ಗುರುವಾರ ಜನಿಸಿದವರು ಗುರು ಗ್ರಹದ ಅನುಗ್ರಹದಿಂದ ಜನಿಸುತ್ತಾರೆ ಹಾಗೂ ಗುರು ಬಲವನ್ನು ಹೊಂದಿರುತ್ತಾರೆ. ಗುರು ಗ್ರಹದ ಅಧಿಪತಿ ದೇವತೆಗಳ ಗುರು ಬೃಹಸ್ಪತಿ. ಹಾಗಾಗಿ ಗುರುವಿನ ಅನುಗ್ರಹದಿಂದ ಜನಿಸಿದವರು ಎಲ್ಲ ವಿಷಯಗಳಲ್ಲಿ ನಿಪುನರಾಗಿರುತ್ತರೆ ಹಾಗೂ ಇವರಿಗೆ ಗುರುವಿನ ಬೆಂಬಲ ಸಹ ಇರುತ್ತದೆ. ಅತ್ಯಂತ ಜ್ಞಾನ ಹೊಂದಿರುತ್ತಾರೆ. ಗುರುವಾರ ಜನಿಸಿದವರು ಮಿತವಾಗಿ ಹಿತವಾಗಿ ಮಾತನಾಡುತ್ತಾರೆ. ಇವರು ಧರ್ಮದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚು ಕಾರ್ಯ ನಿರ್ವಹಿಸುತ್ತಾರೆ.

ಗುರುವಾರ ಜನಿಸಿದ ವ್ಯಕ್ತಿಗಳು ಸ್ಥಿರ ಬುದ್ಧಿಯವರಾಗಿದ್ದು ಕ್ಷುಲ್ಲಕ ಕಾರಣಕ್ಕೆ ಬುದ್ಧಿಯ ಸ್ಥಿಮಿತ ಕಳೆದುಕೊಳ್ಳಲು ಬಯಸಲ್ಲ ಹಾಗೆ ಕ್ಷುಲ್ಲಕ ವ್ಯಕ್ತಿಗಳ ಸಹವಾಸದಿಂದ ಸಹ ಆದಷ್ಟು ದೂರ ಇರುತ್ತಾರೆ. ಇನ್ನೊಬ್ಬರ ಸಲುವಾಗಿ ಕೆಲವೊಮ್ಮೆ ತಾವು ಮಾಡದ ತಪ್ಪನ್ನು ತಮ್ಮ ಮೇಲೆ ಹಾಕಿಕೊಳ್ಳುತ್ತಾರೆ ಶಾಂತಿ ಪ್ರಿಯರಾಗಿರುತ್ತಾರೆ. ಅಶಾಂತ ಹಾಗೂ ಕೆಟ್ಟ ವಾತಾವರಣದಲ್ಲಿ ಇರಲು ಬಯಸಲ್ಲ. ಇನ್ನೊಬ್ಬರಿಗೆ ಉಪದೇಶ ನೀಡುವಲ್ಲಿ ನಿಪುನರಾಗಿರುತ್ತಾರೆ. ಗುರುವಾರ ಜನಿಸಿದವರು ಸಲಹೆ ಸೂಚನೆಗಳ ಒಂದು ಭಂಡಾರವೇ ಆಗಿರುತ್ತಾರೆ ಹಾಗಾಗಿ ಯಾರು ಇಂಥ ವ್ಯಕ್ತಿಗಳ ಬಳಿ ಬಂದು ಕೇಳದೆ ಇದ್ದರು ಸಹ ಸಲಹೆ ಉಪದೇಶ ನೀಡುತ್ತಾರೆ.

ಗಂಭೀರ ಸ್ವಭಾವ ಹೊಂದಿದ್ದು ವಿಶಾಲ ಹೃದಯಿಗಳು ಆಗಿರುತ್ತಾರೆ. ಸ್ತಿತ ಪ್ರಜ್ಞರಾಗಿರುತ್ತರೆ. ಒಳ್ಳೆಯ ಚಾರಿತ್ರ್ಯ ಹೊಂದಿರುತ್ತಾರೆ. ಗುರುವಾರ ಜನಿಸಿದವರು ನಿಶ್ಚಿತವಾದ ಒಂದು ಸಿದ್ಧಾಂತವನ್ನು ಹೊಂದಿರುತ್ತಾರೆ ಹಾಗಾಗಿ ಇವರ ಮೇಲೆ ಕಳಂಕ ಆಪಾದನೆ ಹೊರಿಸುವುದು ಕಷ್ಟ. ಶಿಕ್ಷಣ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ ಉತ್ತಮ ಕಾರ್ಯ ಮಾಡುತ್ತಾರೆ. ಎಲ್ಲಿಯೂ ಯಾವುದೇ ಕ್ಷೇತ್ರದಲ್ಲಿ ಆದರೂ ಯಾವ ವಿಷಯದಲ್ಲಿ ಆದರೂ ಸಲಹೆ ಸೂಚನೆಗೆ ಸಂಬಂಧ ಪಟ್ಟ ವಿಷಯಗಳಿಗೆ ಉತ್ತಮ ಸಲಹೆ ನೀಡುತ್ತಾರೆ.

By

Leave a Reply

Your email address will not be published. Required fields are marked *