ಹಿಂದೂ ಸಂಪ್ರದಾಯದಲ್ಲಿ ಅನುಸರಿಸುವ ರಾಶಿ ನಕ್ಷತ್ರಗಳ ಫಲಾಫಲಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ ಗ್ರಹಗತಿಗಳು ಬದಲಾದಂತೆ ರಾಶಿ-ನಕ್ಷತ್ರಗಳ ಫಲಗಳಲ್ಲಿ ಬದಲಾವಣೆಯಾಗುತ್ತದೆ. ನಾವಿಂದು ಶುಕ್ರನು ಯಾವ ರಾಶಿಯ ಅಧಿಪತಿಯಾಗಿದ್ದಾನೆ ಯಾವ ರಾಶಿಯಲ್ಲಿ ಒಳ್ಳೆಯ ಸ್ಥಾನದಲ್ಲಿದ್ದಾನೆ ಯಾವ ರಾಶಿಯಲ್ಲಿ ನಿಚ ಸ್ಥಾನದಲ್ಲಿದ್ದಾನೆ ಯಾವ ರಾಶಿಯಿಂದ ಯಾವ ರಾಶಿಗೆ ಚಲಿಸಿದ್ದಾನೆ ಇದರಿಂದ ದ್ವಾದಶ ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಿದೆ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಶುಕ್ರ ಸೆಪ್ಟೆಂಬರ್ ಆರನೇ ತಾರೀಕಿನಂದು ಕನ್ಯಾ ರಾಶಿ ಇಂದ ತುಲಾ ರಾಶಿಗೆ ಚಲಿಸಿದ್ದಾನೆ. ಶುಕ್ರನು ಪ್ರತಿ ಇಪ್ಪತ್ತೆಂಟು ದಿನಗಳಿಗೊಮ್ಮೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಿರುತ್ತಾನೆ ಶುಕ್ರನ ಚಲನೆಯಿಂದಾಗಿ ದ್ವಾದಶ ರಾಶಿ ಮೇಲೆ ಅನೇಕ ಪರಿಣಾಮಗಳುಂಟಾಗುತ್ತವೆ ಶುಕ್ರನನ್ನು ಜೀವಕಾರಕ ಎಂದು ಕರೆಯಲಾಗುತ್ತದೆ. ಶುಕ್ರನ ಚಲನೆಯಿಂದಾಗಿ ದ್ವಾದಶರಾಶಿಗಳಿಗೆ ಯಾವ ರೀತಿಯ ಫಲ ಉಂಟಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಶುಕ್ರ ಎಂದು ಹೇಳಿದಾಗ ಮೊದಲು ನೆನಪಿಗೆ ಬರುವುದು ದುಡ್ಡು. ಹೌದು ಶುಕ್ರದೆಸೆ ಬಂದವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಆದರೆ ನಿಮ್ಮ ರಾಶಿಯಲ್ಲಿರುವ ಲಗ್ನಗಳ ಆಧಾರದ ಮೇಲೆ ನಿಮ್ಮ ರಾಶಿಫಲ ನಿರ್ಧರಿತವಾಗಿರುತ್ತದೆ. ಶುಕ್ರ ಹಣಕ್ಕೆ ಅಧಿಪತಿಯಾಗುತ್ತಾನೆ ಐಶ್ವರ್ಯಕ್ಕೆ ಅಧಿಪತಿಯಾಗುತ್ತಾನೆ ಪ್ರೀತಿ ಪ್ರೇಮ ವಿವಾಹಗಳಿಗೆ ಶುಕ್ರ ದೆಸೆ ಹೇಗಿದೆ ಎಂಬುದನ್ನು ನೋಡುತ್ತಾರೆ.ಗಂಡು ಮಕ್ಕಳಿಗೆ ವಿವಾಹ ಆಗದಿದ್ದಾಗ ಜಾತಕವನ್ನು ತೋರಿಸಿದಾಗ ಶುಕ್ರನನ್ನು ಬಲಿಷ್ಠ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಶುಕ್ರ ಸೌಂದರ್ಯಕಾರಕನಾಗಿರುತ್ತನೆ. ತುಂಬಾ ಬೆಳ್ಳಗೆ ಚೆನ್ನಾಗಿ ಇದ್ದರೆ ಅವರ ರಾಶಿಯಲ್ಲಿ ಶುಕ್ರ ಒಳ್ಳೆಯ ಮನೆಯಲ್ಲಿದ್ದಾನೆ ಎಂದು ಅರ್ಥ. ಶುಕ್ರನು ಮೂರು ನಕ್ಷತ್ರಗಳಿಗೆ ಅಧಿಪತಿಯಾಗಿರುತ್ತಾನೆ.
ಭರಣಿ ನಕ್ಷತ್ರ ಪೂರ್ವಾಶಾಡ ನಕ್ಷತ್ರ ಪೂರ್ವಬಾದ್ರ ನಕ್ಷತ್ರ ಅಂದರೆ ನೀವು ಈ ನಕ್ಷತ್ರದಲ್ಲಿ ಹುಟ್ಟಿದರೆ ಮೊದಲ ಗ್ರಹದಲ್ಲಿ ಶುಕ್ರ ಇರುತ್ತಾನೆ. ಶುಕ್ರನು ವೃಷಭ ಮತ್ತು ತುಲಾರಾಶಿಗೆ ಅಧಿಪತಿಯಾಗಿರುತ್ತಾನೆ ಕನ್ಯಾ ಮತ್ತು ಮೀನರಾಶಿಯಲ್ಲಿ ನೀಚನಾಗಿರುತ್ತಾನೆ. ಸೆಪ್ಟೆಂಬರ್ ಆರರಿಂದ ಅಕ್ಟೋಬರ್ ಎರಡರ ವರೆಗೆ ಶುಕ್ರನು ತುಲಾ ರಾಶಿಯಲ್ಲಿ ಇರುತ್ತಾನೆ ನಂತರ ಅಕ್ಟೋಬರ್ ಎರಡರ ನಂತರ ವೃಶ್ಚಿಕ ರಾಶಿಗೆ ಹೋಗುತ್ತಾನೆ.
ಶುಕ್ರನು ಯಾವ ರಾಶಿಯ ಜೊತೆ ಒಳ್ಳೆಯ ಸಂಬಂಧ ಹೊಂದಿರುತ್ತಾರೆ ಅವರೊಂದಿಗೆ ನೀವು ವ್ಯವಹಾರವನ್ನು ಮಾಡಿದರೆ ಒಳ್ಳೆಯದಾಗುತ್ತದೆ. ನೀವು ವೃಷಭ ಅಥವಾ ತುಲಾ ರಾಶಿಯಲ್ಲಿ ಹುಟ್ಟಿದವರಾಗಿದ್ದರೆ ನಿಮಗೆ ಶನಿ ಬುಧ ಇರುವ ರಾಶಿಯವರ ಜೊತೆ ಒಳ್ಳೆಯ ಸ್ನೇಹ ವ್ಯಾಪಾರ ಸಂಬಂಧ ಮಾಡಬಹುದು. ಇನ್ನು ನೀವು ಮಾಡ ಬಾರದಿರುವುದು ಸೂರ್ಯ ಮತ್ತು ಚಂದ್ರರ ಜೊತೆ ಶುಕ್ರನಿಗೆ ಸೂರ್ಯ ಮತ್ತು ಚಂದ್ರರ ಜೊತೆ ಅಂತಹ ಒಂದು ಹೊಂದಾಣಿಕೆ ಕಂಡುಬರುವುದಿಲ್ಲ. ಇನ್ನು ಅರ್ಧ ಹೊಂದಾಣಿಕೆ ಇದೆ ಅರ್ಧ ಹೊಂದಾಣಿಕೆ ಇಲ್ಲ ಎಂಬುದು ಗುರು ಮತ್ತು ಕುಜನ ಜೊತೆ. ಈ ರೀತಿಯಾಗಿ ನೀವು ಯಾವ ರಾಶಿಯವರ ಜೊತೆ ಹೊಂದಾಣಿಕೆಯನ್ನು ಹೊಂದುತ್ತೀರಿ ಅದೇ ರೀತಿಯ ಫಲ ನಿಮಗೆ ಸಿಗುತ್ತದೆ.
ಶುಕ್ರನ ಚಲನೆಯಿಂದ ದ್ವಾದಶ ರಾಶಿಯವರ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮೇಷ ರಾಶಿಯವರಿಗೆ. ಇವರಿಗೆ ಶುಕ್ರನ ಚಲನೆಯಿಂದ ತುಂಬಾ ಒಳ್ಳೆಯ ಸಮಯ ಇದೆ ಉದ್ಯೋಗದಲ್ಲಿ ಉತ್ತಮ ಸ್ಥಾನಕ್ಕೆ ಹೋಗುವ ಸಾಧ್ಯತೆಗಳಿವೆ ನಿಮ್ಮ ಬಿಜಿನೆಸ್ ಪಾರ್ಟ್ನರ್ ಜೊತೆ ಉತ್ತಮ ಸಂಬಂಧ ಉಂಟಾಗುತ್ತದೆ ಜೊತೆಗೆ ನಿಮಗೆ ಯಾವುದಾದರೂ ಆಸ್ತಿ ಬರುವುದಿದ್ದರೆ ಆ ಆಸ್ತಿ ನಿಮ್ಮ ಕೈಸೇರುತ್ತದೆ ನಿಮ್ಮ ಕುಟುಂಬದವರ ಜೊತೆ ಒಳ್ಳೆಯ ಹೊಂದಾಣಿಕೆಯಿಂದ ಇರುತ್ತೀರ. ನಿಮಗೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು ನೀವು ಗೋಧಿಯನ್ನು ಶುಕ್ರವಾರದ ದಿನ ದಾನಮಾಡಬೇಕು.
ವೃಷಭ ರಾಶಿಯವರು ಇವರಿಗೆ ಶುಕ್ರ ಆರನೇ ಮನೆಯ ದೃಷ್ಟಿಯನ್ನು ತೋರಿಸುತ್ತಾನೆ ಇದರಿಂದ ಆರೋಗ್ಯದ ಮೇಲೆ ಸ್ವಲ್ಪ ಕೆಟ್ಟ ಪರಿಣಾಮಗಳುಂಟಾಗುತ್ತವೆ ಶತ್ರುಗಳು ಜಾಸ್ತಿ ಆಗುತ್ತಾರೆ ಇದ್ದಕ್ಕಿದ್ದ ಹಾಗೆ ಸ್ನೇಹಿತರೇ ಶತ್ರುಗಳ ಆಗುವ ಸಂಭವ ಇರುತ್ತದೆ ವೃಷಭ ರಾಶಿಯವರು ಹೊಸ ಮನೆಗೆ ಹೋಗುವಂತಹ ಸಂಭವ ಕಾಣಿಸುತ್ತಿದೆ ಮತ್ತು ಇವರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆಇದೆ. ಇನ್ನು ಈ ರಾಶಿಯವರು ಎಂಟು ವರ್ಷಕ್ಕಿಂತ ಒಳಗಿನ ಹೆಣ್ಣುಮಕ್ಕಳಿಗೆ ಕೇಸರಿ ಬಣ್ಣದ ಸಿಹಿತಿಂಡಿಗಳನ್ನು ದಾನವಾಗಿ ನೀಡಬೇಕು.
ಇನ್ನು ಮಿಥುನ ರಾಶಿ. ಈ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯ ಹೊಸ ಸಂಬಂಧ ಬೆಸೆದುಕೊಳ್ಳುವ ಸಮಯ ಇದಾಗಿದೆ ಮದುವೆ ಆಗುವಂತಹ ಸಂಭವ ಇದೆ ಮತ್ತು ಗಂಡ-ಹೆಂಡತಿಯ ನಡುವೆ ಒಳ್ಳೆಯ ಸಾಮರಸ್ಯ ಇರುತ್ತದೆ. ಮಕ್ಕಳಾಗದೇ ಇರುವವರಿಗೆ ಕೆಲವೊಬ್ಬರಿಗೆ ಮಕ್ಕಳಾಗುವಂತಹ ಸಂಭವ ಇದೆ. ನಿವು ಹಸುವಿಗೆ ಬುಧುವಾರ ದಿನ ಬಾಳೆಹಣ್ಣು ಮತ್ತು ಬೆಲ್ಲವನ್ನು ತಿನ್ನಿಸಬೇಕು. ಮುಂದಿನ ರಾಶಿ ಕರ್ಕಾಟಕ ರಾಶಿ ಈ ರಾಶಿಯವರಿಗೂ ಕೂಡ ತುಂಬಾ ಒಳ್ಳೆಯ ಸಮಯ ನೀವು ಆಸ್ತಿಯನ್ನು ಮಾಡಿಕೊಳ್ಳುವುದಕ್ಕೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು ನಿಮಗೆ ಮದುವೆಯಾಗುವ ಸಂಭವ ಕೂಡ ಇದೆ. ನೀವು ಮಾಡಬೇಕಾಗಿರುವಂತಹದ್ದು ಶುಕ್ರವಾರದ ದಿನ ಕಡಲೆಕಾಳನ್ನು ದಾನ ಮಾಡಬೇಕು.
ಕರ್ಕಾಟಕ ರಾಶಿಯವರಿಗೆ ಸ್ವಲ್ಪ ತೊಂದರೆಯಾಗುವಂತಹ ಸಂಭವವಿದೆ ಹುಷಾರಾಗಿರಬೇಕು. ಇನ್ನು ಸಿಂಹ ರಾಶಿಯವರ ಫಲಾಫಲ ನೋಡುವುದಾದರೆ ಸಿಂಹ ರಾಶಿಯವರು ಅಣ್ಣ-ತಮ್ಮಂದಿರ ಜೊತೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಳ್ಳಬಹುದು ನೀವು ಹೊಸದಾಗಿ ಏನನ್ನಾದರೂ ಕಲಿಯಬೇಕು ಎಂದರೆ ಇದು ನಿಮಗೆ ಒಳ್ಳೆಯ ಸಮಯ ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಸಂವಹನ ಚೆನ್ನಾಗಿರುವುದರಿಂದ ಈ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದಾದರೂ ಮಾಹಿತಿಯನ್ನು ಫಾರ್ವರ್ಡ್ ಮಾಡಬಹುದು. ನೀವು ಓಂ ಶುಕ್ರಾಯ ನಮಃ ಎನ್ನುವ ಮಂತ್ರವನ್ನು ನೂರಾ ಎಂಟು ಸಲ ಎಂಟು ಶುಕ್ರವಾರಗಳ ಕಾಲ ಪಠಣ ಮಾಡಬೇಕು.
ಕನ್ಯಾರಾಶಿಯವರಿಗೆ, ನಿಮ್ಮ ಮಾತು ಚೆನ್ನಾಗಿರುವುದರಿಂದ ನೀವು ಕೂಡ ಉದ್ಯೋಗಕ್ಕೆ ಸಂಬಂಧಿಸಿದ ಡೀಲ್ ಗಳಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಶುಕ್ರನ ದೆಸೆಯಿಂದಾಗಿ ನೀವು ಹಣವನ್ನು ಗಳಿಸಬಹುದಾಗಿದೆ ನೀವು ಕೂಡ ಎಂಟು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಕೇಸರಿ ಬಣ್ಣದ ಸಿಹಿತಿಂಡಿಯನ್ನು ತಿನ್ನಿಸಬೇಕು. ಮುಂದಿನ ರಾಶಿ ತುಲಾ ರಾಶಿ ಈ ರಾಶಿಯವರಿಗೆ ಇದ್ದಕ್ಕಿದ್ದ ಹಾಗೆ ತಾನು ತುಂಬಾ ಚೆನ್ನಾಗಿ ಕಾಣಿಸಿಕೊಳ್ಳಬೇಕು ಒಳ್ಳೆಯ ಬಟ್ಟೆಗಳನ್ನು ಧರಿಸಬೇಕು ಎನಿಸುತ್ತದೆ ತುಲಾ ರಾಶಿಯವರು ತಮ್ಮನ್ನು ತಾವು ಹೆಚ್ಚು ಪ್ರೀತಿಸುವುದಕ್ಕೆ ಶುರುಮಾಡುತ್ತಾರೆ. ಮತ್ತು ಇವರಲ್ಲಿ ಯಾವುದೇ ಕೆಲಸವನ್ನಾದರೂ ತಾನು ಮಾಡಬಲ್ಲೆ ಎಂಬ ವಿಶ್ವಾಸ ಮೂಡುತ್ತದೆ.
ಈ ರಾಶಿಯವರು ಕಪ್ಪು ಹಸುವಿಗೆ ಬಾಳೆಹಣ್ಣು ಮತ್ತು ಬೆಲ್ಲವನ್ನು ತಿನ್ನಿಸಬೇಕು. ಮುಂದಿನ ರಾಶಿ ವೃಶ್ಚಿಕ ರಾಶಿ ಇವರಿಗೆ ಸ್ವಲ್ಪಮಟ್ಟಿಗೆ ನಷ್ಟಗಳು ಅಂದರೆ ಆಸ್ಪತ್ರೆಗೆ ಸಂಬಂಧಿಸಿದಂತೆ ನಷ್ಟಗಳು ಉಂಟಾಗಬಹುದು ಅಥವಾ ವಿದೇಶಿ ಪ್ರಯಾಣಕ್ಕೆ ನಿಮಗೆ ಅವಕಾಶ ಸಿಕ್ಕು ಅದರಿಂದಲೂ ನಷ್ಟ ಆಗುವ ಸಾಧ್ಯತೆ ಇರುತ್ತದೆ. ನೀವು ಲಲಿತಾ ಸಹಸ್ರನಾಮ ವನ್ನು ಐದು ಶುಕ್ರವಾರ ಪಠಣ ಮಾಡಬೇಕು.ಮುಂದಿನ ರಾಶಿ ಧನಸ್ಸು ರಾಶಿ ಧನಸ್ಸು ರಾಶಿಯವರಿಗೆ ಶುಕ್ರ ದೆಸೆಯಿಂದ ಹೆಚ್ಚು ಹೆಚ್ಚು ಲಾಭ ಆಗುವ ಸಾಧ್ಯತೆ ಇದೆ ಸ್ನೇಹಿತರ ಸಮೂಹ ದಿಂದಲೂ ನಿಮಗೆ ತುಂಬಾ ಒಳ್ಳೆಯದಾಗುವ ಸೂಚನೆ ಇದೆ ನೀವು ಕೂಡ ಶುಕ್ರವಾರ ಎಂಟು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಕೇಸರಿ ಬಣ್ಣದ ಸಿಹಿ ತಿನಿಸನ್ನು ದಾನಮಾಡಿ.
ಯಾಕೆ ಕೇಸರಿ ಬಣ್ಣದ ಸಿಹಿ ತಿನಿಸನ್ನು ಧಾನ ಮಾಡಬೇಕು ಎಂದರೆ ಶುಕ್ರ ಹೆಣ್ಣು ರಾಶಿ ನೀವು ಹೆಣ್ಣುಮಕ್ಕಳಿಗೆ ಸಿಹಿ ತಿನಿಸನ್ನು ಕೊಟ್ಟಾಗ ಅವರು ಖುಷಿಯಾಗುತ್ತಾರೆ ಆಗ ನಿಮಗೆ ಶುಕ್ರನ ಅನುಗ್ರಹ ಸಿಗುತ್ತದೆ. ಇನ್ನು ಮಕರ ರಾಶಿ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ನೀವು ಉನ್ನತಮಟ್ಟದ ಹುದ್ದೆಗಳಿಗೆ ಹೋಗಬಹುದು ನೀವು ಯಾವುದಾದರೊಂದು ಗುರಿಯನ್ನು ಸಾಧಿಸಬೇಕು ಎಂದುಕೊಂಡರೆ ಇದು ನಿಮಗೆ ಒಳ್ಳೆಯ ಸಮಯಾವಕಾಶವಾಗಿದೆ. ನೀವು ಬಿಳಿ ಬಣ್ಣದ ಜೀರ್ಕಾನ್ ಅನ್ನು ಮಧ್ಯದ ಬೆರಳಿಗೆ ಹಾಕಿಕೊಳ್ಳಿ ಬೆಳ್ಳಿಯಿಂದ ಮೂರು ಕ್ಯಾರೆಟ್ ಇರುವಂಥದ್ದನ್ನು ಮಾಡಿಸಿಕೊಳ್ಳಿ. ಇದರಿಂದ ತುಂಬಾ ಒಳ್ಳೆಯ ಫಲ ಸಿಗುತ್ತದೆ.
ಮುಂದಿನ ರಾಶಿ ಕುಂಭ ರಾಶಿ. ಕುಂಭ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯವಾಗಿದೆ ನೀವು ವಿದೇಶಿ ಪ್ರಯಾಣಕ್ಕೆ ಹೋಗುವಂತಹ ಸಾಧ್ಯತೆಗಳಿವೆ. ನೀವು ಶಿಕ್ಷಣಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರೆ ಅದು ನಿಮಗೆ ಸಿಗುವ ಸಾಧ್ಯತೆ ಇದೆ. ನಕಾರಾತ್ಮಕ ಶಕ್ತಿಯ ಕಡೆ ಗಮನಸೆಳೆಯುವ ಸಂಭವವಿರುವುದರಿಂದ ನೀವು ಪ್ರತಿ ಶುಕ್ರವಾರ ಕರ್ಪೂರದ ಆರತಿಯನ್ನು ಮಾಡಬೇಕು ಮತ್ತು ಬಿಳಿ ಜೀರ್ಕಾನ್ ಧರಿಸಬೇಕು.
ಇನ್ನು ಮೀನ ರಾಶಿ. ಮೀನ ರಾಶಿಯವರ ರಾಶಿ ಫಲ ತುಂಬಾ ಚೆನ್ನಾಗಿದೆ ನಿಮಗೆ ಒಳ್ಳೆಯ ಲಾಭ ಉಂಟಾಗುತ್ತದೆ ನೀವು ಲಾಟರಿ ಹೊಡೆಯುವಂತಹ ಸಂಭವ ಇದೆ ನೀವೇನಾದರೂ ಶೇರು ಮಾರುಕಟ್ಟೆಯಲ್ಲಿ ಹಣವನ್ನು ತೊಡಗಿಸಿದರೆ ಅದರಿಂದಲೂ ಲಾಭ ಉಂಟಾಗುತ್ತದೆ ಆದರೆ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಹುಷಾರಾಗಿರಬೇಕು ನೀವು ಕೂಡ ಸಿಲ್ವರ್ ನ ಬಿಳಿಯ ಜೀರ್ಕಾನ್ ಧರಿಸಿಕೊಳ್ಳುವುದು ತುಂಬಾ ಒಳ್ಳೆಯದು. ಈ ರೀತಿಯಾಗಿ ಸೆಪ್ಟೆಂಬರ್ ಆರರಿಂದ ಅಕ್ಟೋಬರ್ ಎರಡನೇ ತಾರೀಕಿನವರೆಗೆ ದ್ವಾದಶ ರಾಶಿಗಳ ಫಲಾ ಫಲವಿರುತ್ತದೆ ನೀವು ನಿಮ್ಮ ರಾಶಿ ಕಲೆಗಳನ್ನು ತಿಳಿದುಕೊಂಡು ಅಲ್ಲಿ ಹೇಳಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ ಇದರಿಂದ ನಿಮ್ಮ ಜೀವನದ ಚೆನ್ನಾಗಿರುತ್ತದೆ.