ದೊಡ್ಮನೆ ಮಗನಾದ ಶಿವಣ್ಣ ಅವರು ರಾಘಣ್ಣನಿಗೆ ಖಾಯಿಲೆ ಕಾಣಿಸಿಕೊಂಡ ನಂತರ ಮನೆಯ ಜವಾಬ್ದಾರಿಗಳನ್ನು ವಹಿಸಿಕೊಂಡರು. ಶಿವಣ್ಣ ಸಾಲು ಸಾಲು ಸಮಸ್ಯೆಗಳ ನಡುವೆ ಮಗಳ ಅನಾರೋಗ್ಯ ಸಮಸ್ಯೆಯನ್ನು ಎದುರಿಸ ಬೇಕಾಯಿತು ಹಾಗಾದರೆ ಶಿವಣ್ಣ ಅವರ ಮಗಳ ಅನಾರೋಗ್ಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ದೊಡ್ಮನೆ ಯಜಮಾನ ಶಿವಣ್ಣ ಹಾಗೂ ಗೀತಾ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ನಿರುಪಮಾ ಹಾಗೂ ನಿವೇದಿತಾ ಅವರು ಹೆಚ್ಚಾಗಿ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಶಿವಣ್ಣ ಅವರು ತಮ್ಮ ಮಕ್ಕಳ ಬಗ್ಗೆ ಎಲ್ಲಿಯೂ ಹೆಚ್ಚಾಗಿ ಮಾತನಾಡುವುದಿಲ್ಲ. ಶಿವಣ್ಣ ಅವರಿಗೆ ತಮ್ಮ ಮಕ್ಕಳು ಸಿನಿಮಾ ರಂಗದಿಂದ ದೂರವಿರಬೇಕು ಎಂದು ಆಸೆ ಪಟ್ಟಿದ್ದರು
ಆದರೂ ಶಿವಣ್ಣ ಅವರ ಎರಡನೆ ಮಗಳು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಶಿವಣ್ಣ ಅವರು ಮನೆಯ ಹಿರಿಯ ಮಗನಂತೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರಾಜಕುಮಾರ್ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿದಾಗ ಎಲ್ಲಾ ಕಡೆ ಆತಂಕ ಮನೆಮಾಡಿತ್ತು ಆಗಲೂ ಮನೆಯ ಮಗನಾಗಿ ಶಿವಣ್ಣ ಜವಾಬ್ದಾರಿಯಿಂದ ನಡೆದುಕೊಂಡರು.
ನಂತರ ಅಣ್ಣಾವ್ರು ನಿಧನರಾದರು ಅದಾದ ನಂತರ ಪಾರ್ವತಮ್ಮ ರಾಜಕುಮಾರ್ ಅವರು ನಿಧನರಾದಾಗ ಶಿವಣ್ಣ ಅವರು ನಿಭಾಯಿಸಿದರು. ರಾಘಣ್ಣ ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದರು ಆ ಸಂದರ್ಭಗಳಲ್ಲಿ ಶಿವಣ್ಣ ಅವರ ಮೇಲೆ ಜವಾಬ್ದಾರಿ ಇತ್ತು. ಇದೀಗ ಮಗನಂತಿರುವ ತಮ್ಮನನ್ನು ಕಳೆದುಕೊಂಡರು ಪುನೀತ್ ಅವರ ಪಾರ್ಥಿವ ಶರೀರದ ಮುಂದೆ ಶಿವಣ್ಣ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಣ್ಣಾವ್ರಿಗೆ ಗಾಜನೂರಿನಲ್ಲಿ ಒಂದು ಆಸ್ಪತ್ರೆ ಕಟ್ಟಿಸಬೇಕು ಎಂಬ ಆಸೆ ಇತ್ತು ರಾಘಣ್ಣ ಅವರಿಗೆ ಮೆಡಿಕಲ್ ಓದಿಸಲಾಯಿತು ಆದರೆ ಅವರು ಅರ್ಧಕ್ಕೆ ಬಿಟ್ಟು ಬಂದರು.
ಅಣ್ಣಾವ್ರ ಆಸೆಯನ್ನು ಶಿವಣ್ಣ ಅವರು ಮಕ್ಕಳ ಮೂಲಕ ಈಡೇರಿಸಬೇಕೆಂದು ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುತ್ತಾರೆ. ಶಿವಣ್ಣ ಅವರ ಮೊದಲ ಮಗಳು ಮೆಡಿಕಲ್ ಓದಿದ್ದಾರೆ. ಮೆಡಿಕಲ್ ಓದುವಾಗ ತಮ್ಮ ಸ್ನೇಹಿತ ದಿಲೀಪ್ ಅವರನ್ನು ಪ್ರೀತಿಸುತ್ತಾರೆ. ನಂತರ ನಿರುಪಮಾ ಅವರು ಅಪ್ಪ ಅಮ್ಮನ ಹತ್ತಿರ ಪ್ರೀತಿಯ ವಿಷಯವನ್ನು ಹೇಳಿ ಅನುಮತಿ ಕೇಳುತ್ತಾರೆ. ಶಿವಣ್ಣ ಅವರಿಗೆ ದಿಲೀಪ್ ಅವರ ಕೆಲವು ಗುಣಗಳು ಇಷ್ಟವಾಗುತ್ತದೆ ಅದರಂತೆ ಮದುವೆಯನ್ನು ಅದ್ದೂರಿಯಾಗಿ ಮಾಡಲಾಗುತ್ತದೆ.
ಇದೀಗ ನಿರುಪಮಾ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿತು ಅದರ ಚಿಂತೆ ಶಿವಣ್ಣ ಅವರನ್ನು ಕಾಡುತ್ತಿದೆ. ಮದುವೆಗೆ ಮುನ್ನ ನಿರುಪಮಾ ಅವರು ದಪ್ಪ ಇದ್ದರು ವೇಟ್ ಲಾಸ್ ಮಾಡಿಕೊಳ್ಳಲು ಟ್ರೀಟ್ಮೆಂಟ್ ಮಾಡುತ್ತಾರೆ. ಅದರ ಸೈಡ್ ಎಫೆಕ್ಟ್ಸ್ ನಿಂದ ಒಮ್ಮೆ ತಲೆಸುತ್ತು ಬಂದು ಬೀಳುತ್ತಾರೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅಂಡಮಾನ್ ಸಿನಿಮಾದಲ್ಲಿ ಶಿವಣ್ಣ ಅವರ ಎರಡನೆ ಮಗಳು ನಿವೇದಿತಾ ಶಿವಣ್ಣ ಅವರ ಮಗಳಾಗಿ ನಟಿಸಿದ್ದಾರೆ. ಅವರು ಆರ್ಕಿಟೆಕ್ಟ್ ಇಂಜಿನಿಯರ್ ಶಿಕ್ಷಣ ಪಡೆದಿದ್ದಾರೆ. ಅವರು ಸಿನಿಮಾ, ಸೀರಿಯಲ್ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಗೀತಾ ಅವರು ರಾಜಕೀಯದಲ್ಲಿ ಕೆಲಸ ಮಾಡಿದ್ದಾರೆ. ಶಿವಣ್ಣ ಅವರ ಕುಟುಂಬ ಸುಖವಾಗಿರಲಿ ಎಂದು ಆಶಿಸೋಣ.