸಿಟ್ ಹಣ ಇಡುವುದಾದರೆ ಎಸಬಿಐ ಮಂಥ್ಲಿ ಇನಕಮ್ ಗಿಂತ ಪೋಸ್ಟ್ ಆಫೀಸ್ ಮಂಥ್ಲಿ ಇನಕಮ್ ಸ್ಕೀಮ್ ನಿಂದ ಹೆಚ್ಚು ಹಣ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಹಣದಿಂದ ಹಣವನ್ನು ಗಳಿಸಿರಿ.

Leave A Reply

Your email address will not be published.