ಈ ಸ್ಥಳದಲ್ಲಿ ಯಾವುದೇ ವಿಮಾನಗಳು ಪ್ರಯಾಣಿಸೋದಿಲ್ಲ ಯಾಕೆ ಗೊತ್ತೆ

0 1

ಆಕಾಶದಲ್ಲಿ ಹಾರುವ ವಿಮಾನವನ್ನು ನೋಡುವುದೆ ಚಂದ. ಕೆಲವು ಪ್ರದೇಶಗಳ ಮೇಲಿಂದ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿದೆ ಹಾಗಾದರೆ ಯಾವ, ಯಾವ ಪ್ರದೇಶಗಳ ಮೇಲಿಂದ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಟಿಬೇಟ್ ದೇಶದ ಮೇಲಿಂದ ವಿಮಾನಗಳು ಪ್ರಯಾಣಿಸುವುದಿಲ್ಲ. ಟಿಬೇಟ್ ನಲ್ಲಿ ಹಲವು ಪರ್ವತಗಳಿವೆ ಅವು ಸಾವಿರಾರು ಅಡಿ ಎತ್ತರ ಇವೆ. ಮೌಂಟ್ ಎವರೆಸ್ಟ್ 8,848 ಮೀಟರ್, ಕೇಟು ಪರ್ವತ 28,251 ಅಡಿ ಎತ್ತರದಲ್ಲಿದೆ, ವಿಮಾನಗಳು ಸಾಮಾನ್ಯವಾಗಿ 25 ಸಾವಿರದಿಂದ 38 ಸಾವಿರ ಅಡಿಗಳ ಎತ್ತರದವರೆಗೆ ಮಾತ್ರ ಪ್ರಯಾಣಿಸಬಹುದು ಆದ್ದರಿಂದ ಎತ್ತರದ ಪರ್ವತಗಳ ನಡುವೆ ವಿಮಾನಗಳು ಪ್ರಯಾಣಿಸುವುದು ಅಪಾಯಕಾರಿ.

ಟಿಬೇಟ್ ನಲ್ಲಿ ಯಾವುದಾದರೂ ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗಬೇಕು ಎಂದರೆ ಲ್ಯಾಂಡ್ ಆಗಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿ ಪರ್ವತಗಳೆ ಹೆಚ್ಚಿವೆ. ಅಪಾಯದ ಮುನ್ಸೂಚನೆ ಇದ್ದಾಗ ಪಯ್ಲೆಟ್ ರೆಡಾರ್ ಮೂಲಕ ಕಮ್ಯುನಿಕೇಟ್ ಮಾಡುತ್ತಾರೆ ಕಡಿಮೆ ಜನಸಂಖ್ಯೆ ಇರುವುದರಿಂದ ರೆಡಾರ್ ಸರ್ವೀಸ್ ಇರುವುದಿಲ್ಲ. ಟಿಬೇಟ್ ನಲ್ಲಿ ಎತ್ತರದ ಪರ್ವತಗಳಿರುವುದರಿಂದ ಪರ್ವತಗಳ ಮೇಲೆ ಗಾಳಿ ವೇಗವಾಗಿ ಬೀಸುತ್ತಿರುತ್ತದೆ ಆಗ ವಿಮಾನಗಳು ಕಂಫರ್ಟ್ ಆಗಿ ಪ್ರಯಾಣಿಸಲು ಸಾಧ್ಯವಿಲ್ಲ.

ಧಾರ್ಮಿಕ ಮಹತ್ವ ಹೊಂದಿರುವ ಪ್ರದೇಶಗಳ ಮೇಲೆ ವಿಮಾನ ಹಾರಾಡುವುದನ್ನು ನಿಷೇಧಿಸಲಾಗಿದೆ. ಉದಾಹರಣೆ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ. ಮೆಕ್ಕಾ ನಗರವನ್ನು ಮುಸ್ಲಿಮರು ಪವಿತ್ರ ಸ್ಥಳವೆಂದು ಭಾವಿಸಿದ್ದಾರೆ. ಮೆಕ್ಕಾ ನಗರಕ್ಕೆ ಇತರೆ ಧರ್ಮದವರು ಪ್ರವೇಶಿಸುವಂತಿಲ್ಲ. ವಿಮಾನಗಳು ಮೆಕ್ಕಾ ನಗರದ ಮೇಲೆ ಪ್ರಯಾಣಿಸುವಂತೆ ಇದ್ದರೆ ಮುಸ್ಲಿಂ ಅಲ್ಲದೆ ಇತರ ಧರ್ಮದವರು ವಿಮಾನಗಳಲ್ಲಿ ಇರುತ್ತಾರೆ ಆದ್ದರಿಂದ ಸೌದಿ ಅರೇಬಿಯಾ ಸರ್ಕಾರ ಮೆಕ್ಕಾ ನಗರದ ಮೇಲೆ ವಿಮಾನಗಳು ಪ್ರಯಾಣಿಸುವುದನ್ನು ನಿಷೇಧಿಸಿದೆ. ಭಾರತದಲ್ಲಿರುವ ಗೋಲ್ಡನ್ ಟೆಂಪಲ್, ತಿರುಪತಿಯಲ್ಲಿರುವ ತಿರುಮಲ ದೇವಾಲಯಗಳ ಮೇಲಿಂದ ಕೂಡ ವಿಮಾನಗಳು ಪ್ರಯಾಣಿಸಲು ನಿಷೇಧವಿದೆ.

ಧಾಳಿಗಳು ನಡೆದು ಬಹಳಷ್ಟು ಜನರು ಸಾವನ್ನಪ್ಪಿರುವ ಕಾರಣ ಹೆಚ್ಚು ಜನರು ಸೇರುವ ಪ್ರದೇಶಗಳ ಮೇಲೆ ವಿಮಾನ ಪ್ರಯಾಣಿಸುವುದನ್ನು ಕೆಲವು ದೇಶಗಳು ನಿಷೇಧ ಮಾಡಿದೆ. ಉದಾಹರಣೆಗೆ ಅಮೆರಿಕಾದಲ್ಲಿರುವ ಡಿಸ್ನಿ ಪಾರ್ಕ್, ಈ ಪಾರ್ಕ್ ಮೇಲಿಂದ ವಿಮಾನಗಳು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಈ ಪಾರ್ಕಿಗೆ ಪ್ರತಿದಿನ ಸುಮಾರು 50,000 ವಿಸಿಟರ್ಸ್ ಬರುತ್ತಾರೆ. ಜೊತೆಗೆ ಅಮೆರಿಕಾದಲ್ಲಿ ಸ್ಟೇಡಿಯಂ ಮೇಲಿಂದ ಕೂಡ ವಿಮಾನಗಳು ಪ್ರಯಾಣಿಸುವಂತಿಲ್ಲ, ಹೀಗೆ ಒಟ್ಟು 180 ಸ್ಟೇಡಿಯಂ ಮೇಲಿಂದ ವಿಮಾನಗಳು ಪ್ರಯಾಣಿಸುವುದಿಲ್ಲ.

ಮಾಚು ಪಿಚು ಇದು 15ನೇ ಶತಮಾನಕ್ಕೆ ಸೇರಿದ ಒಂದು ಐತಿಹಾಸಿಕ ಕಟ್ಟಡ. ಮಾಚು ಪಿಚು ಮೇಲಿಂದ ವಿಮಾನಗಳು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಈ ಕಟ್ಟಡ ಪ್ರಕೃತಿ ಸೌಂದರ್ಯ ಮತ್ತು ಪ್ರಾಚೀನ ಸಂಸ್ಕೃತಿಯನ್ನು ಹೊಂದಿದೆ. ಈ ಪ್ರದೇಶದಲ್ಲಿ ಏರ್ ಕ್ರಾಫ್ಟ್ ಆದರೆ ಅಥವಾ ಎಮರ್ಜೆನ್ಸಿ ವಿಮಾನ ಲ್ಯಾಂಡ್ ಆದರೆ ಅಲ್ಲಿರುವ ಎಕೊ ಸಿಸ್ಟಮ್ ಹಾಳಾಗುತ್ತದೆ. ಹಂಗೇರಿ ದೇಶದಲ್ಲಿರುವ ಬುದ್ ಬೆಸ್ಟ್, ಯುಕೆನಲ್ಲಿರುವ ಬಂಕಿಂಗ್ ಹ್ಯಾಮ್ ಪ್ಯಾಲೇಸ್, ತಾಜ್ ಮಹಲ್ ಹೀಗೆ ಇನ್ನಿತರ ಪ್ರದೇಶಗಳ ಮೇಲಿಂದ ವಿಮಾನಗಳು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.

ಫೆಸಿಫಿಕ್ ಮಹಾಸಾಗರದ ಮೇಲಿಂದಲೂ ವಿಮಾನಗಳು ಪ್ರಯಾಣಿಸುವಂತಿಲ್ಲ ಉದಾಹರಣೆಗೆ ಅಮೆರಿಕಾದಲ್ಲಿರುವ ಕ್ಯಾಲಿಫೋರ್ನಿಯಾಗೂ ಮತ್ತು ಜಪಾನಿಗೆ ಇರುವ ರೂಟ್ ಹತ್ತಿರದಲ್ಲಿದೆ ಎಂದು ಹೇಳುತ್ತಾರೆ ಆದರೆ ನಾವು ನೋಡುವ ಮ್ಯಾಪ್ ನಲ್ಲಿ ಹತ್ತಿರವಿದ್ದಂತೆ ಕಾಣಿಸುತ್ತದೆ ಅಮೆರಿಕಾದಿಂದ ಜಪಾನಿಗೆ ಹೋಗಬೇಕು ಅಂದರೆ ಪೆಸಿಫಿಕ್ ಮಹಾಸಾಗರದ ಮೇಲೆ ಹೋಗಬೇಕು. ಪೆಸಿಫಿಕ್ ಮಹಾಸಾಗರದ ಮೇಲಿಂದ ಹೋಗುವಾಗ ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗುವುದಾದರೆ ನೀರಿನಲ್ಲಿ ಬಿದ್ದು ನಾಶವಾಗುತ್ತದೆ ಆದ್ದರಿಂದ ಸುರಕ್ಷತೆ ದೃಷ್ಟಿಯಿಂದ ಫೆಸಿಫಿಕ್ ಮಹಾಸಾಗರದ ಮೇಲಿಂದ ವಿಮಾನಗಳು ಪ್ರಯಾಣಿಸುವಂತಿಲ್ಲ.

ಪೊಲಿಟಿಕಲ್ ಹಬ್ ಆಗಿರುವ ಪ್ರದೇಶಗಳ ಮೇಲಿಂದ ವಿಮಾನಗಳು ಪ್ರಯಾಣಿಸಲು ನಿಷೇಧವಿದೆ. ಅಮೆರಿಕಾದ ಕ್ಯಾಪಿಟಲ್ ವಾಷಿಂಗ್ಟನ್ ಡಿಸಿ ಇಲ್ಲಿ ಅಮೆರಿಕಾದ ಪ್ರಸಿಡೆಂಟ್ ಇರುವ ವೈಟ್ ಹೌಸ್ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಇಲ್ಲಿಂದಲೇ ನಡೆಯುತ್ತದೆ ಆದ್ದರಿಂದ ಇಲ್ಲಿ ಏರ್ಪೋರ್ಟ್ ಇದ್ದರೂ ಸಹ ಕೆಲವು ನಿಯಮಗಳ ಮೇಲೆ ಮಾತ್ರ ಕೆಲವು ವಿಮಾನಗಳು ಲ್ಯಾಂಡ್ ಆಗಬಹುದು. ಲಂಡನ್ ನಲ್ಲಿ ಇರುವ ಡೋನಿಂಗ್ ಸ್ಟ್ರೀಟ್ ಮೇಲೂ ಕೂಡ ವಿಮಾನಗಳು ಪ್ರಯಾಣಿಸುವಂತಿಲ್ಲ.

ನಮ್ಮ ಭಾರತದ ರಾಷ್ಟ್ರಪತಿ ಭವನದ ಮೇಲಿಂದಲೂ ವಿಮಾನಗಳು ಪ್ರಯಾಣಿಸುವಂತಿಲ್ಲ. ಅದೇ ರೀತಿ ಬೇರೆ ಬೇರೆ ದೇಶಗಳ ಪೊಲಿಟಿಕಲ್ ಹಬ್ ಪ್ರದೇಶಗಳ ಮೇಲೆ ವಿಮಾನಗಳು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಮಿಲಿಟರಿ ಕ್ಯಾಂಪ್ ಪ್ರದೇಶಗಳ ಮೇಲಿಂದ ಕಮರ್ಷಿಯಲ್ ವಿಮಾನಗಳು ಹಾರಾಡಲು ನಿಷೇಧಿಸಲಾಗಿದೆ. ಅಮೆರಿಕಾದಲ್ಲಿರುವ ಏರಿಯಾ 51 ಮೇಲಿಂದ ಯಾವ ವಿಮಾನವು ಪ್ರಯಾಣಿಸುವಂತಿಲ್ಲ.

ಒಂದು ವೇಳೆ ಈ ಪ್ರದೇಶದ ಮೇಲಿಂದ ವಿಮಾನ ಪ್ರಯಾಣಿಸಿದರೆ ಆ ವಿಮಾನ ಅಥಾರಿಟಿಯವರು ಭಾರಿ ದಂಡವನ್ನು ತೆರಬೇಕಾಗುತ್ತದೆ. ಏರಿಯಾ 51 ನಲ್ಲಿ ಏರ್ ಕ್ರಾಫ್ಟ್, ವೆಪನ್ಸ್ ಡೆವಲಪ್ಮೆಂಟ್ ಮತ್ತು ಟೆಸ್ಟಿಂಗ್ ನಡೆಯುತ್ತಿರುತ್ತದೆ ಅಲ್ಲದೆ ರಹಸ್ಯವಾಗಿ ಅಲ್ಲಿ ಅನೇಕ ಆಪರೇಷನ್ ಗಳು ನಡೆಯುತ್ತಿರುತ್ತದೆ. ಭಾರತದ ಪದ್ಮನಾಭ ಸ್ವಾಮಿ ಟೆಂಪಲ್, ಶ್ರೀಹರಿಕೋಟ ಮುಂತಾದ ಪ್ರದೇಶಗಳ ಮೇಲಿಂದ ವಿಮಾನಗಳು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.

Leave A Reply

Your email address will not be published.