ನಾವು ಒಂದಲ್ಲ ಒಂದು ಚರ್ಮದ ಅಲರ್ಜಿ ಇಂದ ಬಳಲುತ್ತಾ ಇರುತ್ತೇವೆ. ವಾಹನಗಳ ಹೋಗೆಯಿಂದಲೆ ತುಂಬಿ ಹೋಗಿರುವ ಬೆಂಗಳೂರಿನಂತಹ ಮಹಾನಗರಗಳಲ್ಲಿ ಚಿತ್ರ ವಿಚಿತ್ರ ಚರ್ಮ ರೋಗಗಳಿಗೆ ತುತ್ತಾಗುವುದು ಹೆಚ್ಚು. ಅದರಲ್ಲೂ ಗಜಕರ್ಣ ಅಂದರೆ ಹುಳು ಕಡ್ಡಿ ಅಂತಹ ಚರ್ಮ ರೋಗ ಆಗಿಬಿಟ್ಟರೆ ಅಂತೂ ಅಂತವರ ಪಾಡು ದೇವರಿಗೇ ಪ್ರೀತಿ. ಹಾಗೇ ನೋಡಿದ್ರೆ ಇದೇನು ಮಹಾನ್ ಕಾಯಿಲೆ ಏನೂ ಅಲ್ಲ. ಆದರೆ ಇದು ಸೃಷ್ಟಿಸುವ ತುರಿಕೆ ಮಾತ್ರ ಸಹಿಸಲು ಸಾಧ್ಯವಿಲ್ಲ. ಚರ್ಮದ ಮೇಲಿನ ಉರಿಯುಕ್ತ ಕೆಂಪು ಗುಳ್ಳೆಗಳು ನಮಗೆ ನರಕ ದರ್ಶನ ಮಾಡಿಸುತ್ತವೆ. ಈ ತುರಿಕೆಗೆ ಬೇಸತ್ತು ಇಂಗ್ಲಿಷ್ ಔಷಧೀಯ ಮೊರೆ ಹೋದರೆ ಮುಗಿದೇ ಹೋಯಿತು. ಡಾಕ್ಟರ್ ಗಳು ಕೊಡುವ ತಾರಾ ತುರಿ ಮೆಡಿಸಿನ್ ಗಳು ಮುಲಾಮು ಗಳು ಅಡ್ಡ ಪರಿಣಾಮಗಳನ್ನು ಬೀರುವುದೆ ಜಾಸ್ತಿ. ಗಜಕರ್ಣ ಇಂಗ್ಲಿಷ್ ಔಷಧೀಗೆ ಸಲೀಸಾಗಿ ಬಗ್ಗುವ ಆಸಾಮಿಯೆ ಅಲ್ಲ. ಆದರೆ ನಮ್ಮ ಮನೆಗಳ ಬಳಿ ಅಥವಾ ರಸ್ತೆಯ ಬದಿಯಲ್ಲಿ ಎಲ್ಲೋ ಈ ಗಜಕರ್ಣಕ್ಕೆ ಅದ್ಭುತವಾದ ಮದ್ದು ಇದೆ ಅನ್ನೋದು ಯಾರಿಗಾದರೂ ತಿಳಿದಿದೆಯಾ? ಖಂಡಿತಾ ನಾವು ಈ ಬಗ್ಗೆ ಯೋಚನೆ ಕೂಡ ಮಾಡಿರಲ್ಲ. ಹಿತ್ತಲ ಗಿಡ ಮದ್ದಲ್ಲ ಅನ್ನೋದು ಬಹುತೇಕರ ಭಾವನೆ. ಆದರೆ ಗಜಕರ್ಣಕ್ಕೆ ಈ ಹಿತ್ತಲಗಿಡವೆ ಮದ್ದು ಅನ್ನೋದನ್ನ ಎಲ್ಲರೂ ನಂಬಲೇಬೇಕಾದ ವಿಷಯ. ಆದರೆ ಈ ಹಿತ್ತಲ ಗಿಡದ ಮದ್ದನ್ನು ಬಳಸೋದು ಬಿಡೋದು ನಿಮಗೆ ಬಿಟ್ಟ ವಿಚಾರ.
ಗಜಕರ್ಣಕ್ಕೆ ರಾಮಬಾಣ ಆಗಿರುವ ಈ ಹಿತ್ತಲ ಗಿಡ ಯಾವುದು ಅದ್ರಿಂದ ಏನು ಪ್ರಯೋಜನ ಹೇಗೆ ಉಪಯೋಗ ಪಡೆಯಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಇದು ಹೃದಯದ ಆಕಾರದ ಎಲೆಗಳನ್ನು ಹೊಂದಿದ್ದು, ಮರದ ತುಂಬಾ ನಳನಳಿಸುವ ಕಪ್ಪು ಮಿಶ್ರಿತ ಹಳದಿ ಹೂವುಗಳು, ಬುಗುರಿ ಆಕಾರದಲ್ಲಿ ಗೊಂಚಲು ಗೊಂಚಲಾಗಿ ಇರುವ ಒಣ ಹಾಗೂ ಹಸಿರು ಕಾಯಿಗಳು. ಸಾಮಾನ್ಯವಾಗಿ ನಾವೆಲ್ಲರೂ ಒಮ್ಮೆ ಆದರೂ ಈ ಗಿಡವನ್ನು ನೋಡಿರುತ್ತೇವೆ. ಸುಮಾರು ೮ ರಿಂದ ೧೦ ಮೀಟರ್ ಎತ್ತರ ಬೆಳೆಯುವ ಈ ಮರದ ಹೆಸರು “ಹೂವರಸಿ”. ಇದನ್ನ ಬುಗುರಿ ಮರ ಎಂದೂ ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಅಂಬ್ರೆಲಾ ಟ್ರೀ ಅಂತ ಕರೀತಾರೆ. ಆಯುರ್ವೇದದ ಸಸ್ಯಗಳ ಪೈಕಿ ಇದನ್ನ ಕಲ್ಪ ವೃಕ್ಷ ಅಂತಾನೆ ಹೇಳಬಹುದು. ಇದರ ತೊಗಟೆ ಇಂದ ಹಿಡಿದು, ಹೂವು ಎಲೆ ಕಾಯಿ ಬೀಜದವರೆಗೆ ಇದರ ಎಲ್ಲ ಭಾಗಗಳೂ ಉಪಯುಕ್ತ.
ಹೂವರಸಿ ಕಾಯಿ ಎಲೆ ಮತ್ತು ಬೇರಿನಿಂದ ತಯಾರಿಸಿದ ಚೂರ್ಣವಂತು ಗಜಕರ್ಣ ಮತ್ತು ಹುಳುಕಡ್ಡಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಇದರ ಚೂರ್ಣ ಹೇಗೆ ತಯಾರಿಯೋದು ಅನ್ನೋ ಚಿಂತೆ ಇಲ್ಲ. ಹೂವರಸಿ ಗಿಡದ ಹಸಿರು ಕಾಯಿಗಳನ್ನು ಕೊಯ್ದು ಅದನ್ನ ಸ್ವಲ್ಪ ಜಾಜ್ಜಿದರೆ ಅದರಿಂದ ಹಳದಿ ಬಣ್ಣದ ಹಾಲು ಒಸರತ್ತೆ ಅದನ್ನ ಗಜಕರ್ಣ ಮತ್ತು ಹುಳುಕಡ್ಡಿ ಆದ ಜಾಗಕ್ಕೆ ಹಚ್ಚಿದರೆ ಕಡಿಮೆ ಆಗತ್ತೆ. ಆಯುರ್ವೇದದ ಪಂಡಿತರಿಗೆ ಮಾತ್ರ ಅಲ್ಲ ರೈತಾಪಿ ವರ್ಗಕ್ಕೂ ತುಂಬಾ ಹತ್ತಿರದ ಮರ ಇದು. ತುಂಬಾ ಗಟ್ಟಿ ಮುಟ್ಟಾದ ಇದರ ಕಾಂಡದಿಂದ ದೋಣಿಗಳನ್ನು ಸಹ ತಯಾರಿಸುತ್ತಾರೆ. ಬಂದೂಕಿನ ಹಿಡಿಕೆ, ಎತ್ತಿನ ಬಂಡಿಯ ಚಕ್ರ ತಯಾರಿಸಲು ಸಹ ಈ ಹೂವರಸಿ ಮರದ ಕಾಂಡವನ್ನು ಬಳಸಲಾಗುತ್ತದೆ. ಈ ಮರದ ತೊಗಟೆಯಿಂದ ತಯಾರಿಸಿದ ಹಗ್ಗಗಳಂತೂ ತುಂಬಾ ಗಟ್ಟಿಯಾಗಿ ಇರತ್ತೆ. ಈ ಬೀಜಗಳನ್ನು ಎಣ್ಣೆ ಮಾಡೋಕೆ ಬಳಸಿದ್ರೆ, ಹುವುಗಳನ್ನ ಬಣ್ಣ ಮಾಡೋಕೆ ಬಳಸಲಾಗುತ್ತದೆ. ನಮ್ಮ ಸುತ್ತ ಮುತ್ತಲು ಇರುವ ಈ ಮರ ಅದೆಷ್ಟೋ ಔಷಧಗಳ ಆಗರ ಎನ್ನಬಹುದು. ಇನ್ಮೇಲೆ ಆದ್ರೂ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧಿ ತೆಗೆದುಕೊಂಡು ಅದ್ದ ಪರಿಣಾಮ ಎದುರಿಸುವುದಕ್ಕಿಂತ ಇಂತಹ ಹಿತ್ತಲ ಗಿಡಗಳ ಮದ್ದುಗಳನ್ನು ಸದ್ಭಳಕೆ ಮಾಡಿಕೊಳ್ಳೋಣ.