ಹಡಗುಗಳನ್ನು ಸರಕು ಸಾಗಾಣಿಕೆ ಮಾಡಲು ಪ್ರಮುಖವಾಗಿ ಬಳಸಲಾಗುತ್ತದೆ. ಪ್ರಪಂಚದ ಸಾಗಾಣಿಕೆಯಲ್ಲಿ ಶಿಪ್ಪಿಂಗ್ ಇಂಡಸ್ಟ್ರಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಪ್ಪಿಂಗ್ ಇಂಡಸ್ಟ್ರಿ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳಿವೆ. ಹಾಗಾದರೆ ಶಿಪ್ಪಿಂಗ್ ಬಗ್ಗೆ ಅನೇಕ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪ್ರಪಂಚದಲ್ಲಿ ಅತಿ ದೊಡ್ಡ ಹಡಗು ಜಪಾನ್ ದೇಶದಲ್ಲಿದೆ, ಇದು 458 ಮೀಟರ್ ಉದ್ದ ಇದೆ, ಇದನ್ನು 2010ರಲ್ಲಿ ಗುಜರಿಗೆ ಹಾಕಲಾಯಿತು. ಈಗ 400 ಮೀಟರ್ ಉದ್ದದ ಹಲವು ಹಡಗುಗಳನ್ನು ನಾವು ನೋಡಬಹುದು. ಎವ್ವರ್ ಗ್ರೀನ್ ಕಂಪನಿಯ ಎವರ್ ಗಿವ್ವನ್ ಹಡಗು ಟಾಪ್ ಹಡಗುಗಳಲ್ಲಿ ಒಂದಾಗಿದೆ. ಎವರ್ ಗ್ರೀನ್ ಕಂಪನಿಯ ಎವ್ವರ್ ಗೋಲ್ಡನ್, ಎವ್ವರ್ ಜೀನಿಯಸ್, ಎವ್ವರ್ ಗಿಫ್ಟೆಡ್ ಮೊದಲಾದ ಹೆಸರಿನ ಹಡಗುಗಳಿವೆ. 400 ಮೀಟರ್ ಉದ್ದದ ಒಂದು ಹಡಗಿನಲ್ಲಿ ಒಂದು ಬಾರಿಗೆ 20,000 ಕಂಟೇನರ್ ಗಳನ್ನು ತುಂಬಬಹುದು. ಹಡಗುಗಳಲ್ಲಿ ಎರಡು ವಿಧಗಳಿವೆ, ಸರಕುಸಾಗಾಣಿಕೆ ಹಡಗುಗಳು ಮತ್ತು ಪ್ರಯಾಣಿಕರ ಹಡಗುಗಳು. ಸರಕು ಸಾಗಾಣಿಕೆ ಮಾಡುವ ಹಡಗುಗಳಲ್ಲಿ ಆಯಿಲ್ ಟ್ಯಾಂಕರ್ ಗಳು, ಬಲ್ಕ್ ಗೂಡ್ಸ್ ಕ್ಯಾರಿಯರ್ಸ್, ಕಂಟೇನರ್ ಶಿಪ್ಸ್ ಎಂಬ ವಿಧಗಳಿವೆ. ಪ್ರಯಾಣಿಕರ ಹಡಗುಗಳಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಿರ್ಮಿತ ಓಯಾಸಿಸ್ ಕ್ಲಾಸ್ ನ ಕ್ರೂಸ್ ಹಡಗುಗಳು 360 ಮೀಟರ್ ಉದ್ದವಾಗಿದೆ ಮತ್ತು ನೋಡಲು ಬಹುಮಹಡಿ ಕಟ್ಟಡದಷ್ಟು ದೈತ್ಯವಾಗಿದೆ. ಈ ಹಡಗಿನಲ್ಲಿ ಒಂದು ಬಾರಿ ಐದು ಸಾವಿರಕ್ಕಿಂತ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಬಹುದು.

ಓಯಾಸಿಸ್ ಕ್ಲಾಸ್ ನಲ್ಲಿ 18 ಲೈಫ್ ಬೋಟ್ ಗಳಿವೆ ಪ್ರತಿಯೊಂದರಲ್ಲಿ 370 ಜನರು ಕುಳಿತುಕೊಳ್ಳಬಹುದು. ದುರಂತ ನಡೆದರೆ ಪ್ರಯಾಣಿಕರು ಲೈಫ್ ಬೋಟ್ ಗಳ ಮೂಲಕ ರಕ್ಷಣೆ ಮಾಡಿಕೊಳ್ಳಬಹುದು. ಹತ್ತು ಸಾವಿರ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ಈ ಹಡಗನ್ನು ನಿರ್ಮಾಣ ಮಾಡಲಾಗಿದೆ. ಈ ಹಡಗಿನಲ್ಲಿ ಪ್ರಯಾಣಿಸುವವರಿಗೆ ಪ್ರಯಾಣಿಸುವ ಮೊದಲು ಟ್ರೈನಿಂಗ್ ಕೊಡಲಾಗುತ್ತದೆ, ದುರಂತ ನಡೆದಾಗ ಯಾವ ರೀತಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿಕೊಡಲಾಗುತ್ತದೆ. ಪ್ರತಿಯೊಬ್ಬ ಪ್ರಯಾಣಿಕನು ಈ ಟ್ರೈನಿಂಗ್ ನಲ್ಲಿ ಭಾಗವಹಿಸುವುದು ಕಡ್ದಾಯವಾಗಿರುತ್ತದೆ. ಮೊದಲಿನ ಕಾಲದಲ್ಲಿ ಜಿಪಿಎಸ್ ವ್ಯವಸ್ಥೆ ಇರಲಿಲ್ಲ ಹಾಗಾಗಿ ನಾವಿಕರು ಒಂದು ಗೂಡಿನಲ್ಲಿ ಕಾಗೆಗಳನ್ನು ತುಂಬಿಕೊಂಡು ತೆಗೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯದಲ್ಲಿ ದಿಕ್ಕು ತಪ್ಪಿದರೆ ಗೂಡಿನಿಂದ ಒಂದು ಕಾಗೆಯನ್ನು ಹಾರಿಸುತ್ತಿದ್ದರು. ಕಾಗೆ ನೆಲವಿರುವ ಜಾಗದ ಕಡೆಗೆ ಹೋಗುತ್ತದೆ ಅದರ ಹಿಂದೆ ಹಡಗುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

ಶಿಪ್ಪಿಂಗ್ ಇಂಡಸ್ಟ್ರಿ ಅತ್ಯಂತ ಗ್ಲೋಬಲೈಸ್ಡ್ ಇಂಡಸ್ಟ್ರಿಯಾಗಿದೆ. ಒಂದು ದೇಶದ ಹಡಗು ಎಂದು ಇರುವುದಿಲ್ಲ, ಒಂದು ಹಡಗಿನಲ್ಲಿ ಹಲವು ದೇಶಗಳ ಇನ್ವಾಲ್ವ್ಮೆಂಟ್ ಇರುತ್ತದೆ. ವಿಮಾನ ವ್ಯವಸ್ಥೆ ಕಂಡುಹಿಡಿಯುವ ಮೊದಲು ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರ ಪ್ರಯಾಣವು ಹಡಗುಗಳ ಮೂಲಕವೆ ನಡೆಯುತ್ತಿತ್ತು.‌ ಈಗ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದರೂ, ಸರಕುಸಾಗಾಣಿಕೆ ಮಾತ್ರ ಹಡಗುಗಳ ಮೂಲಕವೆ ನಡೆಯುತ್ತದೆ. ವಿಶ್ವದ ಒಟ್ಟು ಸರಕು ಸಾಗಾಣಿಕೆಯ 90% ಸಾಗಾಣಿಕೆ ಹಡಗುಗಳ ಮೂಲಕವೆ ನಡೆಯುತ್ತದೆ. ದೈತ್ಯಾಕಾರದ ಹಡಗುಗಳು ವೇಗವಾಗಿ ಸಮುದ್ರದಲ್ಲಿ ಹೋಗುತ್ತದೆ, ಒಂದು ಗಂಟೆಗೆ 56 ಕಿಲೋಮೀಟರ್ ವೇಗವಾಗಿ ಹೋಗುತ್ತದೆ. ವಿಮಾನ ಇನ್ನಿತರಗಳಿಗೆ ಹೋಲಿಸಿದರೆ ಹಡಗುಗಳಲ್ಲಿ ಕಡಿಮೆ ಬೆಲೆಯಲ್ಲಿ ಸಾಗಾಣಿಕೆ ಮಾಡಬಹುದು. ಹಡಗುಗಳಲ್ಲಿ 15 ಲಕ್ಷ ಜನ ಕೆಲಸ ಮಾಡುತ್ತಾರೆ ಅದರಲ್ಲಿ 2% ಮಾತ್ರ ಮಹಿಳೆಯರು ಕೆಲಸ ಮಾಡುತ್ತಾರೆ, ಇದಕ್ಕೆ ಕಾರಣ ದೀರ್ಘಕಾಲದವರೆಗೆ ಸಮುದ್ರಗಳಲ್ಲಿ ಮನೆಯಿಂದ ದೂರವಿರ ಬೇಕಾಗುತ್ತದೆ. ಹಡಗುಗಳಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚು ಜನರು ಫಿಲಿಫೈನ್ಸ್ ದೇಶದವರಾಗಿರುತ್ತಾರೆ. ಹಡಗುಗಳಲ್ಲಿ ಕೆಲಸಮಾಡುವ ಉನ್ನತ ಹುದ್ದೆಗಳು ಇರಲಿ, ಚಿಕ್ಕ ಹುದ್ದೆಯೆ ಇರಲಿ ಉತ್ತಮ ಸಂಬಳ ನೀಡಲಾಗುತ್ತದೆ. ವರ್ಷಕ್ಕೆ 35 ರಿಂದ 50 ಲಕ್ಷ ಹಣವನ್ನು ಪಡೆಯುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!