ಇವರು ಭಾರತದ ಮಂಕಿ ಮ್ಯಾನ್ ಅಂತ ಕರೆಸಿಕೊಳ್ಳುವ ಜ್ಯೋತಿ ರಾಜ್ ಇವರನ್ನು ಭಾರತದ ಸ್ಪೈಡರ್ ಮ್ಯಾನ್ ಎಂದು ಕರೆಯಬಹುದು. ಬರಿಗೈಯಲ್ಲಿ ಬಂಡೆ ಏರುವುದು ಇವರಿಗೆ ನೀರು ಕುಡಿದಷ್ಟು ಸುಲಭ ಇವರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಕರ್ನಾಟಕದ ಚಿತ್ರದುರ್ಗದ ಶ್ರೀ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಇವರು ಮುಕ್ತ ಏಕವ್ಯಕ್ತಿ ಅರೋಹಿ. ಇವರು ತಮ್ಮ ಕೈಗಳಿಂದ ಯಾವುದೇ ಎತ್ತರವನ್ನು ಎರಬಲ್ಲರು. ಇವರಿಗೆ ಜನರಿಂದ ಕೋತಿ ಮನುಷ್ಯ ಎಂದು ಕರೆಸಿಕೊಳ್ಳಲು ಇಷ್ಟ ವಾಗುತ್ತದೆಯಂತೆ. ಇವರು ಪ್ರಾರಂಭದಲ್ಲಿ ಚಿತ್ರದುರ್ಗದ ಕೋಟೆಯಲ್ಲಿ ಬಂಡೆ ಗಳನ್ನು ಏರಲು ಕಲಿತುಕೊಂಡರು. ಇವರಿಗೆ ಬಂಡೆಗಳಾನ್ನು ಏರುವುದರಲ್ಲಿ ಇತಿಹಾಸವನ್ನು ಸೃಷ್ಟಿಸಬೇಕು ಎಂಬುದು ಇವರ ಆಸೆ.

ಕರ್ನಾಟಕದ ಅತಿ ಎತ್ತರದ ಜಲಪಾತವಾದ ಎಂಟುನೂರಾ ಮೂವತ್ತು ಆಡಿ ಆಳ ಇರುವ ಜೋಗ ಜಲಪಾತ ವನ್ನು ಹರಿವಿನ ವಿರುಧ್ದ ಏರಿದ ಏಕೈಕ ವ್ಯಕ್ತಿ ಇವರು. ಇವರು ಎಸ್ಟೆ ಎತ್ತರದ ಬಂಡೆಯನ್ನು ಎರಬೇಕಾದರು ಇವರು ಕೇವಲ ಸಿಮೆ ಸುಣ್ಣದ ಪುಡಿ ಮತ್ತು ಸಾಮಾನ್ಯ ಬೂಟುಗಳನ್ನು ಹೊರತು ಪಡಿಸಿ ಬೇರೆಯಾವುದೇ ವಸ್ತುಗಳನ್ನು ಬಳಸುವುದಿಲ್ಲ.

ಇವರು ತುಂಬಾ ಸರಳವಾದ ಜೀವನವನ್ನು ನಡೆಸುತ್ತಾರೆ ತಮಗಾಗಿ ಯಾವುದೇ ಆಸ್ತಿ ಪಾಸ್ತಿಯನ್ನು ಇವರು ಮಾಡಿ ಕೊಂಡಿಲ್ಲ. ಇವರ ಕಲೆಯನ್ನು ನೋಡಿ ಅವರಿವರು ಕೊಡುವ ಅಲ್ಪ ಹಣದಲ್ಲಿಯೇ ಜೀವನವನ್ನು ಸಾಗಿಸುತ್ತಾರೆ. ಇವರು ಸುಮಾರು ಇಪ್ಪತ್ತೇಳು ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಗೋಡೆ ಏರುವ ತರಬೇತಿಯನ್ನು ನೀಡುತ್ತಾರೆ ಅದರಲ್ಲಿ ಹದಿನಾಲ್ಕು ಮಕ್ಕಳು ಮಿಲೀಟರಿಗೆ ಆಯ್ಕೆ ಆಗಿದ್ದಾರೆ ನಾಲ್ಕು ಜನ ಪೊಲೀಸ್ ಇಲಾಖೆಗೆ ಆಯ್ಕೆ ಆಗಿದ್ದಾರೆ.

ಎರಡು ಸಾವಿರದ ಹದಿನಾಲ್ಕರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ನಟನಾಗಿ ಜ್ಯೋತಿ ಅಲಿಯಾಸ್ ಕೊತಿರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಒಲಿಂಪಿಕ್ಸ್ ಗೆ ಸೇರ್ಪಡೆಗೊಂಡಿರುವ ರಾಕ್ ಕ್ಲೈಂಬಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ ಗೆಲ್ಲುವುದು ಇವರ ಕನಸು. ಎಷ್ಟೇ ಎತ್ತರದ ಬಂಡೆಗಳನ್ನಾದರು ಸರಾಗವಾಗಿ ಎರಬಲ್ಲ ಇವರು ಇಂದಿನ ಯುವಕರಿಗೆ ಸ್ಪೂರ್ತಿ ಯಾಗಿದ್ದಾರೆ.

Leave a Reply

Your email address will not be published. Required fields are marked *