ಮಹಾಭಾರತ ಯಾರಿಗೆ ತಿಳಿದಿಲ್ಲ. ಭಾರತದ ಸಂಸ್ಕೃತಿಯ ಶ್ರೇಷ್ಠ ಕೃತಿಗಳಲ್ಲಿ ಮಹಾಭಾರತ ಕೂಡ ಒಂದು. ಆದರೆ ಇಲ್ಲಿ ಒಂದು ವಿಶೇಷವೆಂದರೆ ಗದಾಯುದ್ಧ ಬಿಲ್ವಿದ್ಯೆಯಷ್ಟು ಪ್ರಸಿದ್ಧ ಹೊಂದಿಲ್ಲ.ಮಹಾಭಾರತವು ಕೆಲವು ಉತ್ತಮ ಗದಾಧಾರಿಗಳನ್ನು ಹೊಂದಿದೆ.ಅವರುಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಗದಾಧಾರಿ ಕೀಚಕ. ಮಹಾಭಾರತದಲ್ಲಿ ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಮತ್ಸ್ಯರಾಜ ವಿರಾಟನ ಆಶ್ರಯವನ್ನು ಪಡೆದಿದ್ದರು.ಅಲ್ಲಿ ಇದ್ದವನು ಕೀಚಕ. ಕೀಚಕನು ವಿರಾತನ ಸೇನಾಧಿಪತಿ ಆಗಿದ್ದನು.ಭಯಂಕರ ಶಕ್ತಿಶಾಲಿ ಮತ್ತು ಉತ್ತಮ ಗದಾಧಾರಿ ಆಗಿದ್ದನು.

ಗದಾಧಾರಿ ಜರಾಸಂಧ.ಜರಾಸಂಧ ಮಗಧ ರಾಜ್ಯದ ರಾಜನಾಗಿದ್ದನು.ತನ್ನ ಮಗಳ ಮದುವೆಯನ್ನು ಕಂಸನ ಜೊತೆ ಮಾಡಿದ್ದನು.ಆದರೆ ಕೃಷ್ಣ ತನ್ನ ಮಾವ ಕಂಸನನ್ನು ಕೊಂದ ಬಳಿಕ ಕೃಷ್ಣನ ಮೇಲೆ ದ್ವೇಷವಿತ್ತು.ಇವನು ಅನೇಕ ರಾಜರುಗಳನ್ನು ಸೋಲಿಸಿ ಶಕ್ತಿಶಾಲಿ ರಾಜನಾಗಿದ್ದನು. ಯುಧಿಷ್ಠಿರನ ರಾಜಸೂಯ ಯಾಗದ ಸಮಯದಲ್ಲಿ ಭೀಮನು ಕೃಷ್ಣನ ಸಲಹೆಯ ಮೇರೆಗೆ ಜರಾಸಂಧನನ್ನು ಕೊಂದು ಹಾಕಿದನು.

ಗುರು ದ್ರೋಣರು ಇವರು ಕುರು ರಾಜ್ಯದ ಎಲ್ಲಾ ರಾಜಕುಮಾರರ ಗುರುಗಳಾಗಿದ್ದಾರೆ.ಇವರು ಕೇವಲ ಬಿಲ್ವಿದ್ಯೆಯಲ್ಲಿ ಮಾತ್ರ ಪರಿಣಿತರಾಗಿರಲಿಲ್ಲ.ಗದಾಧಾರಿ ಕೂಡ ಆಗಿದ್ದರು.ಗದಾಯುದ್ಧದಿಂದ ಇವರು ದ್ರುಪದ, ದುಷ್ಟದ್ಯುಮ್ನನನ್ನು ಸೋಲಿಸಿದ್ದರು.

ಶಲ್ಯ ಈತನು ಮಾದ್ರ ದೇಶದ ರಾಜನಾಗಿದ್ದನು.ಇವರು ಮಹಾಭಾರತದ ಯುದ್ಧದ ವೇಳೆ ಕೌರವರ ಪರವಾಗಿ ಭಾಗಿಯಾಗಿದ್ದರು.ಇವರು ಮಹಾಭಾರತದ ಮೊದಲ ದಿನವೇ ವಿರಾಟರಾಜನ ಪುತ್ರ ಉತ್ತರಕುಮಾರನನ್ನು ಕೊಂದು ಹಾಕಿದರು. ಇವರು ಸಹ ಶ್ರೇಷ್ಠ ಗದಾಧಾರಿಗಳಲ್ಲಿ ಬರುತ್ತಾರೆ.

ಭೀಮ ಇವನು ಪಾಂಡವರ ಸೇನೆಯಲ್ಲಿ ಅತ್ಯಂತ ಶ್ರೇಷ್ಠ ಶಕ್ತಿಯುತ ವ್ಯಕ್ತಿ. ಈತನು ಮೊದಲು ಗುರು ದ್ರೋಣರ ಬಳಿ ಗದಾಯುದ್ದವನ್ನು ಕಲಿತಿದ್ದನು.ಹಾಗೆಯೇ ನಂತರ ಬಲರಾಮನ ಬಳಿಯೂ ಸಹ ಕಲಿತಿದ್ದನು. ಕೌರವರ ಸ್ಯೆನ್ಯದಲ್ಲಿ ಶಲ್ಯನನ್ನು ಸೋಲಿಸಿ ಅಪಾರ ಪ್ರಮಾಣದಲ್ಲಿ ಆನೆಗಳನ್ನು ಗದಾಪ್ರಹಾರದಿಂದಲೇ ಮುಗಿಸಿದ್ದನು.ಭೀಮನ ಗಧೆಯ ಭಾರ ದುರ್ಯೋಧನನ ಗಧೇಗಿಂತ ಒಂದೂವರೆ ಪಟ್ಟು ಹೆಚ್ಚಿಗೆ ಭಾರವಿತ್ತು.

ದುರ್ಯೋಧನ ಈತನು ಗದಾಯುದ್ಧದ ಕಲೆಯಲ್ಲಿ ಭೀಮನಿಗಿಂತ ನಿಪುಣನಾಗಿದ್ದನು.ಏಕೆಂದರೆ ದುರ್ಯೋಧನನಿಗೆ ಆರಂಭದಿಂದಲೂ ಮಹಾನ್ ಶಕ್ತಿಶಾಲಿ ಬಲರಾಮನ ತರಬೇತಿ ಸಿಕ್ಕಿತ್ತು. ಈತ ನಿರಂತರ ಅಭ್ಯಾಸದ ಮೂಲಕ ಪರಿಣತಿ ಹೊಂದಿದ್ದ. ಬಲರಾಮನ ಪ್ರಕಾರ ಭೀಮನಿಗಿಂತ ದುರ್ಯೋಧನ ಶ್ರೇಷ್ಠ ಗದಾಧಾರಿ ಆಗಿದ್ದ.

ಬಲರಾಮ ಇವನನ್ನು ಬಲದೇವ ಎಂದು ಕರೆಯಲಾಗುತ್ತಿತ್ತು.ಇವನು ಮಹಾನ್ ಶಕ್ತಿಶಾಲಿ ಯೋಧನಾಗಿದ್ದನು.ಇವನು ದ್ವಾಪರಯುಗದ ಸರ್ವ ಶ್ರೇಷ್ಠ ಗದಾಧಾರಿ ಆಗಿದ್ದ. ಶ್ರಿ ಕೃಷ್ಣನ ಸಹೋದರ ಆಗಿದ್ದ ಇವನು ಆದಿಶೇಷನ ಅವತಾರವಾಗಿದ್ದನು.ಇವನು ಬಾಲ್ಯದಲ್ಲಿ ಧೇನುಕಾಸುರ ಮತ್ತು ಪ್ರಲಂಬಾಸುರ ಎಂಬ ರಾಕ್ಷಸರನ್ನು ಸೋಲಿಸಿದ್ದರು.

Leave a Reply

Your email address will not be published. Required fields are marked *