Shivanna’s 2nd daughter started a new business: ಡಾಕ್ಟರ್ ರಾಜಕುಮಾರ್ ಎಂಬ ಹೆಸರು ಕೇಳಿದಾಗಲೆಲ್ಲ ಮಯ್ ರೋಮಾಂಚನಗೊಳ್ಳುವುದು ಒಮ್ಮೆ ಅಭಿಮಾನ ಮೂಡುವುದು ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸಮಾಜಕ್ಕೆ ಮಾದರಿಯಾದ ಕುಟುಂಬ ಅದರಲ್ಲೂ ರಾಜಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಅವರ ಬಗ್ಗೆ ಇಷ್ಟು ಪದಗಳಲ್ಲಿ ವರ್ಣಿಸಿದರು ಸಾಲದು ಅವರ ವ್ಯಕ್ತಿತ್ವದ ಗುರುತು ಈಗಾಗಲೇ ಎಲ್ಲರ ಮನೆ ಮನಗಳಿಗೆ ತಲುಪಿದೆ.

ಡಾ. ರಾಜಕುಮಾರ್ ಅವರ ಕುಟುಂಬದ ಸದಸ್ಯರೆಲ್ಲರೂ ಕೂಡ ಚಿತ್ರರಂಗಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆಯನ್ನು ನೀಡಿದವರು ಇಡೀ ಕನ್ನಡ ನಾಡಿಗೆ ಮನರಂಜನೆಯನ್ನ ನೀಡುವಂತ ಕೆಲಸವನ್ನ ಈ ಕುಟುಂಬ ಮಾಡುತ್ತಿದೆ ಆದರೆ ರಾಜಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳ ವಿಚಾರ ಬಂದಾಗ ಅವರ್ಯಾರು ಕೂಡ ನಟನೆಯ ವೃತ್ತಿಗೆ ಇಳಿದಿಲ್ಲ ಇನ್ನು (punith rajkumar) ಪುನೀತ್ ರಾಜಕುಮಾರ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಚಿತ್ರರಂಗಕ್ಕೆ ಬರುವ ಯಾವುದೇ ಸೂಚನೆಗಳು ಇಲ್ಲ ಬದಲಿಗೆ ಪುನೀತ್ ರಾಜಕುಮಾರ್ ಅವರ ಆಸೆಯಂತೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ

ಇನ್ನು ಶಿವರಾಜ್ ಕುಮಾರ್ ಅವರ ಪುತ್ರಿ ನಿರೂಪಮಾ ಅವರು ಮದುವೆಯಾಗಿ ಸಂಸಾರವನ್ನು ನಡೆಸುತ್ತಿದ್ದಾರೆ ಇನ್ನೂ ಎರಡನೇ ಗಳು ಸಹ ನಟನೆಯಲ್ಲಿ ಆಸಕ್ತಿ ವಹಿಸಿಲ್ಲ.ಪೂರ್ಣಿಮಾ ಮತ್ತು ರಾಮಕುಮಾರ್ ಅವರ ಮಗಳಾದ ಧನ್ಯ ರಾಮ್ ಕುಮಾರ್ ಮಾತ್ರ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಈಕೆಯೇ ರಾಜಕುಮಾರ್ ಕುಟುಂಬದಲ್ಲಿನ ಮೊದಲ ಹೆಣ್ಣು ಮಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದು.

ಇನ್ನೂ ಡಾ. ರಾಜಕುಮಾರ್ ಕುಟುಂಬದ ಹಿರಿಮೆ ಎಂದರೆ ಪಾರ್ವತಮ್ಮ ರಾಜಕುಮಾರ್ ಈಕೆ ಇಡೀ ಕುಟುಂಬವನ್ನು ಉತ್ತಮವಾಗಿ ನಿಭಾಯಿಸಿಕೊಂಡು ಹೋಗುವಂತಹ ಮಹಿಳೆ ನಿರ್ಮಾಣ ಅಥವಾ ನಿರ್ದೇಶನದ ಜೊತೆಗೆ ಸಾಕಷ್ಟು ಜನರಿಗೆ ಅವಕಾಶವನ್ನು ಮಾಡಿಕೊಟ್ಟಂತಹ ಮಹಿಳೆ ಪಾರ್ವತಮ್ಮ. ಇವರ ನಂತರದಲ್ಲಿ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ ವಹಿಸಿದ್ದಾರೆ Niveditha ನಿವೇದಿತಾ ಅವರು ಇದೀಗ ನಿರ್ಮಾಣ ಮಾತ್ರವಲ್ಲ ಉದ್ಯೋಗ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ ಅದು ಕೂಡ ಹೋಟೆಲ್ ಉದ್ಯಮ ಹಿಂದಿನಿಂದಲೂ ಕೂಡ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸಮಾಜ ಸೇವೆಯನ್ನ ಮಾಡುತ್ತಲೇ ಬರುತ್ತಿತ್ತು. ಇದನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ ಈ ಕಾರಣದಿಂದ ಇವರ ಸಮಾಜ ಸೇವೆ ಯಾರಿಗೂ ತಿಳಿಯುತ್ತಿರಲಿಲ್ಲ

(shakthidhama) ಶಕ್ತಿಧಾಮ ಎನ್ನುವ ಸಂಸ್ಥೆ ಪಾರ್ವತಮ್ಮ ರಾಜಕುಮಾರ್ ಅವರೇ ಸ್ಥಾಪಿಸಿದ್ದಾಗಿದೆ ಆ ಮೂಲಕ ಬಹಳಷ್ಟು ಹೆಣ್ಣು ಮಕ್ಕಳ ಬದುಕನ್ನು ರೂಪಿಸುವ ಕೆಲಸವನ್ನು ಮಾಡಲಾಗುತ್ತಿತ್ತು ಅದಾದ ನಂತರ ಆ ಶಕ್ತಿ ಧಾಮವನ್ನ ಪುನೀತ್ ರಾಜಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮುಂದುವರಿಸಿಕೊಂಡು ಹೋಗುತ್ತಿದ್ದರು ಇದೀಗ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಸಂಪೂರ್ಣ ಜವಾಬ್ದಾರಿಯನ್ನು ಗೀತಾ ಶಿವರಾಜ್ ಕುಮಾರ್ ಅವರೇ ನಿಭಾಯಿಸುತ್ತಿದ್ದಾರೆ.

ನಿವೇದಿತಾ ಅವರು ಹೊಸದಾಗಿ ಫುಡ್ ಇಂಡಸ್ಟ್ರಿ ಯೊಂದನ್ನು ಪ್ರಾರಂಭಿಸಿದ್ದಾರೆ ಇದರಲ್ಲಿ ಬೇಕಿಂಗ್ ಫುಡ್ ಗಳನ್ನು ಉತ್ಪಾದಿಸಲಾಗುತ್ತದೆ ಇದರಿಂದ ಶಕ್ತಿ ದಾಮಕ್ಕೆ ಆಗುವ ಸಹಾಯವೇನೆಂದರೆ ಶಕ್ತಿಧಾಮದಲ್ಲಿ ಸಾಕಷ್ಟು ಹೆಣ್ಣು ಮಕ್ಕಳಿದ್ದಾರೆ ಜೊತೆಯಲ್ಲಿ ಮಹಿಳೆಯರಿದ್ದಾರೆ ಅವರೆಲ್ಲರೂ ಕೂಡ ಶಕ್ತಿಧಾಮದ ಮೂಲಕ ತಮ್ಮ ಬದುಕನ್ನ ಕಟ್ಟಿಕೊಂಡಿದ್ದಾರೆ ಇಲ್ಲಿ ವಿವಿಧ ರೀತಿಯ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಲಾಗುತ್ತಿದೆ ಇದಕ್ಕೆ ಪೂರಕವಾಗಿ ಇವರಿಗೆ ಸಹಾಯವಾಗುವಂತೆ ಈ ಫುಡ್ ಇಂಡಸ್ಟ್ರಿಯನ್ನು ಪ್ರಾರಂಭಿಸಲಾಗಿದೆ.

ಶಕ್ತಿಧಾಮದಲ್ಲಿ ಇರುವಂತಹ ಹೆಣ್ಣು ಮಕ್ಕಳೇ ಈ ಬೇಕಿಂಗ್ ಫುಡ್ ಗಳನ್ನು ತಯಾರು ಮಾಡಲಿದ್ದಾರೆ ಇದಕ್ಕೆ ಬೇಕಾದ ತರಬೇತಿಯನ್ನು ಸಾಕಷ್ಟು ದಿನಗಳಿಂದ ಅವರಿಗೆ ನೀಡಲಾಗುತ್ತಿದೆ ಇದರಿಂದ ಶಕ್ತಿ ದಾಮದಲ್ಲಿರುವ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗ ಮತ್ತು ಬದುಕನ್ನ ರೂಪಿಸಿಕೊಳ್ಳುವ ಅವಕಾಶ ದೊರೆಯಲಿದೆ.

shivarajkumar family

ಶಕ್ತಿಧಾಮವು ಅನಾಥ ಹೆಣ್ಣು ಮಕ್ಕಳು ಅಥವಾ ಜೀವನದಲ್ಲಿ ಕಷ್ಟವನ್ನು ಕಂಡಂತಹ ಮಹಿಳೆಯರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಸ್ತ್ರೀ ಕುಲದ ಪಾಲನೆಯನ್ನು ಮಾಡುತ್ತಿದೆ ಇಂತಹ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನ ತುಂಬಿ ಸ್ವಾವಲಂಬಿಗಳನ್ನಾಗಿಸಲು ಈ ಫುಡ್ ಇಂಡಸ್ಟ್ರಿಯನ್ನು ಪ್ರಾರಂಭಿಸಲಾಗಿದೆ ಈಗಾಗಲೇ ಸಿನಿಮಾ ಸೆಟ್ ಗಳಿಗೆ ಈ ಬೇಕಿಂಗ್ ಫುಡ್ ಗಳನ್ನು ನೀಡಲಾಗಿದೆ ಎಲ್ಲರೂ ಇದರ ರುಚಿಯನ್ನ ಮೆಚ್ಚಿಕೊಂಡಿದ್ದಾರೆ ಆದಷ್ಟು ಬೇಗ ಇದನ್ನು ಮಾರುಕಟ್ಟೆಗೂ ತರಲಾಗುತ್ತದೆ ಈ ಮೂಲಕ ನಿವೇದಿತಾ ಶಿವರಾಜಕುಮಾರ್ ತಮ್ಮ ಅಜ್ಜಿಯು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ ಶಕ್ತಿ ದಾಮದಲ್ಲಿನ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಇಂತಹ ಒಂದು ಯೋಜನೆಯನ್ನು ಮಾಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!