ಮಹಿಳಾ ಹಾಗು ಪುರುಷ ಅಭ್ಯರ್ಥಿಗಳಿಗೆ VRL ಸಂಸ್ಥೆಯಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ನಾವಿಂದು ವಿ ಆರ್ ಎಲ್ ವತಿಯಿಂದ ನಡೆಯುತ್ತಿರುವ ನೇಮಕಾತಿಯ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೆವೆ. ಎರಡು ಸಾವಿರದ ಇಪ್ಪತ್ತೊಂದಕ್ಕೆ ಸಂಬಂಧಿಸಿದಂತೆ ವಿ ಆರ್ ಎಲ್ ವಿಜಯಾನಂದ ರೋಡ್ ಲೈನ್ಸ್ ವತಿಯಿಂದ ನೇಮಕಾತಿ ನಡೆಯುತ್ತಿದೆ ಇದು ಖಾಸಗಿ ಉದ್ಯಮವಾಗ

ಇದಕ್ಕೆ ಮಹಿಳಾ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳು ಇಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಅಕೌಂಟೆಂಟ್ ಕ್ಲರ್ಕ್ ತೋಟಗಾರಿಕಾ ನಿರ್ವಹಣೆಗಾಗಿ ಇನ್ನೂ ಹತ್ತು ಹಲವು ಹುದ್ದೆಗಳಿಗಾಗಿ ನೇಮಕಾತಿ ನಡೆಯುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಈ ಒಂದು ಹುದ್ದೆಯ ನೇಮಕಾತಿಗೆ ಯಾವುದೇ ರೀತಿಯಾದಂತಹ ಪರೀಕ್ಷೆ ಇರುವುದಿಲ್ಲ ಜೊತೆಗೆ ಅರ್ಜಿ ಶುಲ್ಕವು ಕೂಡ ಇರುವುದಿಲ್ಲ. ವಿ ಆರ್ ಎಲ್ ಸಮೂಹ ಸಂಸ್ಥೆಗಳ ಅಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಆಯೋಜಿಸಲಾಗಿದ್ದು ತಮ್ಮ ಭಾವಚಿತ್ರ ಸಮೇತ ಸ್ವವಿವರವುಳ್ಳ ಮಾಹಿತಿಯೊಂದಿಗೆ ದಿನಾಂಕ ಮೂವತ್ತು ನವೆಂಬರ್ ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ವಿ ಆರ್ ಎಲ್ ಸಮೂಹ ಸಂಸ್ಥೆ ವಿಜಯಪುರ ವಿಳಾಸ, ನಂಬರ್ 97,98 ವಿಠ್ಠಲ್ ವಿಲ್ಲಾ, ಸುಕೂನ್ ಲೇಔಟ್ ಮೇನ್ ಗೇಟ್ ಸ್ಟೇಟ್ ರೋಡ್, ಸೋಲಾಪುರ ರೋಡ್, ಸರ್ಕಲ್ ಟು ರಿಂಗ್ ರೋಡ್, ವಿಜಯಪುರ.586103 ಈ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ನಂತರ ಸಂದರ್ಶನದ ದಿನಾಂಕವನ್ನು ಅರ್ಹ ಅಭ್ಯರ್ಥಿಗಳಿಗೆ ಅವರೇ ತಿಳಿಸುತ್ತಾರೆ.

ಯಾವ ಯಾವ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ ಜೊತೆಗೆ ಅದಕ್ಕೆ ಯಾವ ಮತ್ತು ಯಾವ ಅನುಭವವನ್ನು ಹೊಂದಿರಬೇಕು ಎಂಬುದನ್ನು ನೋಡುವುದಾದರೆ ಮ್ಯಾನೇಜರ್ ಒಂದು ಹುದ್ದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಹಕಾರಿ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು. ಅಕೌಂಟೆಂಟ್ ಒಂದು ಹುದ್ದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಂಪ್ಯೂಟರ್ ಮತ್ತು ಟ್ಯಾಲಿಯಲ್ಲಿ ಅನುಭವ ಹೊಂದಿರಬೇಕು.

ಇಂಟರ್ನಲ್ ಆಡಿಟರ್ ಒಂದು ಹುದ್ದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಡಿಟ್ ಅಕೌಂಟಿಂಗ್ ಜಿ ಎಸ್ ಟಿ ಹಾಗೂ ಇನ್ಕಮ್ ಟ್ಯಾಕ್ಸ್ ವಿಷಯಗಳಲ್ಲಿ ಅನುಭವವನ್ನು ಹೊಂದಿರಬೇಕು. ಲೀಗಲ್ ಆಫೀಸರ್ ಒಂದು ಹುದ್ದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಲೀಗಲ್ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿರಬೇಕು. ಕ್ಲರಿಕಲ್ ಒಂದು ಹುದ್ದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಂಪ್ಯೂಟರ್ ಮತ್ತು ಟ್ಯಾಲಿಯಲ್ಲಿ ಪರಿಣತಿಯನ್ನು ಹೊಂದಿರಬೇಕು.

ಫೀಲ್ಡ್ ಆಫೀಸರ್ ಒಂದು ಹುದ್ದೆ. ಶಿಕ್ಷಕ ಒಂದು ಹುದ್ದೆ ಕನ್ನಡ ಹಿಂದಿ ಇಂಗ್ಲಿಷ್ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿರಬೇಕು. ಡಿಪ್ಲೊಮಾ ನರ್ಸಿಂಗ್ ಒಂದು ಹುದ್ದೆ ನರ್ಸಿಂಗ್ನಲ್ಲಿ ಕನಿಷ್ಠ ಅನುಭವವನ್ನು ಹೊಂದಿರಬೇಕು. ಅಡುಗೆ-ಸಹಾಯಕರು ಒಂದು ಹುದ್ದೆ. ಸಸ್ಯಾಹಾರಿ ಅಡುಗೆ ತಯಾರಿಸುವ ಅನುಭವವಿರಬೇಕು.

ವೇತನದ ವಿಷಯವನ್ನು ಸಂದರ್ಶನದ ಸಮಯದಲ್ಲಿ ತಿಳಿಸಲಾಗುತ್ತದೆ. ಹದಿನೆಂಟು ವರ್ಷ ಮೇಲ್ಪಟ್ಟವರು ಅರ್ಜಿಯನ್ನು ಸಲ್ಲಿಸಬಹುದು. ಇದಿಷ್ಟು ವಿ ಆರ್ ಎಲ್ ಸಮೂಹ ಸಂಸ್ಥೆ ವಿಜಯಪುರದಿಂದ ಬಂದಿರುವ ನೇಮಕಾತಿಯ ಕುರಿತಾದ ಮಾಹಿತಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *