ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದು ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ ಮಾಡಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುರೇಶ್ ಕುಮಾರ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ಈ ಮೂಲಕ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಬೇಸಿಗೆ ರಜೆ ಇದೆಯೋ ಇಲ್ಲವೋ ಎನ್ನುವುದರ ಕುರಿತಾಗಿ ಸಾಕಷ್ಟು ವಿದ್ಯಾರ್ಥಿಗಳು ಕೂಡಾ ಕೇಳಿದ್ದು ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಕನ್ನಡದ ಒಂದು ಸುದ್ಧಿ ವಾಹಿನಿಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಅದನ್ನು ಕೇಳಿ ವಿದ್ಯಾರ್ಥಿಗಳಲ್ಲಿ ಭಾರಿ ಗೊಂದಲ ಉಂಟಾಗಿತ್ತು. ಈ ಕಾರಣಕ್ಕಾಗಿಯೇ ಸುರೇಶ್ ಕುಮಾರ್ ಅವರು ಬೇಸಿಗೆ ರಜೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಸುತ್ತಮುತ್ತಲಿನ ಶಾಲೆಗಳಲ್ಲಿ ಕಲಿಯುತ್ತಿರುವಂತಹ ಒಂದರಿಂದ ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಲಾಗುವುದು ಹಾಗೂ ಅವರಿಗೆ ಬೇಸಿಗೆ ರಜೆ ನೀಡಲಾಗುವುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಇದು ಸಧ್ಯಕ್ಕೆ ಆಗದೇ ಇರುವ ಮಾತು ಎಂದೇ ಹೇಳಬಹುದು. ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅವರ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಗ್ಗೆ ಮುಕ್ತ ನಿಲುವನ್ನು ಹೊಂದಿದೆ.
ಖಾಸಗಿ ಶಾಲೆಗಳು ಈಗ ಇರುವಂತೆಯೇ ಆನ್ಲೈನ್ ಮೂಲಕ ಕಲಿಕೆಯನ್ನು ಮುಂದುವರಿಸಿದೆ. ಒಂದರಿಂದ ಐದನೇ ತರಗತಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಆಕಾಶವಾಣಿಯಲ್ಲಿ ಕಲಿಯೋಣ ನಲಿಯೋಣ ಕಾರ್ಯಕ್ರಮದ ಪ್ರಸಾರ ಮಾಡುವ ಮೂಲಕ ಅವರಿಗೂ ಕೂಡಾ ತರಗತಿಗಳು ನಡೆಯುವಂತೆ ಮಾಡಲಾಗಿದೆ. ಇನ್ನು ದೂರದರ್ಶನದಲ್ಲಿ ಸಂವೆದ ಕಾರ್ಯಕ್ರಮ ಕೂಡಾ ಪ್ರಸಾರ ಆಗುತ್ತಿದೆ. ಇನ್ನು ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯ ಮಾಹಿತಿಯನ್ನು ತಮ್ಮದೇ ಸ್ಥಳೀಯ ಸಂಪನ್ಮೂಲಗಳ ನೆರವಿನಿಂದ ಪರಾಮರ್ಶೆ ಮಾಡಬೇಕು. ಇದು ರಾಜ್ಯದಾದ್ಯಂತ ಜಾರಿಯಲ್ಲಿ ಇದ್ದು ಈ ಹಂತದಲ್ಲಿ ಯಾವುದೇ ರಜೆ ಘೋಷಣೆ ಮಾಡುವ ಪ್ರಸ್ತಾಪ ಶಿಕ್ಷಣ ಇಲಾಖೆಯ ಮುಂದಿಲ್ಲ. ಕರೋನ ಸಂದರ್ಭದಲ್ಲಿ ಮೊದಲೇ ಹೈರಾಣ ಆಗಿರುವ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಇಂತಹ ಸುದ್ದಿಗಳು ಗೊಂದಲವನ್ನು ಉಂಟು ಮಾಡುತ್ತದೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಸುರೇಶ್ ಕುಮಾರ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡು ಕೊರಿಕೊಂಡಿದ್ದಾರೆ.