ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ. ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ.
ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ. ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ. ರಕ್ಷಾಬಂಧನದ ವಿಶೇಷತೆಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ರಕ್ಷಾಬಂಧನದ ಈ ದಿನದಂದು ಬೆಳಿಗ್ಗೆಯೇ ತಂಗಿಯರೆಲ್ಲ ತಮ್ಮ ತಮ್ಮ ಅಣ್ಣಂದಿರಿಗೆ ರಾಖಿ ಕಟ್ಟಿ ಉಡುಗೊರೆಯನ್ನು ಪಡೆದುಕೊಳ್ಳುತ್ತಾರೆ. ಈ ರಕ್ಷಾಬಂಧನದ ಬಗ್ಗೆಯಾಗಲೀ, ಅದರ ಹಿಂದಿನ ಮಹತ್ವವಾಗಲೀ ಅದೆಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ. ಭಾರತೀಯರು ಅತಿಹೆಚ್ಚು ಖುಷಿಯಿಂದ ಆಚರಿಸುವ ಹಬ್ಬ ರಕ್ಷಾಬಂಧನ. ಅಣ್ಣ ತಂಗಿಯರ ಪ್ರೀತಿ, ಬಾಂಧವ್ಯದ ಪ್ರತೀಕ ಈ ರಕ್ಷಾಬಂಧನ. ಭಾರತದಲ್ಲಿ ಆಚರಣೆ ಮಾಡಿದ ಹಾಗೆಯೇ ನೇಪಾಳದಲ್ಲಿ ಕೂಡಾ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ನಾವಾಚರಿಸುವ ಈ ರಕ್ಷಾಬಂಧನದಲ್ಲೀ ಮುಖ್ಯವಾಗಿ ಎರಡು ಪದಗಳು ಇವೆ. ‘ ರಕ್ಷ’ ಮತ್ತು ‘ಬಂಧನ’ . ಅಂದರೆ ರಕ್ಷಣೆ ಮತ್ತು ಬಂಧ ಎಂದರ್ಥ. ಸಹೋದರ ಮತ್ತು ಸಹೋದರಿಯರ ನಡುವಿನ ಎಂದಿಗೂ ಕೊನೆಗೊಳ್ಳದ ತಮ್ಮ ನಡುವಿನ ಬಾಂಧವ್ಯವನ್ನು ರಕ್ಷಾಬಂಧನ ಎನ್ನುತ್ತಾರೆ. ಇದನ್ನು ಸಹೋದರ ಸಹೋದರಿಯರು ಮಾತ್ರ ಆಚರಣೆ ಮಾಡುತ್ತಾರೆ ಆದರೆ ಈಗ ಮುಂದುವರೆದ ಕಾಲದಲ್ಲಿ ರಕ್ಷಾಬಂಧನ ಕೂಡಾ ಆಧುನೀಕರಣಗೊಂಡು ಚಿಕ್ಕಮ್ಮ, ಅತ್ತಿಗೆಯರೂ ಸಹ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಈ ರಕ್ಷಾಬಂಧನದ ಹಿಂದೆ ಕೆಲವು ಪೌರಾಣಿಕ ಘಟನೆಗಳು, ಕಾರಣಗಳು ಸಹ ಇವೆ. ವೃತ್ರ ಅಸುರನಿಂದ ಸೋಲಲ್ಪಟ್ಟ ಇಂದ್ರದೇವನು ತನ್ನ ಶತ್ರುಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳುವ ಸಲುವಾಗಿ ಕೈಗೆ ಒಂದು ರಕ್ಷೆಯನ್ನು ಕಟ್ಟಿಕೊಳ್ಳಬೇಕು ಎಂದು ದೇವಾಗುರು ಬ್ರಹಸ್ಪತಿ ಹೇಳುತ್ತಾರೆ. ಈ ಮಾತಿನ ಹಾಗೆ ಇಂದ್ರನ ಪತ್ನಿ ಶಚಿದೇವಿಯು ಇಂದ್ರನಿಗೆ ರಕ್ಷೇಯನ್ನು ಕಟ್ಟುತ್ತಾರೆ. ಇನ್ನೂ ರಕ್ಷಾಬಂಧನದ ಈ ಶುಭ ದಿನದಂದು ಹಬ್ಬದ ಸ್ನಾನ ಮಾಡಿ ತೆಂಗಿನಕಾಯಿ ಉಡುಗೊರೆ ನೀಡಲಾಗುತ್ತದೆ. ಹಾಗೆಯೇ ಈ ಹಬ್ಬವನ್ನು ಮೀನುಗಾರ ಸಮುದಾಯದವರು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ವೇಳೆ ವರುಣದೇವನಿಗೆ ರಾಖಿ ಮತ್ತು ತೆಂಗಿನಕಾಯಿಯನ್ನು ಸಮರ್ಪಣೆ ಮಾಡುತ್ತಾರೆ.
ಇನ್ನೊಂದು ಪುರಾಣದ ಪ್ರಕಾರ, ಬಲಿಚಕ್ರವರ್ತಿಯ ಸ್ವರ್ಗದ ಮೇಲೆ ದಂಡೆತ್ತಿ ಬಂದಾಗ ತನ್ನ ಪತಿ ವಿಷ್ಣುವನ್ನು ಉಳಿಸಿಕೊಳ್ಳುವ ಸಲುವಾಗಿ ಲಕ್ಷ್ಮೀದೇವಿಯು ಬಲಿಚಕ್ರವರ್ತಿ ಗೆ ರಾಖಿ ಕಟ್ಟಿದಳು ಎಂದೂ ಉಲ್ಲೇಖಿಸಲಾಗುತ್ತದೆ. ಇನ್ನೂ ಈ ಹಬ್ಬವನ್ನು ಭಾರತ ಮಾತ್ರವಲ್ಲದೆ ಇನ್ನೂ ಅನೇಕ ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಸಹೋದರನಿಗೆ ರಾಖಿಯನ್ನು ಕಟ್ಟುವ ಸಹೋದರಿಯು ತನ್ನ ಸಹೋದರನಿಗೆ ಆರೋಗ್ಯ, ಸಮೃದ್ಧಿ ಸುಖ ಸಿಗಲೆಂದು ಪ್ರಾರ್ಥಿಸಿ ಕಟ್ಟುತ್ತಾಳೆ. ಈ ಸಂದರ್ಭದಲ್ಲಿ ಸಹೋದರ ಕೂಡಾ ಸಹೋದರಿಗೆ ಖುಷಿ ನೀಡಲು ಆಶೀರ್ವಾದದ ಜೊತೆಗೆ ನಾನಾ ಭಾಗೆಯ ಉಡುಗೊರೆಗಳನ್ನು ಸಹ ನೀಡುತ್ತಾರೆ ಹಾಗೂ ಯಾವುದೇ ಸಂದರ್ಭದಲ್ಲಿ ಕೂಡಾ ಕೆಟ್ಟ ಪರಿಸ್ತಿತಿ ಹಾಗೂ ಕೆಟ್ಟ ಜನರಿಂದ ರಕ್ಷಣೆ ನೀಡುವುದಾಗಿ ಕೂಡಾ ಪ್ರಮಾಣ ಮಾಡುತ್ತಾರೆ.
ರಕ್ಷಾಬಂಧನ ಎಂದರೆ ಕೇಸರಿ ದಾರ ಕಟ್ಟಿ, ಉಡುಗೊರೆ ನೀಡುವುದಷ್ಟೆ ಅಲ್ಲ ಪ್ರೀತಿ, ಮಮತೆಯನ್ನು ತುಂಬಿ ನಾ ಬದುಕಿರುವ ತನಕ ನನ್ನ ಅಣ್ಣ ಖುಷಿಯಾಗಿರಬೇಕು, ಈ ರಕ್ಷೆ ಸದಾ ನನ್ನ ಅಣ್ಣನನ್ನು ರಕ್ಷಿಸಬೇಕು’ ಎಂಬ ಆಶಯದೊಂದಿಗೆ ತಂಗಿ ಪ್ರೀತಿಯಿಂದ ಕಟ್ಟುವ ರಕ್ಷೆ. ತಂಗಿಯಾದವಳಿಗೆ ಅಣ್ಣ ಕೇವಲ ಸಂಬಂಧವಲ್ಲ ಅಳುವಾಗ ಕಣ್ಣೊರೆಸುವ ಕೈಯಾಗುತ್ತಾನೆ, ನೊಂದಾಗ ಮಿಡಿಯುವ ಹೃದಯವಾಗುತ್ತಾನೆ, ರಕ್ಷಣೆಗೆ ಸದಾ ಸಿದ್ದವಿರುವ ಯೋಧನಾಗಿರುತ್ತಾನೆ, ಅಂತೆಯೇ ತಂಗಿ ಅಣ್ಣನಾದವನ ಪ್ರತಿ ಭಾವನೆಗೆ ಸ್ಪಂದಿಸುವ ಗೆಳತಿಯಾಗಿರುತ್ತಾಳೆ, ಆರೋಗ್ಯ ಕೆಟ್ಟಾಗ ಸೇವೆ ಮಾಡುವಸೇವಕಿಯಾಗಿರುತ್ತಾಳೆ.
ಇದು ಕೇವಲ ರಕ್ಷೆಯ ಬಂಧನವಲ್ಲ ಮಧುರ ಪ್ರೀತಿಯ ಬಂಧನ. ಆ ದಿನ ಸಹೋದರಿ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ ಸೋದರನ ಆಶೀರ್ವಾದ ಪಡೆಯುತ್ತಾಳೆ. ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ಈ ಹಬ್ಬ ದಟ್ಟಗೊಳಿಸುತ್ತದೆ. ಅಣ್ಣ ತಂಗಿಯರ ಭಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ಮನದಲ್ಲಿ ಮೂಡಿಸುತ್ತದೆ. ಸಹೋದರ- ಸಹೋದರಿಯರ ನಢುವಿನ ಭ್ರಾತೃತ್ವದ ನಂಟನ್ನು ಗಟ್ಟಿಗೊಳಿಸುವ ಈ ಆಚರಣೆ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವೂ ಹೌದು. ಇದೇ ಈ ರಕ್ಷಾಬಂಧನ ಹಬ್ಬದ ಹಿಂದಿನ ಮಹತ್ವವಾಗಿದೆ
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430