ಹ್ಯಾಟ್ರಿಕ್ ಹೀರೊ ಎಂದೇ ಖ್ಯಾತಿಯನ್ನು ಪಡೆದ ಶಿವರಾಜಕುಮಾರ್ ಅವರ ಜೀವನ, ಕುಟುಂಬ, ಅವರ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸ್ವಂತ ಪ್ರತಿಭೆ, ಕಲೆ, ಪರಿಶ್ರಮ, ಆಸಕ್ತಿ ಇದ್ದರೆ ಮಾತ್ರ ಇಂಡಸ್ಟ್ರಿಯಲ್ಲಿ ಬೆಳೆಯಲು ಸಾಧ್ಯ ಎನ್ನುವುದಕ್ಕೆ ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜಕುಮಾರ್ ಅವರು ಉತ್ತಮ ಉದಾಹರಣೆ. ರಾಜಕುಮಾರ್ ಅವರ ಮಗನಾಗಿದ್ದು ತಮ್ಮದೇ ಆದ ಅಭಿಮಾನ ಬಳಗವನ್ನು ಹೊಂದಿದ್ದಾರೆ. ತಾಯಿ ಪಾರ್ವತಮ್ಮ, ಸಹೋದರರು ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್. ಶಿವಣ್ಣ ಅವರು 1961 ಜುಲೈ 12 ರಂದು ಮದ್ರಾಸಿನಲ್ಲಿ ಜನಿಸಿದರು. ಚೆನ್ನೈನಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿ, ಮದ್ರಾಸಿನ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ಬಿಎಸ್ ಸಿ ಪದವಿ ಮುಗಿಸಿದರು. ಅಡಿಯಾರ ತರಬೇತಿ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದರು. ಇವರು ಕುಚ್ಚಿಪುಡಿ ನೃತ್ಯವನ್ನು ಕಲಿತಿದ್ದಾರೆ.
1986 ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಪುತ್ರಿ ಗೀತಾ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು. ನಿರುಪಮಾ ಮೊದಲ ಮಗಳು, ನಿವೇದಿತಾ ಎರಡನೇ ಮಗಳು. ಅವರ ಮೊದಲ ಚಿತ್ರ ಆನಂದ. ಈ ಚಿತ್ರ 250 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡಿತು. ನಂತರ ರಥಸಪ್ತಮಿ, ಮನಮೆಚ್ಚಿದ ಹುಡುಗಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದರು. ಇವರು ಹ್ಯಾಟ್ರಿಕ್ ಹೀರೊ ಎಂಬ ಬಿರುದು ಪಡೆದಿದ್ದಾರೆ. ನೂತನ ದಾಖಲೆ ಬರೆದ ಚಿತ್ರ ಅವರ ಓಂ ಚಿತ್ರ. ಅವರ ನಟನೆಯ ಜನುಮದ ಜೋಡಿ ಚಿತ್ರ 10 ಕೋಟಿ ಗಳಿಸಿದೆ. 50 ವರ್ಷ ದಾಟಿದರೂ ಬೇಡಿಕೆ ಉಳಿಸಿಕೊಂಡ ನಟರಾಗಿದ್ದಾರೆ ಶಿವಣ್ಣ. ಇವರ ಮನೆಯು ನೋಡಲು ಸುಂದರವಾಗಿ, ಭವ್ಯವಾಗಿದೆ. ಶಿವಣ್ಣ ಅವರ ಜೀವನ ಸುಖದಿಂದ ಕೂಡಿರಲಿ ಎಂದು ಹಾರೈಸೋಣ.