ಸಿಂಹ ರಾಶಿಯಲ್ಲಿ ಹುಟ್ಟಿದ ಸ್ತ್ರೀಯರ ಅದೃಷ್ಟ ಹಾಗೂ ಗುಣ ಸ್ವಭಾವ

0 5

ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ನಡವಳಿಕೆ, ಭವಿಷ್ಯ, ವ್ಯಕ್ತಿತ್ವ ಹೊಂದಿರುತ್ತಾರೆ. ಸಿಂಹ ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಅಲ್ಲದೆ ವಿಶೇಷ ಗುಣವನ್ನು ಹೊಂದಿರುತ್ತಾರೆ. ಸಿಂಹ ರಾಶಿಯಲ್ಲಿ ಜನಿಸಿದ ಮಹಿಳೆಯರು ಕೆಲವು ವಿಶೇಷ ಗುಣ, ಸ್ವಭಾವ ಹೊಂದಿರುತ್ತಾರೆ. ಹಾಗಾದರೆ ಸಿಂಹ ರಾಶಿಯಲ್ಲಿ ಜನಿಸಿದ ಮಹಿಳೆಯರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಿಂಹರಾಶಿಯ ಸ್ತ್ರೀಯರ ಬಗ್ಗೆ ಈ 10 ಹಲವಾರು ರಹಸ್ಯಗಳ ಬಗ್ಗೆ ತಿಳಿಯದೆ ಅವರೊಂದಿಗೆ ಎಂದಿಗೂ ಕೂಡ ವ್ಯವಹರಿಸಬಾರದು. ಸ್ತ್ರೀಯರನ್ನು ಆದಿಶಕ್ತಿ ಸ್ವರೂಪ ಎಂದು ಕರೆಯಲಾಗುತ್ತದೆ. ಸ್ತ್ರೀಯರು ಇಲ್ಲದೆ ಈ ಜಗತ್ತಿನಲ್ಲಿ ಏನೂ ಇಲ್ಲ ಕೆಲವು ಸ್ತ್ರೀಯರ ಯೋಗ ಜಾತಕವನ್ನು ಜೀವನವನ್ನು ಬದಲಾಯಿಸಿಬಿಡುತ್ತದೆ. ಪುರಾಣಗಳ ಪ್ರಕಾರ ಸ್ತ್ರೀಯರಿಂದಲೆ ಉನ್ನತಿ ಸ್ತ್ರೀಯರಿಂದಲೆ ಅವನತಿ ಎಂಬ ಮಾತನ್ನು ಹೇಳಲಾಗುತ್ತದೆ. ಸಿಂಹ ರಾಶಿಯ ಸ್ತ್ರೀಯರು ಜೀವನದಲ್ಲಿ ಯಾವ ರೀತಿ ಇರುತ್ತಾರೆ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅದೃಷ್ಟ ಅನ್ನುವುದು ಪ್ರಾಪ್ತಿಯಾಗುತ್ತದೆ, ಇವರ ಅದೃಷ್ಟದ ದಿನಗಳು ಯಾವುವು, ಇವರ ಅದೃಷ್ಟದ ದೇವರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು.

ಸಿಂಹ ರಾಶಿಯ ಸ್ತ್ರೀಯರು ಯಾವುದೆ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೂ ಬಹಳ ಧೈರ್ಯವಾಗಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಈ ರಾಶಿಯ ಸ್ತ್ರೀಯರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವ ಗುಣ ಇರುತ್ತದೆ. ಯಾವುದೆ ನಿರ್ಣಯಕ್ಕೂ ಕೂಡ ಕಟು ಬದ್ಧವಾಗಿರುತ್ತಾರೆ, ಇವರಿಗೆ ಹಠ ಹೆಚ್ಚಾಗಿರುತ್ತದೆ. ಇವರ ವೈವಾಹಿಕ ಜೀವನ ಬಹಳ ವಿಭಿನ್ನವಾಗಿರುತ್ತದೆ, ಇವರ ಜೀವನದಲ್ಲಿ ಬಹಳ ಒಳ್ಳೆಯ ಗುಣ ಇರುವ ಗಂಡ ಸಿಕ್ಕರೆ ಬಹಳ ಚೆನ್ನಾಗಿ ಅವರೊಂದಿಗೆ ಹೊಂದಿಕೊಂಡು ಜೀವನ ಮಾಡುತ್ತಾರೆ. ಆದರೆ ಇವರ ಮಾತನ್ನು ಕೇಳದ ಕೆಟ್ಟ ಗಂಡ ಏನಾದರೂ ಸಿಕ್ಕರೆ ಡೋಂಟ್ ಕೇರ್ ಎನ್ನುವ ಸ್ವಭಾವ ಇವರದಾಗಿದೆ. ಪ್ರೇಮ ವಿಚಾರದಲ್ಲಿ ಇವರು ಕಾಂಪ್ರಮೈಸ್ ಆಗುವುದಿಲ್ಲ. ಈ ರಾಶಿಯ ಸ್ತ್ರೀಯರು ಸ್ವಲ್ಪ ತಡವಾಗಿ ಮದುವೆಯಾದರೆ ಒಳ್ಳೆಯದು. ಹತ್ತು ಜನರನ್ನು ಮುನ್ನಡೆಸುವ ಗುಣ ಇವರಿಗೆ ಇರುತ್ತದೆ. ಹಣವನ್ನು ಹೆಚ್ಚಾಗಿ ಇವರು ಖರ್ಚು ಮಾಡುತ್ತಾರೆ.

ಸಿಂಹ ರಾಶಿಯ ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ ಹಾಗೆ ಮೋಸ ಹೋಗುವುದು ಕೂಡ ಕಡಿಮೆ. ಇವರು ಹೆಚ್ಚು ಸ್ವತಂತ್ರರಾಗಿ ಇರಲು ಬಯಸುತ್ತಾರೆ. ವ್ಯಾಪಾರ ವ್ಯವಹಾರ ಹಾಗೂ ಪಬ್ಲಿಕ್ ಸೆಕ್ಟರ್ ವಿಚಾರದಲ್ಲಿ ಹೆಚ್ಚು ಸಾಧನೆಯನ್ನು ಮಾಡುತ್ತಾರೆ. ಕುಟುಂಬಸ್ಥರಿಗೋಸ್ಕರ ಹೆಚ್ಚು ಶ್ರಮವನ್ನು ಪಡುತ್ತಾರೆ. ಕೆಲವು ಸಮಯದಲ್ಲಿ ಕೋಪ ಅನ್ನುವುದು ನಿಯಂತ್ರಣದಲ್ಲಿ ಇರುವುದಿಲ್ಲ. ಈ ರಾಶಿಯ ಸ್ತ್ರೀಯರು ಉದ್ಯೋಗಕ್ಕಿಂತ ಸ್ವಂತ ವ್ಯಾಪಾರ, ಸ್ವಂತ ವ್ಯವಹಾರದಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ. ತಾವು ತೆಗೆದುಕೊಂಡ ನಿರ್ಧಾರವೆ ಅಂತಿಮವಾಗುವಂತೆ ಮಾಡುತ್ತಾರೆ. ನಾಯಕತ್ವದ ಗುಣ ಇವರಿಗೆ ಹೆಚ್ಚಾಗಿರುತ್ತದೆ ನಾಯಕತ್ವವನ್ನು ಪಡೆಯುವುದಕ್ಕೆ ಹೆಚ್ಚು ಶ್ರಮ ವಹಿಸುತ್ತಾರೆ.

ಈ ರಾಶಿಯ ಸ್ತ್ರೀಯರು ಒಂದು ಕೆಲಸವನ್ನು ಆರಂಭಿಸಿದರೆ ಆ ಕೆಲಸ ಮುಗಿಯುವ ತನಕ ಬಿಡುವುದಿಲ್ಲ. ಇತರರು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು ಹಾಗೂ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಳ್ಳಬೇಕು ಎಂದು ಇವರು ಸದಾಕಾಲ ಬಯಸುತ್ತಾರೆ. ಮನಸ್ಸಿನಲ್ಲಿ ಯಾವುದೆ ವಿಚಾರ ಇದ್ದರೂ ಕೂಡ ಎದುರಿನ ವ್ಯಕ್ತಿಯೊಂದಿಗೆ ಪ್ರತಿಯೊಂದನ್ನು ಕೂಡ ಇವರು ಹಂಚಿಕೊಳ್ಳುತ್ತಾರೆ. ಯಾವುದಾದರೂ ವಸ್ತು ಅಥವಾ ಏನನ್ನಾದರೂ ಖರೀದಿಸುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ. ಯಾವುದಕ್ಕೂ ಭಯಪಡದ ಇವರು ಹೆಚ್ಚು ಸಿಹಿತಿನಿಸುಗಳನ್ನು ಇಷ್ಟಪಡುತ್ತಾರೆ. ತಮ್ಮನ್ನು ಪ್ರೀತಿಸುವ ವ್ಯಕ್ತಿಯೊಂದಿಗೆ ಯಾವುದೆ ಗುಟ್ಟುಗಳನ್ನು ಇವರು ಇಟ್ಟುಕೊಂಡಿರುವುದಿಲ್ಲ. ಅದೆ ರೀತಿಯಾಗಿ ಎದುರಿನ ವ್ಯಕ್ತಿ ಅಂದರೆ ಪ್ರೀತಿಸುವ ವ್ಯಕ್ತಿಯೂ ಕೂಡ ಯಾವುದೆ ರೀತಿಯ ಗುಟ್ಟುಗಳನ್ನು ಇರಬಾರದು ಎಂಬ ಭಾವನೆಯನ್ನು ಆಲೋಚನೆಯನ್ನು ಹೊಂದಿರುತ್ತಾರೆ.

ಇವರು ಕೆಲವು ವಿಷಯಗಳಲ್ಲಿ ಬಾರಿ ಕಠಿಣ ಆದರೂ ಕೂಡ ಅದು ಎದುರಿನ ವ್ಯಕ್ತಿಯ ಒಳಿತಿಗಾಗಿ ಆಗಿರುತ್ತದೆ. ಬಹಳ ಆದರ್ಶದಾಯಕವಾಗಿ ಇವರು ಜೀವನವನ್ನು ಮಾಡುತ್ತಾರೆ. ಸಿಂಹ ರಾಶಿಯ ಸ್ತ್ರೀಯರು ಯಾವಾಗಲೂ ಕೂಡ ಸೂರ್ಯದೇವನ ಆರಾಧನೆಯನ್ನು ಮಾಡಬೇಕು. ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಬೇಕು ಆಗ ಮಾತ್ರ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು. ಆದಷ್ಟು ಇವರು ಶಿವನ ಆರಾಧನೆಯನ್ನು ಅಥವಾ ಶಿವನಿಗೆ ಅಭಿಷೇಕವನ್ನು ಮಾಡಿಸುತ್ತಾ ಬಂದರೆ ಜೀವನದಲ್ಲಿ ಇರುವಂತಹ ಕಷ್ಟಗಳು ಕಡಿಮೆಯಾಗುತ್ತದೆ.

ಸಿಂಹ ರಾಶಿಯ ಸ್ತ್ರೀಯರಿಗೆ ಅದೃಷ್ಟದ ಸಂಖ್ಯೆಗಳು ಯಾವುದು ಎಂದು ನೋಡುವುದಾದರೆ 1,4,10,13,19, ಹಾಗೂ 22 ಈ ದಿನಾಂಕಗಳು ಅಥವಾ ಈ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಇವರಿಗೆ ಭಾನುವಾರ ಮಾಡುವ ಕೆಲಸ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಈ ರಾಶಿಯವರು ಚಿನ್ನದ ಬಣ್ಣ ಅಂದರೆ ಗೋಲ್ಡ್ ಬಣ್ಣ, ಆರೆಂಜ್ ಬಣ್ಣ, ವೈಟ್ ಹಾಗೂ ರೆಡ್ ಬಣ್ಣ ಈ ರೀತಿಯಾದಂತಹ ಬಣ್ಣಗಳನ್ನು ಜೀವನದಲ್ಲಿ ಬಳಸಿದರೆ ವಿಶೇಷವಾದ ಬದಲಾವಣೆಯನ್ನು ಕಾಣಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಸಿಂಹ ರಾಶಿಯ ಮಹಿಳೆಯರಿಗೆ ತಿಳಿಸಿ.

Leave A Reply

Your email address will not be published.