ನಾವು ಹಾಲವಾರು ರೀತಿಯ ಪ್ರಾಣಿಗಳನ್ನು ಸಾಕುತ್ತೇವೆ. ಕುರಿ, ಮೇಕೆ, ಹಸು, ನಾಯಿ, ಬೆಕ್ಕು ಹೀಗೆ ಬೇರೆ ಬೇರೆ. ಇವುಗಳನ್ನಯ ಸಾಕು ಪ್ರಾಣಿಗಳು ಎನ್ನುತ್ತಾರೆ. ನಾವು ಸಾಕಿದ ಪ್ರಾಣಿಗಳು ನಮ್ಮ ಜೀವಕ್ಕೆ ಕಂಟಕ ಆದರೆ ಹೇಗಿರುತ್ತದೆ. ಸಾಕಿದ ಪ್ರಾಣಿಗಳು ಎಂದರೆ ಕಾಡು ಪ್ರಾಣಿಗಳನ್ನು ಸಾಕಿರುವುದು. ಅವರನ್ನು ಸಾಕಿದವರಿಗಾದ ಪರಿಸ್ಥಿತಿ ಏನು ಎಂಬುದನ್ನು ನಾವು ತಿಳಿಯೋಣ.
ದಕ್ಷಿಣ ಆಫ್ರಿಕಾದ ಮಾರಿಯಸ್ ಎಲ್ಸ್ ಎನ್ನುವ ಒಬ್ಬ ವ್ಯಕ್ತಿ ಹಿಪ್ಪೊ ಪೊಟೊಮಸ್ ಅಥವಾ ನೀರಾನೆ ಸಾಕಿದ್ದರು. ಪ್ರವಾಹದಲ್ಲಿ ತೇಲಿಬಂದ ಐದು ತಿಂಗಳ ನೀರಾನೆ ಮರಿಯನ್ನು ಸಾಕುತ್ತಾರೆ ಮಾರಿಯಸ್ ಫಾರ್ಮ್ ಹೌಸ್ ನಲ್ಲಿ ಈ ನೀರಾನೆಯ ಜೊತೆಗೆ ಮತ್ತಷ್ಟು ಪ್ರಾಣಿಗಳನ್ನು ಸಾಕಿದ್ದರು. ಮಾರಿಯಸ್ ಅವರು ಮಾಜಿ ಮಿಲಿಟರಿ ಅಧಿಕಾರಿ. ನೀರಾನೆ ಸಾಕಲು ಪ್ರಾರಂಭಿಸಿ ಐದು ವರ್ಷ ಕಳೆದಿತ್ತು. 2011 ರಲ್ಲಿ ಒಂದು ದಿನ ಮಾರಿಯಸ್ ಕಾಣೆಯಾಗುತ್ತಾರೆ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಮನೆಯವರು ಪೋಲಿಸ್ ಕಂಪ್ಲೆಂಟ್ ಕೊಡುತ್ತಾರೆ. ಪೋಲಿಸರ ಕಾರ್ಯಾಚರಣೆಯಲ್ಲಿ ಫಾರ್ಮ್ ಹೌಸ್ ನಲ್ಲಿ ಇದ್ದ ಕೊಳದಲ್ಲಿ ಮಾರಿಯಸ್ ಶವ ಸಿಗುತ್ತದೆ. ಕಚ್ಚಿ ಕಚ್ಚಿ ತಿಂದ ಶವ ನೀರಿನಲ್ಲಿ ಹೂತು ಹೋಗಿತ್ತು. ಮಾರಿಯಸ್ ಸಾಕಿದ್ದ ಹ್ಯಾಂಪ್ರಿ ಅಂದರೆ ನೀರಾನೆ ಮಾಲಿಕನನ್ನೆ ಸಾಯಿಸಿತ್ತು.
ಈ ಹಿಂದೆ ಒಬ್ಬ ಮುದುಕನನ್ನು ಹಾಗೂ ಅವನ ಮೊಮ್ಮಗನನ್ನು ಅಟ್ಟಿಸಿಕೊಂಡು ಹೋದ ಘಟನೆ ದಾಖಲಾಗಿತ್ತು. ಬೇಲಿ ಹಾರಿ ನೀರಾನೆ ಬೇರೆಯವರಿಗೆ ತೊಂದರೆ ಕೊಟ್ಟಿದೆ ಎಂದು ಸ್ಥಳಿಯರು ಹೇಳುತ್ತಾರೆ. ಆದರೆ ಮಾರಿಯಸ್ ಒಂದು ಸಂದರ್ಶನದಲ್ಲಿ ಪ್ರಾಣಿಗಳ ಮನಸ್ಸು ತಿಳಿದಿಲ್ಲ ಅದಕ್ಕಾಗಿ ಸಾಕಬಾರದು ಎನ್ನುತ್ತಾರೆ. ನಾನೂ ಸಾಕಿರುವ ಕಾಡು ಪ್ರಾಣಿಗಳು ನನ್ನೊಂದಿಗೆ ಹೊಂದಿಕೊಂಡಿವೆ ಎನ್ನುತ್ತಾರೆ. ಆದರೆ ಅವನೆ ಸಾಕಿದ ಪ್ರಾಣಿಗೆ ಬಲಿಯಾಗಿದ್ದ.ಇಂಗ್ಲೆಂಡ್ ನ ಹಾಂಶೇರ್ ನಗರದಲ್ಲಿ ಡೇನಿಯಲ್ ಬ್ರಾಂಡ್ ಎಂಬ ಮೂವತ್ತೊಂದು ವರ್ಷದ ಹುಡುಗ ಹೆಬ್ಬಾವನ್ನು ಸಾಕಿದ್ದ. ಹೆಬ್ಬಾವು ಮರಿಯಿರುವಾಗಲೆ ಸಾಕಿದ್ದ 2018 ರಲ್ಲಿ ಇದು ಎಂಟು ಫೀಟ್ ಉದ್ದ ಬೆಳೆದಿತ್ತು. ಹಾವಿನೊಂದಿಗೆ ಆಟವಾಡುತ್ತ ಗ್ಯಾರೇಜ್ ಕೋಣೆಯಲ್ಲಿದ್ದ ಡೇನಿಯಲ್ ನನ್ನು ಹಾವು ಉಸಿರುಗಟ್ಟಿ ಸಾಯಿಸಿತ್ತು. ಆತನ ತಾಯಿ ಶಬ್ದ ಕೇಳಿದ್ದರು, ಆದರೆ ಸಾಮಾನ್ಯ ಇದು ಎಂದು ಸುಮ್ಮನಾದರು. ಗಂಟೆ ಕಳೆದರು ಬರದ ಮಗನನ್ನು ಹುಡುಕಿಕೊಂಡು ಹೋದಾಗ ಮಗ ಶವವಾಗಿರುವುದು ತಿಳಿಯುತ್ತದೆ. ಸಾಕಿದ ಹೆಬ್ಬಾವು ಜೀವ ಹೀರಿತ್ತು.
ಡೊನಾಲ್ಡ್ ಹಫ್ ಎಂಬ ನಲವತ್ತೆಡರು ವರ್ಷದ ಯುವಕ. ಕೊಮಾಡೊ ಡ್ರ್ಯಾಗನ್ ಸಾಕಿದ್ದ. ಕೊಮಾಡೊ ಡ್ರ್ಯಾಗನ್ ಅನ್ನು ಕಟ್ಟಿ ಹಾಕುತ್ತಿರಲಿಲ್ಲ. ಅತ್ತಿಂದಿತ್ತ ತಿರುಗಾಡಲು ಬಿಡುತ್ತಿದ್ದ ಎಂಬ ಮಾಹಿತಿ ದೊರಕಿದೆ. ಕೊಮಾಡೊ ಡ್ರ್ಯಾಗನ್ ಗೆ ಆಹಾರವಾಗಿ ಕೊಡಲು ನಾಲ್ಕು ಇಂಚು ಉದ್ದದ ಮಡಗಾಸ್ಕರ್ ಜೀರಲೆ ಕೂಡಾ ಸಾಕಿದ್ದ. ಈ ಡ್ರ್ಯಾಗನ್ ಗೆ ಕೋಳಿ ಮಾಂಸದ ಊಟವೂ ಹಾಕುತ್ತಿದ್ದನಂತೆ. ಈ ಡ್ರ್ಯಾಗನ್ ನೂರು ಕೆಜಿ ತೂಕ ಜೊತೆಗೆ ಏಳು ಫೀಟ್ ಉದ್ದವಿತ್ತು. ಒಂದು ದಿನ ಈತ ಪ್ಲಾಟ್ ನಲ್ಲಿ ಕಾಣಸಿಗುವುದಿಲ್ಲ. ಅಲ್ಲೆ ಅಕ್ಕಪಕ್ಕದ ಪ್ಲಾಟ್ ನಲ್ಲಿ ಇದ್ದವರು ಪೋಲಿಸರಿಗೆ ವಿಷಯ ತಿಳಿಸುತ್ತಾರೆ. ಪೋಲಿಸರು ಪ್ಲಾಟ್ ಬಾಗಿಲು ಒಡೆದು ನೋಡಿದಾಗ ಡೊನಾಲ್ಡ್ ನ ಶವ ಸಿಗುತ್ತದೆ. ಡ್ರ್ಯಾಗನ್ ಆತನ ಹೊಟ್ಟೆ, ಮುಖ, ಕೈಯನ್ನು ತಿಂದುಬಿಟ್ಟಿತ್ತು. ಕೆಲವರ ಪ್ರಕಾರ ಕೊಮಾಡೊ ಡ್ರ್ಯಾಗನ್ ಕಚ್ಚಿದರೆ ವಿಷ. ಹೀಗೆ ಡ್ರ್ಯಾಗನ್ ಕಚ್ಚಿ ಅವನ ಜೀವ ಹೋಗಿರಬಹುದು. ಆಹಾರ ಸಿಗದೆ ಹಸಿವು ನೀಗಿಸಿಕೊಳ್ಳಲು ಅವನನ್ನೆ ತಿಂದಿರಬಹುದು ಎನ್ನುತ್ತಾರೆ. ಸಿಂತ್ಯಾ ಲಿ ಗ್ಯಾಂಬಲ್ ಪ್ರಾಣಿಗಳ ಮೇಲೆ ಆಸಕ್ತಿ ಹೊಂದಿದ ಇವಳು ಚಿರತೆ ಒಂದನ್ನು ಸಾಕುತ್ತಾಳೆ. ಇವರು ಪ್ರಾಣಿಗಳ ಮೇಲೆ ಪುಸ್ತಕವನ್ನು ಬರೆದಿದ್ದಾರೆ. ತಾನು ಸಾಕಿದ ಚಿರತೆಯ ಬೊನಿನೊಳಗೆ ಹೋಗಿದ್ದ ಆಕೆ ಅದರೊಂದಿಗೆ ಆಟ ಆಡುತ್ತಿದ್ದಳು. ಆಟ ಆಡುತ್ತಿರುವಾಗಲೆ ಚಿರತೆ ಅವಳನ್ನು ಸಾಯಿಸಿ ತಿಂದು ಬಿಡುತ್ತದೆ. ಸ್ಯಾಂಡ್ರಾ ಎಮ್ನುವ ಮತ್ತೊರ್ವ ಮಹಿಳೆ ಮನೆಯಲ್ಲಿ ಬರೊಬ್ಬರಿ ಒಂಬತ್ತು ತೋಳಗಳನ್ನು ಸಾಕಿದ್ದಳು. ಒಂದು ದಿನ ಮಗಳ ಮನೆಗೆ ಹೋಗಬೇಕಾಗಿದ್ದ ಸ್ಯಾಂಡ್ರಾ ಅಲ್ಲಿಗೆ ಬರುವುದಿಲ್ಲ. ಇದಕ್ಕೆ ಕಾರಣ ಏನಿರಬಹುದು ಎಂದು ಮನೆಯವರು ಹುಡುಕಿಕೊಂಡು ಬರುತ್ತಾರೆ. ಮನೆಯಲ್ಲಿ ಅವಳ ಇರುವುದಿಲ್ಲ. ಮನೆಯಲ್ಲಿ ರಕ್ತ ಇದ್ದಿದ್ದು ಕಂಡು ಮನೆಯ ತಪಾಸಣೆ ಮಾಡಿದಾಗ ಅಲ್ಲಲ್ಲಿ ಬಿದ್ದಿದ್ದ ಮಾಂಸ ತುಂಡುಗಳ ನೋಡಿದಾಗ ಸ್ಯಾಂಡ್ರಾಳನ್ನು ಅವಳು ಸಾಕಿದ್ದ ತೋಳಗಳೆ ಅವಳ ಸಾವಿಗೆ ಕಾರಣವಾಯಿತು ಎಂದು ಕಂಡು ಬರುತ್ತದೆ.
ಸಾಕಿದ ಪ್ರಾಣಿಗಳು ಮುಂದೊಂದು ದಿನ ತಮ್ಮ ಜೀವವನ್ನೆ ಬಲಿ ಪಡೆಯಬಹುದೆಂಬ ವಿಷಯ ಬಹುಶಃ ಅವರಿಗೂ ತಿಳಿದಿರಲಿಲ್ಲ. ತಾವು ಮುದ್ದಾಗಿ ಸಾಕಿದ ಪ್ರಾಣಿಗಳಿಗೆ ಆಹಾರವಾಗಿದ್ದರು. ಕಾಡು ಪ್ರಾಣಿಗಳನ್ನು ಸಾಕಿ