ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮರೆಯಾಗಿ ತಿಂಗಳುಗಳೇ ಉರುಳುತ್ತಿವೆ. ಆದರೆ ಅಪ್ಪುವಿನ ಅಗಲಿಕೆಯ ನೋವು ಮಾತ್ರ ಕರುಗುತ್ತಿಲ್ಲ. ಅಭಿಮಾನಿಗಳ ಸ್ಥಿತಿಯೇ ಹೀಗಿರುವಾಗ ಇನ್ನೂ ಅವರ ಕುಟುಂಬಸ್ಥರ ಸ್ಥಿತಿ ಹೇಗಿರಬಹುದು. ನಾವು ಯಾರು ಕೂಡ ಅದನ್ನ ಯೋಚನೆ ಮಾಡೋಕೆ ಸಾಧ್ಯವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಪುನೀತ್ ಕುರಿತು ಶಿವಣ್ಣ, ರಾಘಣ್ಣ ಅವರ ಜೊತೆ ನಿಕಟ ಸಂಭಂದ ಹೊಂದಿದ ಪ್ರತಿಯೊಬ್ಬರೂ ಕೂಡಾ ಅಪ್ಪು ಬಗ್ಗೆ ಹೆಚ್ಚಾಗಿ ನೆನಪು ಮಾಡಿಕೊಳ್ಳುವುದು ಮಾತ್ರವಲ್ಲ ಅವರೆಲ್ಲಾರಲ್ಲೂ ಮೊದಲಿನ ಹುಮ್ಮಸ್ಸು, ಸಂತೋಷ ಮತ್ತು ಉತ್ಸಾಹ ಎಲ್ಲವನ್ನೂ ಕಳೆದುಕೊಂಡ ಹಾಗೆ ಕಾಣಿಸುತ್ತಿದ್ದಾರೆ.

ಅಪ್ಪು ಅಗಲಿಕೆಯಿಂದ ಶಿವಣ್ಣ ಕೂಡ ಮೊದಲಿನ ಉತ್ಸಾಹವನ್ನು ಕಳೆದುಕೊಂಡಿದ್ದಾರೆ. ನೀವು ಶಿವಣ್ಣ ಅವರನ್ನ ಝೀ ಕನ್ನಡದಲ್ಲಿ ಬರುವ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಕಾಣಿಸಿಕೊಂಡಿದ್ದಾರೆ. ಆದರೆ ಅವರಲ್ಲಿ ಮೊದಲಿನ ಚಾರ್ಮ್ ಕಾಣೆಯಾಗಿದೆ. ಹಾಗೆ ರಾಘಣ್ಣ ಕೂಡ ಇನ್ನೂ ಕುಗ್ಗಿ ಹೋಗಿದ್ದಾರೆ. ರಾಘಣ್ಣ ತುಂಬಾ ನೊಂದ ಮಾತುಗಳನ್ನೇ ಆಡುತ್ತಾರೆ. ಭಗವಂತ ನನ್ನು ಸಹ ಕರೆದುಕೊಂಡು ಬಿಡು ಅನ್ನೋ ಮಾತುಗಳನ್ನೇ ಆಡುತ್ತಾರೆ. ಅವರೆಲ್ಲರೂ ಕೂಡ ಪುನೀತ್ ರಾಜಕುಮಾರ್ ಅವರನ್ನ ನೆನಪು ಮಾಡಿಕೊಳ್ಳದೆ ಇರದ ಕ್ಷಣವೇ ಇಲ್ಲ.

ಪುನೀತ್ ರಾಜಕುಮಾರ್ ಅವರನ್ನ ಅಣ್ಣ ತಮ್ಮ ಇಬ್ಬರೂ ಕೂಡ ವಿಪರೀತವಾಗಿ ಹಚ್ಚಿಕೊಂಡಿದ್ದರು. ಅವರದೊಂದು ಅದ್ಭುತವಾದ ಸಹೋದರತ್ವ. ದೊಡ್ಮನೆ ಕುಟುಂಬದ ಕುಡಿಗಳ ಸಹೋದರ ಭಾವ ಅಷ್ಟೊಂದು ಗಾಢವಾದದ್ದು. ಹಲವಾರು ವೇದಿಕೆಯಲ್ಲಿ ರಾಘಣ್ಣ ಶಿವಣ್ಣ ಅಪ್ಪು ಅನುಪಸ್ಥಿತಿಯನ್ನ ನೆನೆದು ಕಣ್ಣೀರು ಹಾಕಿದ್ದಾರೆ. ತಮ್ಮ ಪ್ರಿಯ ಸಹೋದರ, ತನ್ನ ಮಗ ಅಂತ ಹೇಳೋ ಪುನೀತ್ ಅಗಲಿಕೆಯನ್ನ ಮರೆಯಲು ಸಾಧ್ಯವಾಗದ ಶಿವಣ್ಣ ತಾತ್ಕಾಲಿಕವಾಗಿ ತನ್ನ ಕುಟುಂಬದೊಂದಿಗೆ ಮೈಸೂರಿಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಿಗೆ ಕೆಲ ಸಮಯ ಗುಡ್ ಬೈ ಹೇಳಿದ್ದಾರೆ. ಈಗಾಗಲೇ ಅವರು ಸಂಪೂರ್ಣವಾಗಿ ಮೈಸೂರಿಗೆ ಹೋಗಿ ನೆಲೆಸಿದ್ದಾರೆ.

ಮೈಸೂರಿಗೂ ರಾಜ್ ಕುಟುಂಬಕ್ಕೂ ಒಂದು ರೀತಿ ಅವಿನಾಭಾವ ಸಂಬಂಧವಿದೆ. ಡಾಕ್ಟರ್ ರಾಜ್ ಕುಮಾರ್ ಅವರು ಸಹ ಹೆಚ್ಚಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಚ್ಚಾಗಿ ಕಾಲ ಕಳೆಯಲು ಇಷ್ಟ ಪಡುತ್ತಿದ್ದರು. ನಂತರದ ದಿನಗಳಲ್ಲಿ ಶಕ್ತಿಧಾಮವನ್ನು ಸಹ ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಿಸಿದ್ದರು. ಇದಾದ ನಂತರ ಬಹುತೇಕ ಸಮಯವನ್ನ ಡಾಕ್ಟರ್ ರಾಜ್ ಕುಮಾರ್ ಅವರು ಕುಟುಂಬದೊಂದಿಗೆ ಕಳೆಯುತ್ತಿದ್ದರು. ಶಕ್ತಿಧಾಮದ ಮಕ್ಕಳ, ನಿರಾಶ್ರಿತ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದರು. ಅವರ ನಂತರ ಪುನೀತ್ ಅವರು ಶಕ್ತಿಧಾಮವನ್ನ ಮುನ್ನಡೆಸಿದರು. ಮೊದಲು ಶಿವಣ್ಣ ಶಕ್ತಿಧಾಮಕ್ಕೆ ಹೆಚ್ಚಾಗಿ ಬರುತ್ತಿರಲಿಲ್ಲ ಆದರೆ ಈಗ ಆ ಜವಾಬ್ದಾರಿಯನ್ನು ಶಿವಣ್ಣ ತೆಗೆದುಕೊಂಡಿದ್ದಾರೆ.

ಸದ್ಯ ಮೈಸೂರಿಗೆ ಶಿಫ್ಟ್ ಆಗಿರುವ ಶಿವಣ್ಣ ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳನ್ನು ಅಲ್ಲಿಂದಲೇ ಮಾಡುತ್ತಿದ್ದಾರೆ. ಸದ್ಯ ವೇದ ಸಿನೆಮಾ ಮಾಡುತ್ತಿದ್ದು ಅದರ ಶೂಟಿಂಗ್ ಗೆ ಸಹ ಮೈಸೂರ್ ಇಂದಲೇ ಹೋಗುತ್ತಿದ್ದಾರೆ. ಹಾಗೆ ಘೋಸ್ಟ್ ಎಂಬ ಇನ್ನೊಂದು ಸಿನೆಮಾ ಸೆಟ್ಟೆರಿದ್ದು ಅದಕ್ಕೂ ಸಹ ಮೈಸೂರಿನಿಂದಲೆ ಓಡಾಡುತ್ತಿದ್ದಾರೆ. ಬೆಂಗಳೂರಿನ ಮನೆಯಿಂದ ಅವರು ಸದ್ಯ ತಾತ್ಕಾಲಿಕವಾಗಿ ಮೈಸೂರ್ ಗೆ ಶಿಫ್ಟ್ ಆಗಿದ್ದಾರೆ. ಸದ್ಯ ಮೈಸೂರಿಗೆ ಶಿಫ್ಟ್ ಆಗಿರುವ ಶಿವಣ್ಣ ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳನ್ನು ಅಲ್ಲಿಂದಲೇ ಮಾಡುತ್ತಿದ್ದಾರೆ. ಸದ್ಯ ವೇದ ಸಿನೆಮಾ ಮಾಡುತ್ತಿದ್ದು ಅದರ ಶೂಟಿಂಗ್ ಗೆ ಸಹ ಮೈಸೂರ್ ಇಂದಲೇ ಹೋಗುತ್ತಿದ್ದಾರೆ. ಹಾಗೆ ಘೋಸ್ಟ್ ಎಂಬ ಇನ್ನೊಂದು ಸಿನೆಮಾ ಸೆಟ್ಟೆರಿದ್ದು ಅದಕ್ಕೂ ಸಹ ಮೈಸೂರಿನಿಂದಲೆ ಓಡಾಡುತ್ತಿದ್ದಾರೆ. ಬೆಂಗಳೂರಿನ ಮನೆಯಿಂದ ಅವರು ಸದ್ಯ ತಾತ್ಕಾಲಿಕವಾಗಿ ಮೈಸೂರ್ ಗೆ ಶಿಫ್ಟ್ ಆಗಿದ್ದಾರೆ. ಬಹುತೇಕ ಸಮಯವನ್ನ ಅಲ್ಲಿರುವಂತಹ ಶಕ್ತಿಧಾಮದಲ್ಲೆ ಕಳೆಯುತ್ತಿದ್ದಾರೆ. ಶಕ್ತಿಧಾಮದ ಮಕ್ಕಳೊಂದಿಗೆ ಆಟ ಆಡುತ್ತಾ ಅವರಲ್ಲಿ ತಾವೊಬ್ಬ ಮಗುವಾಗಿ ಸಮಯ ಕಳೆಯುತ್ತಿದ್ದಾರೆ.

ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಶಿವಣ್ಣ ಮೈಸೂರ್ ನಲ್ಲಿ ನೆಲೆಸಿದ್ದಾರೆ. ಆದರೆ ಅದು ಎಷ್ಟು ದಿನ ಅಂತ ತಿಳಿದಿಲ್ಲ. ಶಿವಣ್ಣ ಜೊತೆ ಅವರ ಪತ್ನಿ ಗೀತಕ್ಕ ಸಹ ಇದ್ದಾರೆ. ಇತ್ತೀಚಿಗಷ್ಟೇ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗ ಅವರನ್ನ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಷ್ಟರ ಮಟ್ಟಿಗೆ ಅವರು ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳಿಗೂ ಮೈಸೂರಿನಲ್ಲೇ ಅವಲಂಬಿತ ಆಗಿದ್ದಾರೆ. ಅವರು ಹೀಗೆ ಮೈಸೂರಿನಲ್ಲಿ ಇರಲು ಮುಖ್ಯ ಕಾರಣ ಪುನೀತ್ ರಾಜಕುಮಾರ್ ಅಗಲಿಕೆಯ ನೋವು ಎನ್ನಬಹುದು. ಈ ಕ್ಷಣಕ್ಕೂ ಸಹ ಅವರ ಅಗಲಿಕೆಯ ನೋವನ್ನ ಮರೆಯಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಇದ್ದಾಗ ಅಲ್ಲಿ ಅವರಿಗೆ ಅಪ್ಪು ಜೊತೆ ಕಳೆದ ಕ್ಷಣಗಳೇ ಕಾಡುತ್ತಿತ್ತು ಹಾಗಾಗಿ ಅವರು ಮೈಸೂರಿಗೆ ಶಿಫ್ಟ್ ಆದರೂ ಎನ್ನಲಾಗಿದೆ.

ಶಿವಣ್ಣ ಅವರು ಮೈಸೂರಿನಲ್ಲಿರುವ ಶಕ್ತಿಧಾಮದಲ್ಲೀ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಇದರಿಂದ ಅಪ್ಪು ಅಗಲಿಕೆಯ ನೋವಿನಿಂದ ಹೊರಬರಬಹುದು ಎಂದು ಹೀಗೆ ಮೈಸೂರ್ ಅಲ್ಲಿ ನೆಲೆಸಿದ್ದಾರೆ. ಇದರಿಂದ ಅವರ ಮನಸು ಹಗುರವಾಗಿ ಮೊದಲಿನ ಹಾಗೆ ಖುಷಿ ಖುಷಿ ಆಗಿ ಇರಲಿ. ಸದ್ಯಕ್ಕಂತೂ ಅವರು ಬೆಂಗಳೂರಿಗೆ ಗುಡ್ ಬೈ ಹೇಳಿ ಮೈಸೂರ್ ಅಲ್ಲಿ ನೆಲೆಸಿದ್ದಾರೆ.

Leave a Reply

Your email address will not be published. Required fields are marked *