Shri Krishna: ನೀವು ಈ ರೀತಿ ಊಟ ಮಾಡಿದ್ರೆ ಆಯಸ್ಸು ಕಡಿಮೆ ಆಗುತ್ತೆ, ಶ್ರೀ ಕೃಷ್ಣಾ ಹೇಳಿದ ರಹಸ್ಯ

0 65

Shri Krishna ಸನಾತನ ಧರ್ಮದಿಂದಲೂ ಕೂಡ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆ ಯಾವ ರೀತಿ ಊಟ ಮಾಡಿದರೆ ಆಯಸ್ಸು ಕಡಿಮೆ ಆಗುತ್ತೆ ಅಂತ ಶ್ರೀ ಕೃಷ್ಣ (Shri Krishna) ಹೇಳಿದ ರಹಸ್ಯವನ್ನು ಈ ಲೇಖನದಲ್ಲಿ ತಿಳಿಯೋಣಕೆಲವು ವ್ಯಕ್ತಿಗಳು ಹಸಿವಾಗಿದೆ ಎಂಬ ಕಾರಣಕ್ಕೆ ಮಾತ್ರ ಆಹಾರವನ್ನು ಸೇವನೆ ಮಾಡುತ್ತಿದ್ದಾರೆ. ಜನರು ತುಂಬಾ ಗಡಿಬಿಡಿಯಲ್ಲಿ ಆಹಾರವನ್ನು ಸೇವನೆ ಮಾಡುತ್ತಿದ್ದಾರೆ

ಜನರು ಟಿವಿ, ಮೊಬೈಲ್ (Mobile) ಮುಂತಾದ ವಸ್ತುಗಳನ್ನು ನೋಡಿ ಆಹಾರವನ್ನು ಸೇವನೆ ಮಾಡುತ್ತಾರೆ. ಇವುಗಳು ತುಂಬಾ ಸಮಸ್ಯೆಗಳು ಉಂಟುಮಾಡುತ್ತದೆ. ನಾವು ಆಹಾರವನ್ನು (Food) ಸೇವನೆ ಮಾಡುವಾಗ ಮನಸ್ಸು ಶುದ್ದವಾಗಿರಬೇಕು, ಆಹಾರ ಸೇವನೆ ಮಾಡುವ ಸಂದರ್ಭದಲ್ಲಿ ನಕಾರಾತ್ಮಕ ಯೋಚನೆಗಳನ್ನು ಮಾಡಬಾರದು, ಆಹಾರ ನೋಡುತ್ತಿದ್ದಂತೆ ಜನ ಅದು ಉಪ್ಪಾಗಿದೆ, ಅದು ಸಿಹಿಯಾಗಿದೆ, ಅದು ಖಾರವಾಗಿದೆ ಎಂದು ಹೇಳುವುದಕ್ಕೆ ಮುಂದಾಗುತ್ತಾರೆ.

Eating Hand

ಕೆಲವರು ಇಷ್ಟವಿಲ್ಲದೆ ಆಹಾರವನ್ನ ಸೇವನೆ ಮಾಡುತ್ತಾರೆ, ಇವುಗಳು ನಕಾರಾತ್ಮಕ ಭಾವನೆಯಾಗಿದೆ. ನಾವು ಈ ರೀತಿ ಮಾಡಿದರೆ ಅನ್ನಕ್ಕೆ ಅವಮಾನಿಸಿದಂತೆ ಆಗುತ್ತದೆ. ನೀವು ಯಾವ ರೀತಿಯ ಆಹಾರವನ್ನು ಸೇವನೆ ಮಾಡುತ್ತಿರೋ ನಿಮ್ಮ ಮನಸ್ಸು ಕೂಡ ಅದೇ ರೀತಿಯ ಯೋಚನೆಗಳಲ್ಲಿ ಮುಳುಗುತ್ತೀರಿ. ಅದರಿಂದ ಒಳ್ಳೆಯ ರೀತಿಯ ಆಹಾರ ಸೇವನೆ ಮಾಡುವುದು ಉತ್ತಮ, ಈ ರೀತಿ ಆಹಾರ ಸೇವಿಸಿದರೆ ಮನಸ್ಸಿನಲ್ಲಿ ಸಕಾರಾತ್ಮಕತೆ (Positive) ಮೂಡುತ್ತದೆ.

ದಕ್ಷಿಣಭಿಮುಖವಾಗಿ ಆಹಾರವನ್ನು ಸೇವಿಸಬಾರದು ಎಂದು ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ತಿಳಿಸಲಾಗಿದೆ. ಯಾವಾಗಲೂ ಉತ್ತರದ ಪೂರ್ವಭಿಮುಖವಾಗಿ ಆಹಾರವನ್ನು ಸೇವಿಸಿ ಆಹಾರವನ್ನ ಸೇವಿಸುವಾಗ ಮೊದಲು ಕೈ ಮತ್ತು ಕಾಲನ್ನ ತೊಳೆದುಕೊಳ್ಳುವುದು ಉತ್ತಮ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಸೇರಿ ಆಹಾರವನ್ನ ಸೇವಿಸಿ. ಏಕಾದಶಿ ಮತ್ತು ದ್ವಾದಶಿ ಎಂದು ಬದನೆಕಾಯಿಯನ್ನು ಸೇವನೆ ಮಾಡಬೇಡಿ ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ, ಅಮಾವಾಸ್ಯೆ, ಹುಣ್ಣಿಮೆ, ಸಂಕಷ್ಠಿ, ಅಷ್ಟಮಿ ಎಳ್ಳಿನ ಎಣ್ಣೆಯನ್ನ ಸೇವನೆ ಮಾಡಬಾರದು, ಭಾನುವಾರ ಶುಂಠಿ ಸೇವನೆಯನ್ನು ಮಾಡಬಾರದು ಇವು ಶರೀರದಲ್ಲಿರುವ ಅಂಗಾಂಗಗಳನ್ನು ದುರ್ಬಲವನ್ನಾಗಿ ಮಾಡುತ್ತದೆ.

ಶ್ರೀಕೃಷ್ಣ ಹೇಳುವಂತೆ ಮನುಷ್ಯನು ಐದು ಅಂಗಗಳನ್ನು ಸ್ವಚ್ಛಗೊಳಿಸಿದ ನಂತರ ಆಹಾರವನ್ನು ಸೇವಿಸಬೇಕು ಎಂದು ಹೇಳುತ್ತಾನೆ ಎರಡು ಕೈ, ಎರಡು ಕಾಲು ಮತ್ತು ಮುಖವನ್ನ ಸ್ವಚ್ಛಗೊಳಿಸಿದ ನಂತರ ಊಟಕ್ಕೆ ಕುಳಿತುಕೊಳ್ಳಬೇಕು ಈ ರೀತಿ ಮಾಡಿದರೆ ಮನುಷ್ಯನಲ್ಲಿರುವ ರೋಗಗಳು ದೂರವಾಗುತ್ತದೆ. ಭೋಜನ ಮಾಡುವ ಮೊದಲು ದೇವರಿಗೆ ಧನ್ಯವಾದಗಳು ಅರ್ಪಿಸಬೇಕು, ಊಟ ಮಾಡುವಾಗ ಎಂದೂ ಜೋರಾಗಿ ನಗುವುದು, ಮಾತನಾಡುವುದು ಮಾಡಬಾರದು.

ನೀವು ಊಟ ಮಾಡುವಾಗ ಯಾರಾದ್ರೂ ನಿಮ್ಮ ತಟ್ಟೆಯನ್ನು ದಾಟಿ ಹೋದರೆ ಅದನ್ನ ಸೇವಿಸಬಾರದು, ಊಟದ ಮದ್ಯೆ ಎಂದು ಮಾತನಾಡಬಾರದು. ಉತ್ತರ ದಿಕ್ಕಿಗೆ ಊಟ ಮಾಡುವುದರಿಂದ ಧನಪ್ರಾಪ್ತಿಯಾಗುತ್ತದೆ. ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಆಹಾರವನ್ನು ಸೇವನೆ ಮಾಡುವುದರಿಂದ ರೋಗಗಳು ನಿವಾರಣೆಯಾಗುತ್ತದೆ ದಕ್ಷಿಣ ದಿಕ್ಕಿಗೆ ಕೂತು ಎಂದು ಆಹಾರವನ್ನ ಸೇವಿಸಬಾರದು ಇದು ಪೂರ್ವಜರ ದಿಕ್ಕಾಗಿರುತ್ತದೆ.

ಸ್ಕಂದ ಪುರಾಣದ ಪ್ರಕಾರ ರಾತ್ರಿ ಪೂರ್ಣ ಊಟವನ್ನು ಮಾಡಬಾರದು, ಇದು ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ. ಆಹಾರ ಸೇವಿಸಿದ ನಂತರ ಎಂಜಲು ಕೈಯಲ್ಲಿ ಎಲ್ಲಿಗೂ ಹೋಗಬಾರದು. ಊಟ ಮಾಡಿದ ನಂತರ ಕೈ ಬಾಯಿ ತೊಳೆದ ನಂತರವೇ ಹೊರಗೆ ಹೋಗಬೇಕು. ಈ ರೀತಿ ಊಟವನ್ನು ಸೇವಿಸಿದರೆ ಕೃಷ್ಣ ಹೇಳುವಂತೆ ಆಯಸ್ಸು ಕಡಿಮೆ ಆಗುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.