ಶ್ರಾವಣ ಮಾಸ ಎಂದರೆ ಹಬ್ಬಗಳ ಸರಮಾಲೆ ಪ್ರತಿವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರದಂದು ನಾವು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತೇವೆ. ಶ್ರಾವಣ ಶುಕ್ರವಾರದ ದಿನ ಧನ ಲಕ್ಷ್ಮಿಯ ಮುಂದೆ ಕೈ ಜೋಡಿಸಿ ನಿಲ್ಲುವ ನಮ್ಮನಿಮ್ಮ ಮನೆಯ ಗೃಹ ಲಕ್ಷ್ಮಿಯರನ್ನು ನೋಡಿದರೆ ನಿಜವಾದ ಲಕ್ಷ್ಮಿ ಯಾರು ಎಂಬುದೇ ಸಂದೇಹವಾಗಬೇಕು ಅಷ್ಟರಮಟ್ಟಿಗೆ ಮನೆಯ ಹೆಣ್ಣು ಮಕ್ಕಳು ಶ್ರಾವಣ ಲಕ್ಷ್ಮಿಯನ್ನು ಅತ್ಯಂತ ಭಕ್ತಿ ಭಾವದಿಂದ ಸ್ವಾಗತ ಮಾಡುತ್ತಾರೆ
ಆದರೆ ಶ್ರಾವಣ ಶುಕ್ರವಾರ ಮತ್ತು ವರಲಕ್ಷ್ಮಿ ವ್ರತ ಮಾಡುವ ದಿನಗಳಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಅನ್ನುವುದು ಬಹುತೇಕರಿಗೆ ಗೊತ್ತಿರುವುದಿಲ್ಲ. ತುಂಬಾ ವರ್ಷಗಳಿಂದ ಲಕ್ಷ್ಮಿ ಪೂಜೆ ಮಾಡುತ್ತಿದ್ದರು ಕೆಲವೊಂದು ವಿಚಾರಗಳಲ್ಲಿ ಎಡವಟ್ಟು ಮಾಡುತ್ತಾರೆ ಇದರಿಂದ ಪೂಜಾ ಫಲವು ಸರಿಯಾಗಿ ದೊರಕುವುದಿಲ್ಲ ಹಾಗಾದರೆ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ನಾವು ತಿಳಿದುಕೊಳ್ಳೊಣ.
ಮೊದಲನೆಯದಾಗಿ ವರಲಕ್ಷ್ಮಿ ವ್ರತವನ್ನು ಬೆಳಿಗ್ಗೆ ಆದರೂ ಮಾಡಬಹುದು ಸಂಜೆ ಸಹ ಮಾಡಬಹುದು. ಸಂಜೆಯ ಪೂಜೆ ಹೆಣ್ಣುಮಕ್ಕಳು ಮಾಡಲಿ ಆದರೆ ಬೆಳಿಗ್ಗೆ ಪೂಜೆ ಮನೆಯ ಯಜಮಾನು ಸಹ ತನ್ನ ಪತ್ನಿಯೊಂದಿಗೆ ಲಕ್ಷ್ಮಿ ಆರಾಧನೆಗೆ ಕುಳಿತರೆ ಸಿಗುವ ಪೂಜಾ ಫಲವೇ ಬೇರೆ. ಆ ಪೂಜೆಗೆ ವಿಶೇಷವಾದ ಮಹತ್ವ ಲಭಿಸುತ್ತದೆ. ಇದು ಕೇವಲ ಹೆಣ್ಣು ಮಕ್ಕಳು ಮಾಡುವ ವ್ರತ ಅಂತ ತಿಳಿದುಕೊಳ್ಳಬೇಡಿ ಹಣಕಾಸಿನ ಬಾಧ್ಯತೆ ಮನೆಯ ಯಜಮಾನನಿಗೆ ಇರುತ್ತದೆ.
ಹಾಗೆಂದ ಮೇಲೆ ಪೂಜೆಯ ಸಹಭಾಗಿತ್ವ ಗಂಡಿನದೆ. ವರಲಕ್ಷ್ಮಿವ್ರತ ಮಾಡಿದದಿನ ನೀವು ಸಂಸಾರಸ್ಥೆ ಆಗಿದ್ದರು ಆ ದಿನ ಬ್ರಹ್ಮಚರ್ಯ ಪಾಲನೆ ಮಾಡಿ. ನೀವು ಮಾಂಸಾಹಾರಿ ಆಗಿದ್ದರೆ ಅದೊಂದು ದಿನ ಮಾಂಸಾಹಾರವನ್ನು ಸೇವಿಸಬೇಡಿ ಉಪವಾಸ ಮಾಡುವ ಶಕ್ತಿ ಇದ್ದರೆ ಯಥಾ ಶಕ್ತಿ ಮಾಡಬಹುದು ಮಾಡಲೇಬೇಕು ಎನ್ನುವ ನಿಯಮವಿಲ್ಲ.
ವರಲಕ್ಷ್ಮಿವ್ರತದಲ್ಲಿ ಐದು ಅಂಶಗಳನ್ನು ಗಮನಿಸಬೇಕು. ಮೊದಲನೆಯದು ಪೀಠ ಮತ್ತು ಕಳಸ. ಒಂದು ವ್ಯವಸ್ಥಿತ ಪೀಠ ಮಾಡಿ ಅದರ ಮೇಲೆ ಸ್ವಯಂ ರಚಿಸಿದ ಕಳಸವನ್ನು ಸ್ಥಾಪಿಸಿ ಒಳಗೆ ಅಕ್ಷತೆ ನಾಣ್ಯವನ್ನು ಹಾಕಿ ಹೊರಗೆ ಮಾವಿನ ಎಲೆಗಳಿಂದ ಸಿಂಗರಿಸಿ ಮೇಲೆ ತೆಂಗಿನಕಾಯಿ ಇಡಿ ಯಾಕೆ ಅಂದರೆ ಇದು ಶ್ರೀ ಫಲ. ಕಳಸ ಸ್ಥಾಪನೆ ಆದ ಮೇಲೆ ಎಂದಿನಂತೆ ಆಚಮನ ಸಂಕಲ್ಪ ಕಳಶಾರಾಧನೆ ಗಣಪತಿ ಪೂಜೆಯನ್ನು ಸೇರಿ ಕಳಸ ಪೂಜೆಯನ್ನು ಶ್ರದ್ಧಾ ನಿಷ್ಠ ಭಕ್ತಿಯಿಂದ ಮಾಡಿಕೊಳ್ಳಿ. ಇದಾದ ನಂತರ ಮಾಡಬೇಕಾಗಿರುವುದು ಷೋಡಶೋಪಚಾರ ಲಕ್ಷ್ಮಿ ದೇವಿಗೆ ಮಾಡಬೇಕಿರುವ ಬಹುಮುಖ್ಯ ಪೂಜೆ ಇದು.
ಕ್ಷಿರಸಮುದ್ರ ಮಂಥನ ನಡೆದು ಲಕ್ಷ್ಮೀದೇವಿ ಆವಿರ್ಭವಿಸಿದ್ದರಲ್ಲ ಆಗ ಇಂದ್ರಾದಿ ದೇವತೆಗಳು ಸೇರಿ ಸಮಸ್ತ ದೇವಗಣ ಸಿರಿದೇವಿಯನ್ನು ಆರಾಧಿಸಿದ ಕ್ರಮವೇ ಈ ಷೋಡಶೋಪಚಾರ. ಷೋಡಶೋಪಚಾರ ಪೂಜೆ ಅಂದರೆ ಏನು ಎಂದು ಗಾಬರಿಯಾಗಬೇಡಿ ದೇವರಿಗೆ ನಾವು ಮಾಡುವ ಹದಿನಾರು ಬಗೆಯ ಉಪಚಾರವೆ ಷೋಡಶೋಪಚಾರ. ಮೊದಲಿಗೆ ಆಸನ. ಲಕ್ಷ್ಮಿ ಎಂಬ ಅತಿಥಿಯನ್ನು ಮನೆಗೆ ಆಮಂತ್ರಿಸಿ ನಾವು ಮಾಡುವ ಈ ಪಿಠದ ಮೇಲೆ ಇರುವ ಕಳಸದಲ್ಲಿ ಆಸಿನರಾಗುವಂತೆ ಬೇಡಿಕೊಳ್ಳುವುದು.
ನಂತರ ಪಾದ್ಯ ಅಂದರೆ ಕಾಲು ತೊಳೆಯಲು ನೀರು ಕೊಡುವುದು ನಂತರ ಅರ್ಘ್ಯ ಕೈಗಳನ್ನು ಶುದ್ಧ ಮಾಡಿಕೊಳ್ಳಲು ನೀರು ಕೊಡುವುದು ನಂತರ ಆಚಮನ ಬಾಯಾರಿಕೆ ಆರಲು ನೀರು ಕೊಡುವುದು ನಂತರ ಸ್ನಾನ ಪ್ರಯಾಣದ ನಂತರ ಆಯಾಸವನ್ನು ಪರಿಹರಿಸುವುದಕ್ಕೆ ಅಭಿಷೇಕವನ್ನು ಮಾಡುವುದು ನಂತರ ವಸ್ತ್ರ ಮಡಿಬಟ್ಟೆಗಳನ್ನು ಕೊಡುವುದು ಗೆಜ್ಜೇವಸ್ತ್ರವನ್ನು ಮಾಡಿವಸ್ತ್ರ ಅಂತ ಪರಿಗಣಿಸಬಹುದು.
ಇದಾದ ಮೇಲೆ ಯಜ್ಞೋಪವಿತ ಅಂದರೆ ಅಕ್ಷತೆಯನ್ನು ಹಾಕಿ ಮಾರ್ಗ ಮದ್ಯ ಆಗಿರುವ ಮೈಲಿಗೆಯನ್ನು ಕಳೆಯಬೇಕು ನಂತರ ಸುವಾಸನೆಗಾಗಿ ಗಂಧವನ್ನು ಅರ್ಪಿಸಿ ಇದಾದ ಮೇಲೆ ಅಕ್ಷತೆಯನ್ನು ಅರ್ಪಿಸಿ ಹತ್ತನೆಯದಾಗಿ ಆಭರಣಗಳನ್ನು ಹಾಕಿ ಆಭರಣಗಳು ಅಂದರೆ ಚಿನ್ನ ವಜ್ರ ವೈಢೂರ್ಯ ಅಂದುಕೊಳ್ಳಬೇಡಿ ಮುತ್ತೈದೆಯರ ನಿತ್ಯ ನುತನ ಆಭರಣವಾದ ಅರಿಶಿಣ ಕುಂಕುಮವನ್ನು ಹಚ್ಚಬೇಕು
ಇದಾದ ನಂತರ ಪುಷ್ಪ ಮಾಲೆಯನ್ನು ಹಾಕಿ ಧೂಪ ದೀಪವನ್ನು ಹಚ್ಚಿ ಹದಿನಾಲ್ಕನೇಯದಾಗಿ ಮಧುಕರ್ಪ ಅಂದರೆ ಹಾಲು ಮೊಸರು ತುಪ್ಪ ಜೇನುತುಪ್ಪ ಮತ್ತು ಬೆಲ್ಲ ಇದನ್ನು ಅರ್ಪಣೆ ಮಾಡಿ ಇದಾದನಂತರ ಹದಿನೈದನೇಯದಾಗಿ ನೈವೇದ್ಯ ನಿಮ್ಮ ಶಕ್ತಿಯಾನುಸಾರ ನೈವೇದ್ಯವನ್ನು ಅರ್ಪಿಸಿ ಈ ನೈವೇದ್ಯವನ್ನು ಅರ್ಪಿಸುವ ವೇಳೆ ಸಾವಿತ್ರಿ ಸ್ತೋತ್ರ ಅನ್ನಪೂರ್ಣೆ ಸ್ತೋತ್ರ ಅಥವಾ ಲಕ್ಷ್ಮಿ ಸ್ತೋತ್ರವನ್ನು ಪಠಿಸಿ
ಇದಾದ ನಂತರ ಮಂಗಳಾರತಿ ಬೆಳಗಿಸಿ ಅಂತಿಮವಾಗಿ ಹದಿನಾರನೆಯ ಕ್ರಮ ಮಂತ್ರ ಪುಶ್ಪ ದೇವರಿಗೆ ಮಂತ್ರಪುಷ್ಪವನ್ನು ಹೇಳಿ ಅಕ್ಷತೆಯನ್ನು ಹಾಕಿ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ ಪ್ರಾರ್ಥನಾ ರೂಪವಾಗಿ ಹಾಡನ್ನು ಶ್ಲೋಕಗಳನ್ನು ಹೇಳಿ ಪೂಜೆಯನ್ನು ಸಮರ್ಪಿಸಿ ಇದೆ ನೀವು ಮಹಾಲಕ್ಷ್ಮಿಗೆ ಮಾಡುವ ಷೋಡಶೋಪಚಾರ.
ಪೂಜೆಯವೇಳೆ ಒಂಬತ್ತು ಎಳೆಯ ದಾರವನ್ನು ಸೇರಿಸಿ ರಕ್ಷಾ ಸೂತ್ರವನ್ನು ಮಾಡಿಕೊಂಡಿರಬೇಕು. ಪೂಜೆ ಮಾಡುವ ವೇಳೆ ಈ ರಕ್ಷಾ ಸೂತ್ರಕ್ಕೆ ತಾಯಿಯ ಅನುಗ್ರಹವನ್ನು ಆವಾಹನೆ ಮಾಡಿ ಪ್ರಾರ್ಥನೆಯನ್ನು ಮಾಡಿ ಪೂಜೆ ಆದ ಮೇಲೆ ಈ ಸೂತ್ರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ಇದು ವರಮಹಾಲಕ್ಷ್ಮಿಯ ವ್ರತದ ಪುಣ್ಯಫಲವನ್ನು ನಿಮ್ಮ ವರೆಗೆ ತಲುಪಿಸುತ್ತದೆ. ಇಷ್ಟು ಆದ ಮೇಲೆ ವ್ರತಕತೆಯನ್ನು ಓದಬೇಕು ಈ ವೃತಕ್ಕಿರುವುದು ಒಂದೇ ಕತೆ ಅದು ಚಾರುಮತಿ ಕತೆ.
ಈ ಚಾರುಮತಿ ಯಾರು ಅಂದರೆ ಮೊಟ್ಟ ಮೊದಲ ಬಾರಿಗೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದ ಗೃಹ ಲಕ್ಷ್ಮಿ. ಪುರಾಣಗಳು ಹೇಳುವ ಪ್ರಕಾರ ವಿವಾಹವಾಗಿ ಸುಖ ಸಂಸಾರದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತ ಬಂದಿದ್ದ ಈ ಚಾರುಮತಿಗೆ ಒಮ್ಮೆ ಸಾಕ್ಷಾತ್ ಮಹಾಲಕ್ಷ್ಮಿ ಕನಸಿನಲ್ಲಿ ಬಂದು ಶ್ರಾವಣ ಮಾಸದಲ್ಲಿ ಈ ವ್ರತವನ್ನು ಮಾಡು ಮುಂದೆ ಯಾರೆಲ್ಲ ಈ ವ್ರತವನ್ನು ಮಾಡುತ್ತಾರೋ ಅವರ ಮನೆ ಮನಗಳನ್ನು ಸಿರಿ ಸಂಪತ್ತಿನಿಂದ ಬೇಳಗುತ್ತೇನೆಂದು ಅಭಯ ನೀಡಿದರಂತೆ.
ತಾಯಿ ಮಹಾಲಕ್ಷ್ಮಿ ಕನಸಿನಲ್ಲಿ ವ್ರತಾಚರಣೆಯ ಸಂಪೂರ್ಣ ಮಾಹಿತಿಯನ್ನು ಚಾರುಮತಿಗೆ ನೀಡಿದರಂತೆ ಮಾತೆ ಲಕ್ಷ್ಮಿ. ಇದರಂತೆ ಮರುದಿನ ಊರಿನ ಮಂದಿಯನ್ನೆಲ್ಲ ಸೇರಿಸಿದ ಚಾರುಮತಿ ವ್ರತಾಚರಣೆಯ ವಿವರಗಳನ್ನು ತಿಳಿಸಿ ಶ್ರಾವಣದಲ್ಲಿ ಮೊಟ್ಟ ಮೊದಲಬಾರಿಗೆ ಈ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದರಂತೆ ಈ ಬಗ್ಗೆ ಕುದ್ದು ಪರಮೇಶ್ವರ ಪಾರ್ವತಿ ದೇವಿಗೆ ಚಾರುಮತಿ ಆಚರಿಸಿದ ವ್ರತದ ಕುರಿತು ವಿವರಣೆ ನೀಡಿರುವುದಾಗಿ ಸ್ಕಂದ ಪುರಾಣ ತಿಳಿಸುತ್ತದೆ.
ಹೀಗೆ ವರಮಹಾಲಕ್ಷ್ಮಿ ವ್ರತದ ಅಂತಿಮ ಪತದಲ್ಲಿ ಚಾರುಮತಿಯ ವ್ರತ ಕತೆಯನ್ನು ಆ ದಿನ ಶ್ರವಣ ಮಾಡಿ ಮುತ್ತೈದೆಯರನ್ನು ಕರೆದು ಅರಿಶಿಣ ಕುಂಕುಮ ನೀಡಿ ವ್ರತವನ್ನು ಮುಗಿಸಿದರೆ ಪುಣ್ಯ ಫಲ ನಿಮ್ಮದಾಗುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ಪುಕೆಯನ್ನು ನಡೆಸುವುದರಿಂದ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುತ್ತದೆ. ದೇವಿಯನ್ನು ಪೂಜಿಸುವುದರಿಂದ ಧನ ಧಾನ್ಯ ಸಂಪತ್ತು ಸಂತಾನ ದೀರ್ಘ ಸುಮಂಗಲಿ ಭಾಗ್ಯ ನಿಮ್ಮದಾಗುತ್ತದೆ ಇದರಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ.