ಶಿವರಾಜ್ ಕುಮಾರ್ ಅವರ ಸೆಂಚುರಿ ಕಂಡ ಸಿನಿಮಾಗಳು ಇಲ್ಲಿವೆ

0 7

ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಅವರು ತಮ್ಮದೆ ವಿಭಿನ್ನ ನಟನೆಯ ಮೂಲಕ ಮನೆ ಮಾತಾಗಿದ್ದಾರೆ. ಅವರು ನಟಿಸಿದ ಅನೇಕ ಚಿತ್ರಗಳು ನೂರು ದಿನಗಳ ಭರ್ಜರಿ ಪ್ರದರ್ಶನ ಕಂಡಿದೆ. ಶಿವಣ್ಣ ಅವರ ನೂರು ದಿನಗಳ ಪ್ರದರ್ಶನ ಕಂಡ ಸಿನಿಮಾಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಿದ ಅನೇಕ ಚಿತ್ರಗಳು ನೂರು ದಿನಗಳ ಪ್ರದರ್ಶನ ಕಂಡಿದೆ. ಆನಂದ್ ಎಂಬ ಸಿನಿಮಾ ಶಿವರಾಜ್ ಕುಮಾರ್ ಅವರ ಮೊದಲ ಸಿನಿಮಾ ಆಗಿದ್ದು, ಎಂಭತ್ತರ ದಶಕದಲ್ಲಿ ಶಿವರಾಜ್ ಕುಮಾರ್ ನಟನಾಗಿ ಸುಧಾರಾಣಿ ಅವರು ನಟಿಯಾಗಿ ನಟಿಸಿದ್ದಾರೆ. ಈ ಸಿನಿಮಾ 38 ವಾರಗಳ ಕಾಲ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ಶಿವರಾಜ್ ಕುಮಾರ್ ಅವರಿಗೆ ಹೆಸರು ತಂದು ಕೊಟ್ಟಿದೆ.

ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣ ಹಾಗೂ ಶ್ರೀನಿವಾಸ್ ರಾವ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ತೆರೆ ಕಂಡಿದೆ. ಶಿವಣ್ಣ ಅವರ ನಟನೆಯ ಎರಡನೇ ಚಿತ್ರ ರಥಸಪ್ತಮಿ ಎಂ. ಎಸ್ ರಾಜಶೇಖರ್ ಅವರ ನಿರ್ದೇಶನದಲ್ಲಿ ಈ ಚಿತ್ರ ತೆರೆ ಕಂಡಿದೆ. ಆಶಾರಾಣಿ ಅವರು ಮೊದಲ ಬಾರಿಗೆ ಶಿವರಾಜ್ ಕುಮಾರ್ ಅವರ ಜೊತೆ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್ ಮಾಡಲಾಗಿದೆ. 35 ವಾರಗಳ ಕಾಲ ಈ ಸಿನಿಮಾ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದೆ.

ಮನಮೆಚ್ಚಿದ ಹುಡುಗಿ ಈ ಸಿನಿಮಾವನ್ನು ಕೂಡ ರಾಜಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ಸುಧಾರಾಣಿ ಅವರು ಎರಡನೇ ಬಾರಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಕೂಡ ತಮಿಳಿನಲ್ಲಿ ರಿಮೇಕ್ ಮಾಡಲಾಗಿದೆ. ಈ ಸಿನಿಮಾ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ 37 ವಾರಗಳ ಕಾಲ ಪ್ರದರ್ಶನಗೊಂಡಿದೆ. ಸಂಯುಕ್ತ ಈ ಸಿನಿಮಾ ಕೆ.ಎಂ ಚಂದ್ರಶೇಖರ್ ಶರ್ಮಾ ಅವರ ನಿರ್ದೇಶನದಲ್ಲಿ ತೆರೆಕಂಡಿದೆ. ವೀಣಾ ಅವರು ಶಿವರಾಜ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರ ವೀಣಾ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರವಾಗಿದೆ. ರಣರಂಗ ಈ ಸಿನಿಮಾ ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣದಲ್ಲಿ ತೆರೆಕಂಡಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ಸುಧಾರಾಣಿ ಹಾಗೂ ತಾರಾ ಅವರು ನಟಿಸಿದ್ದಾರೆ. ವಿ ಸೋಮಶೇಖರ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ತೆರೆಕಂಡಿದೆ. ಈ ಚಿತ್ರ ಬೆಂಗಳೂರಿನ ಅಪರ್ಣಾ ಚಿತ್ರಮಂದಿರದಲ್ಲಿ 23 ವಾರಗಳ ಕಾಲ ಪ್ರದರ್ಶನ ಕಂಡಿದೆ. ಹಂಸಲೇಖ ಅವರು ಮೊದಲ ಬಾರಿಗೆ ಶಿವಣ್ಣ ಅವರ ಸಿನಿಮಾಕ್ಕೆ ಸಂಗೀತ, ಸಾಹಿತ್ಯ ನಿರ್ದೇಶನ ಮಾಡಿ ಜನರ ಮನಸ್ಸನ್ನು ಗೆದ್ದರು.

ಅದೇ ಹಾಡು ಅದೇ ರಾಗ ಸಿನಿಮಾದಲ್ಲಿ ಶಿವಣ್ಣ ಹಾಗೂ ಸೀಮಾ ಅವರು ನಟಿಸಿದ್ದಾರೆ. ಈ ಚಿತ್ರ ನೂರು ದಿನಗಳ ಭರ್ಜರಿ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿ ಸೀಮಾ ಅವರು ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಎಂ. ಎಸ್ ರಾಜಶೇಖರ್ ಅವರ ನಿರ್ದೇಶನದಲ್ಲಿ ತೆರೆಕಂಡಿದೆ. ಆಸೆಗೊಬ್ಬ ಮೀಸೆಗೊಬ್ಬ ಈ ಚಿತ್ರ ಶಿವಣ್ಣ ಅವರೊಂದಿಗೆ ಸುಧಾರಾಣಿಯವರು ನಟಿಸಿದ ಕಾಮಿಡಿ ಚಿತ್ರವಾಗಿದೆ. ಈ ಸಿನಿಮಾ ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣದಲ್ಲಿ ತೆರೆಕಂಡು ತ್ರಿವೇಣಿ ಚಿತ್ರಮಂದಿರದಲ್ಲಿ 153 ದಿನಗಳ ಕಾಲ ಪ್ರದರ್ಶನ ಕಂಡಿದೆ. ಮೃತ್ಯುಂಜಯ ಈ ಸಿನಿಮಾ ರಾಘವೇಂದ್ರ ರಾಜಕುಮಾರ್ ಅವರ ನಿರ್ಮಾಣದಲ್ಲಿ, ಶಿವಣ್ಣ ಹಾಗೂ ಮಾಲಾಶ್ರೀ ಅವರ ನಟನೆಯಲ್ಲಿ ತೆರೆಕಂಡಿದೆ. ಈ ಸಿನಿಮಾವನ್ನು ಸಿ. ದತ್ತರಾಜು ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನರ್ತಕಿ ಚಿತ್ರಮಂದಿರದಲ್ಲಿ 125 ದಿನಗಳ ಕಾಲ ಪ್ರದರ್ಶನಗೊಂಡಿದೆ.

ಅರಳಿದ ಹೂವುಗಳು ಈ ಸಿನಿಮಾ ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣದಲ್ಲಿ ಶಿವಣ್ಣ ಹಾಗೂ ವಿದ್ಯಾಶ್ರೀ ನಟಿಸಿದ್ದಾರೆ. ಈ ಸಿನಿಮಾ ನೂರು ದಿನಗಳ ಕಾಲ ಪ್ರದರ್ಶನಗೊಂಡಿದೆ. ಈ ಸಿನಿಮಾ ಹಿಂದಿಯ ರಿಮೇಕ್ ಆಗಿದೆ. ಮೋಡದ ಮರೆಯಲ್ಲಿ ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ಯಮುನಾ ಅವರು ನಟಿಸಿದ್ದಾರೆ, ಯಮುನಾ ಅವರು ನಟಿಸಿದ ಮೊದಲ ಕನ್ನಡ ಚಿತ್ರವಾಗಿದೆ. ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣದಲ್ಲಿ ತೆರೆಕಂಡು ನರ್ತಕಿ ಚಿತ್ರಮಂದಿರದಲ್ಲಿ ನೂರು ದಿನಗಳ ಕಾಲ ಪ್ರದರ್ಶನಗೊಂಡಿದೆ.

ಮಿಡಿದ ಶ್ರುತಿ ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ಸುಧಾರಾಣಿ ಅವರು ನಟಿಸಿದ್ದಾರೆ. ಈ ಚಿತ್ರ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ನೂರು ದಿನಗಳ ಕಾಲ ಪ್ರದರ್ಶನಗೊಂಡಿದೆ. ಈ ಚಿತ್ರ ಸಾಯಿಸುತೆ ಅವರ ಕಾದಂಬರಿ ಆಧಾರಿತ ಚಿತ್ರವಾಗಿದೆ. ಪುರುಷೋತ್ತಮ ಈ ಸಿನಿಮಾದಲ್ಲಿ ಶಿವಣ್ಣ ಅವರ ಜೊತೆ ಶಿವರಂಜನಿ ಹಾಗೂ ರಂಜಿತಾ ಅವರು ನಟಿಸಿದ್ದಾರೆ. ಎಂ. ಎಸ್ ರಾಜಶೇಖರ್ ಅವರ ನಿರ್ದೇಶನದಲ್ಲಿ ತೆರೆಕಂಡ ಈ ಚಿತ್ರ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಪ್ರದರ್ಶನಗೊಂಡಿದೆ. ಜಗ ಮೆಚ್ಚಿದ ಹುಡುಗ ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ರಾಗಿಣಿ ಅವರು ನಟಿಸಿದ್ದಾರೆ. ಈ ಸಿನಿಮಾ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ಈ ಚಿತ್ರ ಸಾಯಿಸುತೆ ಅವರ ನಿಶಾಂತ್ ಕಾದಂಬರಿಯ ಆಧಾರಿತವಾಗಿದೆ.

ಓಂ ಈ ಸಿನಿಮಾದಲ್ಲಿ ಶಿವಣ್ಣ ಅವರು ಮೊದಲ ಬಾರಿಗೆ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಅವರ ನಿರ್ದೇಶನದಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಪ್ರೇಮಾ ಅವರು ಶಿವಣ್ಣ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ 33 ವಾರಗಳ ಕಾಲ ಪ್ರದರ್ಶನ ಕಂಡಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ 30 ಬಾರಿ ತೆರೆಕಂಡು ದಾಖಲೆ ನಿರ್ಮಿಸಿದ ಚಿತ್ರವಾಗಿದೆ. ಈ ಚಿತ್ರದಿಂದ ಉಪೇಂದ್ರ, ಶಿವಣ್ಣ ಹಾಗೂ ಪ್ರೇಮಾ ಅವರಿಗೆ ಫಿಲಂ ಫೇರ್ ಅವಾರ್ಡ್, ಕರ್ನಾಟಕ ಸ್ಟೇಟ್ ಅವಾರ್ಡ್ ಲಭಿಸಿದೆ.

ಗಡಿಬಿಡಿ ಅಳಿಯ ಈ ಸಿನಿಮಾ ಕೆ. ರಾಘವ ರಾವ್ ಅವರ ನಿರ್ಮಾಣದಲ್ಲಿ, ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ತೆರೆಕಂಡಿದೆ. ಈ ಚಿತ್ರದಲ್ಲಿ ಶಿವಣ್ಣ ಅವರೊಂದಿಗೆ ಮೋಹಿನಿ ಹಾಗೂ ಮಾಲಾಶ್ರೀ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಅವರು ದ್ವಿ ಪಾತ್ರದಲ್ಲಿ ನಟಿಸಿದ್ದಾರೆ. ನಮ್ಮೂರ ಮಂದಾರ ಹೂವೆ ಈ ಸಿನಿಮಾ ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ, ಜಯಶ್ರೀ ದೇವಿ ಅವರ ನಿರ್ಮಾಣದಲ್ಲಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಶಿವಣ್ಣ, ರಮೇಶ್ ಅರವಿಂದ್ ಹಾಗೂ ಪ್ರೇಮಾ ಅವರು ನಟಿಸಿದ್ದಾರೆ. ಈ ಸಿನಿಮಾ ಬೆಂಗಳೂರಿನ ಸಂತೋಷ ಚಿತ್ರಮಂದಿರದಲ್ಲಿ 22 ವಾರಗಳ ಕಾಲ ಪ್ರದರ್ಶನ ಕಂಡಿದೆ.

ಜನುಮದ ಜೋಡಿ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಶಿಲ್ಪಾ ಅವರು ನಟಿಸಿದ್ದಾರೆ. ಈ ಸಿನಿಮಾ 365 ಕ್ಕೂ ಹೆಚ್ಚು ದಿನಗಳ ಕಾಲ ತೆರೆಕಂಡಿದೆ. ಈ ಚಿತ್ರ ಗುಜರಾತಿನ ಒಂದು ಕಾದಂಬರಿ ಆಧಾರಿತ ಚಿತ್ರವಾಗಿದೆ. ವಿ. ಮನೋಹರ್ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಿಂದ ಶಿಲ್ಪಾ ಅವರಿಗೆ ಫಿಲಂ ಫೇರ್ ಅವಾರ್ಡ್ ಮತ್ತು ಕರ್ನಾಟಕ ಸ್ಟೇಟ್ ಅವಾರ್ಡ್ ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಸಿಂಹದಮರಿ ಈ ಚಿತ್ರ ರಾಮು ಅವರ ನಿರ್ಮಾಣದಲ್ಲಿ ಶಿವಣ್ಣ ಹಾಗೂ ಸಿಮ್ರಾನ್ ಅವರ ನಟನೆಯಲ್ಲಿ ತೆರೆಕಂಡಿದೆ.

ಸಿಮ್ರಾನ್ ಅವರು ಕನ್ನಡದಲ್ಲಿ ಮೊದಲ ಬಾರಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಓಂ ಪ್ರಕಾಶ್ ರಾವ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ 150 ದಿನಗಳ ಕಾಲ ಪ್ರದರ್ಶನ ಕಂಡಿದೆ. ಕುರುಬನ ರಾಣಿ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ, ಡಿ ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ, ಶಿವಣ್ಣ ಹಾಗೂ ನಗ್ಮಾ ಅವರ ನಟನೆಯಲ್ಲಿ ಮೂಡಿಬಂದಿದೆ. ಈ ಚಿತ್ರ ನಟಿ ನಗ್ಮಾ ಅವರ ಮೊದಲ ಕನ್ನಡ ಚಿತ್ರವಾಗಿದೆ. ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ಎಕೆ 47 ಈ ಚಿತ್ರ ಶಿವಣ್ಣ ಅವರ ಅಭಿನಯದ 50ನೇ ಚಿತ್ರವಾಗಿದೆ. ರಾಮು ಅವರ ನಿರ್ಮಾಣದಲ್ಲಿ, ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ತೆರೆಕಂಡ ಈ ಚಿತ್ರ 120 ದಿನಗಳ ಕಾಲ ಪ್ರದರ್ಶನ ಕಂಡಿದೆ. ಪ್ರೀತ್ಸೆ ಈ ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ಸೋನಾಲಿ ಅವರು ನಟಿಸಿದ್ದಾರೆ. ಇದು ಸೋನಾಲಿ ಅವರ ಮೊದಲ ಕನ್ನಡ ಚಿತ್ರವಾಗಿದೆ. ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ ತೆರೆಕಂಡು 22 ವಾರಗಳ ಪ್ರದರ್ಶನ ಕಂಡಿದೆ.

ಗಲಾಟೆ ಅಳಿಯಂದಿರು ಈ ಸಿನಿಮಾ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ, ಅನಿತಾ ಕುಮಾರಸ್ವಾಮಿ ಅವರ ನಿರ್ಮಾಣದಲ್ಲಿ ಶಿವಣ್ಣ ಹಾಗೂ ಸಾಕ್ಷಿ ಶಿವಾನಂದ ಅವರ ನಟನೆಯಲ್ಲಿ ಮೂಡಿಬಂದಿದೆ. ನಟಿ ಸಾಕ್ಷಿ ಅವರು ಮೊದಲ ಬಾರಿ ಕನ್ನಡದಲ್ಲಿ ನಟಿಸಿದ್ದಾರೆ. ಈ ಚಿತ್ರ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ತವರಿಗೆ ಬಾ ತಂಗಿ ಈ ಸಿನಿಮಾ ಆರ್. ಎಸ್ ಗೌಡ ಅವರ ನಿರ್ಮಾಣದಲ್ಲಿ, ಓಂ ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ, ಶಿವಣ್ಣ, ಅನುಪ್ರಭಾಕರ್ ಹಾಗೂ ರಾಧಿಕಾ ಅವರ ನಟನೆಯಲ್ಲಿ ಮೂಡಿಬಂದಿದೆ. ಕಲ್ಪನಾ ಚಿತ್ರಮಂದಿರದಲ್ಲಿ 25 ವಾರಗಳ ಕಾಲ ಪ್ರದರ್ಶನ ಕಂಡಿದೆ. ಈ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲಾಯಿತು.

ಶ್ರೀರಾಮ್ ಈ ಸಿನಿಮಾ ಎಂ. ಎಸ್ ರಮೇಶ್ ಅವರ ನಿರ್ದೇಶನದಲ್ಲಿ ಶಿವಣ್ಣ, ರಾಧಾ ಮತ್ತು ಅಂಕಿತಾ ಅವರು ನಟಿಸಿದ್ದಾರೆ. ಈ ಸಿನಿಮಾ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ರಿಷಿ ಈ ಸಿನಿಮಾ ಪ್ರಕಾಶ್ ಅವರ ನಿರ್ದೇಶನದಲ್ಲಿ ತೆರೆಕಂಡು ಸಾಗರ್ ಚಿತ್ರಮಂದಿರದಲ್ಲಿ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ಈ ಸಿನಿಮಾದಲ್ಲಿ ಶಿವಣ್ಣ, ವಿಜಯ ರಾಘವೇಂದ್ರ, ಸಿಂಧೂ ಹಾಗೂ ರಾಧಿಕಾ ಅವರು ನಟಿಸಿದ್ದಾರೆ. ಜೋಗಿ ಸಿನಿಮಾ ಪ್ರೇಮ್ ಅವರ ನಿರ್ದೇಶನದಲ್ಲಿ ಶಿವಣ್ಣ ಅವರು ಜೋಗಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಕಪಾಲಿ ಚಿತ್ರಮಂದಿರದಲ್ಲಿ 25 ವಾರಗಳ ಕಾಲ ಪ್ರದರ್ಶನ ಕಂಡಿದೆ. ಈ ಸಿನಿಮಾದಲ್ಲಿ ಶಿವಣ್ಣ ಅವರೊಂದಿಗೆ ಜೆನ್ನಿಫರ್ ಕೊತ್ವಾಲ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ 69ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೂರು ದಿನಗಳು ಪ್ರದರ್ಶನ ಕಂಡಿದೆ. ಅಣ್ಣ ತಂಗಿ ಈ ಸಿನಿಮಾ ಪ್ರಭಾಕರ್ ಅವರ ನಿರ್ಮಾಣದಲ್ಲಿ, ಓಂ ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ ಶಿವಣ್ಣ ಹಾಗೂ ರಾಧಿಕಾ ಅವರು ನಟಿಸಿದ್ದಾರೆ.

ತ್ರಿವೇಣಿ ಚಿತ್ರಮಂದಿರದಲ್ಲಿ 25 ವಾರಗಳ ಕಾಲ ಪ್ರದರ್ಶನ ಕಂಡಿದೆ. ಸತ್ಯ ಇನ್ ಲವ್ ಈ ಸಿನಿಮಾ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ಈ ಸಿನಿಮಾದಲ್ಲಿ ಶಿವಣ್ಣ ಅವರೊಂದಿಗೆ ಜೆನಿಲಿಯಾ ಡಿಸೋಜಾ ಅವರು ಮೊದಲ ಬಾರಿ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಮೈಲಾರಿ ಈ ಸಿನಿಮಾ ಅನೇಕ ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ಶಿವಲಿಂಗ ಈ ಸಿನಿಮಾದಲ್ಲಿ ಶಿವಣ್ಣ ಅವರೊಂದಿಗೆ ವೇದಿಕಾ ಮತ್ತು ಊರ್ವಶಿ ಅವರು ನಟಿಸಿದ್ದಾರೆ. ಈ ಚಿತ್ರ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಪ್ರದರ್ಶನ ಕಂಡಿದೆ. ಟಗರು ಈ ಸಿನಿಮಾದಲ್ಲಿ ಶಿವಣ್ಣ ಅವರೊಂದಿಗೆ ಭಾವನಾ ಹಾಗೂ ಮಾನ್ವಿತಾ ಅವರು ನಟಿಸಿದ್ದಾರೆ. ಈ ಸಿನಿಮಾ ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ 100 ದಿನಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

Leave A Reply

Your email address will not be published.