ಮಹಾ ಮಾರಿಯಂತೆ ಒಕ್ಕರಿಸಿದ ಕೊರೊನ ವೈರಸ್ ನೋಡಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇದರಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಮನಸ್ಥಿತಿಗೆ ಬಂದು ತಲುಪಿದ್ದೇವೆ. ಆದರೆ ತಮ್ಮ ಪ್ರಾಣಕ್ಕೆ ಕುತ್ತು ಬರುವಂತಿದ್ದರೂ ನಮ್ಮ ವೈದ್ಯಕೀಯ ಸಿಬ್ಬಂಧಿಗಳು ಸೇವೆ ಸಲ್ಲಿಸುತ್ತಾ ಇದ್ದಾರೆ. ಹಾಗೆ ಈ ನಟಿ ಕೂಡಾ ತನ್ನ ಒರಾಣದ ಹಂಗು ಬಿಟ್ಟು ನರ್ಸ್ ಆಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಅಷ್ಟಕ್ಕೂ ಆ ನಟಿ ಯಾರು ಗೊತ್ತಾ?? ಡಾಕ್ಟರ್ ಮತ್ತು ನರ್ಸ್ ಗಳನ್ನು ಮನೆ ಖಾಲಿ ಮಾಡಿ ಎಂದು ಕೇಳುತ್ತಿರುವ ಈ ಸಂದರ್ಭದಲ್ಲಿ ತಾನೊಬ್ಬ ನಟಿಯಾಗಿದ್ದು ಮನೆಯಲ್ಲಿ ಹಾಯಾಗಿದ್ದು ತನ್ನ ಪಾಡಿಗೆ ತಾನು ಮನೆಯಲ್ಲಿ ಜೀವನ ನಡೆಸೋಣ ಎನ್ನುವ ಮನೋಭಾವನೆಯನ್ನ ಸಹ ಬಿಟ್ಟು ಇಂತಹ ಸಂಕಷ್ಟದ ಸಂದರ್ಭದಲ್ಲಿ ನರ್ಸ್ ಆಗಿ ಜನರಿಗೆ ಸೇವೆ ಸಲ್ಲಿಸುತ್ತಿರುವ ನಟಿಯ ಹೆಸರು ಶಿಕಾ ಮಲ್ಹೋತ್ರಾ.
ಕಾಂಚಿಲಿ ಚಿತ್ರ ಸೇರಿ ಇನ್ನು ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ ಈ ನಟಿ ನರ್ಸ್ ಆಗಿ ಕೆಲಸ ಆರಂಭಿಸಿದ್ದಾರೆ. 2016 ರಲ್ಲಿ ನರ್ಸಿಂಗ್ ಕೋರ್ಸ್ ಆರಂಭಿಸಿದ್ದ ಈ ನಟಿ ನಂತರ ಚಿತ್ರ ರಂಗದಲ್ಲಿ ಅವಕಾಶ ಸಿಕ್ಕ ಕಾರಣ ನಟನೆ ಆರಂಭಿಸಿದ್ದರು. ಆದರೆ ಮಿತಿ ಮೀರಿ ಹೋಗುತ್ತಿರುವ ಕೊರೊನ ಪರಿಸ್ಥಿತಿಯನ್ನ ಕಂಡು ಮನೆಯಲ್ಲಿ ಸುಮ್ಮನೆ ಕೂರಳು ಶಿಕಾ ಮಲ್ಹೋತ್ರಾ ಗೆ ಆಗಲೇ ಇಲ್ಲ. ತಕ್ಷಣ ಮುಂಬೈ ನ ಬಳ ಠಾಕ್ರೆ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಆರಂಭಿಸಿದ್ದು ಕೊರೊನ ಪೀಡಿತರ ವಾರ್ಡ್ ನಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ.
ನರ್ಸಿಂಗ್ ತರಬೇತಿ ಮುಗಿಸಿದ ಬಳಿಕ ಸಮಾಜಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ವಾಗ್ದಾನ ಮಾಡಿದ್ದೆ ಅದರಂತೆಯೇ ಈಗ ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ ನಟಿ ಶಿಖಾ ಮಲ್ಹೋತ್ರಾ. ತಾನೊಬ್ಬ ನಟಿ ಎಂಬುದನ್ನ ಮರೆತು ಕೊರೊನ ಪೀಡಿತರ ಸೇವೆ ಸಲ್ಲಿಸಲು ಮುಂದಾದ ನಟಿ ಶಿಖಾ ಮಲ್ಹೋತ್ರಾ ಅವರ ಒಳ್ಳೆಯ ಹೃದಯಕ್ಕೆ ಜನ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಭಿಮಾನಿಗಳನ್ನ ಹತ್ತಿರಕ್ಕೂ ಬಿಟ್ಟುಕೊಳ್ಳದ ಅದೆಷ್ಟೋ ನಟಿಯರು ಇರುವ ಈ ದಿನಗಳಲ್ಲಿ ಜನರಿಗೆ ಸೇವೆ ಸಲ್ಲಿಸಬೇಕು ಎಂದು ಮುಂದಾದ ನಟಿ ಶಿಖಾ ಮಲ್ಹೋತ್ರಾ ಅವರ ಒಳ್ಳೆಯ ಕೆಲಸ ಎಲ್ಲರೂ ಮೆಚ್ಚುವಂತದ್ದು