ಒಂದು ಚಿಕ್ಕದಾದ ಸೊಳ್ಳೆ ಮನುಷ್ಯನ ಪ್ರಾಣವನ್ನೇ ತೆಗೆಯುತ್ತದೆ ಎಂದರೆ ಅದು ಎಷ್ಟು ಅಪಾಯಕಾರಿ ಆಗಿರಬಹುದು. ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಪೇಟೆಗಳಲ್ಲಿ ಕಾಯಿಲ್ ಗಳನ್ನು ಬಳಸುತ್ತಾರೆ. ಆದರೆ ಕಾಯಿಲ್ ಗಳು ಆರೋಗ್ಯಕ್ಕೆ ಮನುಷ್ಯನಿಗೆ ಒಳ್ಳೆಯದಲ್ಲ. ಆದರೆ ಸೊಳ್ಳೆಗಳು ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ ರೋಗಗಳನ್ನು ತರುತ್ತವೆ. ಆದ್ದರಿಂದ ನಾವು ಇಲ್ಲಿ ಸೊಳ್ಳೆ ನಾಶಕಗಳ ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸೊಳ್ಳೆಗಳನ್ನು ಓಡಿಸಲು ಸೊಳ್ಳೆಬತ್ತಿ ಅಥವಾ ಕಾಯಿಲ್ ನ್ನು ಬಳಸುತ್ತಾರೆ. ಇದರ ಹೊಗೆಯಿಂದ ಸೊಳ್ಳೆಗಳು ಸಾಯುತ್ತವೆ. ಅಥವಾ ಕೋಣೆಯಿಂದ ಹೊರಗಡೆ ಹೋಗುತ್ತವೆ. ಇದಕ್ಕೆ ಕಾರಣ ಕಾಯಿಲ್ ನಲ್ಲಿ ಇರುವ ರಾಸಾಯನಿಕಗಳು. ಈ ರಾಸಾಯನಿಕಗಳು ಮನುಷ್ಯನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಇವುಗಳಿಂದ ಅನಾರೋಗ್ಯ ಉಂಟಾಗುತ್ತದೆ. ಸಿಗರೇಟು ಹೊಗೆಗಿಂತ ಸೊಳ್ಳೆ ಬತ್ತಿಯ ಹೊಗೆ ಅತ್ಯಂತ ಅಪಾಯಕಾರಿ ಎಂದು ಹೇಳುತ್ತಾರೆ.
ಏಕೆಂದರೆ ಸೊಳ್ಳೆ ಬತ್ತಿಗಳನ್ನು ಬಳಕೆ ಮಾಡುವುದರಿಂದ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸೊಳ್ಳೆ ಬತ್ತಿಗಳಿಗೆ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾಗಿ ಸೊಳ್ಳೆಯ ಬತ್ತಿಗಳನ್ನು ಬಳಸುವ ಬದಲು ದೇಹಕ್ಕೆ ಅಡ್ಡ ಪರಿಣಾಮಗಳನ್ನು ಉಂಟು ಮಾಡದ ವಸ್ತುಗಳನ್ನು ಬಳಸಬೇಕು. ಈ ಬತ್ತಿಯ ಹೊಗೆಯಿಂದ ಬರುವ ಹೊಗೆಯಿಂದ ಗರ್ಭಿಣಿಯರಿಗೆ, ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಆದ್ದರಿಂದ ಸೊಳ್ಳೆಬತ್ತಿಯನ್ನು ಹಚ್ಚಿದ ನಂತರ ಸ್ವಲ್ಪ ಸಮಯದ ಕಾಲ ದೂರವಿರಬೇಕು. ಕೋಣೆ ಮತ್ತು ಕಿಟಕಿಯ ಬಾಗಿಲುಗಳನ್ನು ತೆಗೆದಿಡಬೇಕು. ಇದರಿಂದ ಆರೋಗ್ಯದ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ. ಆರೋಗ್ಯ ಉತ್ತಮವಾಗಿ ಇರುತ್ತದೆ. ಕೆಂಡದ ಒಲೆಗಳು ಇದ್ದರೆ ಅದಕ್ಕೆ ಬೇವಿನ ಸೊಪ್ಪನ್ನು ಹಾಕಿ ಹೊಗೆ ಮಾಡುತ್ತಿರಬೇಕು. ಇದರಿಂದ ಮನೆಯಲ್ಲಿ ಇರುವ ಕ್ರಿಮಿ ಕೀಟಗಳು ದೂರವಾಗುತ್ತವೆ. ಹಾಗೆಯೇ ಆರೋಗ್ಯಕ್ಕೆ ಮಾರಕವಲ್ಲದ ಔಷಧಿಗಳನ್ನು ತಂದು ಬಳಸಬೇಕು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ.