2024ರ ಸಿಂಹ ರಾಶಿಯವರ ವಾರ್ಷಿಕ ಭವಿಷ್ಯದ ಬಗ್ಗೆ ತಿಳಿಯೋಣ. ಗ್ರಹಗಳ ಬದಲಾವಣೆ ರಾಶಿಚಕ್ರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಇವು ಕೇವಲ ಗೋಚರ ಫಲಗಳು ಅಷ್ಟೇ ಇದಕ್ಕೂ ಜನ್ಮ ಜಾತಕಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.

ಸಿಂಹ ರಾಶಿಯವರು ಹೆಚ್ಚು ಒಳ್ಳೆಯ ಮತ್ತು ಉತ್ತಮ ಫಲಗಳನ್ನು ಅನುಭವಿಸುವರು. ಹೆಚ್ಚು ಐಶ್ವರ್ಯ ತಂದು ಕೊಡುತ್ತದೆ. ಸಿಂಹ ರಾಶಿಯ ಅಧಿಪತಿ ರವಿ ಗ್ರಹ. ಶಿವರಾತ್ರಿಗೆ ಮುನ್ನ ಕೆಲವು ಕಂಟಕಗಳು ಸಂಭವಿಸುತ್ತವೆ. 8ನೇ ಮನೆಯಲ್ಲಿ ರಾವು ಗ್ರಹ ಇರುವ ಕಾರಣ ರಾಹು ಗ್ರಹದ ಶಾಂತಿ ಮಾಡಬೇಕು. ಗೋಧಿ ಧಾನ್ಯದ ದಾನವನ್ನು ಮಾಡ್ಬೇಕು. ಆರ್ಥಿಕ ಸಮಸ್ಯೆಗಳು ಸ್ವಲ್ಪ ಕಾಡುವ ಸಾಧ್ಯತೆ ಇದೆ. ಐಷಾರಾಮಿ ಬದುಕನ್ನು ಸಾಗಿಸುವ ಅವಕಾಶ ಇರುತ್ತದೆ.

ಸೂರ್ಯ ಗ್ರಹದ ಶಮನ ಮಾಡುವುದಕ್ಕೆ ಸಂಬಂಧಿಸಿದಂತೆ ಬಡವರಿಗೆ, ದಿನಾ ದಲಿತರಿಗೆ ದಾನ ಧರ್ಮ ಮಾಡಬೇಕು ಆವಾಗ ಸೂರ್ಯ ಗ್ರಹದ ಅನುಗ್ರಹ ಸಿಗುತ್ತದೆ. ಶನಿ ದೃಷ್ಟಿ ದೋಷ ಭಾಗ್ಯ ಸ್ಥಾನದಲ್ಲಿ ಗುರು ಗ್ರಹ ಇರುವುದರಿಂದ ಆರ್ಥಿಕ ಸಂಕಷ್ಟ ಹೆಚ್ಚು ಕಾಡುವುದಿಲ್ಲ. ಶನಿ ಗ್ರಹದ ಶಾಂತಿ ಮಾಡಿಸಬೇಕು.  ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಧರ್ಮದಿಂದ ನೆಡೆಯುವುದು ಒಳ್ಳೆಯದು. ಯಾವುದೇ ರೀತಿಯ ಚಿಂತೆಗಳನ್ನು ಮಾಡದೆ ಒಂದು ಉತ್ತಮ ರೀತಿಯಲ್ಲಿ ಬದುಕು ಸಾಧಿಸಬೇಕು. ಸಕಲ ಮಂಗಳಕರ ಫಲಗಳನ್ನು ಅನುಭವಿಸುವ ಅದೃಷ್ಟ ಇದೆ. ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಬಂದು ನೆಲೆಸುತ್ತದೆ. ಅಹಂಕಾರ ಸಂಕಷ್ಟದ ಪರಮಾವಧಿ ತಂದು  ಕೊಡುತ್ತದೆ. ತಾಳ್ಮೆ ಮತ್ತು ಸಹನೆ ಇದ್ದರೆ ಎಲ್ಲವನ್ನು ಸಾಧನೆ ಮಾಡಲು ಸಾಧ್ಯ ಆಗುತ್ತದೆ. ದೇವರು ದಾರಿ ತೋರಿಸಿದ ರೀತಿಯಲ್ಲಿ ನಡೆಯುವುದು ಒಳ್ಳೆಯ ಆಯ್ಕೆ.

Leave a Reply

Your email address will not be published. Required fields are marked *