ಪ್ರಕೃತಿ ದೇವತೆ ಇದ್ದಂತೆ ತನ್ನ ಒಡಲಿನಲ್ಲಿ ಹಲವು ವಿಶೇಷತೆಯನ್ನು ಒಳಗೊಂಡಿರುತ್ತದೆ. ಮಾನವನಿಗೆ ಅವಶ್ಯಕವಾದ ಆಮ್ಲಜನಕವನ್ನು ಒದಗಿಸುವುದರೊಂದಿಗೆ ಅವನ ಜೀವನದಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಅದರೊಂದಿಗೆ ಕೆಲವು ವಿಶೇಷತೆಯನ್ನು ನಾವು ನೋಡಬಹುದು. ಹಣ್ಣುಗಳಲ್ಲಿ, ತರಕಾರಿಗಳಲ್ಲಿ ದೇವರ ಆಕಾರವನ್ನು ನೋಡಬಹುದು, ಅದರಂತೆ ವಿಶೇಷತೆಯನ್ನು ಹೊಂದಿರುವ ಮೇಕೆಯೊಂದು 23 ಲಕ್ಷ ರೂಪಾಯಿಯ ಬೇಡಿಕೆಯನ್ನು ಹೊಂದಿದೆ. ಹಾಗಾದರೆ ವಿಶೇಷ ಮೇಕೆ ಎಲ್ಲಿದೆ ಹಾಗೂ ಅದರ ವಿಶೇಷತೆ ಏನೆಂದು ಈ ಲೇಖನದಲ್ಲಿ ನೋಡೋಣ.
ಹಣೆಯಲ್ಲಿ ಅರ್ಧಚಂದ್ರಾಕೃತಿ ಇರುವ ಒಂದು ಮೇಕೆಗೆ 23 ಲಕ್ಷ ರೂಪಾಯಿ ಬೇಡಿಕೆ ಇದೆಯೆಂದರೆ ನಂಬಿಕೆ ಬರುವುದಿಲ್ಲ ಆದರೆ ನಂಬಲೆಬೇಕು. ಪ್ರಕೃತಿಯಲ್ಲಿ ಹಲವಾರು ರೀತಿಯ ಅಚ್ಚರಿಗಳು ನಡೆಯುತ್ತವೆ ಆದರೆ ಕೆಲವು ಮಾತ್ರ ನಮ್ಮ ನಿಲುವಿಗೆ ದೊರೆಯುತ್ತವೆ. ಇಂತಹ ಅಚ್ಚರಿಯ ಕುರಿಯ ಬಗ್ಗೆ ತಿಳಿದುಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಇಂಥದ್ದೊಂದು ಅಚ್ಚರಿ ನಡೆಯುತ್ತಿದೆ. ಹೌದು ಸತಾರಾ ಜಿಲ್ಲೆಯ ಪಟಾನ್ ತಾಲೂಕಿನ ತ್ರಿಪುಡಿಯಲ್ಲಿ ಮೇಕೆಯೊಂದು ರಾಜ್ಯಾದ್ಯಂತ ಖ್ಯಾತಿ ಪಡೆಯುತ್ತಿದೆ. ಅದರ ಜನಪ್ರಿಯತೆಗೆ ಕಾರಣ ಮೇಕೆಗೆ 23 ಲಕ್ಷ ರೂಪಾಯಿ ಬೇಡಿಕೆ ಬಂದಿರುವುದಾಗಿದೆ.
ಅಬಾಸೋ ರಾಮಚಂದ್ರ ದೇಸಾಯಿ ಅವರ ಸೋನ್ಯಾ ಎಂಬ ಮೇಕೆ ಒಂದೂವರೆ ವರ್ಷದಲ್ಲಿದೆ. ಸುಮಾರು 65 ಕೆ.ಜಿ. ತೂಗುವ ಈ ಮೇಕೆ 23 ಲಕ್ಷಕ್ಕೆ ಬೇಡಿಕೆ ಇಡುತ್ತಿರುವುದರಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇದರ ವಿಶೇಷವೆಂದರೆ ಈ ಮೇಕೆಯ ತಲೆಯ ಮೇಲೆ ಅರ್ಧಚಂದ್ರಾಕೃತಿ ಮೂಡಿದೆ. ಇಸ್ಲಾಂ ಧರ್ಮದಲ್ಲಿ ಈ ಅರ್ಧ ಚಂದ್ರಾಕೃತಿಗೆ ಬಹಳ ಮಹತ್ವ ಇದೆ.
ಅದರ ತಲೆಯ ಮೇಲೆ ಅರ್ಧಚಂದ್ರಾಕೃತಿಯಿರುವ ಕಾರಣ ಆ ಮೇಕೆಯನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಹೀಗಾಗಿ ಮುಂಬೈ, ಪುಣೆ ಸೇರಿದಂತೆ ಹಲವು ಕಡೆ ಮುಸ್ಲಿಂ ಬಾಂಧವರು ಈ ಮೇಕೆಯನ್ನು ಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಈ ಬೇಡಿಕೆ ಸಾವಿರಾರು ಅಲ್ಲ ಲಕ್ಷಗಳಲ್ಲಿ ಬರುತ್ತಿದೆ.
ಸೋನ್ಯಾ ಎಂಬ ಮೇಕೆಗೆ ಇದುವರೆಗೆ 18 ಲಕ್ಷದ 50 ಸಾವಿರದವರೆಗೆ ಬೇಡಿಕೆ ಬಂದಿದೆ. ತಲೆಯ ಮೇಲೆ ಅರ್ಧಚಂದ್ರಾಕೃತಿ ಇರುವ ಮರಿ ಮೇಕೆ ಹುಟ್ಟುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸದ್ಯ ಮೇಕೆ 23 ಲಕ್ಷ ರೂಪಾಯಿಗೆ ಬಿಡ್ ಆಗಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.
ಅರ್ಧ ಚಂದ್ರಾಕೃತಿ ಇರುವ ಮೇಕೆ ಯಾರಿಗೆ ಸಿಗಲಿದೆ ಎಂದು ಕಾದು ನೋಡಬೇಕು. ಪ್ರಕೃತಿಯ ವಿಶೇಷತೆಗೆ ನಾವೆಲ್ಲರೂ ತಲೆಬಾಗಲೇಬೇಕು ಅದೇ ರೀತಿ ಪ್ರಕೃತಿ ಮುನಿಸಿಕೊಂಡರೆ ಮಾನವ ಬದುಕುಳಿಯುವುದು ಕಷ್ಟವಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ