ಕೃಷ್ಣ ತನ್ನ ಕಾಲದ ಹೀರೋ, ಮಾನಿನಿಯರ ಸಖ, ಎಲ್ಲರೂ ಬಯಸುವ ಸ್ನೇಹಿತ, ತಾಯಂದಿರು ಬಯಸುವ ತುಂಟ ಮಗು, ಪವಾಡಗಳ ಪರಮಪುರುಷ, ಎಲ್ಲರನ್ನೂ ಸಮ್ಮೋಹನಗೊಳಿಸಬಲ್ಲ ವಿಶೇಷ ಕಳೆಯ ಮೋಹನ. ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಬಗ್ಗೆ ಬಹುತೇಕರಿಗೆ ಗೊತ್ತಿರುವುದು ಆತ ಬೆಣ್ಣೆಕಳ್ಳನೆಂದೂ, ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಗೀತೆಯನ್ನು ಬೋಧಿಸಿದನೆಂದು.
ಆದರೆ ಕೃಷ್ಣನ ವಿಶೇಷ ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಲ್ಲ. ಆತನ ಬಗ್ಗೆ ಹೇಳಿದಷ್ಟೂ ಮುಗಿಯದ ಸಂಗತಿಗಳಿವೆ. ಹೀಗೆ ಕೃಷ್ಣನ ಉಪದೇಶಗಳಲ್ಲಿ ವಾಣಿಗಳಲ್ಲಿ ಕೆಲವು ತಪ್ಪುಗಳನ್ನು ಮಾಡಿದರೆ ಜೀವನದಲ್ಲಿ ಮುಂದೆ ಬೆಳೆಯಲು ಕಷ್ಟ ಹಾಗೂ ದರಿದ್ರ ಬರುತ್ತದೆ ಎಂದು ತಿಳಿಸಿದ್ದಾರೆ ಅದನ್ನು ಮುಂದೆ ತಿಳಿಯೋಣ.
ಕೃಷ್ಣನ ಉಪದೇಶಗಳಲ್ಲಿ ಆತ ಹಲವಾರು ರೀತಿಯಲ್ಲಿ ಜನರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ, ಅದೇ ರೀತಿ ನೀವು ತಪ್ಪು ಮಾಡಿದರೆ ಇದೇ ಜನ್ಮದಲ್ಲಿ ಅದರೂ ಫಲವನ್ನು ಅನುಭವಿಸುತ್ತೀರಾ ಎಂದು ಸಹ ಹೇಳಿದ್ದಾರೆ. ನಾವು ಮಾಡುವಂತಹ ತಪ್ಪುಗಳು ನಮ್ಮನ್ನು ದಲಿತರನ್ನಾಗಿ ಮಾಡುತ್ತವೆ. ದಿನನಿತ್ಯ ದೇವರಿಗೆ ನೈವೇದ್ಯ ಕೊಡುವ ಮುಂಚೆ ನಾವು ಸೇವಿಸುವುದರಿಂದ ದರಿದ್ರ ಬರುತ್ತದೆ ಹಾಗೂ ನಾವು ಸೇವಿಸುವಂತಹ ಆಹಾರದಲ್ಲಿ ಪ್ರಾಣಿಗಳಿಗೂ ಪಾಲು ಇರುತ್ತದೆ.
ಆದ್ದರಿಂದ ನಾವು ತಿನ್ನುವ ಆಹಾರದಲ್ಲಿ ಒಂದು ತುತ್ತನ್ನು ಪ್ರಾಣಿ-ಪಕ್ಷಿಗಳಿಗೆ ಎತ್ತಿಟ್ಟು ನಂತರ ತಿನ್ನಬೇಕು ಈ ರೀತಿ ಮಾಡದಿದ್ದಲ್ಲಿ ದಂ ಇದ್ಯಾ ಸುತ್ತಿಕೊಳ್ಳುತ್ತದೆ. ನಾವು ಎಷ್ಟೇ ದುಡಿದರೂ ಹಣವನ್ನು ಉಳಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ನಮ್ಮ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಪ್ರಮಾಣದ ದಾನ ಮಾಡುವುದು ಲೇಸು ಈ ರೀತಿಯಾಗಿ ಮಾಡಿದಾರೆ ದರಿದ್ರವನ್ನು ತಡೆಯಬಹುದು.
ಯಾರು ಹೆಣ್ಣನ್ನು ಅಗೌರವಿಸುತ್ತಾರೆ ಹಾಗೂ ಕೀಳಾಗಿ ಕಾಣುತ್ತಾರೆ ಅವರಿಗೆ ದಾರಿದ್ರ್ಯಗಳು ಸುತ್ತಿಕೊಳ್ಳುತ್ತವೆ ಯಾವ ಮನೆಯಲ್ಲಿ ಹೆಣ್ಣು ಸಂತೋಷದಿಂದ ಜೀವಿಸುತ್ತಾಳೆ ಮನೆಯಲ್ಲಿ ನೆಮ್ಮದಿ ಸಂತೋಷ ನೆಲೆಸಿರುತ್ತದೆ. ಯಾವ ಮನೆಯಲ್ಲಿ ಜನರು ಮಧ್ಯಪಾನ ಧೂಮಪಾನ ಮಾಡುತ್ತಾರೆ ಅಲ್ಲಿ ಲಕ್ಷ್ಮಿ ನೆಲೆಸಿರುವುದಿಲ್ಲ, ಆ ಮನೆಗಳಲ್ಲಿ ದರಿದ್ರಲಕ್ಷ್ಮಿ ಓಡಾಡುತ್ತಿರುತ್ತಾಳೆ. ಯಾವ ವ್ಯಕ್ತಿ ತನ್ನ ಹೆಂಡತಿಯನ್ನು ಬಿಟ್ಟು ಪರ ಸ್ತ್ರೀಯನ್ನು ಮೋಹಿಸುತ್ತಾನೋ ಅವನ್ನಲ್ಲಿ ದರಿದ್ರ ಇರುತ್ತದೆ.