ಸೀತೆಯು ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಶ್ರೀ ರಾಮನ ಹೆಂಡತಿ ಮತ್ತು ಮಿಥಿಲೆಯ ರಾಜನಾದ ಜನಕನ ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ ರಾವಣನಿಂದ ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧನದಲ್ಲಿರಿಸಿರುತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ. ಆದ್ದರಿಂದ ನಾವು ಇಲ್ಲಿ ಸೀತೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಾಮಾಯಣದ ಮೂಲವನ್ನ ಅರಸುತ್ತ ಹೋದರೆ ಸೀತೆಯು ರಾವಣನ ಮಗಳೆಂದು ತಿಳಿಸುತ್ತದೆ. ಜನಕ ರಾಜನ ಮಗಳಾದುದರಿಂದ ಸೀತೆಯನ್ನು ಜಾನಕಿ ಎಂದೂ ಕರೆಯುತ್ತಾರೆ. ಸೀತೆಯು ಪತಿವ್ರತೆ. ಸೀತಾ ತನ್ನ ಸಮರ್ಪಣೆ, ಸ್ವಯಂ ತ್ಯಾಗ, ಧೈರ್ಯ ಮತ್ತು ಶುದ್ಧತೆಗೆ ಹೆಸರುವಾಸಿಯಾಗಿದ್ದಾಳೆ. ಅವಳು ಅಯೋಧ್ಯೆಯ ರಾಜಕುಮಾರ ರಾಮನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ ಪತಿ ಮತ್ತು ಭಾವ ಲಕ್ಷ್ಮಣ ಜೊತೆ ವನವಾಸಕ್ಕೆ ಹೋಗುತ್ತಾಳೆ. ಸೀತಾ ಜನ್ಮಸ್ಥಳ ವಿವಾದಗಳಿವೆ. ಮಿತಿಲದ ಜನಕಪುರ ಮತ್ತು ಸೀತಾಮರ್ಹಿ ಸೀತೆಯ ಜನ್ಮಸ್ಥಳಗಳೆಂದು ವಿವರಿಸಲಾಗಿದೆ.

ರಾಮಾಯಣದಲ್ಲಿ ಮುಖ್ಯ ಪಾತ್ರವೇ ಸೀತಾದೇವಿಯ ದ್ದಾಗಿದೆ. ಸೀತಾದೇವಿ ಇಲ್ಲದೆ ರಾವಣನ ಅಂತ್ಯವೇ ಸಾಧ್ಯವಿಲ್ಲ. ಗಂಡಹೆಂಡತಿಯೆಂದರೆ ಹೀಗಿರಬೇಕು ಒಬ್ಬರನ್ನೊಬ್ಬರು ಹೇಗೆ ಪ್ರೀತಿ ವಿಶ್ವಾಸದಿಂದ ಇರಬೇಕು ಎಂಬುದಕ್ಕೆ ನಾವು ತೆಗೆದುಕೊಳ್ಳುವ ಉದಾಹರಣೆಯೆಂದರೆ ಸೀತಾರಾಮ ರದ್ದಾಗಿದೆ. ಅನ್ಯೋನ್ಯವಾಗಿರುವ ದಂಪತಿಗಳನ್ನು ಕಂಡಾಗ ಸಹಜವಾಗಿ ಪ್ರತಿಯೊಬ್ಬರು ಹೇಳುವುದು ಸೀತಾರಾಮರ ಹೋಲಿಕೆ ಆಗಿದೆ. ಮದುವೆಯ ಚರ್ಚೆ ಯಲ್ಲಿಯೂ ಸಹ ಸೀತಾರಾಮರ ಕಲ್ಯಾಣದಂತಿರಬೇಕು ಎಂದು ಹೇಳುತ್ತಾರೆ. ಅವರ ಮದುವೆಯ ಅಷ್ಟೊಂದು ಸುಂದರವಾಗಿ ಆಗಿತ್ತು.

ರಾಮಾಯಣವನ್ನು ಮೊದಲು ಸಂಸ್ಕೃತದಲ್ಲಿ ಬರೆದವರು ವಾಲ್ಮೀಕಿ ಮಹರ್ಷಿಗಳು. ಅದರನಂತರ ತುಳಸೀದಾಸರು ತಮ್ಮ ಸ್ವಂತ ಶೈಲಿಯಲ್ಲಿ ರಾಮಾಯಣದ ಕೆಲವೊಂದು ಭಾಗಗಳನ್ನು ಆಕರ್ಷಣೀಯವಾಗಿ ಬದಲಾಯಿಸಿ ಬರೆದಿದ್ದಾರೆ. ವಾಲ್ಮೀಕಿ ರಾಮಾಯಣದ ಪ್ರಕಾರ ಸೀತಾದೇವಿಯು ಜನಕ ಮಹಾರಾಜನ ಸಾಕುಮಗಳು ಆಗಿರುತ್ತಾಳೆ. ಸೀತಾದೇವಿಯನ್ನು ಸಹನಾಮಯಿ ಎಂದು ವಿವರಿಸುತ್ತಾರೆ. ಜೈನಮತಕ್ಕೆ ಸೇರಿರುವಂತಹ ಸಂಘದಾಸರವರು ಬರೆದಿರುವ ಅದ್ಭುತ ರಾಮಾಯಣದಲ್ಲಿ ರಾವಣ ಹಾಗೂ ಮಂಡೋದರಿಗೆ ಜನಿಸಿದ ಮೊದಲನೆಯ ಸಂತಾನ ಸೀತಾ ಮಾತೆ ಎಂದು ಬರೆದಿದ್ದಾರೆ.

ಆದರೆ ಸೀತಾದೇವಿ ಜನಿಸಿದ ಬಳಿಕ ಮೊದಲನೆಯ ಸಂತಾನದಿಂದ ಲಂಕಾದೀಶನಿಗೆ ಮರಣ ನಿಶ್ಚಿತ ಎಂದು ಜ್ಯೋತಿಷ್ಯಗಳು ಎಚ್ಚರಿಸಿದರಂತೆ. ಇದನ್ನು ಕೇಳಿದ ರಾವಣ ಸೀತಾದೇವಿಯನ್ನು ಲಂಕೆಯಿಂದ ದೂರ ತೆಗೆದುಕೊಂಡುಹೋಗಿ ಮಣ್ಣಿನಲ್ಲಿ ಮುಚ್ಚಿಹಾಕುವಂತೆ ಅವನ ಸಹಚರರಿಗೆ ಆದೇಶವನ್ನು ನೀಡುತ್ತಾನೆ. ಲಂಕಾಧೀಶನ ಆಜ್ಞೆಯಂತೆ ಅವನ ಸಹಚರರು ಆ ಕೆಲಸವನ್ನು ಮಾಡುತ್ತಾರೆ. ಅದರ ನಂತರ ಭೂಮಿಯೊಳಗೆ ದೊರೆತ ಸೀತಾದೇವಿಯನ್ನು ಜನಕ ಮಹಾರಾಜರು ತನ್ನ ಮಗಳೆಂದು ಸಾಕುತ್ತಾರೆ. ಹೀಗೆ ಸೀತಾದೇವಿಯ ಕಥೆಯನ್ನು ವಿವರಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!