ಮಹಾಭಾರತ ಯುದ್ಧದಲ್ಲಿ ಸುಯೋಧನನ ತೊಡೆ ಮುರಿದಿದ್ದಕ್ಕೆ ಕೃಷ್ಣ ಕೊಟ್ಟ ಉತ್ತರವೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ
ಶ್ರೀಕೃಷ್ಣ ಮಹಾಭಾರತ ಯುದ್ಧವನ್ನು ಗೆದ್ದು ಕೊಟ್ಟಿದ್ದೆ ರಹಸ್ಯ ಮಾಹಿತಿಗಳಿಂದ. ಸುಯೋಧನನು ಗಾಂಧಾರಿಯ ಪುತ್ರ ವಾತ್ಸಲ್ಯದಿಂದ ತಯಾರಾದ ಅಪರೂಪದ ಔಷಧಿ ಸಸ್ಯಗಳ ಲೇಪನದಿಂದ ವಜ್ರಧಾರಿಯಾಗಿರುವುದು ಶ್ರೀ ಕೃಷ್ಣನಿಗೆ ತಿಳಿದಿತ್ತು. ಜರಾಸಂಧನೊಂದಿಗೆ ಕದನದಲ್ಲಿ ಪ್ರತಿಬಾರಿ ಅವನು ಮತ್ತೆ ಮತ್ತೆ ಎದ್ದು ಬರುತ್ತಿದ್ದ ಅವನನ್ನು ಸಿಗಿದು ಬೇರೆ ಬೇರೆ ದಿಕ್ಕುಗಳಿಗೆ ಎಸೆಯುವಂತೆ ಭೀಮನಿಗೆ ಕೃಷ್ಣ ಸೂಚಿಸುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನ ಮುಂದೆ ಶಿಖಂಡಿಯನ್ನು ನಿಲ್ಲಿಸಲು ಹೇಳಿದ್ದು ಸಹ ಶ್ರೀಕೃಷ್ಣ. ಕರ್ಣನು ಕುಂತಿಯ ಮಗ ಎಂದು ತಿಳಿದವನು ಕೂಡ ಶ್ರೀಕೃಷ್ಣ. ಸಕಲ ರಹಸ್ಯವನ್ನು ಶ್ರೀಕೃಷ್ಣ ತಿಳಿದಿದ್ದರಿಂದ ಅವನನ್ನು ಸರ್ವಾಂತರ್ಯಾಮಿ ಎಂದು ಕರೆಯುತ್ತಾರೆ. ರಾಜಕೀಯ ನಿಪುಣನಾಗಲು ಬೇಕಾಗುವುದು ಮಾಹಿತಿ ಜ್ಞಾನ. ಕುರುಕ್ಷೇತ್ರದ ಯುದ್ಧದಲ್ಲಿ ಶ್ರೀಕೃಷ್ಣನ ಬೆಂಬಲ ಇದ್ದುದರಿಂದ ಪಾಂಡವರು ಕೌರವರನ್ನು ಧೂಳಿಪಟ ಮಾಡಲು ಸಾಧ್ಯವಾಯಿತು. ಸುಯೋಧನನೊಂದಿಗೆ ಕಾದಾಡಿ ಶಕ್ತಿ ಕಳೆದುಕೊಂಡು ಧೀನವದನನಾಗಿದ್ದ ಭೀಮನು ಸಹಾಯಕ್ಕಾಗಿ, ಮಾರ್ಗದರ್ಶನಕ್ಕಾಗಿ ಶ್ರೀಕೃಷ್ಣನ ಕಡೆ ನೋಡಿದ ಆಗ ರಹಸ್ಯ ತಿಳಿದಿದ್ದ ಕೃಷ್ಣ ಸುಯೋಧನನ ತೊಡೆ ಮುರಿಯಲು ಸೂಚನೆ ನೀಡಿದ. ಭೀಮ ತನ್ನ ಗದೆಯಿಂದ ದುರ್ಯೋಧನನ ತೊಡೆಗೆ ಬೀಸಿ ಹೊಡೆದುಬಿಟ್ಟ ದುರ್ಯೋಧನನಿಗೆ ನಿಲ್ಲಲು ಆಗದೆ ಕುಸಿದುಬಿಟ್ಟ. ಭೀಮನು ತೊಡೆಗೆ ಹೊಡೆದಿದ್ದು ಯುದ್ಧ ನೀತಿಗೆ ವಿರುದ್ಧವಾಗಿತ್ತು. ನೆಲಕ್ಕೆ ಬಿದ್ದು ದುರ್ಯೋಧನನು ಕೃಷ್ಣನನ್ನು ನೋಡಿ ಇದೆಂತ ಅನ್ಯಾಯ ಮಾಡಿದೆ ಎಂದು ಕೇಳಿದನು. ಭೀಮನನ್ನು ನಿಂದಿಸಿದನು. ಗದಾಯುದ್ಧದ ಪ್ರವೀಣನಾಗಿರುವ ನಿನಗೆ ಎಲ್ಲಿ ಪ್ರಹಾರ ಮಾಡಬೇಕೆಂಬ ಕನಿಷ್ಟ ಜ್ಞಾನವು ಇಲ್ಲ ಅವಿವೇಕಿ ಎಂದು ನಿಂದಿಸಿದನು. ಆಗ ಪಾಂಡವರು ತಲೆತಗ್ಗಿಸಿ ನಿಂತುಕೊಂಡಿದ್ದರು. ದುರ್ಯೋಧನ ಕೃಷ್ಣ ಕಪಟಿ ನಿಮ್ಮಿಂದ ಮೋಸ ಮಾಡಿಸುತ್ತಲೆ ಬಂದಿದ್ದಾನೆ. ನಿಮ್ಮ ಈ ಮೋಸಕ್ಕೆ ಪರಲೋಕದಲ್ಲೂ ಶಾಂತಿ ಸಿಗುವುದಿಲ್ಲ ಎಂದು ಹೇಳುತ್ತಾನೆ.
ದುರ್ಯೋಧನನಿಗೆ ಶ್ರೀಕೃಷ್ಣನು ನೀನು ಮೋಸದ ಬಗ್ಗೆ ಹೇಳುತ್ತಿರುವೆ ಕುರುಕ್ಷೇತ್ರ ಯುದ್ದದಲ್ಲಿ ಅರ್ಜುನನ ಕುಮಾರನಾದ ಅಭಿಮನ್ಯುವನ್ನು ಕುರುವೀರರು ಒಟ್ಟಿಗೆ ಸುತ್ತುವರೆದು ಬೆನ್ನ ಹಿಂದೆ ಧಾಳಿ ಮಾಡಿಸಿದಾಗ ಯುದ್ದಧರ್ಮ ಎಲ್ಲಿ ಹೋಗಿತ್ತು. ಘಟೋತ್ಕಚನನ್ನು ಇಡೀ ಕುರುಪಡೆ ಸುತ್ತುವರೆದು ಕೊಂದು ಹಾಕಿದೀರಲ್ಲಾ ಆಗ ದ್ವಂದ್ವ ಯುದ್ದದಲ್ಲಿ ಒಬ್ಬನೊಂದಿಗೆ ಒಬ್ಬನೇ ಹೋರಾಡಬೇಕು ಎಂದು ಗೊತ್ತಾಗಲಿಲ್ಲವೇ. ಅಷ್ಟೇ ಅಲ್ಲದೆ ಸಭೆಯಲ್ಲಿ ಪಾಂಚಾಲಿಯನ್ನು ಎಳೆದು ತಂದೀರಲ್ಲ ಆಗ ಎಲ್ಲಿ ಹೋಗಿತ್ತು ಧರ್ಮ ಬುದ್ಧಿ. ಪಾಂಡವರು ವನವಾಸದಲ್ಲಿದ್ದಾಗ ಜಯದೃತನನ್ನು ಪುಸಲಾಯಿಸಿ ದ್ರೌಪದಿಯ ಅಪಹರಣದಂತ ನೀಚ ಕೆಲಸಕ್ಕೆ ಮುಂದಾದೆಯಲ್ಲ ಅದೆಂಥ ಧರ್ಮ. ಸಂಧಾನಕ್ಕೆ ಬಂದ ನನ್ನ ಬಂಧಿಸಲು ಹೊರಟಿದ್ದೆಯಲ್ಲ ಎಂದು ಹೇಳಿದನು. ದ್ರೌಪದಿಯ ವಸ್ತ್ರಾಪಹರಣ ದಿನವೇ ನಿನ್ನ ತೊಡೆಯನ್ನು ಮುರಿಯಬೇಕಿತ್ತು ಧರ್ಮರಾಯನ ಮಾತಿಗೆ ಕಟ್ಟುಬಿದ್ದು ಕೇವಲ ಪ್ರತಿಜ್ಞೆಯನ್ನು ಮಾಡಿದ ಇಂದು ಪ್ರತಿಜ್ಞೆಯನ್ನು ಪೂರ್ಣಗೊಳಿಸಿದ. ಒಬ್ಬ ಅಧರ್ಮಿಯ ಜೊತೆ ಯುದ್ಧ ಮಾಡುವಾಗ ಧರ್ಮ ಅಧರ್ಮವನ್ನು ನೋಡಬಾರದು ಎಂದು ಧರ್ಮಶಾಸ್ತ್ರ ಹೇಳುತ್ತದೆ. ನಿನ್ನೊಂದಿಗಿನ ಯುದ್ಧ ಅದು ಭೇಟೆ ಅಲ್ಲಿ ಯುದ್ಧದ ನಿಯಮಗಳನ್ನು ಪಾಲಿಸಲು ಆಗುವುದಿಲ್ಲ. ಇದು ನೀನು ಮಾಡಿದ ಪಾಪದ ಫಲ ಅನುಭವಿಸಲೇಬೇಕು. ಇಷ್ಟು ಹೇಳಿ ಕೃಷ್ಣ ಪಾಂಡವರನ್ನು ಅಲ್ಲಿಂದ ಕರೆದುಕೊಂಡು ಹೋದನು. ಸುಯೋಧನ ನಿರಾಸೆಯಿಂದ ಬೇಯುತ್ತಿದ್ದನು ಆದರೂ ಪಾಂಡವರನ್ನು ಸೋಲಿಸದೆ ಸಾಯುತ್ತಿದ್ದೀನಲ್ಲ ಎಂದು ಒದ್ದಾಡಿದನು.
ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ