Ultimate magazine theme for WordPress.

ಗುರುರಾಘವೇಂದ್ರ ಸ್ವಾಮಿಯ ಈ ಚಿಕ್ಕ ಮಂತ್ರ ಪಠಿಸಿ ಸಕಲ ಸಂಕಷ್ಟಗಳಿಂದ ಮುಕ್ತರಾಗಿ

0 3

ಸಾಕಷ್ಟು ಜನರ ಆರಾಧ್ಯ ದೈವ, ಮಂತ್ರಾಲಯ ನಿವಾಸಿ, ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಬಗ್ಗೆ ಒಂಚೂರು ಮಾಹಿತಿಯನ್ನು ಕಲೆಹಾಕಿ ನಿಮಗೆ ತಿಳಿಸುವ ಪ್ರಯತ್ನ. ಹೇಗೆ ಗುರು ರಾಯರ ಆರಾಧನೆ ಮಾಡಿ ಅವರ ಕೃಪೆಗೆ ಪಾತ್ರರಾಗೋದೂ ಅಂತ ನೋಡೋಣ ಬನ್ನಿ.

ಗುರು ರಾಘವೇಂದ್ರ ಸ್ವಾಮಿಗಳು ಜನರ ಆರಾಧ್ಯ ದೈವ ಹಾಗೂ ಜೀವಂತ ದೇವರು. ಇವರ ಆರಾಧ್ಯ ದೈವ ಮೂಲ ರಾಮ ಅಂದ್ರೆ ಮಹಾ ವಿಷ್ಣು. ಜೀವನದಲ್ಲಿ ಇಂತಹ ಕಷ್ಟಗಳೇ ಬಂದರು ಗುರು ರಾಯರ ಪಠಣದಿಂದ ನಿವಾರಿಸಿಕೊಳ್ಳಲು ಸಾಧ್ಯ. ಗುರು ರಾಯರನ್ನು ನೆನೆಯಲು ಹಲವಾರು ಕಾರಣಗಳಿವೆ ಮಂತ್ರಗಳಿವೆ ಅದರಲ್ಲಿ ಶ್ರೀ ಗುರು ಗಾಯತ್ರಿ ಮಂತ್ರ ಬಹಳ ಒಳ್ಳೆಯದು. ಈ ಗುರು ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ, ಮೂರು ಬಾರಿ, ಇಪ್ಪತ್ತೊಂದು ಬಾರಿ ಹಾಗೂ ಸಾವಿರದ ಎಂಟು ಬಾರಿ ಜಪಿಸಬಹುದು. ಗುರು ಗಾಯತ್ರಿ ಮಂತ್ರವನ್ನು ಪಠಿಸಲು ಹಲವು ನಿಯಮಗಳಿವೆ ಅವುಗಳನ್ನು ಅನುಸರಿಸಿದರೆ ರಾಯರು ನಿಮ್ಮ ಕನಸಲ್ಲಿ ಬಂದು ನಿಮ್ಮೆಲ್ಲ ಸಕಲ ಸಂಕಷ್ಟಗಳನ್ನು ದೂರಮಾಡಿ ನೆಮ್ಮದಿಯನ್ನು ತರುತ್ತಾರೆ. ಹಾಗಾದ್ರೆ ಆ ನಿಯಮಗಳು ಏನು ಅನ್ನೋದನ್ನ ನೋಡೋಣ ಬನ್ನಿ…

ಗುರು ಗಾಯತ್ರಿ ಮಂತ್ರವನ್ನು ದಿನವೂ ಪಠಿಸಲು ಆಗದಿದ್ದರೆ ರಾಯರ ದಿನವಾದ ಗುರುವಾರ ಪಠಿಸಬಹುದು.. ಇದನ್ನು ೪೮ದಿನಗಳ ಕಾಲ ಪಠಿಸಬಹುದು. ಈ ಮಂತ್ರವನ್ನು ಪಠಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಯ ನಕ್ಷತ್ರದ ದಿನಗಳು ಬಹಳ ಒಳ್ಳೆಯದು. ದಿನಕ್ಕೆ ೧೦೦೮ ಮಂತ್ರಗಳಂತೆ ೪೮ ದಿನಗಳ ಕಾಲ ಪಠಿಸಿದರೆ ಖಂಡಿತ ರಾಘವೇಂದ್ರ ರಾಯರ ಕೃಪೆಗೆ ಪಾತ್ರರಾಗಬಹುದು.

ಈ ಮಂತ್ರವನ್ನು ಹೀಗೆ ಪಠಿಸಿ. ಓಂ ವೆಂಕಟನಾಥಾಯ ವಿಧ್ಮಹೆ ಸಚಿದಾನದಾಯ ಧೀಮಹಿ ತನ್ನೋಃ ರಾಘವೆಂದ್ರ ಪ್ರಯೋಚದಯಾತ್ ಈ ಮಂತ್ರವನ್ನು ಯಾರು ೪೮ದಿನಗಳ ಕಾಲ ಶ್ರದ್ಧೆ ಭಕ್ತಿಯಿಂದ ವೃತ ಮಾಡುತ್ತಾರೋ ಅವರ ಸಕಲ ಸಂಕಷ್ಟಗಳು ದೂರವಾಗಿ ರಾಯರ ಅನುಗ್ರಹ ಆಗುವುದು ಖಚಿತ. ಇದು ರಾಯರ ಪವಾಡ. ಇದನ್ನು ಜನರು ಸ್ವಂತ ಅನುಭವ ಪಡೆದು ರಾಯರನ್ನು ನಂಬಿ ತಮ್ಮ ಕಷ್ಟಗಳನ್ನು ದೂರ ಮಾಡಿಕೊಂಡಿದ್ದಾರೆ.

ಈ ವ್ರತವನ್ನು ಮಾಡಬೇಕಾದರೆ ಮುಖ್ಯವಾಗಿ ಮಾಂಸಾಹಾರ ಸೇವನೆ ಮಾಡಬಾರದು. ಶ್ರೀ ಗುರು ರಾಘವೇಂದ್ರ ರಾಯರು ಎಲ್ಲರಿಗೂ ಸಕಲ ಆರೋಗ್ಯ ಐಶ್ವರ್ಯ ಪ್ರಾಪ್ತಿ ಆಗುವಂತೆ ಮಾಡಿ ಮಂಗಳವನ್ನುಂಟು ಮಾಡಲಿ.

Leave A Reply

Your email address will not be published.