ನಾಡ ದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಧ್ಯ ಆಷಾಢ ಮಾಸದ ಪೂಜೆಗಳಿಗೆ ತಡೆ ಹಿಡಿಯಲಾಗಿದೆ. ಇನ್ನೆನು ಆಷಾಢ ಮಾಸ ಆರಂಭ ಆಗುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ಸೇರಿ ಚರ್ಚೆ ನಡೆಸಲಾಗಿದ್ದು, ಎಲ್ಲಾ ಜನ ಪ್ರತಿನಿಧಿಗಳು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರು ಹಾಗೂ ಜನಸಾಮಾನ್ಯರು ಭಾಗಿ ಆಗಿದ್ದು, ಈಗ ಸಧ್ಯದಲ್ಲಿ ಕರೊನ ಸಾಂಕ್ರಾಮಿಕ ರೋಗ ಇರುವುದರಿಂದ ಅದನ್ನು ತಡೆಗಟ್ಟಬೇಕು ಅದಕ್ಕಗಾಗು ಹೆಚ್ಚು ಹೆಚ್ಚು ಜನ ಸೇರುವುದನ್ನ ತಡೆಯಬೇಕು ಎಂದು ಜಾತ್ರೆಯ ಮಾದರಿಯಲ್ಲಿ ಈ ವರ್ಷ ಪೂಜೆಗಳನ್ನು ನಡೆಸುವುದಿಲ್ಲ. ಹಾಗೂ ಆಷಾಢ ಮಾಸದಲ್ಲಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ 3 ದಿನಗಳಂದು ಯಾವುದೇ ಸಾರ್ವಜನಿಕರಿಗೂ ಕೂಡ ಚಾಮುಂಡಿ ಬೆಟ್ಟಕ್ಕೆ ಪ್ರವೇಶವನ್ನು ನೀಡಬಾರದು. ಹಾಗೆ ಜುಲೈ13 ಕ್ಕೆ ವರ್ಧಂತಿ ಉತ್ಸವ ಸಹ ಇರುವುದರಿಂದ ಅವತ್ತಿನ ದಿನವೂ ಕೂಡ ಸಾರ್ವಜನಿಕರಿಗೆ ಬೆಟ್ಟಕ್ಕೆ ಪ್ರವೇಶ ನೀಡುವುದನ್ನು ನಿರಾಕರಿಸಲಾಗಿದೆ.
ವರ್ಧಂತಿ ಉತ್ಸವದ ದಿನವಾಗಿರಬಹುದು ಅಥವಾ ಇನ್ನುಳಿದ ದಿನಗಳೂ ಆಗಿರಬಹುದು ಧಾರ್ಮಿಕವಾಗಿ ಏನೆಲ್ಲಾ ದೇವತಾ ಕಾರ್ಯಗಳು ನಡೆಯಬೇಕೋ ಅವುಗಳಿಗೆ ಯಾವುದೇ ರೀತಿಯಲ್ಲೂ ಚ್ಯುತಿ ಆಗದಂತೆ ದೇವಸ್ಥಾನದಲ್ಲಿ ಪ್ರತೀ ವರ್ಷವೂ ನಡೆಯುವಂತೆಯೇ ಈ ವರ್ಷವೂ ಕೂಡಾ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ವರ್ಧಂತಿಯ ದಿನವೂ ಕೂಡಾ ಎಲ್ಲಾ ಪೂಜೆಗಳೂ ಮೊದಲಿನ ಹಾಗೆಯೇ ನಡೆಯಲಿದ್ದು ಎಲ್ಲಾ ಭಕ್ತರಿಗೂ ಚಾಮುಂಡಿ ಬೆಟ್ಟಕ್ಕೆ ಬರುವುದನ್ನು ತಡೆ ಹಿಡಿಯಲಾಗಿದೆ. ಈಗ ಸಾಮಾನ್ಯ ದಿನಗಳಲ್ಲಿ ಕೂಡಾ ಭಕ್ತರಿಗೆ ಶಿಸ್ತಿನಿಂದಲೇ ದೇವಸ್ಥಾನಕ್ಕೆ ಬರಲು ಸಹ ತಿಳಿಸಲಾಗಿದೆ. ಜನರು ಶಿಸ್ತಿನಿಂದ ಬರಬೇಕು ಮಾಸ್ಕ್ ಧರಿಸಿಯೇ ಬರಬೇಕು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ತಮ್ಮ ಹಾಗೂ ತಮ್ಮ ಕುಟುಂಬದವರ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ಮೈಸೂರು ಜಿಲ್ಲೆಯಲ್ಲಿ ಬೇರೆ ಕಡೆಯೂ ದೇವಸ್ಥಾನ ಇರುವುದರಿಂದ ಅಲ್ಲಿ ಸಾಮಾನ್ಯವಾಗಿ ಉಳಿದ ದಿನಗಳಲ್ಲಿ ಪೂಜೆ ಹೇಗೆ ನಡೆಯುತ್ತದೆಯೋ ಹಾಗೆ ನಡೆಯುತ್ತದೆ ಆದರೆ ಬೆಟ್ಟಕ್ಕೆ ಬರಲು ಮಾತ್ರ ಭಕ್ತರಿಗೆ ಪ್ರವರ್ಷವನ್ನು ನಿಷೇಧ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರು ತಿಳಿಸಿದ್ದಾರೆ.