ಶ್ವಾಸಕೋಶದ ಸಮಸ್ಯೆಯಿಂದ ಅಸುನೀಗಿದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕುಟುಂಬದವರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡಿಗೆ ಮನಸೋಲದವರೆ ಇಲ್ಲ ಅವರು 1946 ರಲ್ಲಿ ನೆಲ್ಲೂರಿನ ತೆಲುಗು ಕುಟುಂಬದಲ್ಲಿ ಹುಟ್ಟಿದರು. ಇವರ ಮಾತೃಭಾಷೆ ತೆಲುಗು ಆದರೆ ಇವರು 5 ಭಾಷೆಗಳನ್ನು ಮಾತನಾಡುತ್ತಾರೆ. ಕನ್ನಡ, ಮಲಯಾಳಂ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಎಸ್. ಪಿ. ಬಿಯವರು ಹಾಡಿದ್ದಾರೆ. ಎಸ್.ಪಿ.ಬಿಯವರ ತಂದೆ ತಾಯಿಗೆ 7 ಜನ ಮಕ್ಕಳು 5 ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳು. ಎಸ್.ಪಿ.ಬಿಯವರಿಗೆ ಭಾರತ ಪ್ರತಿಷ್ಠಿತ ಪದ್ಮಶ್ರೀ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಇವರು ತಂದೆ ತಾಯಿ ನೋಡಿದ ಹುಡುಗಿಯನ್ನು ಮದುವೆಯಾಗಿದ್ದಾರೆ ಅವರ ಹೆಸರು ಸಾವಿತ್ರಿ.
ಇವರಿಗೆ ಇಬ್ಬರು ಮಕ್ಕಳಿದ್ದಾರೆ ಮಗನ ಹೆಸರು ಎಸ್.ಪಿ.ಬಿ ಚರಣ್. ಇವರು ಫೇಮಸ್ ಪ್ಲೆಬ್ಯಾಕ್ ಸಿಂಗರ್ ಹಾಗೂ ನಿರ್ಮಾಪಕ. ಎಸ್.ಪಿ.ಬಿ ಚರಣ್ ಅವರು ಎರಡು ಬಾರಿ ಮದುವೆಯಾಗಿದ್ದಾರೆ. ಮೊದಲ ಹೆಂಡತಿ ಹೆಸರು ಸ್ಮಿತಾ ಇವರನ್ನು 1998 ರಲ್ಲಿ ಮದುವೆಯಾಗಿ 2002 ರಲ್ಲಿ ಡೈವೋರ್ಸ್ ಕೊಟ್ಟಿದ್ದಾರೆ. ಎರಡನೇ ಹೆಂಡತಿ ಹೆಸರು ಅಪರ್ಣಾ ಇವರನ್ನು 2012 ರಲ್ಲಿ ಮದುವೆಯಾಗಿದ್ದಾರೆ. ಎಸ್.ಪಿ.ಬಿ ಅವರ ಮಗಳ ಹೆಸರು ಪಲ್ಲವಿ. ಎಸ್.ಪಿ.ಬಿಗೆ ಅವರ ಮಗಳೆಂದರೆ ಇಷ್ಟ. ಪಲ್ಲವಿ ಅವರು ಅಮೆರಿಕದಿಂದ ಡಿಗ್ರಿ ಮುಗಿಸಿಕೊಂಡು ಭಾರತಕ್ಕೆ ಬಂದು ಸೆಟಲ್ ಆಗಿದ್ದು ಇವರು ಸಹ ಪ್ಲೇಬ್ಯಾಕ್ ಸಿಂಗರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ನಿಧನ ಅಪಾರ ಪ್ರಮಾಣದ ನೋವನ್ನುಂಟುಮಾಡಿದೆ.