ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ಅಭಿಮಾನಿಗಳಿಗಾಗಿ ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಶಿಲ್ಪಾ ಶೆಟ್ಟಿ ಅವರು ತಮ್ಮ ನೃತ್ಯ ಮತ್ತು ಫಿಟ್ನೆಸ್ ನಿಂದಾಗಿ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಶಿಲ್ಪಾ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಒಂದು ವಿಡಿಯೋ ಹಂಚಿಕೊಂಡಿದ್ದು , ವರ್ಕೌಟ್​ ಮಾಡಲು ತಂಗಿಯನ್ನು ಕಾಲಿನಲ್ಲಿ ಮೇಲೆತ್ತಿದ್ದಾರೆ ಶಿಲ್ಪಾ ಶೆಟ್ಟಿ..! ಶಿಲ್ಪಾ ಶೆಟ್ಟಿ ಸಿಕ್ಕಾಪಟ್ಟೆ ಫಿಟ್ನೆಸ್​ ಫ್ರೀಕ್​. ಯೋಗಾ ಹಾಗೂ ವರ್ಕೌಟ್​ ಎನ್ನುವ ಈ ನಟಿ ವಾರಾಂತ್ಯದಲ್ಲಿ ಮಾತ್ರ ಯಾವುದೇ ಡಯಟ್​ ಎನ್ನದೆ ಇಷ್ಟಪಟ್ಟಿದ್ದನ್ನು ಸವಿಯುತ್ತಾರೆ. ಶಿಲ್ಪಾ ಶೆಟ್ಟಿ ತಂಗಿ ಜೊತೆ ವರ್ಕೌಟ್​​ ಮಾಡುತ್ತಿರುವ ಲೆಟೆಸ್ಟ್​ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಲಾಕ್​ಡೌನ್​ನಲ್ಲಿ ತಮ್ಮ ಫನ್ನಿ ಹಾಗೂ ಫಿಟ್ನೆಸ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಶಿಲ್ಪಾ ಶೆಟ್ಟಿ, ಲಾಕ್​ಡೌನ್​ ಸಡಿಲಗೊಂಡ ನಂತರ ಮತ್ತೆ ಎಂದಿನಂತೆ ನಾನಾ ರೀತಿಯ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಮನೆಯಲ್ಲಿ ತಂಗಿ ಶಮಿತಾ ಶೆಟ್ಟಿ ಜೊತೆ ಸೇರಿ ಸಖತ್​ ವರ್ಕೌಟ್​ ಮಾಡಿದ್ದಾರೆ ಶಿಲ್ಪಾ ಶೆಟ್ಟಿ. ವರ್ಕೌಟ್​ ಮಾಡುತ್ತಾ ಶಮಿತಾರನ್ನು ಶಿಲ್ಪಾ ಕಾಲಿನಿಂದ ಮೇಲೆ ಎತ್ತಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಈ ವರ್ಕೌಟ್​ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೆ ತಮ್ಮ ಸಿನಿಮಾ ಹಂಗಾಮ 2 ಶೂಟಿಂಗ್​ ಪೂರ್ಣಗೊಳಿಸಿದ್ದಾರೆ.

ನಮ್ಮ ಸುತ್ತಮುತ್ತಲಿನ ಪ್ರಪಂಚವು ನಿಧಾನವಾಗಿ ತೆರೆದುಕೊಳ್ಳುತ್ತದೆ ಮತ್ತು ನಾವು ನಮ್ಮ ಜೀವನಕ್ಕೆ ಸಂಪೂರ್ಣವಾಗಿ ಹಿಂದಿರುಗಲು ತಯಾರಿ ನಡೆಸಿಕೊಳ್ಳುತ್ತಿದ್ದೇವೆ . ಹಾಗಾಗಿ ನಾವು ಈ ವ್ಯಾಯಾಮವನ್ನು ಮಾಡುವುದರಿಂದ ನಮ್ಮ ಬೆನ್ನಿನ ಸ್ನಾಯುಗಳ ಬಲವನ್ನು ಹೆಚ್ಚಿಸುವುದು ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುವುದರ ಸಲುವಾಗಿ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ ಶಿಲ್ಪಾ ಶೆಟ್ಟಿವರ್ಕೌಟ್​ ಮಾಡಲು ತಂಗಿಯನ್ನು ಕಾಲಿನಲ್ಲಿ ಮೇಲೆತ್ತಿದ ಶಿಲ್ಪಾ ಶೆಟ್ಟಿ..!

Leave a Reply

Your email address will not be published. Required fields are marked *