ಮಹಾಶಿವನಿಗೆ ಬಿಲ್ವ ಪತ್ರೆ ಪ್ರಿಯವಾಗಿದೆ. ಔಷಧೀಯ ಗುಣ ಹೊಂದಿರುವ, ಧಾರ್ಮಿಕವಾಗಿ ಮಹತ್ವ ಪಡೆದ ಬಿಲ್ವಪತ್ರೆಯನ್ನು ಮಹಾ ಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಅರ್ಪಿಸಿದರೆ ಲಭಿಸುವ ಪುಣ್ಯದ ಬಗ್ಗೆ ಹಾಗೂ ಬಿಲ್ವಪತ್ರೆಯ ಮಹತ್ವದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಂದು ದೇವರಿಗೂ ಅವರದೇ ಆದ ಇಷ್ಟದ ವಸ್ತುಗಳಿರುತ್ತವೆ. ಗಣಪತಿ ದೇವರಿಗೆ ಮೋದಕ ಇಷ್ಟ, ಲಕ್ಷ್ಮೀ ದೇವತೆಗೆ ಕೆಂಪು ಹೂವುಗಳೆಂದರೆ ಇಷ್ಟ ಹಾಗೆಯೇ ಪರಮಾತ್ಮ ಶಿವನಿಗೆ ಬಿಲ್ವಪತ್ರೆ ಪ್ರಿಯ. ಬಿಲ್ವಪತ್ರೆಯನ್ನು ಶಿವ ಪರಮಾತ್ಮನಿಗೆ ಅರ್ಪಿಸಿ ಆರಾಧಿಸಿದರೆ ಶಿವನು ಮೂರು ಜನ್ಮಗಳ ಪಾಪವನ್ನು ಸುಟ್ಟು ಬಿಡುತ್ತಾನೆ ಎಂಬ ಪ್ರತೀತಿ ಇದೆ. ಬಿಲ್ವಪತ್ರೆಯು ಮೂರುದಳಗಳಿಂದ ಕೂಡಿದ ಎಲೆ, ಇದರಲ್ಲಿ ಎಡಗಡೆ ದಳದಲ್ಲಿ ಬ್ರಹ್ಮ ದೇವನು, ಬಲಗಡೆ ದಳದಲ್ಲಿ ಮಹಾವಿಷ್ಣು, ಮಧ್ಯದ ದಳದಲ್ಲಿ ಮಹಾಶಿವನು ಇದ್ದಾರೆಂದು ಪುರಾಣಗಳು ಉಲ್ಲೇಖಿಸುತ್ತವೆ. ಬಿಲ್ವಪತ್ರೆಯ ಮುಂಭಾಗದಲ್ಲಿ ಅಮೃತ, ಹಿಂಭಾಗದಲ್ಲಿ ಯಕ್ಷರು ಇರುತ್ತಾರೆ. ಬಿಲ್ವಪತ್ರೆ ವೃಕ್ಷವು ಕಾಶಿ ಕ್ಷೇತ್ರದಷ್ಟೆ ಪವಿತ್ರವಾದದ್ದು ಎಂಬ ನಂಬಿಕೆ ಇದೆ.

ಒಮ್ಮೆ ಪಾರ್ವತಿದೇವಿಗೆ ದಣಿವಾಗಿರುತ್ತದೆ ಆಗ ವಿಶ್ರಮಿಸಿಕೊಳ್ಳಲು ಮಂದಾರ ಪರ್ವತದಲ್ಲಿ ಕುಳಿತಿರುವಾಗ, ದೇವಿಯ ಬೆವರ ಹನಿಗಳು ಭೂಮಿಯ ಮೇಲೆ ಬೀಳುತ್ತವೆ. ಹನಿಗಳಿಂದ ಬಿಲ್ವ ವೃಕ್ಷ ಹುಟ್ಟುತ್ತದೆ. ವೃಕ್ಷದಲ್ಲಿ ಪಾರ್ವತಿದೇವಿ ತನ್ನ ಎಲ್ಲಾ ಅವತಾರಗಳೊಂದಿಗೆ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಮರದ ಬೇರುಗಳಲ್ಲಿ ಗಿರಿಜೆಯಾಗಿ, ಕೊಂಬೆಗಳಲ್ಲಿ ದಾಕ್ಷಾಯಿಣಿಯಾಗಿ, ಎಲೆಗಳಲ್ಲಿ ಪಾರ್ವತಿಯಾಗಿ, ಹಣ್ಣುಗಳಲ್ಲಿ ಕಾತ್ಯಾಯಿನಿಯಾಗಿ, ಪುಷ್ಪಗಳಲ್ಲಿ ಗೌರಿಯಾಗಿ ನೆಲೆಸಿರುತ್ತಾಳೆ ಎಂದು ಬಿಲ್ವ ವೃಕ್ಷದ ಬಗ್ಗೆ ಸ್ಕಂದಪುರಾಣದಲ್ಲಿ ಉಲ್ಲೇಖವಾಗಿದೆ. ಬಿಲ್ವ ವೃಕ್ಷವು ಪಾರ್ವತಿ ದೇವಿಯ ಆವಾಸ ಸ್ಥಾನವಾಗಿರುವುದರಿಂದ ಶಿವ ಪರಮಾತ್ಮನಿಗೆ ಈ ವೃಕ್ಷವೆಂದರೆ ಪ್ರಿಯವಾಗಿದೆ.

ಪಾರ್ವತಿ ದೇವಿ ಎಲೆಗಳಲ್ಲಿ ನೆಲೆಸಿರುವುದರಿಂದ ಬಿಲ್ವ ಪತ್ರೆಗಳು ಶಿವನಿಗೆ ಇಷ್ಟ. ಶಿವನು ಜಲಪ್ರಿಯ ಹಾಗೂ ಬಿಲ್ವಪ್ರಿಯ, ನೀರಿನಿಂದ ಅಭಿಷೇಕ ಮಾಡಿ ಬಿಲ್ವಪತ್ರೆಯಿಂದ ಅಲಂಕರಿಸಿದರೆ ಶಿವನು ಸಂತೋಷಗೊಳ್ಳುತ್ತಾನೆ ಎಂಬ ನಂಬಿಕೆ ಇದೆ. ವಿಶೇಷ ದಿನವಾದ ಶಿವರಾತ್ರಿಯ ದಿನದಂದು ಬಿಲ್ವಪತ್ರೆಯಿಂದ ಶಿವನನ್ನು ಅಲಂಕರಿಸುವುದು ವಾಡಿಕೆಯಲ್ಲಿದೆ. ಬಿಲ್ವಪತ್ರೆಯಲ್ಲಿ ಮೂರು ದಳದಿಂದ 12 ದಳಗಳವರೆಗೆ ಇರುತ್ತದೆ. ಮೂರು ದಳದ ಬಿಲ್ವಪತ್ರೆಯು ಶ್ರೇಷ್ಠವಾಗಿದೆ. ಸಮುದ್ರ ಮಥನದ ಸಮಯದಲ್ಲಿ ಉದ್ಭವವಾಗುವ ಕಾರ್ಕೋಟಕ ವಿಷವನ್ನು ಶಿವನು ಕುಡಿಯುತ್ತಾನೆ. ಆಗ ಶಿವನ ತಲೆಯಲ್ಲಿದ್ದ ಬಿಲ್ವಪತ್ರೆಯು ವಿಷದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದನ್ನು ತಿಳಿದ ದೇವಾನುದೇವತೆಗಳು ಶಿವನಿಗೆ ಬಿಲ್ವಪತ್ರೆ ಅಭಿಷೇಕ ಮಾಡಲು ಪ್ರಾರಂಭಿಸುತ್ತಾರೆ ಇದರಿಂದ ವಿಷದ ಪ್ರಮಾಣವು ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ನಂತರ ಶಿವನಿಗೆ ಬಿಲ್ವಪತ್ರೆ ಪೂಜೆ ಮಾಡುವುದು ಸಂಪ್ರದಾಯವಾಗುತ್ತದೆ.

ಕಾಳಹಸ್ತಿ ಕ್ಷೇತ್ರದಲ್ಲಿ ಬೇಡರಕಣ್ಣಪ್ಪನು ಶಿವರಾತ್ರಿಯ ದಿನದಂದು ಕಾಡಿಗೆ ಭೇಟೆಗಾಗಿ ಹೋಗುತ್ತಾನೆ. ಕಾಡಿನಲ್ಲಿ ಎಷ್ಟೇ ಸುತ್ತಾಡಿದರೂ ಬೇಟೆ ಸಿಗುವುದಿಲ್ಲ. ಖಾಲಿ ಕೈಯಲ್ಲಿ ಮನೆಗೆ ಹೋದರೆ ಉಪವಾಸ ಇರಬೇಕಾಗುತ್ತದೆ ಎಂದು, ಬೇಟೆ ತೆಗೆದುಕೊಂಡೇ ಹೋಗಲು ನಿರ್ಧರಿಸುತ್ತಾನೆ. ರಾತ್ರಿಯಾದ್ದರಿಂದ ಕಾಡಿನಲ್ಲಿಯೇ ಉಳಿದುಕೊಂಡಿದ್ದ. ಬೇಡರಕಣ್ಣಪ್ಪನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಅಲ್ಲಿರುವ ಬಿಲ್ವ ಮರವನ್ನು ಏರಿ ಕುಳಿಕೊಳ್ಳುತ್ತಾನೆ ರಾತ್ರಿ ಸಮಯದಲ್ಲಿ ಬೇಟೆ ಸಿಗಬಹುದೆಂದು, ನಿದ್ರೆ ಬರಬಾರದೆಂದು ಆ ಮರದ ಒಂದೊಂದು ಎಲೆಯನ್ನು ಕಿತ್ತು ಕೆಳಗೆ ಹಾಕುತ್ತಾನೆ ಎಲೆಗಳು ಮರದ ಕೆಳಗಿರುವ ಶಿವಲಿಂಗದ ಮೇಲೆ ಬೀಳುತ್ತಿತ್ತು. ಇದ್ಯಾವುದು ಕಣ್ಣಪ್ಪನಿಗೆ ಅರಿವಿರಲಿಲ್ಲ. ಇಡೀ ರಾತ್ರಿ ಜಾಗರಣೆ ಮಾಡಿ ಬಿಲ್ವಪತ್ರೆಯಿಂದ ತನ್ನನ್ನು ಅಭಿಷೇಕ ಮಾಡಿರುವುದರಿಂದ ಶಿವನು ಕಣ್ಣಪ್ಪನಿಗೆ ಮೋಕ್ಷವನ್ನು ದಯಪಾಲಿಸುತ್ತಾನೆ.

ಸಂತಾನವಿಲ್ಲದವರು 48 ದಿನಗಳಕಾಲ ಬಿಲ್ವ ವೃಕ್ಷವನ್ನು ಪೂಜೆ ಮಾಡಿದರೆ ಸಂತಾನ ದೊರೆಯಲಿದೆ. ಶುಕ್ರವಾರದಂದು ಬಿಲ್ವ ಫಲವನ್ನು ಪೂಜಿಸಿ ಮನೆಯಲ್ಲಿಟ್ಟರೆ ಆರ್ಥಿಕ ಸಬಲತೆಯನ್ನು ಕಾಣಬಹುದು. ಶಿವರಾತ್ರಿ ದಿನದಂದು ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿದರೆ ಆಯಸ್ಸು, ಆರೋಗ್ಯ, ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಶಿವ ಪರಮಾತ್ಮನನ್ನು ಬಿಲ್ವಪತ್ರೆಯ ಒಂದು ಎಲೆಯಿಂದ ಪೂಜಿಸಿದರೆ ಕೋಟಿ ಕನ್ಯಾದಾನ ಮಾಡಿದ ಪುಣ್ಯ ಲಭಿಸುತ್ತದೆ, ಬಿಲ್ವಪತ್ರೆಯ 2 ಎಲೆಗಳಿಂದ ಪೂಜಿಸಿದರೆ ಕಾಶಿಯಲ್ಲಿ ವಾಸಮಾಡಿದ ಫಲ, 3 ಎಲೆಗಳಿಂದ ಪೂಜಿಸಿದರೆ ಸಾಲಿಗ್ರಾಮವನ್ನು ದಾನ ಮಾಡಿದ ಫಲ, 4 ಎಲೆಗಳಿಂದ ಪೂಜಿಸಿದರೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಫಲ, 5 ಎಲೆಗಳಿಂದ ಪೂಜಿಸಿದರೆ ಸಾವಿರಾರು ಜನರಿಗೆ ಅನ್ನದಾನ ಮಾಡಿದ ಫಲ, ಹಾಗೂ ಜನ್ಮ ಜನ್ಮದಲ್ಲಿ ಮಾಡಿದ ಪಾಪ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.

ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವಾಗ ಎಲೆಗಳು ಕೆಳಮುಖವಾಗಿ, ತೊಟ್ಟು ನಮ್ಮನ್ನು ನೋಡುವಂತಿರಬೇಕು, ಇದರಿಂದ ಬಿಲ್ವಪತ್ರೆಯಿಂದ ಶಕ್ತಿ ನಮ್ಮ ಕಡೆ ಬರುವಂತಾಗುತ್ತದೆ. ಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಒಂದೊಂದು ಎಲೆಯನ್ನು ಅರ್ಪಿಸುತ್ತ ಓಂ ನಮಃ ಶಿವಾಯ ಎಂದು ಹೇಳಿದರೆ ನಮ್ಮ ಪಾಪ ನಾಶವಾಗಿ ಪುಣ್ಯ ಲಭಿಸುತ್ತದೆ. ಅಲ್ಲದೆ ಬಿಲ್ವಪತ್ರೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಾತ ದೋಷವನ್ನು ಬಿಲ್ವಪತ್ರೆಯು ನಿವಾರಿಸುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಬಿಲ್ವ ಪತ್ರೆಯ ಪ್ರಯೋಜನ ಪಡೆಯಿರಿ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!