ಈ ರಾಶಿಯವರಿಗೆ ಇಲ್ಲಿಯವರೆಗೆ ಒಂದು ಲೆಕ್ಕ, ಇನ್ನು ಮುಂದೆ ಅದೃಷ್ಟದ ಲೆಕ್ಕ

0 3

ನಾವಿಂದು ಆಗಸ್ಟ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಯಾವ ರೀತಿಯ ಫಲಾ ಫಲಗಳು ಇವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಸಿಂಹ ರಾಶಿಯ ಅಧಿಪತಿ ಆಗಿರುವಂತಹ ಸೂರ್ಯ ಆಗಸ್ಟ್ ತಿಂಗಳಲ್ಲಿ ನಿಮ್ಮ ರಾಶಿಗೆ ಬರುತ್ತಿದ್ದಾರೆ. ರಾಶ್ಯಾಧಿಪತಿ ರಾಶಿಗೆ ಬರುವಂತಹದ್ದು ತುಂಬಾ ಒಳ್ಳೆಯದು ಯಾಕೆ ಅನ್ನುವುದಾದರೆ ರಾಶ್ಯಾಧಿಪತಿ ಯಾವಾಗ ರಾಶಿಗೆ ಬರುತ್ತಾರೋ ಆಗ ಆರಾಶಿ ತುಂಬಾ ಬಲ ಆಗುತ್ತದೆ. ರಾಶಿ ಅಂದರೆ ನಿಮ್ಮ ಮನಸ್ಸ ಮತ್ತು ಶರೀರ ಬಲ ಆಗುತ್ತದೆ ಹಾಗೂ ಯಶಸ್ಸು ಗಳಿಸಲು ತುಂಬಾ ಉತ್ತಮವಾಗಿರುತ್ತದೆ.

ಯಾಕೆಂದರೆ ಗ್ರಹಗಳಿಗೆಲ್ಲಾ ಅಧಿಪತಿ ಆಗಿರುವಂತಹ ಸೂರ್ಯ ಬಲವಾಗಿದ್ದಾಗ ಎಲ್ಲ ಗ್ರಹಗಳ ಅನುಕೂಲತೆ ಪ್ರಾಪ್ತಿ ಯಾಗುತ್ತದೆ ಮತ್ತು ಅನಾನುಕೂಲಗಳು ಅನುಕೂಲವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯ ತನ್ನ ಜೊತೆಗೆ ಬುಧನನ್ನು ಇಟ್ಟುಕೊಂಡಿರುತ್ತಾನೆ ಕುಜನನ್ನು ಇಟ್ಟುಕೊಂಡಿದ್ದಾನೆ. ಕುಜನಿಗು ಮಿತ್ರನೆ ಬುಧನಿಗು ಮಿತ್ರನೆ ಹಾಗಾಗಿ ನಿಮ್ಮ ರಾಶಿಯಲ್ಲೆ ಸೂರ್ಯ ಬುಧ ಕುಜ ಗ್ರಹಗಳು ಸೇರಿವೆ ಹಾಗಾಗಿ ಏನೆಲ್ಲಾ ಫಲಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಆರೋಗ್ಯದಲ್ಲಿ ವೃದ್ಧಿಯನ್ನು ಕಾಣಬಹುದಾಗಿದೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದುರವಾಗಬಹುದು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಬಹುದು ಮುಖ್ಯವಾಗಿ ಚರ್ಮ ರೋಧನೆ ಚರ್ಮ ರೋಗಗಳು ನಿಮ್ಮಿಂದ ದೂರವಾಗುತ್ತವೆ ಮತ್ತು ಭಕ್ತಿ ಶ್ರದ್ಧೆ ದೇವಸ್ಥಾನ ಗಳಿಗೆ ಹೋಗುವಂತಹದ್ದು ದೇವರಕಡೆ ನಿಮ್ಮ ಒಲವು ಹೆಚ್ಚಾಗುತ್ತದೆ ಪೂಜೆ ಮಾಡುತ್ತಿರಿ.

ನಿಮ್ಮಗುಣ ಸೌಮ್ಯವಾಗುತ್ತದೆ ಕೋಪ ಕಡಿಮೆಯಾಗುತ್ತದೆ. ನಿಮ್ಮ ಹಿರಿಯರನ್ನು ನೆನೆಸಿಕೊಳ್ಳುತ್ತಿರಿ ಸಿಂಹ ರಾಶಿಗೆ ಸೂರ್ಯ ಬಂದಿರುವುದರಿಂದ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ.ನಿರ್ಧೋಷತ್ವ ಅಂದರೆ ನಿಮ್ಮ ತಪ್ಪಿಲ್ಲದೆ ಯಾವುದಕ್ಕಾದರೂ ತಲೆ ಬಗ್ಗಿಸಿದ್ದರೆ, ಇಲ್ಲ ನೀವು ತಪ್ಪು ಮಾಡಿಲ್ಲ ಎಂಬ ನಿರ್ಧೋಷತ್ವ ಬಂದು ಮಾನ ಮರ್ಯಾದೆ ಹೋಗಿರುವ ಜಾಗದಲ್ಲೇ ಅದನ್ನು ಸಂಪಾದನೆ ಮಾಡಿಕೊಳ್ಳುತ್ತೀರಿ ಜೊತೆಗೆ ದೇಹದ ಸೌಖ್ಯ ತುಂಬಾ ಚೆನ್ನಾಗಿರುತ್ತದೆ.

ನಿಮ್ಮ ಆರೋಗ್ಯ ಆಯುಷ್ಯ ಭಾಗ್ಯಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಶರೀರದ ಬಣ್ಣದಲ್ಲಿ ಕೆಲವೊಂದು ವ್ಯತ್ಯಾಸವಾಗುತ್ತದೆ ಇವೆಲ್ಲ ಸೂರ್ಯ ಬುಧ ಮುಖ್ಯವಾಗಿ ಕುಜ ನಿಮ್ಮರಾಶಿಯಲ್ಲಿರುವ ಕಾರಣದಿಂದ ಜೊತೆಗೆ ನಿಮ್ಮ ಆಸ್ತಿ ವಿಚಾರದಲ್ಲಿ ಯಶಸ್ಸು ಸಿಗುತ್ತದೆ ಸರ್ಕಾರಿ ನೌಕರರಿಗೆ ಮತ್ತು ರಾಜಕೀಯದವರಿಗೆ ಒಳ್ಳೆಯ ಅಧಿಕಾರವನ್ನು ಕೊಡುತ್ತಾನೆ. ಕುಜ ನಿಮ್ಮರಾಶಿಯಲ್ಲಿ ಇರುವುದರಿಂದಾಗಿ ಪೋಲಿಸ್ ಭದ್ರತಾ ಸಿಬ್ಬಂದಿ ಸೇನೆಯವರಿಗೆ ತುಂಬಾ ಯಶಸ್ಸು ಸಿಗುತ್ತದೆ ಸರ್ವ ಸೈನ್ಯಾಧ್ಯಕ್ಷರಿಗೆ ಬಲವಿರುತ್ತದೆ.

ದೇಶದ ರಾಜತಾಂತ್ರಿಕತೆ ದೇಶದ ಆರ್ಥಿಕತೆ ಸ್ವಲ್ಪ ಸ್ಥಿರವಾಗಿ ಬಲವಾಗಿ ನಿಲ್ಲುತ್ತದೆ ಹಾಗಾಗಿ ಸಿಂಹ ರಾಶಿಯವರಿಗೆ ಬಹಳಷ್ಟು ಅನುಕೂಲವಾಗುತ್ತದೆ ಜೊತೆಗೆ ವ್ಯಾಪಾರ ವ್ಯವಹಾರದಲ್ಲಿ ಅತ್ಯುನ್ನತ ಲಾಭ ವಾಗುತ್ತದೆ ಏಕೆಂದರೆ ಬುಧ ಆದಿತ್ಯ ಒಂದೇ ಕಡೆ ಇರುವುದರಿಂದ ಬುದಾದಿತ್ಯ ಯೋಗ ಸಿಂಹ ರಾಶಿಯವರಿಗೆ ಸಿಗುತ್ತದೆ. ತುಂಬಾ ಶುಭಫಲಗಳಿವೆ ಅದನ್ನು ನೀವು ಅನುಭವಿಸಬೇಕು. ನಿಮ್ಮ ನಿಮ್ಮ ವಯಸ್ಸಿನಲ್ಲಿ ನೀವು ಮಾಡುವ ವಿಚಾರಗಳಲ್ಲಿ ಯಶಸ್ಸು ಸಿಗುತ್ತದೆ ವಿದ್ಯಾಭ್ಯಾಸ ದಿಂದ ವಿದೇಶಿ ಪ್ರಯಾಣದವರೆಗು ಅನುಕೂಲಗಳು ಪ್ರಾಪ್ತಿ ಯಾಗುತ್ತದೆ.

ಇಲ್ಲಿ ಸಿಂಹರಾಶಿ ಎರಡನೇ ಮನೆಗೆ ಶುಕ್ರ ಬರುತ್ತಾನೆ ಇಲ್ಲಿ ಸ್ವಲ್ಪ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬೇರೆಯವರಿಂದ ನಿಮ್ಮ ಮೇಲೆ ದಬ್ಬಾಳಿಕೆ ಉಂಟಾಗುತ್ತದೆ ಅದರ ಮೇಲೆ ಗಮನ ಕೊಡಬೇಕು ನಿಮ್ಮನ್ನು ತಿರಸ್ಕರಿಸುವವರು ಹೆಚ್ಚಾಗುತ್ತಾರೆ ಸಹೋದರರಿಂದ ಸಣ್ಣ ಪುಟ್ಟ ಕಿರಿಕಿರಿಯಾಗುತ್ತದೆ ಪ್ರಯಾಣದಲ್ಲಿ ಸಣ್ಣ ಪುಟ್ಟ ತೊಂದರೆಗಳು ಬರುತ್ತವೆ ತಂದೆಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದು.

ಇದು ಎರಡನೇ ಮನೆಯಲ್ಲಿ ಶುಕ್ರ ಇರುವುದರಿಂದ ಆಗೂವಂತಹದ್ದು ಇದಲ್ಲದೆ ಇನ್ನು ಒಳ್ಳೆಯ ಫಲಗಳು ನಿಮಗಿದೆ ಅವುಗಳು ಹಣ ಸಂಪಾದನೆಯಲ್ಲಿ ಉತ್ತಮವಾದ ಫಲ ಮನೆಯಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿಯ ವಾತಾವರಣ ಸೋದರಮಾವನ ಜೊತೆ ಮಾತಿನಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಬಹಳ ಒಳ್ಳೆಯದು ಮನೋರೋಗ ದೂರವಾಗುತ್ತದೆ ಕೆಲಸ ಕಾರ್ಯ ಗಳಲ್ಲಿ ಜಯ ಪ್ರಾಪ್ತಿ ಯಾಗುತ್ತದೆ ಹಿರಿಯರ ಆಶಿರ್ವಾಧ ಸಿಗುತ್ತದೆ ದುಂದು ವೆಚ್ಚ ಮಾಡಬೇಡಿ ಹಣ ಉಳಿತಾಯ ಮಾಡಿದರೆ ನಿಮಗೆ ತುಂಬಾ ಒಳ್ಳೆಯದು.

ವಾಹನ ಚಾಲನೆಯಲ್ಲಿ ಎಚ್ಚರವಾಗಿರಬೇಕು ಇನ್ನು ಸಿಂಹ ರಾಶಿಯಲ್ಲಿ ವೈದ್ಯ ವೃತ್ತಿಯಲ್ಲಿರುವವರಿಗೆ ಮತ್ತು ಪ್ರಗತಿಪರ ಚಿಂತಕರಿಗೆ ತುಂಬಾ ಒಳ್ಳೆಯದಾಗುತ್ತದೆ. ಪುಣ್ಯ ಕ್ಷೇತ್ರಗಳ ದರ್ಶನವಾಗಿ ಆಸ್ತಿ ಕರಿಧಿಸುವಂತಹಯೋಗ ಸಿಂಹ ರಾಶಿಯವರಿಗೆ. ಸಮಾಜದಲ್ಲಿ ಉತ್ತಮವಾದ ಸ್ಥಾನ ಮಾನ ಪ್ರಾಪ್ತಿಯಾಗುತ್ತದೆ

ಇನ್ನಷ್ಟು ಅಭಿವೃದ್ಧಿ ಬೇಕು ಎಂಬುದಾದರೆ ಸುಭ್ರಮಣ್ಯ ದೇವಸ್ಥಾನದಲ್ಲಿ ಭಸ್ಮಾರ್ಚನೆ ಕ್ಷೀರಾಭಿಷೇಕ ಮಾಡಿಸಿ ತುಂಬಾ ಒಳ್ಳೆಯದಾಗುತ್ತದೆ ಇಲ್ಲವಾದಲ್ಲಿ ಅಮ್ಮನವರ ದರ್ಶನ ಮಾಡುವಂತಹದ್ದು ಅಥವಾ ಯಾವುದಾದರೂ ಅಮ್ಮನವರ ಶ್ಲೋಕವನ್ನು ಪಾರಾಯಣ ಮಾಡುವಂಥದ್ದು ಇದನ್ನು ಮಾಡುವುದರಿಂದ ಇನ್ನಷ್ಟು ಉತ್ತಮವಾದ ಫಲಾಗಳು ನಿಮಗೆ ಪ್ರಾಪ್ತಿಯಾಗುತ್ತದೆ.

ಇಷ್ಟೇಲ್ಲಾ ಶುಭಫಲವನ್ನು ಪಡೆಯುವುದರಿಂದ ನಿಮಗೆ ಖಂಡಿತವಾಗಿ ಒಳ್ಳೆಯದಾಗುತ್ತದೆ ದುಂದುವೆಚ್ಚ ಕಡಿಮೆಮಾಡಿ ಆರೋಗ್ಯದ ಕಡೆ ಗಮನ ಹರಿಸಿ ತೃಪ್ತಿಯಾಗಿರುತ್ತಿರಿ ಮತ್ತು ಸಂತೋಷವಾಗಿರಿ.

Leave A Reply

Your email address will not be published.