ನಮ್ಮ ದೇಶದ ಯುವಜನತೆಗೆ ಸಿವಿಲ್ ಸರ್ವಿಸ್ ಪರೀಕ್ಷೆ ಕ್ಲಿಯರ್ ಮಾಡಬೇಕು ಎಂದು ಆಸೆ ಇರುತ್ತದೆ. ಐಪಿಎಸ್, ಐಎಎಸ್ ಆಗಬೇಕು ಎಂದು ಬಯಸುತ್ತಾರೆ, ತಯಾರಿಯನ್ನು ಮಾಡುತ್ತಾರೆ. ಆದರೆ ಎಲ್ಲರಿಗೂ ಕೂಡ ಆ ಪರೀಕ್ಷೆ ಕ್ಲಿಯರ್ ಮಾಡಲು ಆಗೋದಿಲ್ಲ. ಯಾಕೆಂದರೆ ಅದು ಕಷ್ಟದ ಪರೀಕ್ಷೆ, ಈ ಒಬ್ಬ ಮಹಿಳೆ ಬದುಕಿನಲ್ಲಿ ಬಂದ ಕಷ್ಟಗಳನ್ನೆಲ್ಲಾ ಎದುರಿಸಿ ಐಎಎಸ್ ಅಧಿಕಾರಿ ಆಗಿದ್ದು ನಿಜಕ್ಕೂ ಸ್ಪೂರ್ತಿದಾಯಕ ಎಂದರೆ ತಪ್ಪಲ್ಲ. ಈ ಅಧಿಕಾರಿಯ ಕಥೆ ನಿಮ್ಮೆಲ್ಲರಿಗೂ ಸ್ಪೂರ್ತಿ ತರುವುದಂತೂ ಖಂಡಿತ.

ಈ ಅಧಿಕಾರಿಯ ಹೆಸರು ಶಿವಂಗಿ ಗೋಯೆಲ್. ಇವರು ಮೂಲತಃ ಉತ್ತರ ಪ್ರದೇಶದ ಹಾಪುರ್ ನವರು. ಚಿಕ್ಕಂದಿನಿಂದಲೂ ಓದಿನಲ್ಲಿ ಇವರಿಗೆ ಬಹಳ ಆಸಕ್ತಿ ಇತ್ತು. ಚೆನ್ನಾಗಿ ಓದಿಕೊಂಡಿದ್ದ ಶಿವಂಗಿ ಅವರು ಎರಡು ಸಾರಿ UPSC ಪರೀಕ್ಷೆ ಬರೆದಿದ್ದರು, ಆದರೆ ಉತ್ತೀರ್ಣರಾಗಲಿಲ್ಲ. ಬಳಿಕ ಇವರಿಗೆ ಮದುವೆಯಾಯಿತು. ಮದುವೆ ನಂತರ ಜೀವನ ಚೆನ್ನಾಗಿರುತ್ತದೆ ಎಂದುಕೊಂಡಿದ್ದ ಶಿವಂಗಿ ಅವರಿಗೆ ಕಾದಿದ್ದು ದೊಡ್ಡ ಆಘಾತ.

ಗಂಡ ಮತ್ತು ಅತ್ತೆ ಇವರಿಗೆ ಪ್ರತಿದಿನ ಹಿಂಸೆ ನೀಡುತ್ತಿದ್ದರು, ಶಿವಂಗಿ ಅವರಿಗೆ ಹೊಡೆದು ಬಡಿದು ಮಾಡುತ್ತಿದ್ದರು. ಪ್ರತಿದಿನ ಈ ಹಿಂಸೆ ತಡೆದುಕೊಳ್ಳುತ್ತಿದ್ದರು ಶಿವಂಗಿ. ಅದ ನಡುವೆ ಇವರಿಗೆ ಹೆಣ್ಣುಮಗು ಕೂಡ ಜನಿಸಿತು, ಮಗುವಾದ ಮೇಲೆ ಎಲ್ಲವೂ ಸರಿ ಹೋಗಬಹುದು ಎಂದುಕೊಂಡಿದ್ದರು. ಆದರೆ ಆ ರೀತಿ ಆಗದೆ ಜಗಳ ಇನ್ನಷ್ಟು ಮುಂದುವರೆಯಿತು. ಕೊನೆಗೆ 7 ವರ್ಷದ ಮಗುವನ್ನು ಕರೆದುಕೊಂಡು ತಂದೆಯ ಮನೆಗೆ ಬಂದರು. ಮಗಳನ್ನು ಬರಮಾಡಿಕೊಂಡ ತಂದೆ, ನಿನ್ನ ಕನಸನ್ನು ನನಸು ಮಾಡಿಕೋ ಎಂದು ಉತ್ಸಾಹ ತುಂಬಿದರು..

ಆಗ ಮತ್ತೆ UPSC ಪರೀಕ್ಷೆಗೆ ತಯಾರಿ ನಡೆಸಿದ ಶಿವಂಗಿ 2021ರಲ್ಲಿ UPSC ಪರೀಕ್ಷೆ ಬರೆದು, 171ನೇ ರಾಂಕ್ ಬಂದರು. ಇಂದು ಸಕ್ಸಸ್ ಫುಲ್ ಐಎಎಸ್ ಅಧಿಕಾರಿ ಆಗಿದ್ದಾರೆ ಶಿವಂಗಿ. ಹೆಣ್ಣುಮಕ್ಕಳು ಎಂಥದ್ದೇ ಕಷ್ಟಬಂದರು ಧೈರ್ಯಗೆಡದೇ ತಮ್ಮ ಗುರಿಯ ಕಡೆ ಮುನ್ನುಗ್ಗಬೇಕು. ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಶಿವಂಗಿ ಅವರು ಎಲ್ಲಾ ಮಹಿಳೆಯರಿಗೆ ಸ್ಪೂರ್ತಿ ತುಂಬಿದ್ದಾರೆ. ಮದುವೆ ಒಂದೇ ಗುರಿಯಲ್ಲ, ಬದುಕಿನಲ್ಲಿ ನಮ್ಮ ಕಾಲ ಮೇಲೆ ನಾವು ನಿಂತು, ಸಾಧನೆ ಮಾಡುವುದು ಗುರಿ ಆಗಿರಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!