ದಕ್ಷಿಣ ಭಾರತದ ಅದ್ಭುತ ಮಂದಿರಗಳಲ್ಲಿ ಒಂದಾಗಿದೆ. ಭದ್ರಾ ನದಿ ತೀರದಲ್ಲಿದೆ. ಚಿಕ್ಕಮಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿದೆ. ಈ ಮಂದಿರದ ಒಳಗೆ ಅನ್ನಪೂರ್ಣಮ್ಮನ ಸುಂದರ ಮೂರ್ತಿಯನ್ನು ಕಾಣಬಹುದು. 8ನೇ ಶತಮಾನದಲ್ಲಿ ಆಗಸ್ತ್ಯ ಋಷಿಗಳು ಅನ್ನಪೂರ್ಣೇಶ್ವರಿ ಮಹಿಮೆಯನ್ನು ಪ್ರತಿಸ್ಥಾಪಿಸಿದ ರು. 1953 ಅಕ್ಷಯ ತೃತೀಯದ ದಿನ ಪ್ರತಿಷ್ಠಾಪನೆ ಮಾಡಲಾಯಿತು.
ಒಂದಿನ ಶಿವ ಹಾಗೂ ಪಾರ್ವತಿಯ ನಡುವೆ ಜಗಳವಾದಾಗ ಶಿವ ಅನ್ನ ಸಹಿತ ಜಗತ್ತಿನ ಎಲ್ಲ ವಸ್ತುಗಳು ಭ್ರಮೆ ಎಂದು ಘೋಷಿಸುತ್ತಾನೆ. ಆದರೆ ಅನ್ನ ಮಾಯೆಯಲ್ಲ ಎಂದು ಸಾಬೀತುಪಡಿಸಲು ದೇವಿ ಮಾಯವಾಗುತ್ತಾಳೆ. ಆಗ ಗಿಡಗಳೆಲ್ಲವೂ ಸ್ಥಬ್ಧವಾಗಿ ವಾತಾವರಣ ಬದಲಾಗುತ್ತದೆ. ಆಗ ದೇವಿ ಎಲ್ಲರಿಗೂ ಅನ್ನವನ್ನು ನೀಡಿ ಕಾಪಾಡುತ್ತಾಳೆ.
ಒಂದುಬಾರಿ ಶಿವನು ಬ್ರಹ್ಮನ ತಲೆಯನ್ನು ಕಡಿಯುತ್ತಾನೆ. ಬ್ರಹ್ಮನ ತಲೆಬುರುಡೆಯು ಶಿವನ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಶಿವನಿಗೆ ಶಾಪ ಕೊಡಲಾಗಿತ್ತು ತಲೆಬುರುಡೆ ಅನ್ನದಿಂದ ತುಂಬುವವರೆಗೆ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ ಎಂದು ಶಿವನು ಎಲ್ಲಾ ಕಡೆ ಹೋದರೂ ಆ ಬುರುಡೆ ತುಂಬಲಿಲ್ಲ. ಆಗ ಶಿವ ಈ ದೇವಸ್ಥಾನಕ್ಕೆ ಬಂದು ಬೇಡಿಕೊಳ್ಳುತ್ತಾನೆ. ಆಗ ಅನ್ನಪೂರ್ಣೇಶ್ವರಿಯು ಆ ಬುರುಡೆಯನ್ನು ಅನ್ನದಿಂದ ತುಂಬಿಸುತ್ತಾಳೆ.
ಆಗ ಶಿವ ಶಾಪಮುಕ್ತನಾಗುತ್ತಾನೆ ಹೀಗಾಗಿ ಇಲ್ಲಿ ಬಂದವರಿಗೆ ಅನ್ನದ ಕೊರತೆಯಾಗುವುದಿಲ್ಲ. ಈ ದೇವಸ್ಥಾನಕ್ಕೆ ಹೋಗುವಾಗ ಬೆಟ್ಟದ ಮೂಲಕ ಸಾಗಬೇಕು. ಇಲ್ಲಿ ಭಕ್ತಿಯಿಂದ ಬಂದ ಭಕ್ತಾದಿಗಳಿಗೆ ಯಾವಾಗಲೂ ಅನ್ನದ ಕೊರತೆ ಉಂಟಾಗುವುದಿಲ್ಲ.