ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ನಡವಳಿಕೆ, ಭವಿಷ್ಯ, ವ್ಯಕ್ತಿತ್ವ ಹೊಂದಿರುತ್ತಾರೆ. ಸಿಂಹ ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಅಲ್ಲದೆ ವಿಶೇಷ ಗುಣವನ್ನು ಹೊಂದಿರುತ್ತಾರೆ. ಸಿಂಹ ರಾಶಿಯಲ್ಲಿ ಜನಿಸಿದವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಿಂಹ ರಾಶಿ ಹಾಗೂ ಸಿಂಹ ಲಗ್ನದವರ ಗುಣಲಕ್ಷಣವನ್ನು ನೋಡುವುದಾದರೆ. ಅಗ್ನಿತತ್ವರಾಶಿಯಾಗಿದ್ದು ಈ ರಾಶಿಯ ಅಧಿಪತಿ ಸೂರ್ಯಗ್ರಹ ಆಗಿದೆ. ಈ ರಾಶಿಯವರ ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ, ಇವರ ಮುಖ ಹಾಗೂ ಕಣ್ಣು ತೇಜಸ್ಸಿನಿಂದ ಕೂಡಿರುತ್ತದೆ. ಇವರು ನಿರ್ಭೀತರಾಗಿ ಉದಾರಿಗಳಾಗಿಯೂ, ವಿಶಾಲ ಹೃದಯವಂತರು ಇರುತ್ತಾರೆ. ಇವರು ಎಲ್ಲರಿಗೂ ಸಹಾಯ ಮಾಡುತ್ತಾರೆ. ಇವರು ತಮ್ಮ ಮಿತ್ರರು ಹಾಗೂ ಸಂಬಂಧಿಕರ ಮೇಲೆ ವಿಶ್ವಾಸ ಇಡುತ್ತಾರೆ. ಇವರು ಆದರ್ಶವಾದಿಗಳು ಆಗಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ. ಇವರು ಓಪನ್ ಮೈಂಡೆಡ್ ರಾಗಿರುತ್ತಾರೆ, ಈ ರಾಶಿಯವರು ತನ್ನ ನಿರ್ಣಯಗಳು ಯಾವಾಗಲೂ ಸರಿಯಾಗಿರುತ್ತದೆ ಎಂದು ಭಾವಿಸುತ್ತಾರೆ ಮತ್ತು ಎಂಥಹ ಸಿಚುವೇಶನ್ ಬಂದರೂ ತನ್ನ ನಿರ್ಧಾರದಲ್ಲಿ ಸ್ಥಿರವಾಗಿರುತ್ತಾರೆ ಹಾಗೂ ಧಾರ್ಮಿಕ ಕಾರ್ಯದಲ್ಲಿ ಆಸಕ್ತರಾಗಿರುತ್ತಾರೆ.

ಧರ್ಮದ ಹೆಸರಿನಲ್ಲಿ ಮೋಸ ಮಾಡುವವರನ್ನು ಕಂಡರೆ ಅವರಿಗೆ ಆಗುವುದಿಲ್ಲ, ಇವರು ಆಸ್ತಿಕರಾಗಿರುತ್ತಾರೆ ಹಾಗೂ ದಾನಿಗಳಾಗಿರುತ್ತಾರೆ. ಇವರು ಸಜ್ಜನರು ಆಗಿರುತ್ತಾರೆ ಹಾಗೂ ಮಾನವೀಯ ಗುಣಗಳು ಇರುತ್ತವೆ. ಇವರ ವಿಚಾರದಲ್ಲಿ ನ್ಯಾಯವಾಗಿ ಇರುವುದನ್ನು ಸ್ಪಷ್ಟವಾಗಿ ನೋಡಬಹುದು, ಇವರು ತನ್ನ ವಿಚಾರದಲ್ಲಿ ದೃಢವಾಗಿರುತ್ತಾರೆ. ಸಾಮಾನ್ಯವಾಗಿ ಇವರು ಯಾರಿಗೂ ಮೋಸ ಮಾಡುವುದಿಲ್ಲ ಹಾಗೂ ಬೇರೆಯವರಿಂದಲೂ ನಿರೀಕ್ಷೆ ಮಾಡುತ್ತಾರೆ. ಇವರಿಗೆ ಸಿಟ್ಟು ಮೂಗಿನ ತುದಿಯಲ್ಲಿ ಇರುತ್ತದೆ ಆದರೆ ವೇಗವಾಗಿ ಶಾಂತವಾಗುತ್ತಾರೆ. ಇವರು ವೆರೈಟಿ ಆಗಿರುವ ಫುಡ್ ಗಳಲ್ಲಿ ಆಸಕ್ತಿ ಆಗಿರುತ್ತಾರೆ ಮತ್ತು ಬೆಟ್ಟಗುಡ್ಡಗಳಲ್ಲಿ ಟ್ರಾವೆಲಿಂಗ್ ಮಾಡುವುದು ಇವರಿಗೆ ಇಷ್ಟ ಆಗುತ್ತದೆ.

ಇವರು ಸ್ವಾಭಿಮಾನಿಗಳೂ ಆಗಿರುತ್ತಾರೆ ಇವರಿಗೆ ಶಾಸನ ಮಾಡುವ ಪ್ರವೃತ್ತಿ ಜಾಸ್ತಿ ಇರುತ್ತದೆ. ಇವರಿಗೆ ಬೇರೆಯವರ ಅಧೀನದಲ್ಲಿ ಕೆಲಸ ಮಾಡುವುದೆಂದರೆ ಇಷ್ಟ ಆಗುವುದಿಲ್ಲ, ಇವರು ಯಾರ ಒತ್ತಡವೂ ಇಲ್ಲದ ಕೆಲಸವನ್ನು ಮಾಡಲು ಇಷ್ಟ ಪಡುತ್ತಾರೆ. ಇವರು ತನ್ನ ಶ್ರಮದಿಂದ ಹೆಸರು, ಕೀರ್ತಿ, ಸಂಪತ್ತನ್ನು ಗಳಿಸುತ್ತಾರೆ. ಇವರ ವೈವಾಹಿಕ ಜೀವನವನ್ನು ನೋಡುವುದಾದರೆ ಇವರು ಲಾಯಲ್ ಆಗಿರುವ ಸಂಗಾತಿಯನ್ನು ಬಯಸುತ್ತಾರೆ. ಇವರು ತನ್ನ ಪ್ರೀತಿಯನ್ನು ಕೊನೆಯವರೆಗೂ ನಿಭಾಯಿಸುತ್ತಾರೆ. ಇವರು ತನ್ನ ಸಂಗಾತಿಯ ವಿಷಯದಲ್ಲಿ ಹಾಗೂ ವ್ಯಕ್ತಿಗತ ಜೀವನದಲ್ಲಿ ಯಾರು ಇಂಟರ್ವ್ಯೂ ಆಗುವುದು ಇವರಿಗೆ ಇಷ್ಟ ಆಗುವುದಿಲ್ಲ.

ಇವರಿಗೆ ಸ್ವಲ್ಪ ಡಾಮಿನೇಚರ್ ಇರುವುದರಿಂದ ವೈವಾಹಿಕ ಜೀವನದಲ್ಲಿ ತೊಂದರೆಗಳು ಬರುವುದರಿಂದ ಅದನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಇವರ ಪರಿವಾರದಲ್ಲಿ ಇವರ ಹಾಗೂ ತಂದೆಯವರ ಹೊಂದಾಣಿಕೆಯಲ್ಲಿ ತೊಂದರೆಗಳು ಬರಬಹುದು. ಇವರು ಬಹಳ ಎನರ್ಜಿಟಿಕ್ ಆಗಿರುತ್ತಾರೆ. ಇವರು ಅಂದುಕೊಂಡಿದ್ದನ್ನು ಸಾಧಿಸಿಯೆ ತೀರುತ್ತಾರೆ ಇವರು ಎಲ್ಲರಿಗೂ ಆದೇಶವನ್ನು ಕೊಡುತ್ತಾರೆ ಹಾಗಂತ ಇವರಿಗೆ ಆದೇಶ ಕೊಡಬೇಡಿ ಇವರು ಅದನ್ನು ತೆಗೆದುಕೊಳ್ಳುವುದಿಲ್ಲ. ಇವರು ಸ್ವತಂತ್ರರಾಗಿ ಇರಲು ಇಷ್ಟಪಡುತ್ತಾರೆ, ಇವರು ರಾಜರ ತರ ಬದುಕಲು ಇಷ್ಟಪಡುತ್ತಾರೆ. ಇವರಿಗೆ ರೆಸ್ಪೆಕ್ಟ್ ಬಹಳ ಇಂಪಾರ್ಟೆಂಟ್ ಆಗಿರುತ್ತದೆ. ಇವರಿಗೆ ಯಾರಾದರೂ ರೆಸ್ಪೆಕ್ಟ್ ಕೊಡದೆ ಇದ್ದರೆ ಹರ್ಟ್ ಆಗುತ್ತಾರೆ. ಇವರು ಸಮಾಜದಲ್ಲಿ ತನ್ನದೆ ಆದ ಒಂದು ಇಮೇಜ್ ಅನ್ನು ಮೇಂಟೈನ್ ಮಾಡಿರುತ್ತಾರೆ. ತನ್ನ ಇಮೇಜಿಗೆ ಧಕ್ಕೆಯಾಗುವ ಯಾವುದೆ ಕೆಲಸವನ್ನು ಮಾಡುವುದಿಲ್ಲ. ಇವರು ಲಕ್ಸುರಿ ಐಟಂಗೆ ಜಾಸ್ತಿ ಖರ್ಚು ಮಾಡುತ್ತಾರೆ. ಇವರು ತನ್ನ ಲೆವೆಲ್ ಗೆ ತಕ್ಕ ಜನರ ಜೊತೆ ವ್ಯವಹರಿಸಲು ಇಷ್ಟಪಡುತ್ತಾರೆ.

ಇವರಿಗೆ ಕಾನ್ಫಿಡೆಂಟ್ ಲೆವೆಲ್ ಜಾಸ್ತಿ ಇರುತ್ತದೆ. ಇವರು ಯಾವುದೆ ಕೆಲಸವನ್ನು ಮಾಡಿದರೂ ಕಾನ್ಫಿಡೆಂಟ್ ಆಗಿ ಮಾಡುತ್ತಾರೆ. ಇವರು ಯಾವುದೆ ಕೆಲಸದಲ್ಲಿ ಇದ್ದರೂ ಎದ್ದು ಕಾಣಿಸುತ್ತಾರೆ. ಕೇರಿಂಗ್ ನೇಚರ್ ಇರುತ್ತದೆ ಇವರಿಗೆ ಇವರು ಎಲ್ಲರಿಗೂ ಅಡ್ವೈಸ್ ಚೆನ್ನಾಗಿ ಕೊಡುತ್ತಾರೆ ಅಂತ ಹೇಳಬಹುದು‌. ಯಾರ ಅಡ್ವೈಸ್ ಇವರು ತೆಗೆದುಕೊಳ್ಳುವುದಿಲ್ಲ ಇವರು ಹೊಗಳಿಕೆಗೆ ಬೇಗ ಕರಗುತ್ತಾರೆ. ಇವರ ಜೀವನದಲ್ಲಿ ಎಷ್ಟೆ ಕಷ್ಟ ಬಂದರೂ ಇವರು ಕುಗ್ಗುವುದಿಲ್ಲ. ಸೋತರೂ ಮತ್ತೆ ಎದ್ದು ನಿಲ್ಲುತ್ತಾರೆ ಧೈರ್ಯವಾಗಿ ಕೆಲಸ ಮಾಡುತ್ತಾರೆ. ಇವರು ಸಾಹಸಿಗಳಾಗಿರುತ್ತಾರೆ, ದೃಢನಿಶ್ಚಯ ಮಾಡುತ್ತಾರೆ. ಇವರು ಮಾತು ಕೊಟ್ಟರೆ ಅದನ್ನು ಕಡೆಯವರೆಗೂ ನಿಭಾಯಿಸುತ್ತಾರೆ, ಹಠವಾದಿಗಳು ಆಗಿರುತ್ತಾರೆ. ಈ ರಾಶಿಯವರು ತಮ್ಮ ಸ್ನೇಹಿತರಿಗೆ ಹೆಲ್ಪ್ ಮಾಡುತ್ತಾರೆ. ಇವರು ಯಾರೊಂದಿಗೂ ಶತ್ರುತ್ವ ಬೆಳೆಸಿಕೊಳ್ಳುವುದಿಲ್ಲ ಆದರೆ ಯಾರಾದರೂ ಇವರನ್ನು ಕೆಣಕಿದರೆ ಅವರನ್ನು ಬಿಡುವುದಿಲ್ಲ.

ಇವರು ಅಧಿಕವಾಗಿ ಮಾತನಾಡುತ್ತಾರೆ ಆದರೆ ಬುದ್ಧಿವಂತಿಕೆಯಿಂದ ಮಾತನ್ನು ಉಪಯೋಗಿಸುತ್ತಾರೆ. ಇವರು ತನ್ನ ಭವಿಷ್ಯವನ್ನು ಚೆನ್ನಾಗಿಡಲು ಸತತ ಪ್ರಯತ್ನ ಮಾಡುತ್ತಾರೆ. ಇವರಿಗೆ ತನ್ನ ಮೇಲೆ ಎಕ್ಸ್ಪೆಕ್ಟೇಶನ್ ಜಾಸ್ತಿ ಇರುತ್ತದೆ ಇವರು ತನ್ನ ಉದಾರ ಮನಸ್ಸಿನಿಂದ ಎಲ್ಲರನ್ನೂ ಚೆನ್ನಾಗಿ ಇಡಲು ಇಷ್ಟಪಡುತ್ತಾರೆ. ಇವರು ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಇವರ ಕರಿಯರ್ ವಿಚಾರವನ್ನು ನೋಡುವುದಾದರೆ ಇವರಿಗೆ ಗೌರ್ಮೆಂಟ್ ಹಾಗೂ ರಾಜನೀತಿಗೆ ಸಂಬಂಧಿಸಿದ ಕೆಲಸಗಳು, ಶಿಕ್ಷಣ ಹಾಗೂ ವ್ಯವಸಾಯಕ್ಕೆ ಸಂಬಂಧಿಸಿದ ಕೆಲಸಗಳು ಸಿಗುತ್ತದೆ. ಚಿನ್ನ ವಜ್ರಗಳಂತಹ ಜ್ಯೂವೆಲರಿಗೆ ಸಂಬಂಧಿಸಿದ ಕೆಲಸಗಳು, ಆಕ್ಟಿಂಗ್ ಫೀಲ್ಡ್, ಸಿಂಗಿಂಗ್ ಫೀಲ್ಡ್, ಸರ್ವಿಸ್ ಇಂಡಸ್ಟ್ರಿ, ಆರ್ಕಿಟೆಕ್ಟ್ ಮತ್ತು ಬಿಜಿನೆಸ್ ಗಳನ್ನು ಇವರು ಆಯ್ಕೆ ಮಾಡುತ್ತಾರೆ. ಇವರ ಹೆಲ್ತ್ ಅನ್ನು ನೋಡುವುದಾದರೆ ಇವರಿಗೆ ಬೆನ್ನು ನೋವು, ಹಾರ್ಟ್, ಲಿವರ್ ಇಂತಹ ಖಾಯಿಲೆಗಳು ಬರಬಹುದು.

ಇವರಿಗೆ ಸಜೇಷನ್ ಕೊಡುವುದಾದರೆ ಸಿಂಹ ರಾಶಿಯವರಿಗೆ ಸ್ವಲ್ಪ ಈಗೊ ಇರುವುದರಿಂದ ಡಾಮಿನೇಚರ್ ಅನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು. ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಸ್ವಲ್ಪ ಸೊಂಬೇರಿಯಾಗಿರುತ್ತಾರೆ. ಬಹಳ ನಿದ್ರೆ ಮಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಉಪಾಯವನ್ನು ಹೇಳುವುದಾದರೆ ತಂದೆಯ ಸೇವೆಯನ್ನು ಮಾಡಬೇಕು, ಸೂರ್ಯ ನಮಸ್ಕಾರ ಮಾಡಬೇಕು. ಗೋಧಿಯನ್ನು ರವಿವಾರ ದಾನ ಮಾಡಿ ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು 108ಸಾರಿ ಪಠಿಸಿದರೆ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!