ಅಕ್ಟೋಬರ್ ಹದಿನಾಲ್ಕರಂದು ಬಿಡುಗಡೆಯಾದ ದುನಿಯಾ ವಿಜಿ ಅವರ ನಟನೆಯ ಸಲಗ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸಲಗ ಸಿನಿಮಾದ ಹಾಡುಗಳು ಕೂಡ ತುಂಬಾ ಜನಪ್ರಿಯವಾಗಿದೆ ಅದರಲ್ಲಿಯೂ ಹಳ್ಳಿ ಪ್ರತಿಭೆಗಳಾದ ಗಿರಿಜಾ ಸಿದ್ಧಿ ಹಾಗೂ ಹಾಗೂ ಗೀತಾ ಸಿದ್ಧಿ ಅವರು ಹಾಡಿರುವ ಟಿಣಿಂಗ ಮಿಣಿಂಗ ಟಿಷ್ಯಾ ಎನ್ನುವ ಹಾಡು ತುಂಬಾ ಜನಪ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರ ಬಾಯಿಯಲ್ಲೂ ಆ ಹಾಡು ಕೇಳಿಬರುತ್ತಿದೆ.ಅಕ್ಟೋಬರ್ ಹದಿನಾಲ್ಕರಂದು ಚಿತ್ರ ಬಿಡುಗಡೆಯಾಗಿತ್ತು ಅದಕ್ಕಿಂತ ಪೂರ್ವದಲ್ಲಿ ಅಕ್ಟೋಬರ್ ಹತ್ತನೇ ತಾರೀಖಿನಂದು ಚಿತ್ರದ ಪ್ರೀ ರಿಲೀಸಿಂಗ್ ಕಾರ್ಯಕ್ರಮ ನಡೆದಿತ್ತು.

ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಪ್ರಮುಖರು ಭಾಗಿಯಾಗಿದ್ದರು. ಶಿವರಾಜಕುಮಾರ್ ಪುನೀತ್ ರಾಜಕುಮಾರ ಉಪೇಂದ್ರ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಗಿರಿಜಾ ಸಿದ್ಧಿ ಮತ್ತು ಗೀತಾ ಸಿದ್ಧಿ ಅವರು ವೇದಿಕೆಯ ಮೇಲೆ ಚರಣ್ ರಾಜ್ ಅವರು ಸಂಗೀತ ನೀಡಿರುವ ಟಿಣಿಂಗ ಮಿಣಿಂಗ ಟಿಷ್ಯಾ ಹಾಡನ್ನು ಹಾಡಿದ್ದರು.

ವೇದಿಕೆಯ ಮೇಲೆ ಚಿತ್ರರಂಗದ ಗಣ್ಯರೆಲ್ಲರ ಎದುರು ಹಾಡನ್ನ ಹಾಡಿರುವುದರಿಂದಾಗಿ ಅವರಿಬ್ಬರೂ ತುಂಬಾ ಖುಷಿ ಪಟ್ಟಿದ್ದರು. ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇವರ ಹಾಡಿನಿಂದ ಶಿವರಾಜಕುಮಾರ್ ಪುನೀತ್ ರಾಜಕುಮಾರ್ ಉಪೇಂದ್ರ ಅವರು ಎಲ್ಲರೂ ಕೂಡ ತುಂಬಾ ಖುಷಿಯಾಗಿದ್ದರು. ಇದೇ ಸಮಯದಲ್ಲಿಯೇ ಅವರಿಬ್ಬರು ಅಪ್ಪು ಸರ್ ಅವರಿಗೆ ಶೇಕ್ ಹ್ಯಾಂಡ್ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ತಕ್ಷಣ ಶಿವರಾಜಕುಮಾರ್ ಉಪೇಂದ್ರ ಹಾಗೂ ಪುನೀತ್ ರಾಜಕುಮಾರ್ ಅವರು ವೇದಿಕೆಯ ಮೇಲೆ ಬಂದು ಅವರಿಬ್ಬರಿಗೂ ಶುಭಾಶಯವನ್ನು ಕೋರಿದ್ದರು. ಜೊತೆಗೆ ಫೋಟೋವನ್ನು ಕೂಡ ತೆಗೆದುಕೊಂಡು ಅವರ ಹಾಡಿಗೆ ಮೆಚ್ಚುಗೆಯನ್ನು ಸೂಚಿಸಿದರು. ಹಳ್ಳಿ ಪ್ರತಿಭೆಗಳಾದ ಗೀತಾ ಸಿದ್ದಿ ಹಾಗೂ ಗಿರಿಜಾ ಸಿದ್ದಿ ಅವರಿಗೆ ಸಿನಿಮಾದಲ್ಲಿ ಹಾಡುವುದಕ್ಕೆ ಅವಕಾಶ ಸಿಕ್ಕಾಗ ಅವರು ತುಂಬಾ ಖುಷಿ ಪಟ್ಟಿದ್ದರು.

ತುಂಬಾ ಇಷ್ಟಪಟ್ಟು ಹಾಡಿದ ಹಾಡು ತುಂಬಾ ಜನಪ್ರಿಯವಾಯಿತು ಈಗ ಎಲ್ಲರ ಬಾಯಲ್ಲಿ ಆ ಹಾಡು ಕೇಳಿ ಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕುವಂತಹ ಅವಕಾಶಗಳು ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಿಗಲಿ ಇನ್ನೂ ಹೆಚ್ಚಿನ ಯಶಸ್ಸು ಅವರದಾಗಲಿ ಎಂದು ನಾವೆಲ್ಲರೂ ಆಶಿಸೋಣ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!