ಭಾರತ ಸರ್ಕಾರದ ಮೂರು ಮುಖ್ಯ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಕೂಡ ಒಂದು. ವಾರ್ಷಿಕ ನವೀಕರಣವಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY) ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್ ನೀಡುತ್ತದೆ.ಕೇವಲ ವಾರ್ಷಿಕ 12 ರೂಪಾಯಿಗಳ ಪ್ರೀಮಿಯಂ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಬಹಳ ಉಪಯೋಗಕಾರಿಯಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಆಕಸ್ಮಿಕ ಮರಣ ಮತ್ತು ಶಾಶ್ವತ ಪೂರ್ಣ ಅಂಗವೈಕಲ್ಯಕ್ಕೆ 2 ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿಗಳ ಲೈಫ್ ಕವರೇಜ್ ಲಭಿಸುವುದು.

PMSBYY ಎಂದು ಸಂದೇಶ ಕಳುಹಿಸುವಂತೆ ಅರ್ಹ ಅಭ್ಯರ್ಥಿಗಳಿಗೆ SMS ಕಳುಹಿಸಲಾಗುವುದು. ಈ ಯೋಜನೆಗೆ ಸೇರ್ಪಡೆಯಾಗಲು ‘PMSBYY’ ಎಂದು ಸಂದೇಶವನ್ನು ಕಳುಹಿಸಬೇಕು. ಈ ಸಂದೇಶಕ್ಕೆ ಬದಲಾಗಿ ಗ್ರಾಹಕರಿಗೆ ಸ್ವೀಕೃತಿಯ ಸಂದೇಶವನ್ನು ಕಳುಹಿಸಲಾಗುತ್ತದೆ.ಅರ್ಜಿಯ ಪ್ರಕ್ರಿಯೆಯಲ್ಲಿ ಮುಂದುವರೆಯಲು ಚಂದಾದಾರರ ಹೆಸರು, ವೈವಾಹಿಕ ಸ್ಥಿತಿ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳ ಅವಶ್ಯಕತೆಯಿದೆ.ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಮಾಡಿ ಮತ್ತು ವಿಮೆ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ಪುಟದಲ್ಲಿ ಲಭ್ಯವಿರುವ ಎರಡೂ ಯೋಜನೆಗಳಲ್ಲಿ ಬೇಕಾದದನ್ನು ಆರಿಸಿಕೊಳ್ಳಿ. ನೀವು ಪ್ರೀಮಿಯಂ ಪಾವತಿಸಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ. ಆಯ್ಕೆ ಮಾಡಿದ ಖಾತೆಯ ಪ್ರಕಾರ ಪಾಲಿಸಿ ಕವರ್ ವಿವರ, ನಾಮಿನಿ ವಿವರ ಮತ್ತು ಪ್ರೀಮಿಯಂ ಮೊತ್ತವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ನೀವು ಉಳಿತಾಯ ಖಾತೆಯ ನಾನಿಮಿಯನ್ನು ಕೂಡ ಆಯ್ಕೆ ಮಾಡಬಹುದು ಅಥವಾ ಹೊಸ ನಾಮಿನಿಯನ್ನು ಸೇರಿಸಬಹುದು .ಯೋಜನೆಯ ನಾಮಿನಿಯ ಹೆಸರನ್ನು ಕೊಟ್ಟ ನಂತರ ಈ ಕೆಳಗಿನ ವಿವರಗಳನ್ನು ಕ್ಲಿಕ್ ಮಾಡಿ: ಉತ್ತಮ ಆರೋಗ್ಯದ ಘೋಷಣೆ, ಯೋಜನೆ ವಿವರ, ನಿಯಮಗಳು ಮತ್ತು ಷರತ್ತುಗಳಲ್ಲಿ “ನಾನು ಅದೇ ರೀತಿಯ ಯಾವುದೇ ಪಾಲಿಸಿಯನ್ನು ಹೊಂದಿಲ್ಲ” ಎಂದು ಘೋಷಿಸಿ, ನಂತರ ಕಂಟಿನ್ಯೂ ಬಟನ್ ಅನ್ನು ಕ್ಲಿಕ್ ಮಾಡಿದಾಗ ಪಾಲಿಸಿಯ ಪೂರ್ಣ ವಿವರಗಳು ಪ್ರದರ್ಶಿತವಾಗುತ್ತವೆ.ಅಪ್ಲಿಕೇಶನ್ ಫಾರ್ಮ್ ನಲ್ಲಿ ತುಂಬಿದ ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ. ಅನನ್ಯ ಸಂಖ್ಯೆಯಿರುವ ಸ್ವೀಕೃತಿ ಸ್ಲಿಪ್ ಒಂದು ನಿಮಗೆ ದೊರೆಯುತ್ತದೆ. ಯಾವುದೇ ಹೆಚ್ಚಿನ ಉಲ್ಲೇಖಕ್ಕಾಗಿ ಅಂಗೀಕಾರ ಸಂಖ್ಯೆ ಕಾಪಾಡಿಕೊಳ್ಳಲು ಮರೆಯಬೇಡಿ.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಸರಿಯಾದ ದಾಖಲೆಗಳಿಂದ ದೃಢಪಡಿಸಿಕೊಂಡು ರಕ್ಷಣೆಯನ್ನು ಒದಗಿಸುತ್ತದೆ. ವಿಮಾದಾರನ ಆಕಸ್ಮಿಕ ಮರಣದ ಸಂದರ್ಭದಲ್ಲಿ, ಅಪಘಾತವನ್ನು ಪೊಲೀಸ್ ಠಾಣೆಗೆ ವರದಿ ಮಾಡಬೇಕು ಮತ್ತು ತಕ್ಷಣ ಆಸ್ಪತ್ರೆಯ ದಾಖಲೆಗಳ ಮೂಲಕ ಸ್ಪಷ್ಟ ಪಡಿಸಬೇಕು. ವಿಮೆದಾರರಿಂದ ಪಾಲಿಸಿಯ ದಾಖಲಾತಿ ಫಾರ್ಮ್ ನಲ್ಲಿ ನಮೂದಿಸಲಾದ ಫಲಾನುಭವಿಗಳು ಕ್ಲೇಮ್ ಪಡೆಯಬಹುದು. ಅಂಗವೈಕಲ್ಯ ಕ್ಲೇಮ್ ಸಂದರ್ಭದಲ್ಲಿ, ಪಾಲಿಸಿದಾರನ ಬ್ಯಾಂಕ್ ಖಾತೆಗೆ ಪಾಲಿಸಿಯಲ್ಲಿ ಹೇಳಲಾದ ಮೊತ್ತವನ್ನು ಜಮೆ ಮಾಡಲಾಗುವುದು ಮತ್ತು ಮರಣದ ವೇಳೆ ಪಾಲಿಸಿಯ ಫಲಾನುಭವಿಗೆ ಮರಣದ ಕ್ಲೇಮ್ ಅನ್ನು ನೀಡಲಾಗುವುದು. ವಿಮಾದಾರರು ಇತರ ಯಾವುದೇ ವಿಮಾ ಯೋಜನೆಯ ಜೊತೆಗೆ PMSBY ಯೋಜನೆಯ ರಕ್ಷಣೆ ಪಡೆಯಬಹುದು. ಇದು ಸಂಪೂರ್ಣ ಜೀವ ವಿಮಾ ಯೋಜನೆ ಆಗಿರುವುದರಿಂದ, ಯೋಜನೆಯು ಯಾವುದೇ ಮೆಡಿಕ್ಲೈಮ್ ಅನ್ನು ಒದಗಿಸುವುದಿಲ್ಲ. ಅಂದರೆ, ಇದು ಅಪಘಾತದ ಕಾರಣದಿಂದಾಗಿ ಆಸ್ಪತ್ರೆಗೆ ತಗಲುವ ವೆಚ್ಚಗಳ ಯಾವುದೇ ಮರುಪಾವತಿಯನ್ನು ಒದಗಿಸುವುದಿಲ್ಲ.ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ವಿಮೆದಾರನ ಆಕಸ್ಮಿಕ ಮರಣದ ಸಂದರ್ಭದಲ್ಲಿ ರೂ. 2 ಲಕ್ಷ ಲಭ್ಯವಾಗುತ್ತದೆ. ಇದಲ್ಲದೆ, ರೂ. 2 ಲಕ್ಷ ಪೂರ್ಣ ಅಂಗವೈಕಲ್ಯತೆ ಅಥವಾ ಎರಡೂ ಕಣ್ಣುಗಳಿಗೆ ಶಾಶ್ವತ ಹಾನಿ ಅಥವಾ ಕೈಗಳು ಮತ್ತು ಪಾದಗಳು, ಪಾರ್ಶ್ವವಾಯು ಇತ್ಯಾದಿಗಳ ಪೂರ್ಣ ಅಸಾಮರ್ಥ್ಯದ ಸಂದರ್ಭದಲ್ಲಿ ಒದಗಿಸಲಾಗುತ್ತದೆ. ಭಾಗಶಃ ಅಂಗವೈಕಲ್ಯತೆಯ ಸಂದರ್ಭದಲ್ಲಿ, ವಿಮೆದಾರರಿಗೆ ರೂ. 1 ಲಕ್ಷಗಳ ಜೀವ ರಕ್ಷಣಾ ಧನವನ್ನು ನೀಡಲಾಗುತ್ತದೆ.

Leave a Reply

Your email address will not be published. Required fields are marked *