ತಂತ್ರಜ್ಞಾನ ಮುಂದುವರೆದಂತೆ ಹೊಸ ಹೊಸ ಸಂಶೋಧನೆಗಳು ಸಹ ನಡೆಯುತ್ತಲೇ ಇರುತ್ತದೆ ಅದೇ, ರೀತಿ ಇಂದು ನಾವು ಗ್ಯಾಸ್ ಸಿಲಿಂಡರ್ ಬಳಕೆ ಮಾಡಿ ಅಡಿಗೆ ಮಾಡುತ್ತಿದ್ದೇವೆ ಹಾಗೂ ಕರೆಂಟ್ ಒಲೆಗಳು ಕೂಡ ಲಭ್ಯವಿದೆ. ಹಿಂದಿನ ಕಾಲದಲ್ಲಿ ಕಟ್ಟಿಗೆ ಒಲೆ ಬಳಕೆ ಮಾಡಿತ್ತಿದ್ದರು.
ಅದೇ ರೀತಿ ಇಂದು ನಾವು ಕಟ್ಟಿಗೆ ಒಲೆಯನ್ನು ಚಾರ್ಜ್ ಮಾಡಿಕೊಂಡು ಅಡಿಗೆ ಮಾಡಲು ಉಪಯೋಗ ಮಾಡಿಕೊಳ್ಳಬಹುದು. ಏನಿದು? ಎಂದು ತಿಳಿಯೋಣ ಬನ್ನಿ. ಗ್ಯಾಸ್ ಸಿಲೆಂಡರ್ ನ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಒಂದು ಬಾರಿ ಈ ಆಧುನಿಕ ಒಲೆ ಮೇಲೆ ಇನ್ವೆಸ್ಟ್ ಮಾಡಿದರೆ ಸಾಕು ಇದರಿಂದ, ಉಪಯೋಗವಿದೆ.ಈ ಒಲೆಯನ್ನು ಮೂರು ಗಂಟೆಗಳ ಕಾಲ ಚಾರ್ಜ್ ಮಾಡಿ ನಂತರ 24 ಗಂಟೆಗಳ ಕಾಲ ಉಪಯೋಗ ಮಾಡಬಹುದು. ಈ ಒಲೆಗೆ ಮೆಟಲ್ ಬಾಡಿ ಬಳಕೆ ಮಾಡಿರುವುದರಿಂದ 7 – 8 ಕೆಜಿ ತೂಕ ಬರುತ್ತದೆ.
ಇದರಲ್ಲಿ 40 ರಿಂದ 50 ಜನರಿಗೆ ಅಡಿಗೆ ಮಾಡಬಹುದು. ಕಟ್ಟಿಗೆ ಒಲೆ ಬಳಕೆ ಮಾಡಿದರೆ ಬೇಕು ಬರಲು ಊದುವ ಗಲ್ಫೆಯಿಂದ ಊದಬೇಕು. ಆದರೆ, ಈ ಆಧುನಿಕ ಒಲೆಯಲ್ಲಿ ಫ್ಯಾನ್ ಅಟ್ಯಾಚ್ ಆಗಿರುತ್ತದೆ 100%ನಲ್ಲಿ 10% ಹೊಗೆ ಬರುತ್ತದೆ. ಮೆಟಲ್ ಬಳಕೆ ಮಾಡಿರುವುದರಿಂದ ಪೆಟ್ರೋಲ್ ಡೀಸೆಲ್ ಅಥವಾ ಪ್ಲಾಸ್ಟಿಕ್ ಅನ್ನು ಕೂಡ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ (ಆದರೆ, ಪ್ಲಾಸ್ಟಿಕ್ ಬಳಕೆ ಮಾಡುವುದು ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಹಾನಿಕಾರಕ ).
ಬ್ಲೋವರ್ನಲ್ಲಿ ಬರುವ ರೀತಿ ಬೆಂಕಿ ಬರುವುದರಿಂದ ಅಡುಗೆ ಬೇಗ ಸಿದ್ಧವಾಗುತ್ತದೆ. ಇದು, ಯಾವ ರೀತಿ ವರ್ಕ್ ಆಗುತ್ತದೆ ಎಂದು ತಿಳಿಯೋಣ ಬನ್ನಿ.
ಕಟ್ಟಿಗೆ ಎನ್ನುವುದು ಎಲ್ಲಾ ಕಡೆ ಲಭ್ಯವಿರುತ್ತದೆ ಹಣ ಕೊಟ್ಟು ಸಹ ಖರೀದಿ ಮಾಡಿ ತರಬಹುದು. ಈ ಆಧುನಿಕ ಒಲೆಯನ್ನು ಅಡಿಗೆ ಮನೆಗಿಂತ ಬಾಲ್ಕನಿ ಟೆರೇಸ್ ಈ ರೀತಿಯ ಓಪನ್ ಸ್ಥಳಗಳಲ್ಲಿ ಇಟ್ಟು ಅಡುಗೆ ಮಾಡಿಕೊಳ್ಳುವುದು ಒಳ್ಳೆಯದು ಇದರಿಂದ, ಬೂದಿ ಮನೆಯ ತುಂಬಾ ಹರಡುವುದು ತಪ್ಪುತ್ತದೆ.
ಇದು, ಬ್ಯಾಟರಿಯ ಸಹಾಯದಿಂದ ನಡೆಯುವ ಕಾರಣ ಇದನ್ನು ರಿಚಾರ್ಜ್ ಮಾಡಬೇಕು. 1.5 ಅಡಿ ಅಗಲ ಮತ್ತು 2.5 ಅಡಿ ಉದ್ದ ಬರುತ್ತದೆ. ಮೈಲ್ಡ್ ಸ್ಟೀಲ್ ಬಳಕೆ ಮಾಡಲಾಗಿದೆ. ಫ್ಯಾನ್ ಕಂಟ್ರೋಲ್ ಮಾಡಲು ರೆಗ್ಯುಲೇಟರ್ ಇದೆ. ಅದನ್ನು, ನಮಗೆ ಬೇಕಾದ ರೀತಿಯಲ್ಲಿ ಅಡ್ಜಸ್ಟ್ ಮಾಡಿ ಆಪರೇಟ್ ಮಾಡಿಕೊಳ್ಳಬಹುದು. ಕೇಬಲ್ ಬಳಕೆ ಮಾಡಿ ಚಾರ್ಜ್ ಹಾಕಿದಾಗ ಕೆಂಪು ಬಣ್ಣದ ಲೈಟ್ ಆನ್ ಆಗುತ್ತದೆ. ಅಡಾಪ್ಟರ್ ಹಾಕಿಕೊಂಡು ಕೂಡ ಚಾರ್ಜ್ ಮಾಡಬಹುದು. ಅದಕ್ಕೂ, ಕೂಡ ಈ ಒಲೆಯಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ.
ಕೆಳಗಿನ ಸ್ಥಳದಲ್ಲಿ ಬೂದಿ ಸ್ಟಾಕ್ ಮಾಡಲು ಒಂದು ಲಿವರ್ ಇಡಲಾಗಿದೆ ಇದರಲ್ಲಿ, ಫ್ಲೇಮ್ ಕೂಡ ಕಡಿಮೆ ಮಾಡಿಕೊಳ್ಳಬಹುದು. ಕಟ್ಟಿಗೆ ಹಾಕಿ ಬೆಂಕಿ ಹಚ್ಚಿದ ನಂತರ ರೆಗ್ಯುಲೇಟರ್ ತಿರುಗಿಸುವ ಮೂಲಕ ಫ್ಲೇಮ್‌ಗಳನ್ನು ಕಂಟ್ರೋಲ್ ಮಾಡಿಕೊಳ್ಳಬೇಕು.ಈ ಆಧುನಿಕ ಒಲೆಯ ಮೇಲೆ ಎರಡು ಅಡಿ ಇರುವ ಪಾತ್ರಗಳನ್ನು ಇಟ್ಟು ಅಡಿಗೆ ಮಾಡಬಹುದು. ಕಟ್ಟಿಗೆಗಳನ್ನು ಒಂದು ಕಡೆಯಿಂದ ಬೇಕಾದಾಗೆಲ್ಲಾ ಹಾಕಿಕೊಳ್ಳಬಹುದು. ಈ ಆಧುನಿಕ ಒಲೆಯ ಬೆಲೆ ₹2,800 ಕೊರಿಯರ್ ಚಾರ್ಜ್ ಬೇರೆ ಇರುತ್ತದೆ. ಈ ಒಲೆಯಲ್ಲಿ ಒಳ್ಳೆ ಮೆಟಲ್ ಮತ್ತು ಒಳ್ಳೆ ರೀತಿಯ ತಂತ್ರಜ್ಞಾನವನ್ನು ಬಳಕೆ ಮಾಡಿರುವುದರಿಂದ ಅದಕ್ಕೆ ತಕ್ಕಂತೆ ಬೆಲೆಯನ್ನು ನಿರ್ಧಾರ ಮಾಡಲಾಗಿದೆ.
ಇದರಲ್ಲಿ, ಬಳಕೆ ಮಾಡಿರೋ ಫ್ಯಾನ್ ಸ್ವಲ್ಪ ಮಟ್ಟಿಗೆ ದೊಡ್ಡದು, ಕಾಪರ್ ಬೈಂಡಿಂಗ್ ಹೊಂದಿರುತ್ತದೆ ಮತ್ತು ಅದರಿಂದ ಬೆಂಕಿ ಜೋರಾಗಿ ಉರಿಯಲು ಸಹಾಯ ಮಾಡುತ್ತದೆ ಒಂದು ವೇಳೆ ಡ್ಯೂಪ್ಲಿಕೇಟ್ ಪ್ರಾಡಕ್ಟ್ ಆಗಿದ್ದರೆ ಅದರಲ್ಲಿ, ಸಣ್ಣ ಫ್ಯಾನ್ ಅಡವಳಿಕೆ ಮಾಡಲಾಗಿರುತ್ತದೆ ಮತ್ತು ಅದರ ತೂಕ 4 – 5 ಕೆಜಿ ಮಾತ್ರ ಇರುತ್ತದೆ.ಇದರಲ್ಲಿ, ಪೇಂಟ್ ಗ್ಯಾರಂಟಿ ಇರುವುದಿಲ್ಲ ಬಿಸಿಲು ಅಥವಾ ಮಳೆಗೆ ಪೈಂಟ್ ಹೋಗಬಹುದು. ಮೋಟರ್ ಮತ್ತು ಬ್ಯಾಟರಿಗೆ ಒಂದು ವರ್ಷ ಗ್ಯಾರಂಟಿ ಕೊಡಲಾಗುತ್ತದೆ. ಆಲ್ ಓವರ್ ಇಂಡಿಯಾ ಶಿಪ್ಪಿಂಗ್ ಲಭ್ಯವಿರುತ್ತದೆ.
ದೂರವಾಣಿ ಸಂಖ್ಯೆ :-8660350684
ಲೊಕೇಶನ್ :- https://maps.app.goo.gl/1ZGbou9uXvA2zTLEA
ಈ ಒಲೆಯನ್ನು ಖರೀದಿ ಮಾಡಲು ನೀವು ಮೇಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಮತ್ತು ಲೊಕೇಷನ್’ಗೆ ಭೇಟಿ ನೀಡಬಹುದು.