ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ವೃದ್ಧಿಸಲು ನಾವುಗಳು ಪ್ರತಿದಿನ ಸೇವನೆ ಮಾಡುವಂತ ಆಹಾರಗಳು ಹೆಚ್ಚು ಪ್ರಾಮುಖ್ಯತೆಯನ್ನು ವಹಿಸುತ್ತವೆ. ಊಟ ಅಷ್ಟೇ ಅಲ್ಲದೆ ನಿದ್ರೆ ಕೂಡ ದೇಹದ ಸಮತೋಲನವನ್ನು ಕಾಪಾಡುತ್ತದೆ. ಊಟದ ಜೊತೆಗೆ ಸುಖವಾದ ನಿದ್ರೆ ಇದ್ರೆ ಅಂತಹ ವ್ಯಕ್ತಿ ಉತ್ತಮ ಆರೋಗ್ಯವಂತನಾಗಿರುತ್ತಾನೆ. ವಿಷ್ಯಕ್ಕೆ ಬರೋಣ ಎಷ್ಟೋ ಜನರು ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂಬುದಾಗಿ ಹೇಳುತ್ತಿರುತ್ತಾರೆ ಅಂತವರಿಗೆ ಈ ಆಹಾರ ಕ್ರಮಗಳು ಹೆಚ್ಚು ಉಪಯೋಗಕಾರಿ ಅನ್ನೋದನ್ನ ಹೇಳಬಹುದು.
ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಹಾಲು ಕುಡಿದು ಮಲಗುವುದು ಉತ್ತಮ ಇದರಿಂದ ಒಳ್ಳೆಯ ನಿದ್ರೆ ಬರುತ್ತದೆ ಹೌದು ಈ ಹಾಲಿನಲ್ಲಿರುವಂತ ಕ್ಯಾಲ್ಶಿಯಂ ದೇಹದ ಆರೋಗ್ಯಕ್ಕೆ ಹಾಗೂ ನಿದ್ರೆ ಬರುವಂತೆ ಪೂರಕವಾಗಿ ಕೆಲಸ ಮಾಡುತ್ತದೆ. ಇನ್ನು ರಾತ್ರಿಮಲಗುವ ಮುಂಚೆ ಊಟದ ನಂತರ ಒಂದು ಬಾಳೆಹಣ್ಣು ತಿನ್ನುವುದರಿಂದ ದೇಹದ ಆಯಾಸ ಕಡಿಮೆಯಾಗಿ ದೇಹಕ್ಕೆ ಇರುವಂತ ಒತ್ತಡ ನಿವಾರಣೆಯಾಗುವುದು. ಹಾಗಾಗಿ ಬಾಳೆಹಣ್ಣು ಸಹ ಉತ್ತಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಒಳ್ಳೆಯ ನಿದ್ರೆ ನೀಡುತ್ತದೆ.
ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುವಂತ ಗುಣಗಳನ್ನು ಹೊಂದಿರುವ ಈ ಸಬ್ಬಸಿಗೆ ಸೊಪ್ಪು ದೇಹವನ್ನು ಉತ್ತಮ ರೀತಿಯಲ್ಲಿ ನಿದ್ರೆ ಮಾಡಲು ಸಹಕರಿಸುತ್ತದೆ ಹಾಗಾಗಿ ಅಡುಗೆಯಲ್ಲಿ ಸಬ್ಬಸಿಗೆ ಸೊಪ್ಪನ್ನು ಬಳಸಿ ಸೇವನೆ ಮಾಡುವುದು ಅತಿ ಉತ್ತಮ. ಇನ್ನು ಕೆಲವರು ಈ ರೀತಿಯ ಅಭ್ಯಾಸವನ್ನು ಕೂಡ ಮಾಡಿಕೊಳ್ಳಬಹುದು ಒಂದು ಬೆಳ್ಳುಳ್ಳಿ ತುಂಡನ್ನು ದಿಂಬಿನ ಕೆಳಗೆ ಇಟ್ಟು ಮಲಗಿ ಒಳ್ಳೆಯ ನಿದ್ರೆ ನಿಮ್ಮದಾಗುತ್ತದೆ. ಬೆಳ್ಳುಳ್ಳಿಯಲ್ಲಿರುವಂತ ಕೆಲ ಗುಣಗಳು ನಿದ್ರೆ ಬರುವಂತೆ ಮಾಡುತ್ತದೆ.