2024ರಲ್ಲಿ ಸಿಂಹ ರಾಶಿಯವರು ವಾರ್ಷಿಕ ಭವಿಷ್ಯದ ಬಗ್ಗೆ ತಿಳಿಯೋಣ. ಈ ರಾಶಿಯವರಿಗೆ ಮಿಶ್ರಾ ಫಲ ಸಿಗುತ್ತದೆ. 50% ಒಳ್ಳೆಯದು, 50% ಕೆಟ್ಟದ್ದು. 7ನೇ ಮನೆಯಲ್ಲಿ ಶನಿ ಗ್ರಹ ಇರುವುದರಿಂದ ಅದರಿಂದ ಕೆಲವು ಅಡೆ ತಡೆಗಳು, ತೊಂದರೆಗಳು ಎದುರಾಗಬಹುದು. ಮನಸ್ಸಿನ ಸ್ಥಿರತೆಯನ್ನು ಕದಡುವುದಕ್ಕೆ ಕೆಲವು ಆಹಿತಕರ ಘಟನೆಗಳು ಸಂಭವಿಸುತ್ತವೆ. ಆರೋಗ್ಯದ ವಿಚಾರದಲ್ಲಿ ಮಾನಸಿಕ ಮತ್ತು ದೈಹಿಕವಾದ ತೊಂದರೆಗಳು ಎದುರಾಗುತ್ತವೆ.

ದಿನನಿತ್ಯದ ಜೀವನದಲ್ಲಿ ಹಲವು ಸಂಚಲನಗಳನ್ನು ಸೃಷ್ಟಿ ಮಾಡುತ್ತಾನೆ ಶನಿ ಮಹಾತ್ಮ. ಆದ್ರೆ, ಆ ಘಟನೆಗಳು ಸಿಂಹ ರಾಶಿಯವರ ಸಂಗಾತಿಯ ಜೀವನದಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿ ಇದೆ. ಕೆಲಸ ಕಾರ್ಯಗಳು, ಆಸ್ತಿ ವಿಚಾರದಲ್ಲಿ ಸೋಲು ಸಂಭವಿಸುವುದಿಲ್ಲ ಆದರೆ ಕುಗ್ಗುತೀರಿ. ಜೀವನದ ಅರ್ಧ ಭಾಗವನ್ನು ಸಂಗಾತಿಗೆ ಮೀಸಲಿಡುವ ಕಾರಣ ಅವರ ಕೈ ಕೆಳಗೆ ಆದಂತೆ ನೀವು ಸಹ ಅದರ ಬಿಸಿ ಅನುಭವಿಸುವಿರಿ. ಯಶಸ್ಸು ಕೂಡಾ ದೂರವಾಗುತ್ತದೆ .

ಪ್ರಯಾಣಗಳು ತುಂಬ ಪ್ರಯಾಸ ಉಂಟು ಮಾಡುತ್ತದೆ. ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿಗೆ ಇದೆ ಅದರಿಂದ ಸ್ವಲ್ಪ ಸಣ್ಣ ಅಂತರದಿಂದ ಪಾರಗುತ್ತೀರಿ. ಮೃತ್ಯುವಿನ ಕಾಲಘಂಟೆ ಬಾರಿಸಿ ಹೋಗುತ್ತದೆ. ಆದರೆ, ಪ್ರಾಣಕ್ಕೆ ಅಪಾಯ ತರುವುದಿಲ್ಲ. ಕೆಲವು ಋಣಾತ್ಮಕ ಅಂಶಗಳು ಗಮನಕ್ಕೆ ಬರುತ್ತವೆ. ಹೆಚ್ಚಿನ ಪ್ರಮಾದ ಅಥವಾ ಪ್ರಾಣ ಹಾನಿ ಆಗುವುದಿಲ್ಲ.

ಕೆಲಸದಲ್ಲಿ ಅದೃಷ್ಟ ಕೈ ಹಿಡಿದು ಹಣ ಗಳಿಗೆ ಮಾಡಿ ಅಭಿವೃದ್ದಿ ಕಾಣುವಿರಿ. ಗುರು 10ನೇ ಮನೆಯಲ್ಲಿ, ಶನಿ 7ನೇ ಮನೆಯಲ್ಲಿ ಇರುವನು ಈ ಎರಡು ಗ್ರಹ ಬದುಕಲ್ಲಿ ತೀಕ್ಷ್ಣತೆ ಸೃಷ್ಟಿ ಮಾಡುತ್ತಾನೆ, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮತೋಲನೆ ತಂದಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪರಿಸರದ ಕಡೆ ಒಲವು ಕೂಡ ಜಾಸ್ತಿ ಆಗುತ್ತದೆ. ಋಣಾತ್ಮಕ ಆಲೋಚನೆಗಳು ಸದಾ ತಲೆಯಲ್ಲಿ ಸಂಚಾರ ಮಾಡುತ್ತಿರುತ್ತವೆ.

ವೃತ್ತಿ ಮತ್ತು ವ್ಯವಹಾರಗಳಲ್ಲಿ ಹೆಚ್ಚು ಬಿಡುವು ಸಿಗುವುದಿಲ್ಲ. ಮಲ್ಟಿಪಲ್ ಪ್ರೊಜೆಕ್ಟ್ಸ್ ಸಿಗುತ್ತವೆ ಹಾಗೂ ಲಾಭ ಸಹ ಪಡೆಯುತ್ತೀರಿ. ಆದರೆ ಅದನ್ನು ನಿಭಾಹಿಸುವುದಕ್ಕೆ ಹೆಚ್ಚು ಪ್ರಯತ್ನ ಪಡಬೇಕು. ವ್ಯವಹಾರದಲ್ಲಿ ಹೆಚ್ಚು ಅನುಭವ ಇದ್ದರು ಅದು ಸವಾಲುಗಳನ್ನು ಒಡ್ಡುತ್ತದೆ. ಉದ್ಯೋಗ ಅವಕಾಶಗಳು ಕೈ ತಪ್ಪುವ ಸಂದರ್ಭಗಳು ನಿರ್ಮಾಣವಾಗುತ್ತವೆ. ಒಂದು ವೇಳೆ ಉದ್ಯೋಗ ಕೈ ಜಾರಿ ಹೋದರು, ಮುಂದೆ ಬರುವ ದಿನಗಳಲ್ಲಿ ಕೆಲಸ ಸಿಗುವ ಸಾಧ್ಯತೆ ಹೆಚ್ಚು ಇರುತ್ತದೆ ಹಾಗೂ ಒಳ್ಳೆ ಕೆಲಸ ಸಿಗುವ ಸಾಧ್ಯತೆ ಇರುತ್ತದೆ.

ಆದಾಯ ಗಳಿಕೆ ರೂಪದಲ್ಲಿ ಬಂದರು, ಮುಂದೆ ಅದು ಅಷ್ಟೇ ಬೇಗ ಖರ್ಚಾಗಿ ಹೋಗುತ್ತದೆ. ವ್ಯವಹಾರದಲ್ಲಿ ಸ್ವಲ್ಪ ಮಟ್ಟದ ನಷ್ಟ ಕೂಡ ಇರುತ್ತದೆ. ದೊಡ್ಡ ಉದ್ಯೋಗದಲ್ಲಿ ಇರುವವರು ಅದರಲ್ಲಿ ವ್ಯಕ್ತಿಗಳನ್ನು  ಜಡ್ಜ್ ಮಾಡುವುದರಲ್ಲಿ ವಿಫಲವಾಗುವ ಅವಕಾಶ ಇರುತ್ತದೆ. ಈ ವರ್ಷ ಒಂದು ರೀತಿ ಶುಭಫಲ ಹಾಗೂ ಪ್ರಗತಿ  ತರುವ ವರ್ಷ ಕೂಡ ಆಗಿರುತ್ತದೆ. ಒಂದು ರೀತಿ ಹೊಸ ಬೆಳಕು ಸಿಂಹ ರಾಶಿಯವರ ಬಾಳಿನಲ್ಲಿ ಮೂಡುತ್ತದೆ ಹಾಗೆ ಜೀವನದ ದಿಕ್ಕನ್ನು ಬದಲು ಮಾಡುತ್ತದೆ.

ಮೇ ತಿಂಗಳು ಹಣ ಗಳಿಕೆ ಹಿಮ್ಮಡಿ ಆಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಮತ್ತು ಯಶಸ್ಸು ಸಾಧಿಸುವಿರೀ, ಉನ್ನತ ಸ್ಥಾನಕ್ಕೆ ಬಡ್ತಿ ಪಡೆದ ಆದಾಯವನ್ನು ಹೆಚ್ಚು ಗಳಿಕೆ ಮಾಡುವರು. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಹಾಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಆಲಸ್ಯ ಕಾಡುತ್ತದೆ ಅದರಿಂದ ದೂರ ಉಳಿಯಬೇಕು. ಮನಸ್ಸು ಪ್ರಫುಲ್ಲವಾಗಿ ಇರುತ್ತದೆ. ದೈಹಿಕವಾಗಿ ಎಲ್ಲಾ ರೀತಿಯ ಚಟುವಟಿಕೆ ಇದ್ದರೆ ಉತ್ತಮ ಆವಾಗ ದೇಹ ಮತ್ತು ಮನಸ್ಸು ಇನ್ನು ಬಲವಾಗುತ್ತದೆ.

ರಾವು ಗ್ರಹ ಮತ್ತು ಕೇತು ಗ್ರಹ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ತಂದು ಕೊಡುತ್ತದೆ. ಮಾತು ಕೊಟ್ಟ ಮೇಲೆ ಅದನ್ನು ಉಳಿಸಿಕೊಳ್ಳಲು ಬಹಳ ಶ್ರಮ ಬೇಕು. ಆದ್ದರಿಂದ ಯಾವುದಕ್ಕೂ ಶ್ಯುರೀಟಿ ಹಾಕುವುದು ಅಥವ ಮಾತಿಗೆ ಬದ್ದವಾಗಿ ಇರುವುದಕ್ಕೆ ಕಷ್ಟ ಪಡುತ್ತೀರಿ ಅದಕ್ಕೆ ಒಪ್ಪಿಗೆ ನೀಡಿದೆ ಇರುವುದು ಒಳ್ಳೆಯದು. ಸಂತಾನದ ಭಾಗ್ಯ ಲಭಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಸಾದ್ಯತೆ ಇದೆ. ದೇವರ ಕೃಪೆ ಸಿಗಬೇಕು ಎಂದರೆ ಅದು ಪ್ರಾರ್ಥನೆ ಮತ್ತು ನಂಬಿಕೆಯಿಂದ ಮಾತ್ರ ಸದ್ಯ.

Leave a Reply

Your email address will not be published. Required fields are marked *