ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವ ಮೊದಲು ಈ ಮಾಹಿತಿ ತಿಳಿಯುವುದು ಉತ್ತಮ

0 0

ಸೌತೆಕಾಯಿಯು ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವ ತರಕಾರಿಯಾಗಿದೆ. ಆದರೆ ನಾವು ಅದನ್ನು ಆಹಾರವಾಗಿ ಉಪಯೋಗಿಸುತ್ತೇವೆಯೇ ವಿನಃ ಅದರ ಔಷಧ ಗುಣಗಳ ಬಗ್ಗೆ ನಮಗೆ ತಿಳಿದಿಲ್ಲ. ಸೌತೆಕಾಯಿಯು ಒಂದು ಬಳ್ಳಿ. ಇದು ನೆಲದಲ್ಲಿ ಬೇರು ಬಿಟ್ಟು, ಬಳ್ಳಿಯು ಹೋದಲ್ಲೆಲ್ಲಾ ಹಬ್ಬಿಕೊಳ್ಳುತ್ತಾ ಹೋಗುತ್ತದೆ. ಈ ಸಸ್ಯವು ದೊಡ್ಡ ಎಲೆಗಳನ್ನು ಹೊಂದಿದ್ದು, ಎಳೆಗಳು ಮೃದುವಾಗಿದ್ದು ಸುಂಗನ್ನು ಹೊಂದಿರುತ್ತದೆ. ಆದ್ದರಿಂದ ಸೌತೆಗಿಡವನ್ನು ಮುಟ್ಟಲು ಸ್ವಲ್ಪ ಹಿಂಜರಿಯುತ್ತಾರೆ. ಈ ಗಿಡವು ಚಿಕ್ಕ ಚಿಕ್ಕ ಹಳದಿ ಹೂಗಳನ್ನೂ ಹೊಂದಿರುತ್ತದೆ.

ನಂತರ ಕಾಯಿಗಳಂತೂ ಉದ್ದವಾಗಿ ಬೆಳೆಯುತ್ತವೆ. ಕಾಯಿಗಳ ಮೇಲು ಸಣ್ಣ ಸಣ್ಣ ಮುಳ್ಳುಗಳಿರುತ್ತವೆ. ಸೌತೆಕಾಯಿಯಲ್ಲಿ ನಾನಾ ಬಗೆಗಳಿವೆ. ಅವು ಏರೆಸೌತೆ, ನೀರುಸೌತೆ, ಮುಳ್ಳುಸೌತೆ , ನಾಲಿಗೆ ಸೌತೆ ಮುಂತಾದವು. ಸೌತೆಕಾಯಿಯಲ್ಲಿ 96% ರಷ್ಟು ಭಾಗ ನೀರಿರುತ್ತದೆ. ಇನ್ನುಳಿದ 4% ರಷ್ಟು ಭಾಗ ಪೋಷಕಾಂಶಗಳಿರುತ್ತವೆ. ಸೌತೆಕಾಯಿಯು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಹಾಗು ಕಾರ್ಬೋ ಹೈಡ್ರೇಟ್, ಪ್ರೊಟೀನ್, ನಾರಿನಂಶ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಶಿಯಂ ಮ್ಯಾಂಗನೀಸ್, ಪೋಷಕಾಂಶಗಳನ್ನು ಹೊಂದಿದೆ.

ಆರೋಗ್ಯಕ್ಕೆ ಸೌತೆಕಾಯಿಯು ಪರಿಪೂರ್ಣವಾದ ತರಕಾರಿಯಾಗಿದೆ. ಸೌತೆಕಾಯಿಗಳು ಈಗ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತವೆ. ಆದರೆ ಮಾರುಕಟ್ಟೆಗಳಲ್ಲಿ ಹೈಬ್ರಿಡ್ ತಳಿಗಳೇ ಜಾಸ್ತಿ. ಅದರ ಬದಲು ಹಳ್ಳಿಗರು ತಮ್ಮ ಮನೆಯ ಹಿತ್ತಲಲ್ಲಿಯೇ ಮನೆಯಲ್ಲಿನ ಸಾವಯುವ ಗೊಬ್ಬರ ಬಳಸಿ ಸೌತೆಕಾಯಿ ಗಿಡವನ್ನು ಬೆಳಸುವುದರಿಂದ ಸೌತೆಕಾಯಿ ಅಧಿಕ ಪೋಷಕಾಂಶಗಳನ್ನು ಹೊಂದಿಕೊಂಡು ಬೆಳೆಯುತ್ತದೆ.

ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸೌತೆಕಾಯಿಯ ವೈಶಿಷ್ಟ್ಯವೇ ದೇಹವನ್ನು ತಂಪುಗೊಳಿಸುವುದು. ಆದ್ದರಿಂದ ಹಸಿ ಸೌತೆಕಾಯಿಯನ್ನು ತಿನ್ನುವುದರಿಂದ ದೇಹವು ತಂಪಾಗಿರುತ್ತದೆ. ಇದು ಅನೇಕ ರೋಗಗಳನ್ನು ಹೋಗಲಾಡಿಸುತ್ತದೆ. ಸೌತೆಕಾಯಿಯನ್ನು ಉಪಯೋಗಿಸಿ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಸೌತೆಕಾಯಿ ಕೋಸಂಬರಿ, ಸೌತೆಕಾಯಿ ರೊಟ್ಟಿ, ಸೌತೆಕಾಯಿ ಸಲಾಡ್, ಸೌತೆಕಾಯಿ ಸಾಂಬಾರ್ ಮುಂತಾದವುಗಳು.

ದೇಹವನ್ನು ತಂಪುಗೊಳಿಸಲು ಸೌತೆಕಾಯಿ ಸಹಕಾರಿಯಾಗಿದೆ. ಸೌತೆಕಾಯಿಯ ಬಳಕೆಯು ಬಿಸಿಲಿನ ಧಗೆಯಿಂದ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸೌತೆಕಾಯಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಮಾಡುವುದು ಉತ್ತಮ. ಜ್ಯೂಸ್, ಸಲಾಡ್, ಇನ್ಯಾವುದೇ ರೀತಿಯಲ್ಲಿ ಖಾದ್ಯವನ್ನು ತಯಾರಿಸಿಕೊಂಡು ತಿನ್ನಬಹುದು. ಆದರೆ ಇದರ ಅತಿಯಾದ ಸೇವೆನೆಯಿಂದ ದೇಹವು ಅತಿ ತಂಪಾಗಿ ಶೀತವಾಗುವ ಸಂಭವಿರುತ್ತದೆ. ಆದ್ದರಿಂದ ದೇಹದ ಉಷ್ಣತೆಗೆ ತಕ್ಕಂತೆ ಬಳಸುವುದು ಉತ್ತಮ.

ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲಿಶು ಮಾಡಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ದೇಹಕ್ಕೆ ತಂಪು, ಉರಿಯು ಕಡಿಮೆಯಾಗುತ್ತದೆ. ಚರ್ಮದ ಉರಿ ಹಾಗು ಸನ್‌ಬರ್ನ್ಸಗಳಿಗೆ ಸೌತೆಕಾಯಿ ರಸ ತುಂಬ ಪ್ರಯೋಜನಕಾರಿ. ಸೌತೆಕಾಯಿಯಲ್ಲಿನ ಹೆಚ್ಚು ನೀರಿನ ಪ್ರಮಾಣ ಹಾಗು ಕಡಿಮೆ ಕ್ಯಾಲೋರಿಯಿಂದಾಗಿ ಅದು ಪಚನ ಕ್ರಿಯೆಗೆ ತುಂಬ ಅನುಕೂಲಕರವಾಗಿದೆ.

ಸೌತೆಕಾಯಿ ರಸ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಹಾಯ ಮಾಡುತ್ತದೆ.
ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.

ಸೌತೆಕಾಯಿಯನ್ನು ಊಟಕ್ಕೆ ಮೊದಲು ಸೇವಿಸಿದರೆ ಮಧುಮೇಹದ ರೋಗಿಗಳಿಗೆ ಒಳ್ಳೆಯದು.
ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನು ತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ದೇಹದ ಉಷ್ಣದಿಂದಾಗುವ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಎಳೆ ಸೌತೆಕಾಯಿ ತಿಂದರೆ ವೀರ್ಯಶುದ್ದಿಯಾಗುತ್ತದೆ.

ಸೌತೆಕಾಯಿಯ ರಸವು ರೋಗಪೀಡಿತ ವಸಡುಗಳನ್ನು ಗುಣಪಡಿಸಿ ಅವುಗಳನ್ನು ತಾಜಾಗೊಳಿಸುತ್ತದೆ.
ಸೌತೆಕಾಯಿಯಲ್ಲಿರುವ ಖನಿಜವಾದ ಸಿಲಿಕಾವು ನಿಮ್ಮ ಕೂದಲು ಮತ್ತು ಉಗುರುಗಳನ್ನು ಹೊಳಪು ಮತ್ತು ಶಕ್ತಿಯುತವಾಗಿಸುತ್ತವೆ. ಸೌತೆಕಾಯಿಯ ದುಂಡಗಿನ ಬಿಲ್ಲೆಗಳನ್ನು ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ಉರಿ‌ಕಡಿಮೆಯಾಗುತ್ತದೆ. ಸೌತೆಕಾಯಿಯ ನಿಯಮಿತ ಸೇವನೆಯಿಂದ ಎದೆ, ಗರ್ಭಾಶಯ, ಅಂಡಾಶಯ, ಪ್ರಾಸ್ಟೇಟ ಮುಂತಾದ ಕ್ಯಾನ್ಸರ್‌ಗಳಿಗೆ, ಶರೀರ ಒಳಗಾಗುವದನ್ನು ತಪ್ಪಿಸುತ್ತದೆ. ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ.

ಸೌತೆಕಾಯಿಯಲ್ಲಿರುವ ಫೈಟೊ ರಾಸಾಯನಿಕಗಳು ನಿಮ್ಮ ಬಾಯಿಯ ದುರ್ವಾಸನೆಗೆ ಕಾರಣವಾದ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತದೆ. ಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೌತೆಕಾಯಿ ದಿನನಿತ್ಯ ಸೇವಿಸಿದರೆ ಸಿಗುವ ಪ್ರಯೋಜನಗಳು ಕೆಲವೊಂದು ಕಾಯಿಲೆಗಳ ತಡೆಯಲು ಹಾಗೂ ಅದನ್ನು ನಿವಾರಿಸಲು ಇದು ತುಂಬಾ ಪರಿಣಾಮಕಾರಿ . ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೀರಿಕೊಳ್ಳುವ ನಾರಿನಾಂಶ ಹೆಚ್ಚಿದ್ದು , ಇದು ತೂಕ ಇಳಿಸುವವರಿಗೆ ತುಂಬಾ ಪರಿಣಾಮಕಾರಿಯಾಗಿದೆ. ಸೌತೆಕಾಯಿ ನಿಮ್ಮ ದೇಹಕ್ಕೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ.

Leave A Reply

Your email address will not be published.