Post office savings schemes: ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದನ್ನು ಹೆಚ್ಚಾಗಿ ಪ್ರಾರಂಭಿಸಿದ್ದಾರೆ ಎಂದರೆ ತಪ್ಪಾಗಲಾರದು. ಎಲ್ಲದಕ್ಕಿಂತ ಪ್ರಮುಖವಾಗಿ ಜನರು ತಮ್ಮ ನಂಬಿಕೆಯ ಕಂಪನಿಗಳಿಗೆ ಮಾತ್ರ ಹೂಡಿಕೆ ಮಾಡುತ್ತಿದ್ದಾರೆ ಯಾಕೆಂದರೆ ತಾವು ಕಷ್ಟಪಟ್ಟು ದುಡಿದ ಹಣ ತಮಗೆ ಕಷ್ಟಕಾಲದಲ್ಲಿ ವಾಪಸು ಸಹಾಯಕ್ಕೆ ಆಗಬೇಕು ಎಂಬುದಾಗಿ. ಯಾವುದೋ ನಂಬಿಕೆ ಇಲ್ಲದ ಕಂಪನಿಗಳಿಗೆ ಹೂಡಿಕೆ ಮಾಡಿ ನಂತರ ಮೋಸ ಹೋಗುವುದಕ್ಕಿಂತ ನಂಬಿಕೆ ಇರುವ ಕಂಪನಿಗಳಿಗೆ ಹೂಡಿಕೆ ಮಾಡುವುದು ಅವರ ಮೊದಲ ಆದ್ಯತೆ ಆಗಿರುತ್ತದೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಇಂತಹ ದೀರ್ಘಕಾಲಿಕ ಹೂಡಿಕೆಗಳಿಗಾಗಿ (Post office) ಅಂಚೆ ಕಚೇರಿಗಿಂತ ಉತ್ತಮ ಸಂಸ್ಥೆ ಬೇರೆ ಯಾವುದೇ ಸಿಗುವುದಿಲ್ಲ ಎಂದು ಅನುಮಾನವಿಲ್ಲದ ಹೇಳಬಹುದಾಗಿದೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದು ಕಡಿಮೆ ರಿಸ್ಕ್ ಹಾಗೂ ಹೆಚ್ಚಿನ ಲಾಭವನ್ನು ನಿಮಗೆ ತಂದುಕೊಡುತ್ತದೆ. ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಗ್ರಾಮೀಣ ಸುರಕ್ಷಾ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ.

ಈ ಯೋಜನೆಯಲ್ಲಿ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ತಿಂಗಳಿಗೆ 1500 ಹೂಡಿಕೆ ಮಾಡಿದರೆ 31 ರಿಂದ 35 ಲಕ್ಷ ರೂಪಾಯಿವರೆಗೆ (Returns) ರಿಟರ್ನ್ಸ್ ಪಡೆಯಬಹುದಾದ ಸಾಧ್ಯತೆ ಇದೆ. 19 ವರ್ಷದ ಮೇಲ್ಪಟ್ಟ ಯಾರು ಬೇಕಾದರೂ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಗರಿಷ್ಠ ವಯೋಮಿತಿ 55 ವರ್ಷವಾಗಿದೆ.

ಈ ಯೋಜನೆ ಅಡಿಯಲ್ಲಿ ಕನಿಷ್ಠ ವಿಮಾ ಮತ್ತವು ಹತ್ತು ಸಾವಿರದಿಂದ ಹತ್ತು ಲಕ್ಷದವರೆಗೆ ಇರುತ್ತದೆ. ಇದರ ಪ್ರೀಮಿಯಂ ಮೊತ್ತವನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ತಿಂಗಳಿಗೆ ಒಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಇಲ್ಲವೇ ವರ್ಷಕ್ಕೊಮ್ಮೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ಟಬಹುದಾಗಿದೆ. ಇದರ ಹಣ ನಿಮಗೆ 80 ವರ್ಷ ಆದ ನಂತರ ದೊರೆಯುತ್ತದೆ. ಈ ಯೋಜನೆಗೆ ಒಳಪಟ್ಟಂತಹ ಗ್ರಾಹಕರು ಹಣವನ್ನು ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಕೂಡ ನೀಡಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವವರಿಗೆ ಸಾಲದ ಸೌಲಭ್ಯವು ಕೂಡ ಅಂಚೆ ಕಚೇರಿಯಲ್ಲಿ ದೊರಕುತ್ತದೆ. ಮೂರು ವರ್ಷಗಳ ನಂತರ ನಿಮಗೆ ಕಟ್ಟಲು ಸಾಧ್ಯವಾಗದಿದ್ದಲ್ಲಿ ಈ ಪಾಲಿಸಿಯನ್ನು ಸರಂಡರ್ ಮಾಡಬಹುದಾಗಿದೆ. ಒಂದು ವೇಳೆ ನೀವು 19 ವರ್ಷದವರಿರಬೇಕಾದರೆ ಈ (Policy) ಪಾಲಿಸಿಯನ್ನು ಪ್ರಾರಂಭಿಸಿದ್ದರೆ ಪ್ರೀಮಿಯಂ 55 ವರ್ಷಕ್ಕಾದರೆ 1515ಗಳನ್ನು ಕಟ್ಟಬೇಕು, 58 ವರ್ಷಕ್ಕಾದರೆ 1463, 60 ವರ್ಷಕ್ಕೆ ಆದರೆ 1411. 55 ವರ್ಷಗಳಿಗೆ ವಿಮೆಯ ಮೆಚುರಿಟಿ ಲಾಭ ನಿಮಗೆ 31.60 ಲಕ್ಷ ರೂಪಾಯಿಗಳು ಸಿಗುತ್ತದೆ. 58 ವರ್ಷಗಳಿಗೆ ಆದರೆ 33.40 ಲಕ್ಷ ಹಾಗೂ 60ಕ್ಕೆ 34.60 ಲಕ್ಷ ರೂಪಾಯಿ ಸಿಗುತ್ತದೆ.

Leave a Reply

Your email address will not be published. Required fields are marked *