ಮನುಷ್ಯನಿಗೆ ಹಲವಾರು ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಹುಟ್ಟುವುದು ಸಹಜ.ಆದರೆ ಕೆಲವರು ಇಂತಹವುಗಳಿಗೆ ಉತ್ತರ ಕಂಡುಕೊಳ್ಳುತ್ತಾರೆ.ಆದರೆ ಇನ್ನೂ ಕೆಲವರು ಹಾಗೆಯೇ ಬಿಡುತ್ತಾರೆ. ಅಂತಹ ಕುತೂಹಲಕಾರಿ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳನ್ನು ನಾವು ಇಲ್ಲಿ ನೋಡೋಣ.
ಅತ್ತಾಗ ಕಣ್ಣಿನಲ್ಲಿ ನೀರು ಹೇಗೆ ಬರುತ್ತದೆ? ಕಣ್ಣಿನ ಒಳಗಡೆ ಐಬಾಲ್ ನ ಮೇಲೆ ಲೆಕ್ರಿಮಲ್ ಗ್ಲಾಂಡ್ ಎನ್ನುವ ಭಾಗ ಇರುತ್ತದೆ.ಕಣ್ಣಿನಲ್ಲಿ ನೀರು ಇಲ್ಲಿಂದ ಹೊರ ಬರುತ್ತದೆ.ಆದ್ದರಿಂದ ಕಣ್ಣಿನ ಕಾರ್ನಿಯಾ ಭಾಗ ಯಾವಾಗಲೂ ಒದ್ದೆಯಾಗಿರುತ್ತದೆ.
ಯೂ ಟ್ಯೂಬ್ ನ ಹಿನ್ನೆಲೆಯೇನು? ಮೊದಲು ಇದು ಹುಡುಗ ಹುಡುಗಿಯರ ಡೇಟಿಂಗ್ ವೆಬ್ಸೈಟ್ ಆಗಿತ್ತು.ಇದರಲ್ಲಿ ಯಾವುದಾದರೂ ಹುಡುಗಿಯರ ಮತ್ತು ಹುಡುಗರ ವಿಡಿಯೋ ಡೇಟಿಂಗ್ ಗೆ ಇದನ್ನು ಬಳಸಲಾಗುತ್ತಿತ್ತು. ಒಂದು ದಿನ ಯಾರಾದರೂ ಹುಡುಗಿಯರು ಅವರ ಡೇಟಿಂಗ್ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ ಅವರಿಗೆ ಅವರಿಗೆ 20ಡಾಲರ್ ಕೊಡಲಾಗುವುದು ಎಂದು ಹೇಳಲಾಗಿತ್ತು.ಆದರೆ ಅದಕ್ಕೆ ಯಾರೂ ಮುಂದಾಗಲಿಲ್ಲ.ಅದು ಅಭಿವೃದ್ಧಿ ಹೊಂದಿ ಈಗ ಎಲ್ಲರ ಉಪಯುಕ್ತ ಬಳಕೆಗೆ ಯೋಗ್ಯವಾಗಿದೆ.
ಕೆಲವೊಮ್ಮೆ ಆಕಾಶದಿಂದ ನಕ್ಷತ್ರಗಳು ಬೀಳುವ ರೀತಿ ಏಕೆ ಕಾಣಿಸುತ್ತದೆ? ಇಂತಹ ನಕ್ಷತ್ರಗಳು ಬೀಳುವಾಗ ನಾವು ಬೇಡಿಕೊಂಡ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.ಆದರೆ ಅದು ನಕ್ಷತ್ರಗಳಲ್ಲ. ಅದು ಇಂಟರ್ನ್ಯಾಷನಲ್ ಸ್ಟೇಷನ್ ನ ಗಗನಯಾತ್ರಿಗಳ ವೇಸ್ಟೇಜ್ ಆಗಿರಬಹುದು.ಇತ್ತೀಚೆಗೆ ನಾಸಾಸಂಸ್ಥೆಯು ಇದನ್ನು ಹೇಳಿದೆ.
ಜಿಪಿಎಸ್ ಬೇರೆ ದೇಶದಲ್ಲಿ ನಮ್ಮ ದೇಶದ ಹಾಗೆಯೇ ಇರುತ್ತದೆಯೇ? ನಮಗೆ ತಿಳಿಯದ ಜಾಗಕ್ಕೆ ಹೋಗಬೇಕೆಂದರೆ ಜಿಪಿಎಸ್ ಆಪ್ ಸಾಕು.ಯಾರ ಅವಶ್ಯಕತೆಯೂ ಇಲ್ಲ.ನಾವು ನಮ್ಮ ದೇಶದಲ್ಲಿ ಈ ವ್ಯವಸ್ಥೆಯನ್ನು ಉಚಿತವಾಗಿ ಬಳಸಿಕೊಳ್ಳುತ್ತಿದ್ದೇವೆ.ಆದರೆ ಅಮೆರಿಕಾದಲ್ಲಿ ಇದಕ್ಕೆ ನಮ್ಮ ದೇಶದ 16ಕೋಟಿಯ ಮೊತ್ತದಷ್ಟು ದಿನಕ್ಕೆ ಹಣ ವ್ಯಯವಾಗುತ್ತದೆ.
ಇತ್ತೀಚೆಗೆ ಹುಡುಗರು ಪಾಂಟ್ ಗಳನ್ನು ಕೆಳಗೆ ಹಾಕುತ್ತಾರೆ ಏಕೆ? ಮೊದಲು ಅಮೆರಿಕಾ ಜೈಲಿನಲ್ಲಿ ಇರುವ ಖೈದಿಗಳಿಗೆ ಸಮವಸ್ತ್ರ ಅಳತೆ ದೊಡ್ಡ ಆದಾಗ ಬೆಲ್ಟ್ ಕೊಡುತ್ತಿರಲಿಲ್ಲ. ಏಕೆಂದರೆ ಕೆಲವರು ಇದರಿಂದ ನೇಣು ಹಾಕಿಕೊಳ್ಳುತ್ತಿದ್ದರು.ಇದರಿಂದ ಈ ಟ್ರೆಂಡ್ ಶುರುವಾಯಿತು.
ಈ ಭೂಮಿಯ ಮೇಲೆ ಆಮ್ಲಜನಕ ಇರದಿದ್ದರೆ ಏನಾಗುತ್ತದೆ?
ಈ ಭೂಮಿಯ ಮೇಲೆ ಆಮ್ಲಜನಕ ಇರದಿದ್ದರೆ ಭೂಮಿ ಸಂಪೂರ್ಣ ನಾಶವಾಗುತ್ತದೆ. ಧೂಳಿನ ವಾತಾವರಣ ಸ್ರಷ್ಟಿಯಾಗುತ್ತದೆ.ಸತ್ತ ಯಾವುದೇ ಜೀವಿ ಕೊಳೆಯುವುದಿಲ್ಲ.ಏಕೆಂದರೆ ಕೊಳೆಯಲು ಮುಖ್ಯವಾಗಿ ಆಮ್ಲಜನಕ ಬೇಕು.ಓಝೋನ್ ಪದರ ನಾಶವಾಗುತ್ತದೆ.ಇನ್ನೂ ಹೆಚ್ಚಿನ ಪರಿಣಾಮ ಉಂಟಾಗುತ್ತದೆ.