ಕೃಷ್ಣನೆಡೆಗೆ ಭಕ್ತಿಗಿಂತಲೂ ಸದರವೇ ಹೆಚ್ಚು ಸದರಕ್ಕೆ ಒಗ್ಗುವ ವೈವಿದ್ಯತೆಯುಳ್ಳ ದೇವರು ಆತ ಹದಿಯರಿಗೆ ಇನಿಯ ಕಿರಿಯರಿಗೆ ಸಖ ಮಕ್ಕಳಿಗೆ ಆಪ್ತ ತಾಯಂದಿರಿಗೆ ತುಂಟ ಮಗ ಶ್ರಮಿಕರಿಗೆ ಕರ್ಮಪಾಠ ಹೇಳುವ ವೇದಾಂತಿ ಹಿರಿಯರಿಗೆ ಜಗದ್ಗುರು ಎಳವೆಯವರಿಂದ ಹಿರಿಯರ ವರೆಗೂ ಅವರಿವರಿಗೆ ಮನಸ್ಥಿತಿಗೆ ಭಕ್ತಿಯ ರೂಪಕ್ಕೆ ತಕ್ಕಂತೆ ಒಗ್ಗುವ ವೈವಿದ್ಯಮಯ ದೇವ ಶ್ರೀಕೃಷ್ಣ.ಹೀಗಿರುವ ಕೃಷ್ಣನ ಜನ್ಮ ರಹಸ್ಯವನ್ನೂ ಈ ಲೇಖನದ ಮೂಲಕ ತಿಳಿಯೋಣ.
ಶ್ರೀ ಕೃಷ್ಣ ಎಂದಿಗೂ ತನ್ನ ನೋವನ್ನು ತೋರಿಸದ ಸದಾ ನಗು ಮುಖದಿಂದ ಕುಡಿರುತ್ತದೆ ಹಾಗೂ ಕೃಷ್ಣ ಹುಟ್ಟಿದ ರಾತ್ರಿ ಐದು ಘಟನೆಗಳು ನಡೆಯುತ್ತದೆ ಹಾಗೂ ವಿಷ್ಣು ಕಂಸ ಮತ್ತು ಚಾನುರನ ಸಂಹಾರಕ್ಕಾಗಿ ಕೃಷ್ಣನ ಅವತಾರ ಧರಿಸುತ್ತಾನೆ ಮಥುರಾದ ರಾಜನಾದ ಉಗ್ರಸೇನನ್ನು ಬಂಧನದಲ್ಲಿ ಇಟ್ಟು ಕಂಸ ರಾಜನಾಗುತ್ತಾನೆ ನಂತರ ತನ್ನ ತಂಗಿಯನ್ನು ಕೊಟ್ಟು ವಿವಾಹಮಾಡುತ್ತಾನೆ.
ಅವರನ್ನು ಗಂಡನ ಮನೆಗೆ ಕರೆದುಕೊಂಡು ಹೋಗುವಾಗ ಅಲ್ಲಿ ಆಕಾಶದಲ್ಲಿ ದೇವಕಿಯ ಎಂಟನೇ ಮಗು ಕಂಸನನ್ನು ವಧೆ ಮಾಡುತ್ತದೆ ಎಂದು ಕೇಳಿಸುತ್ತದೆ ಅದನ್ನು ಕೇಳಿದ ಕಂಸನು ತನ್ನ ತಂಗಿಯನ್ನು ಕೊಲ್ಲಲು ಮುಂದಾದಾಗ ವಾಸುದೇವ ತಡೆದು ಹುಟ್ಟಿದ ಮಗುವನ್ನು ಕಂಸನಿಗೆ ಒಪ್ಪಿಸುವುದಾಗಿ ಹೇಳುತ್ತಾನೆ.
ತನ್ನ ತಂಗಿಯ ಗರ್ಭದಲ್ಲಿ ಹುಟ್ಟಿದ ಮಗುವಿನಿಂದ ಮರಣ ಖಚಿತವೆಂದು ನಂಬಿಕೊಂಡಿದ್ದನು ಹೀಗಾಗಿ ತಂಗಿ ಮತ್ತು ವಾಸುದೇವನನ್ನು ಕಾರಾಗೃಹದಲ್ಲಿ ಬಂಧಿಸಿ ಇಡುತ್ತಾನೆ ಹಾಗೂ ಈ ಕಾರಾಗ್ರಹವನ್ನು ಕಾಯಲು ಸೈನಿಕರನ್ನು ನೇಮಿಸುತ್ತಾನೆ ಹೀಗೆ ಬಂಧಿಸಿ ಹುಟ್ಟಿದ ಏಳು ಮಕ್ಕಳನ್ನು ಸಾಯಿಸುತ್ತಾನೆ ಆದರೆ ವಿಷ್ಣು ಕೃಷ್ಣನ ಅವತಾರದಲ್ಲಿ ರೋಹಿಣಿ ನಕ್ಷತ್ರದಲ್ಲಿ ಕಾರಾಗೃಹದಲ್ಲಿ ಜನ್ನಿಸುತ್ತಾನೆ ಈ ನವಜಾತ ಶಿಶುವನ್ನುಕಂಡು ವಾಸುದೇವ್ ಆಶ್ಚರ್ಯ ಗೊಳ್ಳುತ್ತಾನೆ ಕೃಷ್ಣ ಜನಿಸಿದ ಹಾಗೆ ಇದ್ದಕಿದ್ದಂತೆ ಗುಡುಗು ಮಿಂಚು ಆರಂಭವಾಗುತ್ತದೆ.
ಇದೆ ಸಮಯದಲ್ಲಿ ಜೈಲಿನ ಸೈನಿಕರೂ ನಿದ್ದೆ ಮಾಡಿತಿರುತ್ತಾನೆ ಹಾಗೆ ಜೈಲಿನ ಬಾಗಿಲು ತನಷ್ಟಕ್ಕೆ ಓಪನ್ ಆಗುತ್ತದೆ ಆಗ ವಾಸುದೇವ್ ಕೃಷ್ಣನನ್ನು ಬುಟ್ಟಿಯಲ್ಲಿಟ್ಟುಕೊಂಡು ಕಂಸನಿಂದ ರಕ್ಷಿಸಲು ಉಜ್ಜಯಿನಿ ಗೆ ಹೋಗಲು ನಿರ್ಧರಿಸುತ್ತಾನೆ ಹೋಗುತ್ತಿರುವಾಗ ಬಾರಿ ಮಳೆಯಾಗಿ ಯಮುನಾ ನದಿಯೂ ಉಕ್ಕಿಹರಿಯತ್ತದೆ ಮಳೆಯಲ್ಲಿ ವಾಸುದೇವ ಕೃಷ್ಣನನ್ನು ತೆಗೆದುಕೊಂಡು ಹೋಗುತ್ತಿರುವಾಗ ಹಾವುಗಳ ರಾಜ ವಾಸುಕಿ ಮಳೆಯಿಂದ ಕೃಷ್ಣನನ್ನು ರಕ್ಷಿಸುತ್ತದೆ ಕೃಷ್ಣನನ್ನು ಗೋಕುಲದ ಹತ್ತಿರ ಕರೆದುಕೊಂಡು ಹೋಗಿ ಕೃಷ್ಣನನ್ನು ಕೊಟ್ಟುನಂದ ಮತ್ತು ಯಶೋಧಾಳ ಹೆಣ್ಣುಮಗುವನ್ನೂ ಮಥುರಾಗೆ ಕರೆದುಕೊಂಡು ಹೋಗುತ್ತಾನೆ.
ಅಲ್ಲಿ ಕಂಸನಿಗೆ ತಂಗಿಗೆ ಮಗುವಾದ ವಿಷಯ ತಿಳಿದು ಹೆಣ್ಣು ಮಗುವನ್ನು ಸಾಯಿಸಲು ಕಲ್ಲಿನ ಮೇಲೆ ಇಟ್ಟು ಸಾಯಿಸಲು ಮುಂದಾದಾಗ ಮಗು ಆಕಾಶಕ್ಕೆ ಹಾಕಿ ಮವು ತನ್ನ ದಿವ್ಯ ಸ್ವರೂಪವನ್ನು ತೋರಿಸುತ್ತದೆ ಅದು ವಿಂದ್ಯಾವಾಚಲ ದೇವಿಯಾಗುತ್ತದೆ ಕೃಷ್ಣ ಹುಟ್ಟಿದ್ದು ದೇವಕಿ ಮಡಿಲಲ್ಲಿ ಆದರೆ ಬೆಳೆದಿದ್ದು ಯಶೋಡೆಯಲ್ಲಿ ಕೃಷ್ಣ ನ ಹಲವಾರು ಬಾಲ ಲೀಲೆಯನ್ನು ಸಹಿಸಿಕೊಂಡಳು ಯಶೋದೆ ಮುಂದೆ ಕೃಷ್ಣ ಧರ್ಮ ಸ್ಥಾಪನೆಯನ್ನು ಮಾಡುತ್ತಾನೆ ಹೀಗೆ ಕೃಷ್ಣನ ಜನ್ಮ ರಹಸ್ಯ ವಿಶಿಷ್ಟವಾದದ್ದು.