ಹಳ್ಳಿ ಕಡೆ ಹಲವು ಬಗೆಯ ಸಸ್ಯಗಳನ್ನು ಕಾಣಬಹುದು, ಆದ್ರೆ ಅವುಗಳಲ್ಲಿ ಕೆಲವೊಂದು ಸಸ್ಯಗಳು ನಮಗೆ ಗೊತ್ತಿಲ್ಲದ ಹಲವು ಔಷದಿ ಗುಣಗಳನ್ನು ಹೊಂದಿರುತ್ತವೆ. ಹಿಂದಿನ ಕಾಲದಲ್ಲಿ ಆಸ್ಪತ್ರೆಗಳು ಇಲ್ಲದೆ ಇದ್ದಾಗ ಹಲವು ರೋಗ ಕಾಯಿಲೆಗಳನ್ನು ಮನೆ ಮದ್ದು ಹಾಗು ಆಯುರ್ವೇದದ ಮೂಲಕ ಗುಣಪಡಿಸಲಾಗುತ್ತಿತ್ತು. ಅದೇ ನಿಟ್ಟಿನಲ್ಲಿ ಅಂದಿನ ಋಷಿ ಮುನಿಗಳು ಕೂಡ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಿ ವ್ಯಾದಿಗಳನ್ನು ಗುಣ ಪಡಿಸುತ್ತಿದ್ದರು.

ವಿಷ್ಯಕ್ಕೆ ಬರೋಣ ಬಹುತೇಕ ಜನರಿಗೆ ಈ ಸಸ್ಯ ಗೊತ್ತಿರುತ್ತದೆ ಆದ್ರೆ ಇದನ್ನು ಹೆಚ್ಚಾಗಿ ಬಳಕೆ ಮಾಡಿಕೊಂಡಿರೋದಿಲ್ಲ ಈ ಸಸ್ಯವನ್ನು ಹಳ್ಳಿಯ ಕಡೆ ಹೊಲ ಗದ್ದೆಗಳ ಬಳಿಯಲ್ಲಿ ಹೆಚ್ಚಾಗಿ ಕಾಣಬಹುದು. ಇದು ತೇವಾಂಶ ಇರುವಂತ ಜಾಗದಲ್ಲಿ ಹೆಚ್ಚಾಗಿ ಬೆಳೆವಂತ ಸಸ್ಯವಾಗಿದೆ.

ಇನ್ನು ಈ ಸಸ್ಯವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ ಕೆಂಪು ನೆನೆ ಅಕ್ಕಿಯ ಸೊಪ್ಪಿನ ಗಿಡ, ಬಿಳಿ ಚಿತ್ರಫಲ, ಹಚ್ಚೆ ಗಿಡ, ದೊಡ್ಡ ಹಾಲುಕುಡಿ, ಮರಿಜೀವನಿಗೆ ಮುಂತಾದ ಹೆಸರುಗಳಿಂದ ಈ ಸಸ್ಯವನ್ನು ಕರೆಯಾಗುತ್ತದೆ. ಇದು ಹಳ್ಳಿಯ ಜನರಿಗೆ ಗೊತ್ತಿರುವ ಸಸ್ಯ.

ಈ ಸಸ್ಯ ಆಯುರ್ವೇದ ಔಷದಿ ಗುಣವನ್ನು ಹೊಂದಿದೆ.ಇದು ನರುಳ್ಳೆ ಸಮಸ್ಯೆಗೆ ಹೇಗೆ ಸಹಕಾರಿ ಅನ್ನೋದನ್ನ ನೋಡುವುದಾದರೆ ಈ ಗಿಡವನ್ನು ಮುರಿದರೆ ಇದರಲ್ಲಿ ಹಾಲು ಬರುತ್ತದೆ ಇದರ ಹಾಲಿನ ರಸವನ್ನು ನರುಳ್ಳೆ ಇರುವ ಜಾಗಕ್ಕೆ ಹಚ್ಚಿ ಒಣಗಲು ಬಿಟ್ರೆ ಮೂರುನಾಲ್ಕು ದಿನದಲ್ಲಿ ನರುಳ್ಳೆ ಇಲ್ಲದಂತೆ ಆಗುತ್ತದೆ. ಇನ್ನು ನರುಳ್ಳೆ ನಿವಾರಣೆಗೆ ಹಲವು ಮನೆಮದ್ದುಗಳಿವೆ ಮುಂದಿನ ಲೇಖನದಲ್ಲಿ ತಿಳಿಸಲಾಗುವುದು. ನಮ್ಮ ಸುತ್ತಮುತ್ತಲಿನಲ್ಲಿ ಹಲವು ಗಿಡ ಮರಗಳಿರುತ್ತವೆ ಅವುಗಲ್ಲಿ ಇರುವಂತ ಔಷಧಿಯ ಗುಣಗಳನ್ನು ತಿಳಿದುಕೊಳ್ಳುವುದು ಉತ್ತಮ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!