ಸಾಮಾನ್ಯವಾಗಿ ಮಾತು ತಪ್ಪುವ ಮನುಷ್ಯನನ್ನು ನೋಡಿದಾಗ ಅವನಿಗೆ ಎರಡು ನಾಲಿಗೆ ಇದೆ ಅಂತ ಹೇಳೋದು ರೂಢಿ. ಅವನು ಹಾವು ಇದ್ದಂತೆ ಎರಡು ನಾಲಿಗೆ ಮನುಷ್ಯ ಅಂತ ಹೇಳ್ತೀವಿ. ಹಾಗೆ ಹಾವಿಗೆ ಈ ಎರಡು ನಾಲಿಗೆ ಇರೋದು ಯಾಕೆ? ನಾವು ನೋಡುವ ಬಹುತೇಕ ಪ್ರಾಣಿಗಳಿಗೆ ಓಂದೆ ನಾಲಿಗೆ ಇರುವಾಗ ಹಾವುಗಳಿಗೆ ಮಾತ್ರ ಎರಡು ನಾಲಿಗೆ ಯಾಕೆ? ಇದರಿಂದ ಅವುಗಳಿಗೆ ಏನಾದ್ರು ಲಾಭ ಇದ್ಯ ಅಥವಾ ಅದೊಂದು ವೈಕರ್ಯನಾ ಅಂತ ನೋಡುವ ಮೊದಲು ಹಾವುಗಳಿಗೆ ಎರಡು ನಾಲಿಗೆ ಇರುವದರ ಬಗ್ಗೆ ನಮ್ಮ ಪುರಾಣಗಳಲ್ಲಿ ಏನು ಉಲ್ಲೇಖ ಇದೆ ಅನ್ನೋದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಅದು ಭೂಮಿಯ ಉದ್ಭವವಾಗಿ ಆಗತಾನೆ ಇಲ್ಲಿ ಪ್ರಾಣಿ ಪಕ್ಷಿಗಳು ಜೀವ ಸಂಕುಲಗಳು ಹುಟ್ಟಿಕೊಳ್ಳುತ್ತಿದ್ದ ಸಮಯ. ಸೃಷ್ಟಿಯಲ್ಲಿ ಭಾಗವಹಿಸೋಕೆ ಮತ್ತು ನನಗೂ ಒಂದಿಷ್ಟು ಸಹಾಯ ಆಗಲಿ ಅಂತ ಬ್ರಹ್ಮ ದೇವ ಮೊದಲೇ ಒಂದಿಷ್ಟು ಜನ ಋಷಿಗಳನ್ನ ಅವರ ಪತ್ನಿಯರನ್ನ ಸೃಷ್ಟಿ ಮಾಡಿದ್ದ. ಅವರನ್ನ ಬ್ರಹ್ಮ ಮಾನಸ ಪುತ್ರರು ಅಂತ ಕರೆಯುತ್ತ ಇದ್ದರು. ಅಂಥವರ ಪೈಕಿಯಲ್ಲಿ ಮಹರ್ಷಿ ಮರಿಚಿ ಋಷಿಗಳು ಅವರ ಪುತ್ರ ಮಹರ್ಷಿ ಕಶ್ಯಪ. ಸೃಷ್ಟಿಯ ಜವಾಬ್ಧಾರಿಯನ್ನ ಹೊತ್ತಿದ್ದ ಕಶ್ಯಪ ಮುನಿಗೆ ದಿತಿ, ಅಧಿತಿ, ವಿನುತ, ಕದ್ರು ಸೇರಿದಂತೆ ಒಟ್ಟು 13 ಮಂದಿ ಪತ್ನಿಯರು.
ಆ ಪೈಕಿ ದಿತಿಯ ಮಕ್ಕಳು ದೈತ್ಯರು ಹಾಗೂ ಆಧಿತಿಯ ಮಕ್ಕಳು ಆದಿತ್ಯರು, ಕದ್ರುವಿನ ಮಕ್ಕಳು ಉರುಗರು, ವಿನುತೆಯ ಮಕ್ಕಳು ಸೂರ್ಯನ ಸಾರಥಿಯಾದ ವರುಣ ಮತ್ತು ವಿಷ್ಣುವಿನ ವಾಹನವಾದ ಗರುಡ. ಈ ಕದ್ರು ಹಾಗೂ ವಿನುತೆಯರ ನಡುವೆ ಒಂದು ಈರ್ಷೆ ಉಂಟಾಯಿತು. ಸಾಮಾನ್ಯವಾಗಿ ಇಬ್ಬರು ಸವತಿಯರ ನಡುವೆ ಉಂಟಾದ ಮತ್ಸರ. ಒಂದು ದಿನ ಇಬ್ಬರು ವಾಯು ವಿಹಾರದಲ್ಲಿ ಇದ್ದಾಗ ಅವರಿಗೆ ಉಚೈಶ್ರವ ಎಂಬ ದೈವ ಅಶ್ವ ಕಾಣತ್ತೆ. ಸಮುದ್ರ ಮಥನದಲ್ಲಿ ಹುಟ್ಟುಕೊಂಡಿದ್ದ ದೈವಾಂಶ ಇರುವ ಹಾಗೂ ಮಹತ್ವ ಪೂರ್ಣವಾದ ಶ್ವೇತ ರಾಜ ಇದು.
ಈ ಶ್ವೇತಾಸ್ವಾವನ್ನು ಕಂಡ ಕದ್ರು ಆ ಕುದುರೆಯ ಬಾಲ ಯಾವ ಬಣ್ಣದಲ್ಲಿ ಇತ್ತು ಗೊತ್ತಾ ಅಂತ ಕೇಳುತ್ತಾಳೆ. ಅದು ಬಿಳಿ ಬಣ್ಣ ಅಂತ ಹೇಳಿದ ವಿನುತೆಯ ಜೊತೆಗೆ ಅಲ್ಲ ಕಪ್ಪು ಬಣ್ಣ ಅಂತ ವಾದಕ್ಕೆ ಇಳಿಯುತ್ತಾಳೆ. ಸರಿ ನಾಳೆ ಮತ್ತೆ ಬಂದು ಅದನ್ನ ನೋಡೋಣ ಅದರ ಬಾಲ ಒಂದುವೇಳೆ ಕಪ್ಪಗೆ ಇದ್ದರೇ ನೀನು ನನ್ನ ದಾಸಿಯಾಗಿರಬೇಕು ಬಿಳಿ ಇದ್ದರೆ ನಾನು ನಿನ್ನ ದಾಸಿ ಆಗಿರುತ್ತೇನೆ ಅಂತ ಹೇಳ್ತಾಳೆ ಕದ್ರು. ಹೀಗೆ ಹೇಳಿ ಮನೆಗೆ ಬಂದ ಕದ್ರು ತನ್ನ ಸರ್ಪಸಂತಾನವನ್ನ ಕರೆದು ತನ್ನ ಹಾಗೂ ವಿನುತೆಯ ನಡುವೆ ನಡೆದ ವಾದದ ಬಗ್ಗೆ ಹೇಳಿ ನೀವು ಆ ಕುದುರೆಯ ಬಾಲಕ್ಕೆ ಅಂಟಿಕೊಳ್ಳಬೇಕು ಆ ಮೂಲಕ ಬಾಲ ಕಪ್ಪಾಗಿ ಕಾಣುವಂತೆ ಮಾಡಬೇಕು ಎಂದು ಅಪ್ಪಣೆ ಕೊಡುತ್ತಾಳೆ. ಆದರೆ ಇದು ಅಧರ್ಮ ಎಂದು ತಿಳಿದ ಕೆಲವು ಸರ್ಪಗಳು ಆ ತಾಯಿಯ ಮಾತಿಗೆ ಎದುರಾಡುತ್ತವೆ. ಅದರಿಂದ ಸಿಟ್ಟಿಗೆದ್ದ ಕದ್ರು ತಾಯಿಯ ಮಾತಿಗೆ ಎದುರಾಡಿದ ಮಕ್ಕಳಿಗೆ ಮುಂದೆ ಯಾಗದಲ್ಲಿ ಸುಟ್ಟು ನಾಶವಾಗಿ ಎಂದು ಶಾಪ ಕೊಡುತ್ತಾಳೆ. ತಾಯಿಯ ಕೋಪಕ್ಕೆ ತುತ್ತಾದ ಮಕ್ಕಳು ಮರುದಿನ ಸಂಜೆ ಹೊತ್ತಿಗೆ ಕುದುರೆಯ ಬಾಲಕ್ಕೆ ಅಂಟಿಕೋಳ್ಳುವ ಮೂಲಕ ಅದರ ಬಾಲವನ್ನು ಕಪ್ಪಾಗುವಂತೆ ಮಾಡುತ್ತಾರೆ. ಅಲ್ಲಿಗೆ ಬಾಲ ಕಪ್ಳು ಅಂತ ಹೇಳಿದ ಕದ್ರುವಿನ ಮಾತೇ ನಿಜವಾಗಿ ವಿನುತೇ ಕದ್ರುವಿನ ದಾಸಿ ಆಗುವಂತೆ ಆಯಿತು.
ವಿನುತೆಯ ಮಗ ಮಹಾ ಶಕ್ತಿಶಾಲಿ ಗರುಡ. ತನ್ನಂತ ಶಕ್ತಿಶಾಲಿ ಮಗನಿದ್ದರು ತನ್ನ ತಾಯಿ ಸರ್ಪಗಳ ಮಾತೆಯ ದಾಸ್ಯ ಮಾಡುವ ಪರಿಸ್ಥಿತಿ ಕಂಡು ಸಿಟ್ಟಿಗೆದ್ದು ಕೋನೆಗೆ ತನ್ನ ತಾಯಿಯ ಶಾಪ ವಿಮಿಚನೆಗಾಗಿ ಏನು ಮಾಡಬೇಕು ಅಂತ ಕೇಳ್ತಾನೆ ಗರುಡ. ಆಗ ಈ ಹಿಂದೆ ತಮ್ಮ ತಾಯಿ ಕೊಟ್ಟ ಶಾಪದಿಂದಾಗಿ ತಮಗೆ ಸಾವು ಬರತ್ತೆ ಎಂದು ಹೇಳಿದ ಸರ್ಪಗಳು ಅದರಿಂದ ಹೇಗೆ ತಪ್ಪಿಸಿಕೊಳ್ಳೋದು ಎಂದು ಚಿಂತೆಯಲ್ಲಿದ್ದಾಗ ದೇವೇಂದ್ರನ ಬಳಿ ಇದ್ದ ಅಮೃತವನ್ನ ತಮಗೆ ತಂದುಕೊಟ್ಟರೆ ವಿನುತೆಯ ಶಾಪವನ್ನ ವಿಮೋಚನೆ ಮಾಡುವುದಾಗಿ ಸರ್ಪಗಳು ಮತ್ತು ಅವುಗಳ ತಾಯಿ ಕದ್ರು ಹೇಳಿದವು. ಹಾಗೆ ದೇವೇಂದ್ರನ ಬಳಿ ಇರುವ ಅಮೃತ ಕಲಾಶವನ್ನ ಭೂಮಿಗೆ ತರೋದು ಅಂದ್ರೆ ಏನು ಸುಮ್ನೇನಾ? ಆದರೂ ದೇವಲೋಕಕ್ಕೆ ಹೊರಟ ಗರುಡ, ಮಹಾ ಬಲಶಾಲಿಯು, ಎಷ್ಟು ದೂರ ಬೇಕಿದ್ರು ಹಾರಬಲ್ಲವನು ಕಶ್ಯಪ ಮಹರ್ಷಿಯಿಂದ ವರ ಪಡೆದವನು, ಬ್ರಹ್ಮ ದೇವನ ಮೊಮ್ಮಗನು ಆದ ಗರುಡ ದೇವೇಂದ್ರನ ಲೋಕವನ್ನ ತಲುಪುತ್ತಾನೆ. ಅಲ್ಲಿ ಇಂದ್ರನೊಂದಿಗೆ ಸೆಣಸಿ ತನ್ನ ಅಪರಿಮಿತ ಶಕ್ತಿಯಿಂದಲೇ ಇಂದ್ರನ ಅಭಿಮಾನ ಗಳಿಸುತ್ತಾನೆ.
ಗರುಡ ಅಮೃತ ಕಲಾಶವನ್ನ ತಗೆದುಕೊಂಡು ಹೋಗಲು ಬಂದ ಉದ್ದೇಶ ತಿಳಿದ ದೇವೇಂದ್ರ ಕೊಡಲು ಒಪ್ಪಿದನಾದರು ಆ ಅಮೃತ ಸರ್ಪಗಳಿಗೆ ಸಿಕ್ಕಿದ್ರೆ ಅವು ಅಮರತ್ವ ಪಡೆದು ಲೋಕ ನಾಶ ಆಗೋದು ಖಚಿತ ಎಂದು ಗರುಡನಿಗೆ ಮನವರಿಕೆ ಮಾಡುವ ಇಂದ್ರ ಅದಕ್ಕೆ ಒಂದು ಉಪಾಯವನ್ನು ಹೇಳುತ್ತಾನೆ. ಅದೇನದ್ರೆ, ಅಮೃತ ಕಲಶವನ್ನ ಭೂಮಿಗೆ ಕೊಂಡೊಯ್ದು ಅದನ್ನ ಸರ್ಪಗಳಿಗೆ ಒಪ್ಪಿಸಿ ನಿನ್ನ ತಾಯಿಯನ್ನ ದಾಸ್ಯದಿಂದ ಮುಕ್ತ ಗೊಳಿಸು. ಹಾಗೆ ಸರ್ಪಗಳಿಗೆ ಶುಚಿರಭೂತರಾಗಿ ಅಮೃತವನ್ನ ಸ್ವೀಕರಿಸಲು ತಿಳಿಸು ಅಷ್ಟರಲ್ಲಿ ನಾನು ಮತ್ತೆ ಅಮೃತ ಕಲಾಶವನ್ನ ಅಲ್ಲಿಂದ ಮತ್ತೆ ದೇವಲೋಕಕ್ಕೆ ತರುವುದಾಗಿ ಹೇಳ್ತಾನೆ ಇಂದ್ರ.
ಅದಕ್ಕೆ ಒಪ್ಪದ ಗರುಡ ದೇವೇಂದ್ರನಿಂದ ಅಮೃತ ಕಲಾಶವನ್ನ ಪಡೆದು ಭೂಮಿಗೆ ಬರುತ್ತಾನೆ. ಇಲ್ಲಿ ಆ ಕಲಶವನ್ನ ದರ್ಬೆಯ ಆಸನದ ಮೇಲೆ ಇರಿಸಿ ಸರ್ಪ ಸಂಕುಲಕ್ಕೆ ಅದನ್ನ ತೋರಿಸಿ ಶುಚಿಯಾಗಿ ಬಂದು ಅಮೃತ ಸೇವನೆ ಮಾಡುವಂತೆ ತಿಳಿಸುತ್ತಾನೆ. ಇದನ್ನು ಕಂಡ ಕದ್ರು ಹಾಗೂ ಸರ್ಪ ಸಂಕುಲಗಳು ಖುಷಿಯಾಗಿ ದಾಸಿ ಆಗಿದ್ದ ವಿನುತೆಯನ್ನ ದಾಸ್ಯದಿಂದ ಬಿಡುಗಡೆ ಗೊಳಿಸುತ್ತಾರೆ.ಇನ್ನೊಂದು ಕಡೆ ಅವರು ಶುಚಿ ಆಗಲು ಹೋದ ಕೂಡಲೇ ಇಂದ್ರ ಆ ಕಲಶವನ್ನು ತೆಗೆದುಕೊಂಡು ತನ್ನ ದೇವಲೋಕಕ್ಕೆ ಹೋಗುತ್ತಾನೆ. ಅಮೃತ ಪಾನದ ಆಸ್ಯಿಂದ ಅಲ್ಲಿಗೆ ಬಂದ ಸರ್ಪಗಳು ಅಲ್ಲಿ ಕಳಶ ಇಲ್ಲದ್ದನ್ನು ನೋಡಿ ಕಂಗಾಲಾಗುತ್ತವೆ. ಇಂದ್ರ ದೇವ ಆ ಕಲಶವನ್ನ ಮತ್ತೆ ಹೊತ್ತೊಯ್ದ ಸುದ್ಧಿ ಕೇಳಿ ನಿರಾಸರಾಗಿ ಕಳಶ ಇಟ್ಟಿದ್ದ ದರ್ಬೆಯನ್ನೇ ನಾಲಗೆಯಿಂದ ನೆಕ್ಕಿ ಅದಕ್ಕೆ ಅಂಟಿಕೊಂಡಿದ್ದ ಅಮೃತವನ್ನೇ ಸೇವಿಸೋಕೆ ಶುರು ಮಾಡಿದವು. ಹೀಗೆ ಆ ದರ್ಬೆಯನ್ನ ನೆಕ್ಕಿದ್ದರಿಂದ ನಾಲಿಗೆ ಸೀಳಿ ಎರಡು ಭಾಗ ಆಯಿತು. ಇದು ಹಾವುಗಳ ನಾಲಿಗೆ ಎರಡು ಆಗುವುದಕ್ಕೆ ನಮ್ಮ ಪುರಾಣಗಳಲ್ಲಿ ಇರುವ ಕಥೆ.
ಇನ್ನು ಗ್ರೀಕ್ ಮೈತೊಲಜಿಯಲ್ಲಿ ಕೊಡ ಇಂಥದ್ದೇ ಓಂದು ಕಥೆಯಿಂದೆ ಆದರೆ ಹಾವುಗಳ ನಾಲಿಗೆಯ ಬಗ್ಗೆ ನಮ್ಮ ವಿಜ್ಞಾನ ಹೇಳೋದು ಏನು? ಹಾವುಗಳಿಗೆ ಕಿವಿ ಕೇಳಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಅದು ತನ್ನ ಸುತ್ತ ನಡೆಯುವುದನ್ನ ಗ್ರಹಿಸೋದು ವಾಸನೆ ಹಾಗೂ ವೈಬ್ರೇಷನ್ ಮೂಲಕ. ಸಾಮಾನ್ಯವಾಗಿ ಹಾವುಗಳು ತಮ್ಮ ಭೇಟೆ ಹಾಗೂ ಅಪಾಯದ ಮುನ್ನಸುಚನೆಯನ್ನ ನಾಲಿಗೆಯ ಮೂಲಕವೇ ಗ್ರಹಿಸುತ್ತವೆ. ಎರಡು ನಾಲಿಗೆಗಳು ಸೂಕ್ಷ್ಮ ಸಂವೇಧಿ ಶಕ್ತಿಯನ್ನ ಹೊಂದಿದ್ದು ಯಾವ ಭಾಗದ ನಾಲಿಗೆಗೆ ವಾಸನೆ ಅಥವಾ ಸೂಚನೆ ಸಿಗತ್ತೋ ಆ ಭಾಗದಿಂದ ಅಪಾಯ ಅಥವಾ ಆಹಾರ ಇದೆ ಅನ್ನೋದನ್ನ ಹಾವುಗಳು ಗ್ರಹಿಸುತ್ತವೆ. ಎಳೇ ನಾಗರಗಳು ಅಂದರೆ ಸಣ್ಣ ಹಾವುಗಳು ಶೀತ ಕಾಲದಲ್ಲಿ ತಾವು ನಿದ್ರೆಗೆ ಜಾರಬೇಕಾದ ಬಿಲಗಳನ್ನ ಸಹ ಈ ನಾಲಿಗೆಯ ಸಂವೇದನೆಯ ಮೂಲಕವೇ. ವಯಸ್ಸಿನಲ್ಲಿ ಇರುವ ಹಾವುಗಳು ಬಿಲಗಳನ್ನ ಹುಡುಕೊದು ಅಷ್ಟೇ ಅಲ್ಲದೆ ಹೆಣ್ಣು ಸರ್ಪಗಳಿಂದ ಹೊರಡುವ ಸೂಚನೆಗಳನ್ನ ಗ್ರಹಿಸಲು ಕೂಡ ಈ ನಾಲಿಗೆಯನ್ನು ಬಳಸುತ್ತವೆ.
ಹಾವುಗಳ ಸಂಪರ್ಕ ಅಥವಾ ಸಂಯೋಗ ಹೆಣ್ಣು ಮತ್ತು ಗಂಡು ಎರಡರ ಒಪಿಳಿಗೆಯ ಮೇಲೆ ಆಗುತ್ತೆ ಈ ವಿಷಯದಲ್ಲಿ ಅವು ಮನುಷ್ಯರಿಗಿಂತ ಸಾವಿರ ಪಾಲು ಸಭ್ಯ ಎನಿಸಿಕೊಳ್ಳುತ್ತವೆ. ಹೆಣ್ಣು ಸರ್ಪದ ಸೂಚನೆ ಇಲ್ಲದೆ ಗಂಡು ಸರ್ಪ ಸಂಪರ್ಕಕ್ಕೆ ಹೊಗುವಂತಿಲ್ಲ. ಈ ಸೂಚನೆ ಸಿಗೋದು ಕೂಡ ನಾಲಿಗೆಯ ಹೊರ ಚಾಚುವ ಮೂಲಕವೇ. ಇದು ಹಾವುಗಳ ಸೂಕ್ಷ್ಮ ಸಂವೇಧಿ ಎರಡು ನಾಲಿಗೆಗಳ ರಹಸ್ಯ. ಇಂಥ ಎರಡು ನಾಲಿಗೆ ಕೇವಲ ಹಾವುಗಳಿಗೆ ಮಾತ್ರ ಅಲ್ಲದೆ ಉರಗ ಜಾತಿಗೆ ಸೇರಿದ ಕೆಲವು ರೀತಿಯ ಹಲ್ಲಿಗಳಲ್ಲಿ ಸಹ ಹೀಗೆ ಎರಡು ನಾಲಿಗೆ ಕಂಡುಬರುತ್ತದೆ ಎರಡು ನಾಲಿಗೆ ಎಂದು ಕರೆಯುವುದು ಸಹ ಸರಿ ಅಲ್ಲ ಸೀಳು ನಾಲಿಗೆ ಎನ್ನುತ್ತಾರೆ. ಮನುಷ್ಯರಲ್ಲಿ ಕೂಡ ಗಂಟಲಿನ ಆಳದಲ್ಲಿ ಕಿರು ನಾಲಿಗೆ ಎಂದು ಕರೆಸಿಕೊಳ್ಳುವ ಚಿಕ್ಕ ಭಾಗ ಎರಡಾಗಿ ಸೀಳಿಕೊಂಡು ಇರುವುದನ್ನು ಗಮನಿಸಬಹುದು. ಈ ಸೀಳು ನಾಲಿಗೆ ಇಲ್ಲದೆ ಇದ್ದರೆ ಹಾವುಗಳಿಗೆ ಸೂಕ್ಷ್ಮ ಗ್ರಹಿಕೆಗಳು ತಿಳಿಯುವುದೇ ಇಲ್ಲ ಹಾಗಾದಾಗ ಅವು ತಮ್ಮ ಚುರುಕು ತನವನ್ನ ಕಳೆದುಕೊಳ್ಳುತ್ತವೆ. ಹಾಗಾಗಿಯೇ ಪ್ರಕೃತಿ ಅವುಗಳಿಗೆ ಬದುಕೊದಕ್ಕೆ ಕೊಟ್ಟ ವರ. ಇದು ಹಾವಿನ ಸೀಳು ನಾಲಿಗೆಯ ಕುರಿತಾತ ಕಥೆ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅಷ್ಟೇ ಅಲ್ಲದೆ ಈ ಕೆಳಗಿನ ವಿಡಿಯೋ ನೋಡಿ.